ಆನಿವರ್ಸರಿ ಎಡಿಷನ್ ಮೊದಲ ಬೈಕ್ ವಿತರಿಸಿದ ಜಾವಾ

ಕ್ಲಾಸಿಕ್ ಲೆಜೆಂಡ್ಸ್ ಒಡೆತನದ ಜಾವಾ ಬೈಕಿನ 90ನೇ ಆನಿವರ್ಸರಿ ಎಡಿಷನ್ ಬೈಕಿನ ವಿತರಣೆಯನ್ನು ಆರಂಭಿಸಲಾಗಿದೆ. ಈ ಬೈಕಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.1.73 ಲಕ್ಷಗಳಾಗಿದೆ. 1929ರಲ್ಲಿ ಜಾವಾ ಕಂಪನಿಯನ್ನು ಸ್ಥಾಪಿಸಿದ ಹಿನ್ನೆಲೆಯಲ್ಲಿ ಕಂಪನಿಯ 90ನೇ ವರ್ಷದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಈ ಬೈಕ್ ಅನ್ನು ಬಿಡುಗಡೆಗೊಳಿಸಲಾಗಿದೆ.

ಆನಿವರ್ಸರಿ ಎಡಿಷನ್ ಮೊದಲ ಬೈಕ್ ವಿತರಿಸಿದ ಜಾವಾ

ಈ ಆನಿವರ್ಸರಿ ಎಡಿಷನ್ ಬೈಕ್ ಜಾವಾ 500 ಒಎಚ್‌ವಿ ಬೈಕ್ ಅನ್ನು ನೆನಪಿಸುತ್ತದೆ. 500 ಒಎಚ್‌ವಿ ಬೈಕ್ ಅನ್ನು ಮೊದಲ ಬಾರಿಗೆ 1929ರಲ್ಲಿ ಉತ್ಪಾದಿಸಲಾಯಿತು. ಈ ಆನಿವರ್ಸರಿ ಬೈಕ್ ಮೂಲ ಕೆಂಪು ಹಾಗೂ ಐವರಿ ಬಣ್ಣಗಳಿಂದ ಪಡೆದ ಟ್ಯಾಂಕ್ ಅನ್ನು ಪಿನ್‌ಸ್ಟ್ರೈಪ್‌ನೊಂದಿಗೆ ಹೊಂದಿದೆ.

ಆನಿವರ್ಸರಿ ಎಡಿಷನ್ ಮೊದಲ ಬೈಕ್ ವಿತರಿಸಿದ ಜಾವಾ

ಆಧುನಿಕ ಕಾಲಕ್ಕೆ ತಕ್ಕಂತೆ ಎಂಜಿನ್ ಹಾಗೂ ಎಕ್ಸಾಸ್ಟ್ ಗಳನ್ನು ಕ್ರೋಮ್ ಬಣ್ಣದಲ್ಲಿ ನೀಡಲಾಗಿದೆ. ಈ ಆನಿವರ್ಸರಿ ಎಡಿಷನ್ ಬೈಕುಗಳ ಕೇವಲ 90 ಯುನಿಟ್‍‍ಗಳನ್ನು ಮಾತ್ರ ಮಾರಾಟ ಮಾಡಲಾಗುವುದು. ಈ ಆನಿವರ್ಸರಿ ಎಡಿಷನ್ ಬೈಕಿನ ಮೊದಲ ಯುನಿಟ್ ಅನ್ನು ಪ್ರದೀಪ್ ಯಾದವ್ ಎಂಬುವವರಿಗೆ ವಿತರಿಸಲಾಗಿದೆ.

ಆನಿವರ್ಸರಿ ಎಡಿಷನ್ ಮೊದಲ ಬೈಕ್ ವಿತರಿಸಿದ ಜಾವಾ

ಜಾವಾ ಡೀಲರ್‍‍ಗಳಿಂದ ಬೈಕಿನ ವಿತರಣೆಯನ್ನು ಪಡೆದ ನಂತರ ಮಾತನಾಡಿದ ಅವರು, ಭಾರತದಲ್ಲಿ ಜಾವಾ ವಿಶೇಷ ಆವೃತ್ತಿ ಬೈಕಿನ ಮೊದಲ ಮಾಲೀಕನಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಚಾಹಲ್ ಆಟೋಮೊಬೈಲ್ಸ್ ನ ಮಾಲೀಕರಾದ ಅವತಾರ್ ಸಿಂಗ್ ಚಾಹಲ್ ಅವರಿಗೆ ವಿಶೇಷ ಧನ್ಯವಾದಗಳು ಎಂದು ಹೇಳಿದ್ದಾರೆ.

