125ಸಿಸಿ ಬೈಕುಗಳಲ್ಲಿ ಯಾವುದು ಬೆಸ್ಟ್?
125 ಸಿಸಿ ಸೆಗ್‍ಮೆಂಟಿನಲ್ಲಿ ಹಲವಾರು ಹೊಸ ಬೈಕುಗಳನ್ನು ಬಿಡುಗಡೆಗೊಳಿಸಲಾಗಿದೆ. ಕೆಟಿಎಂ 125 ಡ್ಯೂಕ್ ಹಾಗೂ ಆರ್‍ಸಿ 125ನಂತಹ ಬೈಕುಗಳು ಬೈಕ್ ಪ್ರ್ರಿಯರ ಉತ್ಸಾಹವನ್ನು ಇಮ್ಮಡಿಗೊಳಿಸಿವೆ. ಬಜಾಜ್ ಡಿಸ್ಕವರ್ ಹಾಗೂ ಹೋಂಡಾ ಶೈನ್ ಬೈಕುಗಳನ್ನು ಪ್ರಯಾಣಿಕರ ಸೆಗ್‍ಮೆಂಟಿನಲ್ಲಿ ಬಿಡುಗಡೆಗೊಳಿಸಲಾಗಿದೆ.

125ಸಿಸಿ ಸೆಗ್‍ಮೆಂಟಿನಲ್ಲಿ ಬಜಾಜ್ ಪಲ್ಸರ್ ಹಾಗೂ ಹೀರೋ ಗ್ಲಾಮರ್ ನಂತಹ ಕಂಪನಿಗಳು ಪ್ರೀಮಿಯಂ ಬೈಕುಗಳನ್ನು ಮಾರಾಟ ಮಾಡುತ್ತಿವೆ. 125 ಸಿಸಿ ಸೆಗ್‍ಮೆಂಟಿನಲ್ಲಿ ಯಾವ ಬೈಕ್ ಅನ್ನು ಖರೀದಿಸಬಹುದು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಕೆಟಿಎಂ ಆರ್‌ಸಿ 125, ಬೆಲೆ ರೂ.1.47 ಲಕ್ಷ
125 ಸಿಸಿ ಸೆಗ್‍ಮೆಂಟಿನಲ್ಲಿರುವ ಭಾರತದ ಅತ್ಯಂತ ದುಬಾರಿ ಬೈಕ್ ಆಗಿದೆ. ಬೇಬಿ ಸ್ಪೋರ್ಟ್ಸ್ ಬೈಕ್ ಎಂದು ಪರಿಗಣಿಸಲಾಗುವ ಈ ಬೈಕ್ ಅನ್ನು ಆರ್‍ಸಿ 200 ಹಾಗೂ ಆರ್‍ಸಿ 390 ಬೈಕಿನಂತೆ ವಿನ್ಯಾಸಗೊಳಿಸಲಾಗಿದೆ. ಆದರೆ ಈ ಬೈಕಿನಲ್ಲಿ 125 ಸಿಸಿ ಎಂಜಿನ್ ಅಳವಡಿಸಲಾಗಿದೆ. ಈ ಲಿಕ್ವಿಡ್ ಕೂಲ್ ಎಂಜಿನ್ 14.9 ಬಿಹೆಚ್‍ಪಿ ಪವರ್ ಹಾಗೂ 12 ಎನ್ಎಂ ಉತ್ಪಾದಿಸುತ್ತದೆ.

ಈ ಬೈಕ್ ಟ್ರೆಲ್ಲಿಸ್ ಫ್ರೇಮ್, ಹೈ-ಸ್ಪೆಕ್ ಡಬ್ಲ್ಯೂಪಿ ಅಪ್ ಸೈಡ್ ಡೌನ್ ಫೋರ್ಕ್ಸ್ ಹಾಗೂ ಮೊನೊಶಾಕ್, ಎರಡೂ ತುದಿಗಳಲ್ಲಿ ಡಿಸ್ಕ್ ಹಾಗೂ ಮುಂಭಾಗದ ಬೈಬ್ರೆ ರೇಡಿಯಲ್ ಮೌಂಟೆಡ್ ಕ್ಯಾಲಿಪರ್ ಹಾಗೂ ಫ್ಯಾಟ್ ಎಂಆರ್‍ಎಫ್ ರೇಡಿಯಲ್ ಟಯರ್‍ಗಳನ್ನು ಹೊಂದಿದೆ. ಆರ್‍ಸಿಯ ಇತರ ಮಾದರಿ ಬೈಕುಗಳಂತೆ, ಆರ್‍ಸಿ 125 ಶಾರ್ಪ್ ಆದ ಹ್ಯಾಂಡ್ಲಿಂಗ್ ಹೊಂದಿದೆ.

