ಬಜಾಜ್ ಚೇತಕ್ ಸ್ಕೂಟರ್‍‍ಗೆ ಟಕ್ಕರ್ ನೀಡಲು ಬರಲಿದೆ ಹೊಸ ಅಥೆರ್ ಸ್ಕೂಟರ್

ಬೆಂಗಳೂರು ಮೂಲದ ಅಥೆರ್ ಕಂಪನಿಯು ಪರ್ಫಾಮೆನ್ಸ್ ಸರಣಿಯ ಹೊಸ 450 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಕಂಪನಿಯು 450 ಎಲೆಕ್ಟ್ರಿಕ್ ಸ್ಕೂಟರಿನ ಜೊತೆಯಲ್ಲಿ ಹೊಸ ಇತರ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲು ಯೋಜಿಸಿದೆ.

ಬಜಾಜ್ ಚೇತಕ್ ಸ್ಕೂಟರ್‍‍ಗೆ ಟಕ್ಕರ್ ನೀಡಲು ಬರಲಿದೆ ಹೊಸ ಅಥೆರ್ ಸ್ಕೂಟರ್

ಅಥೆರ್ ಎನರ್ಜಿ ಕಂಪನಿಗೆ ಹೀರೋ ಮೊಟೊಕಾರ್ಪ್ ಆರ್ಥಿಕವಾಗಿ ಬೆಂಬಲ ನೀಡುತ್ತಿದೆ. ಅಥೆರ್ ಕಂಪನಿಯು ಬೆಂಗಳೂರು ನಗರದಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿತ್ತು. ಈ ವರ್ಷದ ಆರಂಭದಲ್ಲಿ ಚೆನ್ನೈನಲ್ಲಿ ತನ್ನ ಎರಡನೇ ಮಾರುಕಟ್ಟೆಯನ್ನು ತೆರೆದಿದೆ. ಇದೀಗ ಆಥೆರ್ ಎನರ್ಜಿ ತನ್ನ ಮಾರುಕಟ್ಟೆಯನ್ನು ಮುಂಬರುವ ವರ್ಷಗಳಲ್ಲಿ ಕನಿಷ್ಠ 30 ರಿಂದ 35 ನಗರಗಳಿಗೆ ವಿಸ್ತರಿಸಲು ನಿರ್ಧರಿಸಿದೆ.

ಬಜಾಜ್ ಚೇತಕ್ ಸ್ಕೂಟರ್‍‍ಗೆ ಟಕ್ಕರ್ ನೀಡಲು ಬರಲಿದೆ ಹೊಸ ಅಥೆರ್ ಸ್ಕೂಟರ್

ಮುಂಬೈ, ಪುಣೆ, ದೆಹಲಿ, ಕೋಲ್ಕತಾ ಮತ್ತು ಅಹಮದಾಬಾದ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. ಪ್ರಸ್ತುತ ಅಥೆರ್ ಎನರ್ಜಿ ಕಂಪನಿಯು ತನ್ನ ಅಥೆರ್ 450 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತೀಯ ಎಕ್ಸ್ ಶೋರೂಂ ಪ್ರಕಾರ ರೂ.1.15 ಲಕ್ಷಗಳಿಗೆ ಮಾರಾಟ ಮಾಡುತ್ತಿದೆ. ಕಂಪನಿಯು ಮೊದಲಿಗೆ ಅಥೆರ್ 340 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿತ್ತು.

ಬಜಾಜ್ ಚೇತಕ್ ಸ್ಕೂಟರ್‍‍ಗೆ ಟಕ್ಕರ್ ನೀಡಲು ಬರಲಿದೆ ಹೊಸ ಅಥೆರ್ ಸ್ಕೂಟರ್

ಆದರೆ ಅದು ಗ್ರಾಹಕರ ಗಮನಸೆಳೆಯುವಲ್ಲಿ ದೊಡ್ಡ ಮಟ್ಟದಲ್ಲಿ ಯಶ್ವಸಿಯಾಗಲಿಲ್ಲ. ಹೊಸ ಬೈಕ್ ಅನ್ನು ತಯಾರಿಸುವ ಮೊದಲು ಕಂಪನಿಯು ಮತ್ತೊಂದು ಸ್ಕೂಟರ್ ಅನ್ನು ಅಭಿವೃದ್ದಿಪಡಿಸಲಿದೆ ಎಂದು ಅಥೆರ್ ಎನರ್ಜಿಯ ಮುಖ್ಯ ವ್ಯವಹಾರ ಅಧಿಕಾರಿ ರಾವ್ನೀತ್ ಫೋಕೆಲಾ ಹೇಳಿದ್ದಾರೆ. ಮುಂದಿನ 12-18 ತಿಂಗಳುಗಳಲ್ಲಿ ಸ್ಕೂಟರ್ ಅನ್ನು ಬಿಡುಗಡೆಗೊಳಿಸಬಹುದಾದರೂ ಅಥೆರ್ ಬೈಕ್ ಬಿಡುಗಡೆಗೊಳಿಸಲು 3 ರಿಂದ 4 ವರ್ಷಗಳು ಬೇಕಾಗಬಹುದು ಎಂದು ಹೇಳಿದರು.

