ಅನಾವರಣಗೊಂಡ ಹಸ್ಕ್‌ವರ್ನಾ ಬೈಕ್‍‍ಗಳು

ಹಸ್ಕ್‌ವರ್ನಾ ತನ್ನ ಸ್ವಾರ್ಟ್‍‍ಪಿಲೆನ್ 250 ಹಾಗೂ ವಿಟ್‍‍ಪಿಲೆನ್ 250 ಬೈಕ್‍‍ಗಳನ್ನು ಗೋವಾದಲ್ಲಿ ನಡೆಯುತ್ತಿರುವ 2019ರ ಇಂಡಿಯಾ ಬೈಕ್ ವೀಕ್‍‍ನಲ್ಲಿ ಅನಾವರಣಗೊಳಿಸಿದೆ. ಇದರೊಂದಿಗೆ ಹಸ್ಕ್‌ವರ್ನಾ ಕಂಪನಿಯು ದೇಶಿಯ ಮಾರುಕಟ್ಟೆಗೆ ಕಾಲಿಟ್ಟಿದೆ.

ಅನಾವರಣಗೊಂಡ ಹಸ್ಕ್‌ವರ್ನಾ ಬೈಕ್‍‍ಗಳು

ಸ್ವೀಡನ್ ಮೂಲದ ಬೈಕ್ ತಯಾರಕ ಕಂಪನಿಯು 250 ಸಿಸಿ ಬೈಕ್‍‍ಗಳನ್ನು ಅನಾವರಣಗೊಳಿಸುವ ಮೂಲಕ ಭಾರತದ ಬೈಕ್ ಪ್ರಿಯರನ್ನು ಅಚ್ಚರಿಗೊಳಿಸಿದೆ. ಹಸ್ಕ್‌ವರ್ನಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಸ್ವಾರ್ಟ್‍‍ಪಿಲೆನ್ 401 ಹಾಗೂ ವಿಟ್‍‍ಪಿಲೆನ್ 401 ಬೈಕ್‍‍ಗಳನ್ನು ಬಿಡುಗಡೆಗೊಳಿಸಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ 250 ಸಿಸಿ ಬೈಕ್‍‍ಗಳನ್ನು ಬಿಡುಗಡೆಗೊಳಿಸಿದೆ.

ಅನಾವರಣಗೊಂಡ ಹಸ್ಕ್‌ವರ್ನಾ ಬೈಕ್‍‍ಗಳು

ಹಸ್ಕ್‌ವರ್ನಾ ಸ್ವಾರ್ಟ್‍‍ಪಿಲೆನ್ 250

ಹಸ್ಕ್‌ವರ್ನಾ ಸ್ವಾರ್ಟ್‌ಪಿಲೆನ್ 250, ವಿನ್ಯಾಸದಲ್ಲಿ ಸ್ವಾರ್ಟ್‌ಪಿಲೆನ್ 401 ಬೈಕ್ ಅನ್ನು ಹೋಲುತ್ತದೆ. ಈ ಬೈಕಿಗೆ ಸ್ಕ್ರ್ಯಾಂಬ್ಲರ್ ರೀತಿಯ ವಿನ್ಯಾಸವನ್ನು ನೀಡಲಾಗಿದೆ. ಮುಂಭಾಗದಲ್ಲಿ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಹೊಂದಿರುವ ಸರ್ಕ್ಯುಲರ್ ಹೆಡ್‌ಲ್ಯಾಂಪ್‍‍ಗಳಿವೆ. ಅದರ ಮೇಲೆ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅಳವಡಿಸಲಾಗಿದೆ.