ಟ್ರ್ಯಾಕ್ ಸುತ್ತಲೂ ಸವಾರಿ ಮಾಡುವ ಒಂದು ಹುಟ್ ಹೊಂದಿದೆ. ಇದರಲ್ಲಿರುವ ಸ್ಪೋರ್ಟಿ ರೈಡಿಂಗ್ ನಗರದ ಸಂಚಾರಕ್ಕೆ ಅಷ್ಟೊಂದು ಆರಾಮದಾಯಕವೆನಿಸುವುದಿಲ್ಲ. ನೀವು ಮೊದಲ ಬಾರಿಗೆ ಬೈಕ್ ಅನ್ನು ಚಲಾಯಿಸುತ್ತಿದ್ದರೆ 125ಸಿಸಿ ಹೊಂದಿರುವ ಕೆಟಿಎಂ ಆರ್‍ಸಿ 125 ಬೈಕ್ ಖರೀದಿಸಬಹುದು.

ಕೆಟಿಎಂ 125 ಡ್ಯೂಕ್, ಬೆಲೆ ರೂ.1.30 ಲಕ್ಷ
ಈ ಬೈಕ್ ಆರ್‍ಸಿ 125 ಬೈಕಿನಲ್ಲಿರುವಂತಹ ಡೈನಾಮಿಕ್ಸ್ ಹೊಂದಿದೆ. ನೇರವಾದ ಎರ್ಗೊನಾಮಿಕ್ಸ್ ಹೊಂದಿದೆ. ಈ ಬೈಕಿನಲ್ಲಿರುವ ವಿನ್ಯಾಸವು 200 ಡ್ಯೂಕ್ ಬೈಕಿನ ವಿನ್ಯಾಸವನ್ನು ಹೋಲುತ್ತದೆ. ಆರ್‌ಸಿ 125 ಹಾಗೂ 200 ಡ್ಯೂಕ್ ಬೈಕಿನಲ್ಲಿರುವಂತಹ ಫೀಚರ್‍ಗಳನ್ನು ಹೊಂದಿದೆ.

ಈ ಬೈಕಿನಲ್ಲಿ 124.7 ಸಿಸಿಯ ಎಂಜಿನ್ ಅಳವಡಿಸಲಾಗಿದೆ. ಆದ ಕಾರಣ ಈ ಬೈಕಿನ ಪರ್ಫಾಮೆನ್ಸ್ ಉತ್ತಮವಾಗಿದೆ. 125 ಡ್ಯೂಕ್ ಬೈಕ್ 124 ಸಿಸಿ ಸೆಗ್‍ಮೆಂಟಿನಲ್ಲಿ ಭಾರತದಲ್ಲಿರುವ ಅತಿ ವೇಗದ ಬೈಕ್ ಆಗಿದೆ. ಹೆಚ್ಚು ಕಾಲ ನಗರದ ಟ್ರಾಫಿಕ್‍ನಲ್ಲಿ ಸಂಚರಿಸುವಂತಿದ್ದರೆ ಈ ಬೈಕ್ ಅನ್ನು ಖರೀದಿಸಬಹುದು.
MOST READ: ಕಾರ್ ಕದ್ದಿದ್ದು ಆಯ್ತು, ಈಗ ಖದೀಮರ ಕಣ್ಣು ಲೊಗೊ ಮೇಲೆ..!