ಬಜಾಜ್ ಚೇತಕ್ ಸ್ಕೂಟರ್‍‍ಗೆ ಟಕ್ಕರ್ ನೀಡಲು ಬರಲಿದೆ ಹೊಸ ಅಥೆರ್ ಸ್ಕೂಟರ್

ಮುಂದಿನ ವರ್ಷ ಬಿಡುಗಡೆಯಾಗಲಿರುವ ಹೊಸ ಸ್ಕೂಟರ್, ಅಥೆರ್ 450 ಸ್ಕೂಟರ್‍‍‍ಗಿಂತ ಅಗ್ಗವಾಗಲಿದೆ. ಆದರೆ ಅದು ರೂ.50,000ದಷ್ಟು ಕಡಿಮೆ ಬೆಲೆಯನ್ನು ಹೊಂದಿರುವುದಿಲ್ಲ.

ಬಜಾಜ್ ಚೇತಕ್ ಸ್ಕೂಟರ್‍‍ಗೆ ಟಕ್ಕರ್ ನೀಡಲು ಬರಲಿದೆ ಹೊಸ ಅಥೆರ್ ಸ್ಕೂಟರ್

ಹೊಸ ಅಥೆರ್ 450 ಸ್ಕೂಟರ್‍ ಸ್ಕೂಟರ್ ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದರೆ ಸುಮಾರು 75 ಕಿ.ಮೀ ವ್ಯಾಪ್ತಿ ಚಲಿಸುತ್ತದೆ. ಈ ಹೊಸ ಸ್ಕೂಟರ್ ಮುಂಬರುವ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‍‍ಗಿಂತ ಅಗ್ಗವಾಗಿರಲಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಬಜಾಜ್ ಚೇತಕ್ ಸ್ಕೂಟರ್‍‍ಗೆ ಟಕ್ಕರ್ ನೀಡಲು ಬರಲಿದೆ ಹೊಸ ಅಥೆರ್ ಸ್ಕೂಟರ್

ಬಜಾಜ್ ತನ್ನ ಹೊಸ ಚೇತಕ್ ಇ-ಸ್ಕೂಟರ್ ಅನ್ನು 2020ರ ಜನವರಿಯಲ್ಲಿ ಬಿಡುಗಡೆಗೊಳಿಸಲಿದೆ. ಬಜಾಜ್ ಚೇತಕ್ ಸ್ಕೂಟರಿನ ಬೆಲೆಯು ಸುಮಾರು ರೂ.1.2 ಲಕ್ಷಗಳಾಗಿದೆ. ಹೊಸ ಅಗ್ಗದ ಅಥೆರ್ ಎಲೆಕ್ಟ್ರಿಕ್ ಸ್ಕೂಟರ್ ಸಹ ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅಥೆರ್ ಎನರ್ಜಿ ಕಂಪನಿಯು ಡೀಲರ್‍‍ಗಳನ್ನು ಹೊಂದಿಲ್ಲ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಬಜಾಜ್ ಚೇತಕ್ ಸ್ಕೂಟರ್‍‍ಗೆ ಟಕ್ಕರ್ ನೀಡಲು ಬರಲಿದೆ ಹೊಸ ಅಥೆರ್ ಸ್ಕೂಟರ್

ಬದಲಿಗೆ ಅವರು ತಮ್ಮದೇ ಆದ 3,000 ಚದರ ಅಡಿ 'ಎಕ್ಸ್‌ಪಿರಿಯನ್ಸ್, ಸೆಂಟರ್‍'ಗಳನ್ನು ಹೊಂದಿದ್ದಾರೆ. ಕಂಪನಿಯು ವಾರ್ಷಿಕವಾಗಿ ಸುಮಾರು 35,000 ದಿಂದ 40,000 ಯು‍‍ನಿಟ್‍‍ಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಮುಂಬರುವ ಗ್ರೀನ್‍ಫೀಲ್ಡ್ ಸೌಲಭ್ಯದೊಂದಿಗೆ 50,000 ಯು‍ನಿ‍ಟ್‍‍ಗಳ ಉತ್ಪಾದನೆಗೆ ಏರಲಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಬಜಾಜ್ ಚೇತಕ್ ಸ್ಕೂಟರ್‍‍ಗೆ ಟಕ್ಕರ್ ನೀಡಲು ಬರಲಿದೆ ಹೊಸ ಅಥೆರ್ ಸ್ಕೂಟರ್

ಹೊಸ ಘಟಕವು ಸೆಪ್ಟಂಬರ್ 2020ರ ವೇಳೆಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಆಥೆರ್ ಎನರ್ಜಿ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತ್ಯುತ್ತಮ ಎಲೆಕ್ಟ್ರಿಕ್ ವಾಹನ ಕಂಪನಿಗಳಲ್ಲಿ ಒಂದಾಗಿದೆ. ಅಥೆರ್ ಕಂಪನಿಯು ದೇಶದ 29 ಸ್ಥಳಗಳಲ್ಲಿ 35 ಚಾರ್ಜಿಂಗ್ ಸೆಂಟರ್‍‍ಗಳನ್ನು ಹೊಂದಿದೆ. ಹೊಸದಾಗಿ ಗ್ರಾಹಕರ ನಿವಾಸದಿಂದ 2 ಕಿ.ಮೀ ದೂರದಲ್ಲಿ ಚಾರ್ಜಿಂಗ್ ಸೆಂಟರ್‍‍ಗಳನ್ನು ತೆರೆಯುವ ಗುರಿಯನ್ನು ಹೊಂದಿದೆ.

Most Read Articles

Kannada
English summary
New Ather electric scooter launch confirmed - Read in Kannada
Story first published: Tuesday, November 26, 2019, 16:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X