ಆನಿವರ್ಸರಿ ಎಡಿಷನ್ ಮೊದಲ ಬೈಕ್ ವಿತರಿಸಿದ ಜಾವಾ

ಆನಿವರ್ಸರಿ ಎಡಿಷನ್ ಬೈಕ್‌ಗಳು ಫ್ಯೂಯಲ್ ಟ್ಯಾಂಕ್‌ ಮೇಲೆ ನೆನಪಿನ ಲಾಂಛನದ ಜೊತೆಗೆ, ಪ್ರತ್ಯೇಕವಾದ ಸೀರಿಯಲ್ ನಂಬರ್‍‍ಗಳನ್ನು ಹೊಂದಿವೆ. ಈಗಾಗಲೇ ಯಾವುದಾದರೂ ಜಾವಾ ಬೈಕುಗಳನ್ನು ಬುಕ್ಕಿಂಗ್ ಮಾಡಿರುವ ಗ್ರಾಹಕರು ಈ ಬೈಕ್ ಅನ್ನು ಪಡೆಯಲಿದ್ದಾರೆ.

ಆನಿವರ್ಸರಿ ಎಡಿಷನ್ ಮೊದಲ ಬೈಕ್ ವಿತರಿಸಿದ ಜಾವಾ

ಅಕ್ಟೋಬರ್ 22ಕ್ಕಿಂತ ಮೊದಲು ಜಾವಾ ಬೈಕುಗಳನ್ನು ಬುಕ್ಕಿಂಗ್ ಮಾಡಿರುವವರು ಸಹ ಈ ಬೈಕ್ ಅನ್ನು ಪಡೆಯಲಿದ್ದಾರೆ. ಬುಕ್ಕಿಂಗ್‌ ಮಾಡಿರುವವರ ಪೈಕ್ 90 ಜನ ಅದೃಷ್ಟಶಾಲಿಗಳನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗುವುದು.

ಆನಿವರ್ಸರಿ ಎಡಿಷನ್ ಮೊದಲ ಬೈಕ್ ವಿತರಿಸಿದ ಜಾವಾ

ಕ್ಲಾಸಿಕ್ ಲೆಜೆಂಡ್ಸ್ ತನ್ನ ಸರಣಿಯಲ್ಲಿ ಮೂರು ಹೊಸ ಬೈಕುಗಳನ್ನು ಬಿಡುಗಡೆಗೊಳಿಸಲು ಯೋಜಿಸಿದೆ. ಕಂಪನಿಯು ಸದ್ಯಕ್ಕೆ ಭಾರತದಲ್ಲಿ - ಜಾವಾ ಮತ್ತು ಜಾವಾ 42 - ಎಂಬ ಎರಡು ಬೈಕುಗಳನ್ನು ಬಿಡುಗಡೆಗೊಳಿಸಿ ಮಾರಾಟ ಮಾಡುತ್ತಿದೆ.

MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

ಆನಿವರ್ಸರಿ ಎಡಿಷನ್ ಮೊದಲ ಬೈಕ್ ವಿತರಿಸಿದ ಜಾವಾ

ಮುಂಬರುವ ದಿನಗಳಲ್ಲಿ - ಪೆರಾಕ್, ಆಫ್-ರೋಡರ್ ಹಾಗೂ ಸ್ಕ್ರ್ಯಾಂಬ್ಲರ್ ಎಂಬ ಮೂರು ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಲಿದೆ. ಈ ಮೂರು ಹೊಸ ಮಾದರಿಗಳು ವಿಭಿನ್ನವಾದ ಎಂಜಿನ್ ಕಾನ್ಫಿಗರೇಶನ್‌ಗಳೊಂದಿಗೆ ಬರಲಿವೆ.

MOST READ: ಖಾಸಗಿ ವಿಮಾನ ಹೊಂದಿರುವ ಉದ್ಯಮಿಗಳಿವರು..!