ಬಜಾಜ್ ಪಲ್ಸರ್ 125, ಬೆಲೆ ರೂ.66,618
ಬಜಾಜ್ ಕಂಪನಿಯು ಇತ್ತೀಚೆಗಷ್ಟೇ ಪಲ್ಸರ್ 125 ಸಿಸಿ ಬೈಕ್ ಅನ್ನು ಪಲ್ಸರ್ 125 ನಿಯಾನ್ ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸಿದೆ. ಈ ಬೈಕ್ ಬಾಡಿವರ್ಕ್, ಫೀಚರ್‍ಗಳನ್ನು ಪಲ್ಸರ್ 150 ನಿಯಾನ್ ಬೈಕಿನಿಂದ ಪಡೆದಿದೆ. ಈ ಬೈಕ್ 124.4 ಸಿಸಿಯ ಏರ್ ಕೂಲ್ಡ್ ಎಂಜಿನ್ ಹೊಂದಿದೆ.
MOST READ: ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಂಡು ಸಿಕ್ಕಿಬಿದ್ದ ಐನಾತಿ..!

ಈ ಎಂಜಿನ್ 11 ಬಿಹೆಚ್‍ಪಿ ಪವರ್ ಹಾಗೂ 11 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಪಲ್ಸರ್ 125 ಬೈಕ್, 125 ಸಿಸಿ ಸೆಗ್‍ಮೆಂಟಿನಲ್ಲಿ ಭಾರತದಲ್ಲಿರುವ ಬಲಶಾಲಿಯಾದ ಏರ್ ಕೂಲ್ಡ್ ಬೈಕ್ ಆಗಿದೆ. ಸ್ಪೋರ್ಟಿ ಬೈಕ್ ಬಯಸುತ್ತಿದ್ದರೆ, ಕೆಟಿಎಂ 125 ಬೈಕಿಗಾಗಿ ಹೆಚ್ಚು ಹಣವನ್ನು ಪಾವತಿಸಲು ಬಯಸದಿದ್ದರೆ ಪಲ್ಸರ್ 125 ಬೈಕ್ ಅನ್ನು ಖರೀದಿಸಬಹುದು.
MOST READ: ಜೆಸಿಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಹೀರೋ ಗ್ಲಾಮರ್ 125 ಎಫ್‌ಐ, ಬೆಲೆ ರೂ. 69,950
ಗ್ಲಾಮರ್, ಹೀರೋ ಕಂಪನಿಯು 125 ಸಿಸಿ ಸೆಗ್‍ಮೆಂಟಿನಲ್ಲಿ ಬಿಡುಗಡೆಗೊಳಿಸಿರುವ ಪ್ರೀಮಿಯಂ ಬೈಕ್ ಆಗಿದೆ. ಈ ಬೈಕಿನಲ್ಲಿ ಉತ್ತಮವಾಗಿ ಕಾಣುವ ಬಾಡಿ ಪ್ಯಾನೆಲ್‌ಗಳಿವೆ. ಈ ಬೈಕ್ ಸಾಮಾನ್ಯ 125 ಸಿಸಿ ಬೈಕುಗಳಿಗಿಂತ ದೊಡ್ಡದಾಗಿ ಕಾಣುತ್ತದೆ. ಗ್ಲಾಮರ್, 125 ಸಿಸಿ ಸೆಗ್‍ಮೆಂಟಿನಲ್ಲಿ ರೂ.1 ಲಕ್ಷಕ್ಕಿಂತಲೂ ಕಡಿಮೆ ಬೆಲೆಯನ್ನು ಹೊಂದಿರುವ ಏಕೈಕ ಬೈಕ್ ಆಗಿದೆ.

ಈ ಬೈಕ್ 124.7 ಸಿಸಿಯ ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಹೊಂದಿದೆ. ಈ ಎಂಜಿನ್ 11.43 ಬಿಹೆಚ್‍ಪಿ ಪವರ್ ಹಾಗೂ 11 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕ್ ಸ್ಪೋರ್ಟಿ ಅಲ್ಲವಾದರೂ, ಆರಾಮದಾಯಕ ಸವಾರಿಯ ಅನುಭವವನ್ನು ನೀಡುತ್ತದೆ. ಕಡಿಮೆ ಬೆಲೆಯ ಪ್ರೀಮಿಯಂ ಬೈಕ್ ಕೊಳ್ಳಲು ಬಯಸುವುದಾದರೆ ಈ ಬೈಕ್ ಅನ್ನು ಖರೀದಿಸಬಹುದು.

