ಬಹುನೀರಿಕ್ಷಿತ ಪೆರಾಕ್ ಬೈಕಿನಂತೆ ಮಾಡಿಫೈಗೊಂಡ ಜಾವಾ 42 ಬೈಕ್
ಜಾವಾ ಸಂಸ್ಥೆಯು ತನ್ನ ಕ್ಲಾಸಿಕ್ ಬೈಕ್ ಮಾದರಿಗಳನ್ನು ಹೊಸ ರೂಪದೊಂದಿಗೆ ಬಿಡುಗಡೆಗೊಳಿಸಿ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಜಾವಾ ಮತ್ತು ಜಾವಾ 42 ಬೈಕ್ ನಂತರ ಪೆರಾಕ್ ಬೈಕ್ ಬಿಡುಗಡೆಗೊಳಿಸಿ ವಿತರಣೆಗೆ ಸಿದ್ದವಾಗುತ್ತಿದೆ. ಈ ನಡುವೆ ಹೊಸ ಪೆರಾಕ್ ವಿತರಣೆಗೂ ಮುನ್ನ ಮಾಡಿಫೈ ಜಾವಾ 42 ಬೈಕ್ ಒಂದು ಕ್ಲಾಸಿಕ್ ಬೈಕ್ ಪ್ರಿಯರನ್ನು ಆಕರ್ಷಿಸುತ್ತಿದೆ.

ಹೌದು, ಮುಂಬೈನಲ್ಲಿ ರಸ್ತೆ ಬದಿಯ ಗ್ಯಾರೇಜ್ ಒಂದರಲ್ಲಿ ಜಾವಾ 42 ಬೈಕ್ ಮಾದರಿಯನ್ನು ಪೆರಾಕ್ ಬೈಕಿನಂತೆ ಮಾಡಿಫೈ ಮಾಡಲಾಗುತ್ತಿದ್ದು, ದುಬಾರಿ ಬೆಲೆ ಹೊಂದಿರುವ ಪೆರಾಕ್ ಬೈಕಿನ ವಿನ್ಯಾಸವನ್ನು ಜಾವಾ 42 ಬೈಕಿನಲ್ಲಿ ಜೋಡಣೆ ಮಾಡಲಾಗುತ್ತಿದೆ. ಇದು ಕ್ಲಾಸಿಕ್ ಬೈಕ್ ಮಾಲೀಕರ ಆಕರ್ಷಿಸುತ್ತಿದ್ದು, ಬಾಬ್ಬರ್ ಸ್ಟೈಲ್ ಪೆರಾಕ್ ಬೈಕಿನಲ್ಲಿರುವಂತೆ ಸಿಂಗಲ್ ಸೀಟ್ ವಿನ್ಯಾಸವನ್ನು ಕೇವಲ ರೂ.1 ಸಾವಿರಕ್ಕೆ ಮಾಡಿಫೈ ಮಾಡಲಾಗುತ್ತಿದೆ.

ಸಿಂಗಲ್ ಸೀಟ್ ಸ್ಟೈಲ್‌ನಲ್ಲಿ ಮಿಂಚುತ್ತಿರುವ ಜಾವಾ 42 ಬೈಕ್ ಮಾದರಿಯು ಬಹುತೇಕ ಪೆರಾಕ್ ಹೋಲಿಕೆಯನ್ನೇ ಪಡೆದಿದ್ದು, ಹೊಸ ವಿನ್ಯಾಸದ ಮಾಡಿಫೈ ಡಿಸೈನ್‌ಗಾಗಿ ಈಗಾಗಲೇ ಸಾಕಷ್ಟು ಗ್ರಾಹಕರಿಂದ ಬೇಡಿಕೆ ಬಂದಿದೆಯೆಂತೆ.

ಇನ್ನು ಪೆರಾಕ್ ಬೈಕ್ ಮಾದರಿಯು ಕಳೆದ ನವೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಂಡಿದ್ದು, 2020ರ ಮಾರ್ಚ್‌ನಲ್ಲಿ ಗ್ರಾಹಕರ ಕೈಸೇರಲಿದೆ. ಪೆರಾಕ್ ಖರೀದಿಗೆ ಈಗಾಗಲೇ ಬುಕ್ಕಿಂಗ್ ಆರಂಭವಾಗಿದ್ದು, ಜಾವಾ ಮತ್ತು ಜಾವಾ 42 ಬೈಕ್ ಮಾದರಿಗಳಿಂತಲೂ ಅತ್ಯುತ್ತಮ ಡಿಸೈನ್ ಮತ್ತು ತಾಂತ್ರಿಕ ಸೌಲಭ್ಯಗಳನ್ನು ಹೊಂದಿದೆ.

ಬಿಡುಗಡೆಗೂ ಮುನ್ನ ಕ್ಲಾಸಿಕ್ ಬೈಕ್ ಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಜಾವಾ ಪೆರಾಕ್ ಬೈಕ್ ಮಾದರಿಯು ಇದೀಗ ಅಂತಿಮವಾಗಿ ಗ್ರಾಹಕರ ಕೈಸೇರಲು ಸಿದ್ದವಾಗಿದ್ದು, ಹೊಸ ಬೈಕ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1,95,500 ಬೆಲೆ ಪಡೆದುಕೊಂಡಿದೆ. 1940ರ ಅವಧಿಯಲ್ಲಿನ ಬಾಬರ್ ಸ್ಟೈಲ್ ಬೈಕ್ ವಿನ್ಯಾಸವನ್ನು ಹೊತ್ತುಬಂದಿರುವ ಪೆರಾಕ್ ಬೈಕ್ ಮಾದರಿಯು ವಿಶೇಷ ಬಾಡಿ ಶೈಲಿಯೊಂದಿಗೆ ಭಾರತದಲ್ಲಿರುವ ಇತರೆ ಎಲ್ಲಾ ಬೈಕ್ ಮಾದರಿಗಳಿಂತಲೂ ಉದ್ದವಾದ ವೀಲ್ಹ್ ಬೆಸ್ ಹೊಂದಿರುವ ಮೊದಲ ಬೈಕ್ ಇದಾಗಿದೆ.

