ಜುಲೈ 19ರಂದು ಬಿಡುಗಡೆಯಾಗಲಿವೆ ಸಿ‍ಎಫ್ ಮೋಟೊ ಬೈಕುಗಳು

ಸಿ‍ಎಫ್ ಮೋಟೊ ತನ್ನ ಕಂಪನಿಯ ಬೈಕುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಜುಲೈ 4ರಂದು ಬಿಡುಗಡೆಗೊಳಿಸಲು ಯೋಜಿಸಿತ್ತು. ಆದರೆ ಮುಂಬೈನಲ್ಲಿ ಸುರಿದ ಧಾರಾಕಾರ ಮಳೆಯಿಂದ ಉಂಟಾದ ಪ್ರವಾಹ ಪರಿಸ್ಥಿತಿಯಿಂದಾಗಿ, ಚೀನಾ ಮೂಲದ ಕಂಪನಿಯು ತನ್ನ ಬೈಕುಗಳನ್ನು ಜುಲೈ19ರಂದು ಬಿಡುಗಡೆಗೊಳಿಸಲಿದೆ. ಸಿ‍ಎಫ್ ಮೋಟೊ ಎ‍ಎಂ‍‍ಡಬ್ಲ್ಯು ಮೋಟಾರ್‍‍ಸೈಕಲ್ಸ್ ಜೊತೆ ಸಹಭಾಗಿತ್ವವನ್ನು ಹೊಂದಿದೆ.

ಜುಲೈ 19ರಂದು ಬಿಡುಗಡೆಯಾಗಲಿವೆ ಸಿ‍ಎಫ್ ಮೋಟೊ ಬೈಕುಗಳು

ಸಿ‍ಎಫ್ ಮೋಟೊ ದೇಶಿಯ ಮಾರುಕಟ್ಟೆಯಲ್ಲಿ 300 ಎನ್‍‍ಕೆ, 650 ಎನ್‍‍ಕೆ, 650 ಎಂಟಿ ಹಾಗೂ 650 ಜಿಟಿ ಎಂಬ ಹೆಸರಿನ ನಾಲ್ಕು ಬೈಕುಗಳನ್ನು ಬಿಡುಗಡೆಗೊಳಿಸಲಿದೆ. ಈ ಬೈಕುಗಳಲ್ಲಿ 300 ಎನ್‍ಕೆ ಹಾಗೂ 650 ಎನ್‍‍ಕೆ ನೇಕೆಡ್ ರೋಡ್‍‍‍ಸ್ಟರ್ ಬೈಕುಗಳಾಗಿದ್ದು, ಸಿಟಿಯೊಳಗಿನ ರೈಡಿಂಗ್‍‍ಗಳಿಗೆ ಅನುಕೂಲವಾಗಲಿದೆ. 650 ಎಂಟಿ ಹಾಗೂ 650 ಜಿಟಿ ಬೈಕುಗಳು ಟೂರರ್‍ ಬೈಕುಗಳಾಗಿರಲಿವೆ. ಕಂಪನಿಯು ಈ ವರ್ಷ ದೇಶಿಯ ಮಾರುಕಟ್ಟೆಯಲ್ಲಿ 10,000 ಬೈಕುಗಳನ್ನು ಮಾರಾಟ ಮಾಡುವ ಗುರಿಯನ್ನಿಟ್ಟುಕೊಂಡಿದೆ.

ಜುಲೈ 19ರಂದು ಬಿಡುಗಡೆಯಾಗಲಿವೆ ಸಿ‍ಎಫ್ ಮೋಟೊ ಬೈಕುಗಳು

ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಈ ಬೈಕುಗಳು ಬಿ‍ಎಸ್4 ಎಂಜಿನ್ ಹೊಂದಿರಲಿವೆ. ಬಿ‍ಎಸ್ 6 ಎಂಜಿನ್ ಹೊಂದಿರುವ ಬೈಕುಗಳು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿವೆ. 300 ಎನ್‌ಕೆ ಬೈಕ್ 292.4 ಸಿಸಿ, ಸಿಂಗಲ್ ಸಿಲಿಂಡರ್, ಡಿಒಹೆಚ್‌ಸಿ, ಲಿಕ್ವಿಡ್ ಕೂಲ್ಡ್ ಎಂಜಿನ್‌ ಹೊಂದಿದ್ದು, 7,200 ಆರ್‌ಪಿಎಂನಲ್ಲಿ 33 ಬಿಹೆಚ್‌ಪಿ ಪವರ್ ಹಾಗೂ 8,800 ಆರ್‌ಪಿಎಂನಲ್ಲಿ 20.5 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ.