ಹೋಂಡಾ ಶೈನ್ / ಶೈನ್ ಎಸ್‍ಪಿ, ಬೆಲೆ ರೂ. 63,627 / ರೂ. 68,938
ಹೋಂಡಾ ಶೈನ್ ಹಲವಾರು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಈ ಸೆಗ್‍ಮೆಂಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿ ನಂ 1 ಸ್ಥಾನದಲ್ಲಿದೆ. ಸಿಬಿ ಶೈನ್ ಕೆಲ ವಿನ್ಯಾಸವನ್ನು ಹೊಂದಿರಬಹುದು, ಕೆಲ ಫೀಚರ್‍ಗಳನ್ನು ಕಳೆದುಕೊಂಡಿರಬಹುದು. ಆದರೆ ತನ್ನ ಗುಣಮಟ್ಟದಿಂದಾಗಿ ಜನಪ್ರಿಯವಾಗಿದೆ.

ಈ ಬೈಕಿನಲ್ಲಿರುವ 124 ಸಿಸಿ ಎಂಜಿನ್ 10.15 ಬಿಹೆಚ್‍ಪಿ ಪವರ್ ಹಾಗೂ 10.3 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಸ್ಪೋರ್ಟಿಯರ್ ಶೈನ್ ಎಸ್‍ಪಿಯ ಬಗ್ಗೆ ಹೇಳುವುದಾದರೆ, ಈ ಬೈಕ್ 5 ಸ್ಪೀಡಿನ ಗೇರ್‍ಬಾಕ್ಸ್ ಹೊಂದಿದೆ. ಇದರಿಂದಾಗಿ ಹೈವೇಗಳಲ್ಲಿ ಹೆಚ್ಚಿನ ಪರ್ಫಾಮೆನ್ಸ್ ನೀಡಲಿದೆ. ಪ್ರೀಮಿಯಂ ಅನುಭವಕ್ಕಾಗಿ ಹಾಗೂ ವಿಶ್ವಾಸಾರ್ಹತೆಗಾಗಿ ಹೋಂಡಾ ಶೈನ್ ಬೈಕ್ ಅನ್ನು ಖರೀದಿಸಬಹುದು.

ಬಜಾಜ್ ಡಿಸ್ಕವರ್ 125, ಬೆಲೆ ರೂ.62,253
ನೀವು ನೀಡುವ ಬೆಲೆಗೆ, ಡಿಸ್ಕವರ್ 125 ಬೈಕ್ ಎಲ್ಇಡಿ ಡಿಆರ್‍ಎಲ್ ಹಾಗೂ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್‍ನಂತಹ ಹಲವು ಫೀಚರ್‍ಗಳನ್ನು ನೀಡುತ್ತದೆ. ಆರಾಮದಾಯಕ ಸವಾರಿಗಾಗಿ ಈ ಬೈಕಿನಲ್ಲಿ ಫ್ರಂಟ್ ಡಿಸ್ಕ್ ಬ್ರೇಕ್ ಹಾಗೂ ಗ್ಯಾಸ್ ಚಾರ್ಜ್ಡ್ ರೇರ್ ಶಾಕ್ ಅಬ್ಸಾವರ್‍ಗಳಂತಹ ಫೀಚರ್‍ಗಳನ್ನು ಅಳವಡಿಸಲಾಗಿದೆ.

ಈ ಬೈಕಿನಲ್ಲಿರುವ 124.5 ಸಿಸಿ ಎಂಜಿನ್ 10 ಬಿಹೆಚ್‍ಪಿ ಪವರ್ ಹಾಗೂ 11 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಕೈಗೆಟಕುವ ದರದಲ್ಲಿ ಹಲವಾರು ಫೀಚರ್‍ಗಳಿರುವ ಬೈಕ್ ಖರೀದಿಸಬೇಕಿದಲ್ಲಿ ಬಜಾಜ್ ಡಿಸ್ಕವರ್ 125 ಬೈಕ್ ಅನ್ನು ಖರೀದಿಸಬಹುದು.


Click it and Unblock the Notifications