ಅನಾವರಣಗೊಂಡ ಹಸ್ಕ್‌ವರ್ನಾ ಬೈಕ್‍‍ಗಳು

ಫ್ಯೂಯಲ್ ಟ್ಯಾಂಕ್ ಮಸ್ಕುಲರ್ ಆಗಿದ್ದು, ದೊಡ್ಡದಾಗಿದ್ದರೆ, ಬೈಕಿನ ಹಿಂಭಾಗದ ತುದಿಯು ಚಿಕ್ಕದಾಗಿದೆ. ಸ್ವಾರ್ಟ್‌ಪಿಲೆನ್ 401 ಬೈಕ್ ವೈರ್ ಸ್ಪೋಕ್ ವ್ಹೀಲ್‌ಗಳನ್ನು ಹೊಂದಿದ್ದರೆ, 250 ಬೈಕ್ 8 ಸ್ಪೋಕ್ ಅಲಾಯ್ ವ್ಹೀಲ್‍‍ಗಳನ್ನು ಹೊಂದಿದೆ. ಈ ಬೈಕ್ ಸ್ಕ್ರ್ಯಾಂಬ್ಲರ್ ಸ್ಟೈಲಿಂಗ್ ಅನ್ನು ಹೆಚ್ಚಿಸುವ ಡ್ಯುಯಲ್ ಪರ್ಪಸ್ ಟಯರ್‍‍ಗಳನ್ನು ಹೊಂದಿದೆ.

ಅನಾವರಣಗೊಂಡ ಹಸ್ಕ್‌ವರ್ನಾ ಬೈಕ್‍‍ಗಳು

ಸ್ವೀಡಿಷ್ ಭಾಷೆಯಲ್ಲಿ ಸ್ವಾರ್ಟ್‍‍ಪಿಲೆನ್ ಎಂದರೆ ಕಪ್ಪು ಬಾಣ ಎಂದು. ಈ ಬೈಕಿನ ಮೇಲೆ ಕುಳಿತಾಗ ಆ ಶಬ್ದದ ಅರ್ಥವು ತಿಳಿಯುತ್ತದೆ. 2019ರ ಇಂಡಿಯಾ ಬೈಕ್ ವೀಕ್‍‍ನಲ್ಲಿ ಅನಾವರಣಗೊಂಡಿರುವ ಸ್ವಾರ್ಟ್‍‍ಪಿಲೆನ್ 250 ಬೈಕ್ ಗನ್‍‍ಮೆಟಲ್ ಗ್ರೇ ಬಣ್ಣವನ್ನು ಹೊಂದಿದ್ದು, ಕಪ್ಪು ಬಣ್ಣದ ಹಲವು ಅಂಶಗಳಿವೆ.

ಅನಾವರಣಗೊಂಡ ಹಸ್ಕ್‌ವರ್ನಾ ಬೈಕ್‍‍ಗಳು

ಹಸ್ಕ್‌ವರ್ನಾ ವಿಟ್‍‍ಪಿಲೆನ್ 250

ಸ್ವೀಡಿಷ್ ಭಾಷೆಯಲ್ಲಿ ವಿಟ್‌ಪಿಲೆನ್ ಎಂದರೆ ಬಿಳಿ ಬಾಣ. ಐಬಿಡಬ್ಲ್ಯೂನಲ್ಲಿ ಅನಾವರಣಗೊಂಡ ಈ ಬೈಕಿಗೆ ಈ ಶಬ್ದವು ಸರಿಯಾಗಿ ಹೊಂದಿಕೊಳ್ಳುತ್ತದೆ. ಈ ಬೈಕ್ ಸ್ಯಾಟಿನ್ ಸಿಲ್ವರ್ ಬಣ್ಣವನ್ನು ಹೊಂದಿದ್ದು, ಆಕರ್ಷಕವಾಗಿ ಕಾಣುತ್ತದೆ. ವಿಟ್‍‍ಪಿಲೆನ್ ಕೆಫೆ ರೇಸರ್‍‍ನ ವಿನ್ಯಾಸ ಭಾಷೆಯನ್ನು ಹೊಂದಿದೆ.

ಅನಾವರಣಗೊಂಡ ಹಸ್ಕ್‌ವರ್ನಾ ಬೈಕ್‍‍ಗಳು

ವಿಟ್‍‍ಪಿಲೆನ್ ಬೈಕಿನ ಮುಂಭಾಗದಲ್ಲಿ ಸ್ವಾರ್ಟ್‌ಪಿಲೆನ್‌ ಬೈಕಿನಲ್ಲಿರುವಂತಹ ಸರ್ಕ್ಯುಲರ್ ಹೆಡ್‌ಲ್ಯಾಂಪ್ ಮತ್ತು ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍‍ಗಳಿವೆ. 401 ಬೈಕಿನಲ್ಲಿ ವೈರ್ ಸ್ಪೋಕ್ ವ್ಹೀಲ್‍‍ಗಳಿದ್ದರೆ, ವಿಟ್‌ಪಿಲೆನ್ 250 ಬೈಕಿನಲ್ಲಿ ಅಲಾಯ್ ವ್ಹೀಲ್‍‍ಗಳಿವೆ. ಈ ವ್ಹೀಲ್‍‍ಗಳು ರಸ್ತೆಗೆ ಸರಿಯಾಗಿ ಹೊಂದಿಕೊಳ್ಳುತ್ತವೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಅನಾವರಣಗೊಂಡ ಹಸ್ಕ್‌ವರ್ನಾ ಬೈಕ್‍‍ಗಳು