ಜುಲೈ 19ರಂದು ಬಿಡುಗಡೆಯಾಗಲಿವೆ ಸಿ‍ಎಫ್ ಮೋಟೊ ಬೈಕುಗಳು

300 ಎನ್‌ಕೆ ಬೈಕ್, ಹೆಡ್ ಲೈಟ್, ಟೇಲ್‍‍ಲೇಟ್ ಹಾಗೂ ಟರ್ನ್ ಸಿಗ್ನಲ್ ಸೇರಿದಂತೆ ಎಲ್ಲಾ ಎಲ್‌ಇಡಿ ಲೈಟಿಂಗ್‍‍ಗಳನ್ನು ಹೊಂದಿದೆ. ಕಲರ್ ಟಿಎಫ್‌ಟಿ ಡಿಸ್‍‍ಪ್ಲೇ, ಮುಂಭಾಗದಲ್ಲಿ ತಲೆಕೆಳಗಾದ ಯುಎಸ್‌ಡಿ ಫೋರ್ಕ್ ಹಾಗೂ ಸ್ಪ್ಲಿಟ್ ಸೀಟ್‍‍ಗಳನ್ನು ಹೊಂದಿದೆ. 300 ಎನ್‌ಕೆ ಈ ಸೆಗ್‍‍ಮೆಂಟಿನಲ್ಲಿ ರೇನ್ ಹಾಗೂ ಸ್ಪೋರ್ಟ್ ಎಂಬ ಎರಡು ರೈಡಿಂಗ್ ಮೋಡ್‍‍ಗಳನ್ನು ಹೊಂದಿರುವ ಮೊದಲ ಬೈಕ್ ಆಗಿದೆ. 650 ಎನ್‍‍ಕೆ 649.3 ಸಿಸಿ ಪ್ಯಾರಲೆಲ್ ಟ್ವಿನ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, 8 ವಾಲ್ವ್, ಡಿಒಹೆಚ್‍‍ಸಿ ಎಂಜಿನ್ ಹೊಂದಿದೆ.

ಜುಲೈ 19ರಂದು ಬಿಡುಗಡೆಯಾಗಲಿವೆ ಸಿ‍ಎಫ್ ಮೋಟೊ ಬೈಕುಗಳು

ಈ ಎಂಜಿನ್ 9,000 ಆರ್‌ಪಿಎಂನಲ್ಲಿ 61 ಬಿಹೆಚ್‌ಪಿ ಹಾಗೂ 7,000 ಆರ್‌ಪಿಎಂನಲ್ಲಿ 56 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 650 ಎನ್‍‍ಕೆ ಬೈಕಿನ ಮುಂಭಾಗದಲ್ಲಿ ಸಾಂಪ್ರದಾಯಿಕ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಹೊಂದಿದೆ. ಯುಎಸ್‌ಡಿ ಫೋರ್ಕ್‍‍ಗಳನ್ನು ಅಳವಡಿಸಲಾಗಿಲ್ಲ. ಪೂರ್ಣ ಎಲ್ಇಡಿ ಲೈಟಿಂಗ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು. ಟೂರರ್‌ಗಳ ಬಗೆ ಹೇಳುವುದಾದರೆ, 650 ಎಂಟಿ ಹಾಗೂ 650 ಜಿಟಿ ಬೈಕುಗಳು ಒಂದೇ ರೀತಿಯ 649.3 ಸಿಸಿ ಪ್ಯಾರಲೆಲ್ ಟ್ವಿನ್ ಸಿಲಿಂಡರ್ ಎಂಜಿನ್ ಹೊಂದಿವೆ.

