6 ಸಿಲಿಂಡರ್ ಬೈಕಿಗಾಗಿ ಪೇಟೆಂಟ್ ಸಲ್ಲಿಸಿದ ಹೋಂಡಾ
ಹೋಂಡಾ ಕಂಪನಿಯು, ಹೊಸ ಕೆಫೆ ರೇಸರ್ ಬೈಕ್ ಅನ್ನು ಅಭಿವೃದ್ಧಿಪಡಿಸುತ್ತಿದ್ದು, ಇದರಲ್ಲಿ ಆರು-ಸಿಲಿಂಡರ್ ಎಂಜಿನ್ ಅಳವಡಿಸಲಾಗುವುದು. ಈ ಬೈಕಿಗೆ ಸಂಬಂಧಪಟ್ಟಂತೆ ಹೋಂಡಾ ಕಂಪನಿಯು ಪೇಟೆಂಟ್‌ಗಳನ್ನು ಸಲ್ಲಿಸಿದೆ. ಈ ಬೈಕ್ ಇನ್‍ಲೈನ್ ಸಿಕ್ಸ್ ಸಿಲಿಂಡರ್ ಎಂಜಿನ್ ಹೊಂದಿರಲಿದ್ದು, ಹಳೆಯ ಮಾದರಿಯ ಕೆಫೆ ರೇಸರ್‌ನಂತಿದೆ.

ಈ ಬೈಕ್ ಅನ್ನು ಉತ್ಪಾದಿಸಿದರೆ ಹೋಂಡಾ ಕಂಪನಿಯು, ಸಿಬಿಎಕ್ಸ್1000 ಬೈಕಿಗೆ ನೀಡುವ ಗೌರವವಾಗಲಿದೆ. ಬೈಕ್ ಪ್ರಿಯರ ನೆಚ್ಚಿನ ಬೈಕ್ ಆಗಲಿದೆ. 1978 ರಲ್ಲಿ, ಹೋಂಡಾ ಕಂಪನಿಯು, ಹೋಂಡಾ ಸಿಬಿಎಕ್ಸ್ ಬೈಕ್ ಅನ್ನು ಬಿಡುಗಡೆಗೊಳಿಸಿತ್ತು. ಈ ಬೈಕ್ ಹಗುರ ತೂಕದ ಕೆಫೆ ರೇಸರ್ ಚಾಸಿಸ್ ಜೊತೆಗೆ 1,047 ಸಿಸಿಯ, ಏರ್ ಕೂಲ್ಡ್, ಇನ್ಲೈನ್-ಸಿಕ್ಸ್-ಸಿಲಿಂಡರ್ ಎಂಜಿನ್ ಹೊಂದಿತ್ತು. ಈ ಬೈಕ್ ಆಗಿನ ಕಾಲದಲ್ಲಿಯೇ ಹೆಚ್ಚಿನದಾದ 105ಬಿಹೆಚ್‍ಪಿ ಪವರ್ ಉತ್ಪಾದಿಸುತ್ತಿತ್ತು.

ಈ ಬೈಕ್ ರೈಡಿಂಗ್ ಭಂಗಿ ಹಾಗೂ ಸ್ಟೈಲಿಂಗ್‍ನಿಂದಾಗಿ ಸೂಪರ್‍ಬೈಕ್ ಆಗಿರದೆ, ವೇಗವಾಗಿ ಚಲಿಸುವ ಬೈಕ್ ಆಗಿತ್ತು. ಈ ಮೂಲಕ ಹೋಂಡಾ ಕಂಪನಿಯು ಹೊಸದಾದ ಟ್ರೆಂಡ್ ಹುಟ್ಟು ಹಾಕಿತ್ತು. ಹೋಂಡಾ ಸಿಬಿಎಕ್ಸ್ ಬೈಕಿನ ಉತ್ಪಾದನೆಯನ್ನು 1982ರಲ್ಲಿ ಸ್ಥಗಿತಗೊಳಿಸಲಾಯಿತು.