ಸ್ವಾರ್ಟ್‍‍ಪಿಲೆನ್ 250 ಹಾಗೂ ವಿಟ್‍‍ಪಿಲೆನ್ 250 ಎಂಜಿನ್

ಹಸ್ಕ್ ವರ್ನಾ ಸ್ವಾರ್ಟ್‌ಪಿಲೆನ್ 250 ಹಾಗೂ ವಿಟ್‌ಪಿಲೆನ್ 250 ಬೈಕ್‍‍ಗಳು, ಕೆಟಿಎಂ 250 ಡ್ಯೂಕ್ ಬೈಕಿನ ಆಧಾರದ ಮೇಲೆ ತಯಾರಾಗಿವೆ. ಈ ಕಾರಣಕ್ಕಾಗಿ ಕೆಟಿ‍ಎಂ 250 ಡ್ಯೂಕ್ ಬೈಕಿನಲ್ಲಿರುವಂತಹ ಎಂಜಿನ್ ಅನ್ನು ಹೊಂದಿವೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಅನಾವರಣಗೊಂಡ ಹಸ್ಕ್‌ವರ್ನಾ ಬೈಕ್‍‍ಗಳು

ಈ ಬೈಕ್‍‍ಗಳಲ್ಲಿ 248.8 ಸಿಸಿ, ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಗರಿಷ್ಠ 31 ಬಿಹೆಚ್‌ಪಿ ಪವರ್ ಹಾಗೂ 24 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ ಅಳವಡಿಸಲಾಗಿರುವ 6 ಸ್ಪೀಡಿನ ಗೇರ್‍‍ಬಾಕ್ಸ್ ಹಿಂಭಾಗದ ವ್ಹೀಲ್‍‍ಗಳನ್ನು ಚಲಾಯಿಸುತ್ತದೆ.

MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

ಅನಾವರಣಗೊಂಡ ಹಸ್ಕ್‌ವರ್ನಾ ಬೈಕ್‍‍ಗಳು

ಕೆಟಿ‍ಎಂ ಡ್ಯೂಕ್ 250 ಬೈಕಿನ ತೂಕವು 161 ಕೆ.ಜಿಗಳಾದರೆ, ಹಸ್ಕ್ ವರ್ನಾ ಬೈಕಿನ ತೂಕವು 153 ಕೆ.ಜಿಗಳಾಗಿದೆ. ಈ ಕಾರಣಕ್ಕೆ ಹಸ್ಕ್‌ವರ್ನಾ ವೇಗವಾಗಿ ಚಲಿಸುವ ಸಾಧ್ಯತೆಗಳಿವೆ. ಹಸ್ಕ್ ವರ್ನಾ ಬೈಕ್‍‍ಗಳಲ್ಲಿ ಸ್ಕ್ರಾಂಬ್ಲರ್ ಹಾಗೂ ಕೆಫೆ ರೇಸರ್‍‍ನಲ್ಲಿರುವಂತೆ ಶಾರ್ಟ್ ಶಿಫ್ಟಿಂಗ್ ಗೇರ್‍‍ಗಳಿರುವ ಸಾಧ್ಯತೆಗಳಿವೆ.

ಅನಾವರಣಗೊಂಡ ಹಸ್ಕ್‌ವರ್ನಾ ಬೈಕ್‍‍ಗಳು

ಹಸ್ಕ್‌ವರ್ನಾ ಈ ಬೈಕ್‍‍ಗಳನ್ನು ಕೆಟಿ‍ಎಂ ಡೀಲರ್‍‍ಗಳ ಮೂಲಕ ಮಾರಾಟ ಮಾಡಲಿದೆ. ಈ ಬೈಕ್‍‍ಗಳು ಬಜಾಜ್-ಕೆಟಿ‍ಎಂ-ಹಸ್ಕ್‌ವರ್ನಾ ಸರಣಿಯಲ್ಲಿರುವ ಪ್ರೀಮಿಯಂ ಬೈಕ್‍‍ಗಳಾಗಿರಲಿದ್ದು, ಕೆಟಿ‍ಎಂ ಬೈಕಿಗಿಂತ ದುಬಾರಿ ಬೆಲೆಯನ್ನು ಹೊಂದಿರಲಿವೆ. ಹಸ್ಕ್‌ವರ್ನಾ ಬೈಕ್‍‍ಗಳನ್ನು 2020ರ ಫೆಬ್ರವರಿಯಿಂದ ಮಾರಾಟ ಮಾಡಲಾಗುವುದು.