ಜುಲೈ 19ರಂದು ಬಿಡುಗಡೆಯಾಗಲಿವೆ ಸಿ‍ಎಫ್ ಮೋಟೊ ಬೈಕುಗಳು

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಆದರೆ, ಎರಡೂ ಬೈಕುಗಳ ಬಿ‍‍ಹೆಚ್‍‍ಪಿ ಹಾಗೂ ಟಾರ್ಕ್ ಉತ್ಪಾದನೆ ಪ್ರಮಾಣವು ಬೇರೆ ಬೇರೆಯಾಗಿದೆ. 650ಎಂಟಿ ಬೈಕ್, 8,750 ಆರ್‍‍ಪಿ‍ಎಂನಲ್ಲಿ 70ಬಿ‍‍ಹೆಚ್‍‍ಪಿ ಹಾಗೂ 7,000ಆರ್‍‍ಪಿ‍ಎಂನಲ್ಲಿ 62ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. 650ಜಿಟಿ ಬೈಕ್, 9,000 ಆರ್‍‍ಪಿಎಂ‍‍ನಲ್ಲಿ 61ಬಿ‍‍ಹೆಚ್‍‍ಪಿ ಹಾಗೂ 7,000ಆರ್‍‍ಪಿ‍ಎಂನಲ್ಲಿ 58.5ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಬಿಡುಗಡೆಯಾದ ನಂತರ, 300 ಎನ್‍‍ಕೆ ಬೈಕ್, ಕೆಟಿಎಂ 390 ಡ್ಯೂಕ್, ಬಿಎಂಡಬ್ಲ್ಯು ಜಿ 310 ಹಾಗೂ ಹೋಂಡಾ ಸಿಬಿ300ಆರ್ ಬೈಕುಗಳಿಗೆ ಪೈಪೋಟಿ ನೀಡಲಿದೆ.

ಜುಲೈ 19ರಂದು ಬಿಡುಗಡೆಯಾಗಲಿವೆ ಸಿ‍ಎಫ್ ಮೋಟೊ ಬೈಕುಗಳು

650 ಎನ್‍‍ಕೆ ಬೈಕ್, ಕವಾಸಕಿ ಝಡ್650 ಹಾಗೂ ಬೆನೆಲ್ಲಿ 600ಐ ಬೈಕುಗಳಿಗೆ ಪೈಪೋಟಿ ನೀಡಲಿದೆ. 650 ಎಂಟಿ ಹಾಗೂ 650 ಜಿಟಿ ಬೈಕುಗಳು ಸುಜುಕಿ ವಿ ಸ್ಟಾರ್ಮ್650 ಹಾಗೂ ಕವಾಸಕಿ ನಿಂಜಾ650 ಬೈಕುಗಳಿಗೆ ಪೈಪೋಟಿ ನೀಡಲಿವೆ. ನಾಲ್ಕು ಬೈಕುಗಳನ್ನು ಬಿಡುಗಡೆಗೊಳಿಸುವ ಮೂಲಕ ಸಿಎಫ್ ಮೋಟೋ ಸರಿಯಾದ ಮಾರ್ಗದಲ್ಲಿ ಹೆಜ್ಜೆ ಇಟ್ಟಿದೆ. ಬಹುತೇಕ ತಯಾರಕರು ಒಂದು ಬಾರಿಗೆ ಎರಡು ಬೈಕುಗಳನ್ನು ಬಿಡುಗಡೆಗೊಳಿಸುತ್ತಾರೆ.

ಜುಲೈ 19ರಂದು ಬಿಡುಗಡೆಯಾಗಲಿವೆ ಸಿ‍ಎಫ್ ಮೋಟೊ ಬೈಕುಗಳು

ಈ ಸರಣಿಯ ಬೈಕುಗಳು ಬಹುತೇಕ ಎಲ್ಲಾ ವರ್ಗದ ಜನರನ್ನು ಸೆಳೆಯಲಿವೆ. ಈಗ ನಮ್ಮ ಮುಂದಿರುವ ಪ್ರಶ್ನೆಯೆಂದರೆ ಈ ಬೈಕುಗಳು ಎಷ್ಟು ಸಮರ್ಥವಾಗಿರುತ್ತವೆ ಎಂಬುದು. ಸಿಎಫ್ ಮೋಟೊ ಬೈಕುಗಳ ಬಿಡುಗಡೆಯ ನಂತರ ಈ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.

Most Read Articles

Kannada
English summary
CF Moto Is Ready To Launch Their Range Of Motorcycles On 19 July - Read in kannada
Story first published: Thursday, July 11, 2019, 10:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X