ಪೆರಾಕ್ ಬೈಕ್ ಮಾದರಿಯು 2020ರ ಎಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ಬಿಎಸ್-6 ನಿಯಮ ಅನುಸಾರ ಅಭಿವೃದ್ದಿ ಹೊಂದಿದ್ದು, 334-ಸಿಸಿ ಎಂಜಿನ್ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 30-ಬಿಎಚ್‌ಪಿ ಮತ್ತು 31-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಪೆರಾಕ್ ಬೈಕ್ ಮಾದರಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿದ್ದು, ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಮಾದರಿಗೆ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ. ಮತ್ತೊಂದು ವಿಶೇಷ ಅಂದ್ರೆ, ಪೆರಾಕ್ ಮಾದರಿಯು ಕ್ಲಾಸಿಕ್ ಲೆಜೆಂಡ್ ಕಂಪನಿಯಿಂದಲೇ ಮಾಡಿಫೈಗೊಂಡ ಬೈಕ್ ಆವೃತ್ತಿಯಾಗಲಿದ್ದು, ಡ್ಯುಯಲ್ ಚಾನೆಲ್ ಎಬಿಎಸ್, ಎರಡು ಬದಿಯ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್, ರೌಂಡ್ ಹೆಡ್‌ಲ್ಯಾಂಪ್, ಡ್ಯಯಲ್ ಎಕ್ಸಾಸ್ಟ್ ಫೀಚರ್ಸ್‌ಗಳು ಹೊಸ ಬೈಕಿನ ಪ್ರಮುಖ ಆಕರ್ಷಣೆಯಾಗಿವೆ.
MOST READ: ರಿವೋಲ್ಟ್ ಬೈಕಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಒಕಿ100 ಎಲೆಕ್ಟ್ರಿಕ್ ಬೈಕ್

ಇದರೊಂದಿಗೆ ಜಾವಾ ಬೈಕ್‌ಗಳು ದಶಕಗಳ ಹಿಂದೆ ಭಾರತದಲ್ಲಿ ಅಬ್ಬರಿಸಿ ಮರೆಯಾಗಿದ್ದಲ್ಲದೆ ಇದೀಗ ನವ ವಿನ್ಯಾಸ ಹಾಗೂ ನೂತನ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಜಾವಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಬೈಕ್ ನಿರ್ಮಿಸುವಲ್ಲಿ ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ ಯಶಸ್ವಿಯಾಗಿದೆ.
MOST READ: ನಡುರಸ್ತೆಯಲ್ಲೇ ಹೊತ್ತಿ ಉರಿದ ಹೊಚ್ಚ ಹೊಸ ಎಂಜಿ ಹೆಕ್ಟರ್ ಕಾರು..!

ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಸದ್ಯಕ್ಕೆ ಮೂರು ಹೊಸ ಬೈಕ್‌ಗಳನ್ನು ಹೊರತಂದಿದ್ದು, ಇದರಲ್ಲಿ ಜಾವಾ, ಜಾವಾ 42 ಬೈಕ್‌ಗಳು ಈಗಾಗಲೇ ಮಾರಾಟವಾಗುತ್ತಿದೆ. ಇದೀಗ ಬಿಡುಗಡೆಯಾಗಿರುವ ಪೆರಾಕ್ ಕಸ್ಟಮ್ ಬೈಕ್ ಮಾದರಿಯು ಕೂಡಾ 2020ರ ಫೆಬ್ರುವರಿ ಅಥವಾ ಮಾರ್ಚ್ ವೇಳೆಗೆ ರಸ್ತೆಗಿಳಿಯಲಿವೆ.
MOST READ: ಪ್ರಿಯಾಂಕಾ ಗಾಂಧಿಗೆ ಡ್ರಾಪ್ ಕೊಟ್ಟ ಸ್ಕೂಟರ್ ಮಾಲೀಕನಿಗೆ ಬಿತ್ತು ದುಬಾರಿ ದಂಡ

ಜಾವಾ ಕ್ಲಾಸಿಕ್ ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.64 ಲಕ್ಷಕ್ಕೆ ಮತ್ತು ಜಾವಾ 42 ಮಾದರಿಯು ರೂ. 1.55 ಲಕ್ಷಕ್ಕೆ ಖರೀದಿಗೆ ಲಭ್ಯವಿದ್ದು, ಎರಡು ಬೈಕ್‌ಗಳಲ್ಲೂ 293-ಸಿಸಿ ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದೊಂದಿಗೆ 27-ಬಿಹೆಚ್‍ಪಿ ಮತ್ತು 28-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿವೆ.
Image Courtesy:Arif Sayyad/Jawa Owners & Lovers


Click it and Unblock the Notifications