ಅನಾವರಣಗೊಂಡ ಹಸ್ಕ್‌ವರ್ನಾ ಬೈಕ್‍‍ಗಳು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹಸ್ಕ್‌ವರ್ನಾ 250 ಸಿಸಿ ಸೆಗ್‍ಮೆಂಟಿಗೆ ಕಾಲಿಡುವ ಮೂಲಕ ಸರಿಯಾದ ನಿರ್ಧಾರವನ್ನು ಕೈಗೊಂಡಿದೆ. ಈ ಪ್ರೀಮಿಯಂ ಬೈಕ್‍‍ಗಳು ಕೆಟಿ‍ಎಂ ಬೈಕ್‍‍ಗಳಿಗಿಂತ ಹೆಚ್ಚಿನ ಬೆಲೆಯನ್ನು ಹೊಂದಿರಲಿವೆ. ಮಾರಾಟದ ಅಂಕಿ ಅಂಶಗಳ ಪ್ರಕಾರ ಕೆಟಿ‍ಎಂ 250 ಬೈಕ್‍‍ಗಳು 390 ಡ್ಯೂಕ್ ಬೈಕ್‍‍ಗಳಿಗಿಂತ ಹೆಚ್ಚು ಜನಪ್ರಿಯವಾಗಿವೆ.

ಅನಾವರಣಗೊಂಡ ಹಸ್ಕ್‌ವರ್ನಾ ಬೈಕ್‍‍ಗಳು

390 ಡ್ಯೂಕ್ ಬೈಕ್‍‍ಗಳು ಹೆಚ್ಚಿನ ಬೆಲೆಯನ್ನು ಹೊಂದಿರುವ ಕಾರಣಕ್ಕೆ ಹೆಚ್ಚು ಮಾರಾಟವಾಗುತ್ತಿಲ್ಲ. ಹಸ್ಕ್‌ವರ್ನಾ ಸ್ವಾರ್ಟ್‍‍ಪಿಲೆನ್ ಹಾಗೂ ವಿಟ್‍‍ಪಿಲೆನ್ 401 ಬೈಕ್‍‍ಗಳನ್ನು ಬಿಡುಗಡೆಗೊಳಿಸಿದ್ದರೆ, ಈ ಬೈಕ್‍‍ಗಳ ಬೆಲೆಯು ಡ್ಯೂಕ್ 390 ಬೈಕ್‍‍ಗಳಿಗಿಂತ ಹೆಚ್ಚಾಗಿರುತ್ತಿತ್ತು.

ಅನಾವರಣಗೊಂಡ ಹಸ್ಕ್‌ವರ್ನಾ ಬೈಕ್‍‍ಗಳು

ಹೆಚ್ಚು ಬೆಲೆಯ ಕಾರಣಕ್ಕೆ ಹೆಚ್ಚು ಮಾರಾಟವಾಗುತ್ತಿರಲಿಲ್ಲ. ಈ ಕಾರಣಕ್ಕೆ ಹಸ್ಕ್‌ವರ್ನಾ 250 ಸಿಸಿ ಸೆಗ್‍‍ಮೆಂಟಿಗೆ ಕಾಲಿಟ್ಟಿದೆ. ದೇಶಿಯ ಮಾರುಕಟ್ಟೆಯಲ್ಲಿ 250 ಸಿಸಿಯ ಬೈಕ್‍‍ಗಳು ಹೆಚ್ಚು ಜನಪ್ರಿಯತೆಯನ್ನು ಹೊಂದಿವೆ.

More from DriveSpark

Article Published On: Saturday, December 7, 2019, 16:20 [IST]
English summary
Husqvarna Svartpilen 250 & Vitpilen 250 Revealed At India Bike Week 2019 - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+