ಆನಿವರ್ಸರಿ ಎಡಿಷನ್ ಮೊದಲ ಬೈಕ್ ವಿತರಿಸಿದ ಜಾವಾ

ಮುಂದಿನ 18 ತಿಂಗಳುಗಳಲ್ಲಿ ಈ ಬೈಕುಗಳನ್ನು ಬಿಡುಗಡೆಗೊಳಿಸುವ ಯೋಜನೆಯನ್ನು ಜಾವಾ ಕಂಪನಿಯು ಹಾಕಿಕೊಂಡಿದೆ. ಜಾವಾ ಕಂಪನಿಯ ಮೊದಲ ವಾರ್ಷಿಕೋತ್ಸವ ದಿನವಾದ ನವೆಂಬರ್ 15ರಂದು ಈ ಹೊಸ ಬೈಕುಗಳ ಬಗೆಗಿನ ಮಾಹಿತಿಯನ್ನು ಬಹಿರಂಗಪಡಿಸಲಾಗುವುದು.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಆನಿವರ್ಸರಿ ಎಡಿಷನ್ ಮೊದಲ ಬೈಕ್ ವಿತರಿಸಿದ ಜಾವಾ

ಮೂರು ಹೊಸ ಜಾವಾ ಬೈಕುಗಳ ಪೈಕಿ, ಜಾವಾ ಪೆರಾಕ್ ಅನ್ನು ಕಳೆದ ವರ್ಷ ಜಾವಾ ಹಾಗೂ ಜಾವಾ 42 ಬೈಕುಗಳೊಂದಿಗೆ ಪ್ರದರ್ಶಿಸಲಾಗಿತ್ತು. ಈ ಮೊದಲು ಪೆರಾಕ್ ಬೈಕ್ ಅನ್ನು ಜುಲೈನಲ್ಲಿ ಬಿಡುಗಡೆಗೊಳಿಸಲಾಗುವುದೆಂದು ಘೋಷಿಸಲಾಗಿತ್ತು.

ಆನಿವರ್ಸರಿ ಎಡಿಷನ್ ಮೊದಲ ಬೈಕ್ ವಿತರಿಸಿದ ಜಾವಾ

ನಂತರ ಸೆಪ್ಟೆಂಬರ್ ತಿಂಗಳಿಗೆ ಮುಂದೂಡಲಾಯಿತು. ಈಗ ಈ ವರ್ಷದ ಕೊನೆಗೆ ಬಿಡುಗಡೆಗೊಳಿಸಲಾಗುವುದೆಂದು ಹೇಳಲಾಗುತ್ತಿದೆ. ಜಾವಾ ಹಾಗೂ ಜಾವಾ 42 ಬೈಕುಗಳಿಗೆ ಹೋಲಿಸಿದರೆ, ಪೆರಾಕ್ ದೊಡ್ಡದಾದ 334 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 30 ಬಿ‍‍ಹೆಚ್‌ಪಿ ಪವರ್ ಹಾಗೂ 31 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಆನಿವರ್ಸರಿ ಎಡಿಷನ್ ಮೊದಲ ಬೈಕ್ ವಿತರಿಸಿದ ಜಾವಾ

2020ರ ಆರಂಭದಲ್ಲಿ ಈ ಬೈಕಿನ ವಿತರಣೆಯನ್ನು ಆರಂಭಿಸಲಾಗುವುದು. ಈ ಹಿಂದೆ ಈ ಬೈಕಿನ ಬೆಲೆಯನ್ನು ರೂ.1.89 ಲಕ್ಷಗಳೆಂದು ಹೇಳಲಾಗಿತ್ತು. ಆದರೆ ಹಣದುಬ್ಬರ, ಹೊಸ ಬಿಎಸ್ 6 ಎಂಜಿನ್ ಹಾಗೂ ಇನ್ನಿತರ ಕಾರಣಗಳಿಂದಾಗಿ ಬೆಲೆಯು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

Image Courtesy: Pradeep Yadav/Jawa Owners & Lovers

More from DriveSpark

Article Published On: Tuesday, November 5, 2019, 10:40 [IST]
English summary
Jawa 90th anniversary edition delivery starts - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+