ಆದರೆ ಈ ಬೈಕ್, ಹಳೆಯ ತಲೆಮಾರಿನ ಬೈಕ್ ಪ್ರಿಯರ ಮನಸ್ಸಿನಲ್ಲಿ ಇನ್ನೂ ಜೀವಂತವಾಗಿದೆ. ಇಂದಿನವರೆಗೂ ಈ ಬೈಕ್ ಮಾಡುತ್ತಿದ್ದ ಶಬ್ದವನ್ನು ಬೇರೆ ಯಾವುದೇ ಬೈಕ್ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಕೆಲವು ಸನ್ನಿವೇಶಗಳು ಬೆಲೆಕಟ್ಟಲಾಗದ ಆಸ್ತಿಗಳಾಗಿವೆ.

ಒಮ್ಮೆ ಜನಪ್ರಿಯವಾಗಿದ್ದ ಬೈಕುಗಳನ್ನು ಮತ್ತೊಮ್ಮೆ ಮಾರುಕಟ್ಟೆಗೆ ತಂದು ಜನಪ್ರಿಯಗೊಳಿಸುವುದು ಅಸಾಧ್ಯದ ಕೆಲಸ. ಆದರೆ ಹೋಂಡಾ ಕಂಪನಿಯು ಮತ್ತೊಮ್ಮೆ ಅಂತಹ ಬೈಕಿನ ಅಗತ್ಯವನ್ನು ಮನಗೊಂಡು, ಪೇಟೆಂಟ್‍ಗಾಗಿ ಅರ್ಜಿ ಸಲ್ಲಿಸಿದೆ. ಈ ಬೈಕಿನ ಮುಂಭಾಗದಲ್ಲಿ ಆಕರ್ಷಕವಾಗಿರುವ ವಿನ್ಯಾಸ, ಮಧ್ಯದಲ್ಲಿ ಹೊಸ ಬಗೆಯ ಫ್ಯೂಯಲ್ ಟ್ಯಾಂಕ್ ಹಾಗೂ ಹಿಂಭಾಗದಲ್ಲಿ ಕೌಲಿಂಗ್ ಅನ್ನು ಅಳವಡಿಸಲಾಗಿದೆ. ಬೈಕಿನ ಕೆಳಗಿನ ಭಾಗದಲ್ಲಿ ಕೆಲವೊಂದು ಬದಲಾವಣೆಗಳಾಗಿವೆ.

ಹ್ಯಾಂಡಲ್‌ಬಾರ್ ಮೇಲೆ ಕ್ಲಿಪ್‍ಗಳ ಜೊತೆಗೆ ಅಲ್ಯೂಮಿನಿಯಂ ಸ್ವಿಂಗ್ ಆರ್ಮ್‌ಗಳನ್ನು ಕಾಣಬಹುದು. ಸಸ್ಪೆಂಷನ್ ಕಾರ್ಯಗಳನ್ನು ನಿಭಾಯಿಸಲು ಬೈಕಿನ ಮುಂಭಾಗದಲ್ಲಿ ತಲೆಕೆಳಗಾಗಿರುವ ಫೋರ್ಕ್, ಹಿಂಭಾಗದಲ್ಲಿ ಮೊನೊ-ಶಾಕ್‍ಗಳನ್ನು ಕಾಣಬಹುದು.

ಈ ಬೈಕ್ ಹೆಚ್ಚಿನ ವೇಗವನ್ನು ನಿಭಾಯಿಸಬಲ್ಲದು. ಈ ಬೈಕಿನ ಪ್ರಮುಖ ಭಾಗವು ಖಂಡಿತವಾಗಿ ಇನ್‍ಲೈನ್ 6 ಸಿಲಿಂಡರ್ ಎಂಜಿನ್ ಆಗಿರಲಿದೆ. ಪೇಟೆಂಟ್‌ಗಳಲ್ಲಿ ವಿಭಿನ್ನ ರೀತಿಯ 3-ಇನ್ -1 ಎಕ್ಸಾಸ್ಟ್ ಡೌನ್‍ಪೈಪ್‍ಗಳನ್ನು ಕಾಣಬಹುದಾಗಿದ್ದು, ಇವುಗಳಿಂದಾಗಿ ಬೈಕಿನ ಎರಡೂ ಬದಿಯಲ್ಲಿ ಎಕ್ಸಾಸ್ಟ್ ಸಿಸ್ಟಂಗಳನ್ನು ಹೊಂದಿದಾಗುತ್ತದೆ.
MOST READ: ಹೆಚ್ಚು ಮಾರಾಟವಾಗುವ ಸ್ಕೂಟರ್‍ಗಳಲ್ಲಿ ಹೋಂಡಾ ಆಕ್ಟಿವಾ ಈಗಲೂ ನಂ.1

ಚಿತ್ರಗಳು ಎಂಜಿನ್‌ನಲ್ಲಿ ಲಿಕ್ವಿಡ್ ಕೂಲ್ ಅಳವಡಿಸಿರುವುದನ್ನು ತೋರಿಸುತ್ತದೆ. ಆದರೆ ಹೋಂಡಾ ಕಂಪನಿಯು, ಸಿಬಿಎಕ್ಸ್‌ನಲ್ಲಿದ್ದಂತಹ ಏರ್ ಕೂಲಿಂಗ್ ಫಿನ್‍ಗಳನ್ನು ಅಳವಡಿಸಿದೆ. ಮುಂಭಾಗದಲ್ಲಿ ಟ್ವಿನ್-ಡಿಸ್ಕ್ ಹಾಗೂ ಹಿಂಭಾಗದಲ್ಲಿ ರೇರ್ ಹ್ಯಾಂಡಲ್ ಬ್ರೇಕಿಂಗ್‍ಗಳಿವೆ.
MOST READ: ಮೇ 2019ರಲ್ಲಿ ಹೆಚ್ಚು ಮಾರಾಟವಾದ ಬೈಕುಗಳಿವು

ಸದ್ಯಕ್ಕೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲದೇ ಇದ್ದರೂ ಎಬಿಎಸ್, ಟ್ರಾಕ್ಷನ್ ಕಂಟ್ರೋಲ್, ವ್ಹೀಲಿ ಕಂಟ್ರೋಲ್‍ನಂತಹ ಸುರಕ್ಷಾ ಫೀಚರ್‍ಗಳಿರಲಿವೆ. ಜೊತೆಗೆ ರೈಡಿಂಗ್ ಮೋಡ್‍ಗಳಿರಲಿವೆ. ಈ ಎಂಜಿನ್ 200 ಬಿಹೆಚ್‍ಪಿ ಪವರ್ ಉತ್ಪಾದಿಸುವ ಸಾಧ್ಯತೆಗಳಿವೆ. ಸಿಕ್ಸ್ ಎಂಜಿನ್‌ನಿಂದಾಗಿ ಹೆಚ್ಚಿನ ಶಬ್ದವನ್ನು ನಿರೀಕ್ಷಿಸಬಹುದು.
MOST READ: ಬ್ಲೂಟೂತ್ ಹೊಂದಲಿವೆ ಎಪ್ರಿಲಿಯಾ ಸ್ಕೂಟರ್‍ಗಳು

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಹೋಂಡಾ ಕಂಪನಿಯು ಈ ಹಿಂದೆಯೂ ಸಹ ಹಲವಾರು ಪೇಟೆಂಟ್‌ಗಳನ್ನು ಸಲ್ಲಿಸಿದೆ. ಆದರೆ ಅವುಗಳನ್ನು ಕಾರ್ಯರೂಪಕ್ಕೆ ತಂದಿಲ್ಲ. ಆದರೆ ಬೈಕುಗಳ ವಿಷಯದಲ್ಲಿ ಪೇಟೆಂಟ್ ಚಿತ್ರಗಳನ್ನು ವಾಸ್ತವಕ್ಕೆ ತರುವಲ್ಲಿ ಹೋಂಡಾ ಸಾಕಷ್ಟು ಯಶಸ್ಸು ಕಂಡಿದೆ. ಹೋಂಡಾ ಈಗಾಗಲೇ ಬೈಕ್‌ನ ಮೂಲಮಾದರಿಯನ್ನು ತಯಾರಿಸಿರಲೂ ಬಹುದು. ಹೊಸ ಸಿಕ್ಸ್-ಸಿಲಿಂಡರ್ ಬೈಕ್ ಅನ್ನು ಈ ವರ್ಷದ ನವೆಂಬರ್‌ನಲ್ಲಿ ನಡೆಯಲಿರುವ 2019ರ ಇಐಸಿಎಂಎ ನಲ್ಲಿ ಪ್ರದರ್ಶಿಸುವ ನಿರೀಕ್ಷೆಗಳಿವೆ.


Click it and Unblock the Notifications