ಜಾವಾ ಬೈಕ್ ಖರೀದಿಗೆ ಬುಕ್ ಮಾಡಿದ್ದ ಸಾವಿರಾರು ಗ್ರಾಹಕರು ಮುಲಾಜಿಲ್ಲದೆ ಕ್ಯಾನ್ಸಲ್ ಮಾಡಿದ್ರು..!

ಕಳೆದ ಎರಡು ದಶಕಗಳ ಹಿಂದಷ್ಟೇ ಭಾರತೀಯ ರಸ್ತೆಗಳಲ್ಲಿ ತಮ್ಮದೇ ಆದ ಜನಪ್ರಿಯತೆಯೊಂದಿಗೆ ಭಾರೀ ಸದ್ದು ಮಾಡಿ ಕಾರಣಾಂತರಗಳಿಂದ ಮರೆಯಾಗಿದ್ದ ಜಾವಾ ಬೈಕ್ ಇದೀಗ ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಮರಳಿಬಂದಿದೆ. ಆದ್ರೆ ಕನಸಿನ ಬೈಕ್ ಮರಳಿ ಮಾರುಕಟ್ಟೆಗೆ ಬಂದಾಗ ಹಿರಿಹಿರಿ ಹಿಗ್ಗಿದ್ದ ಜಾವಾ ಬೈಕ್ ಪ್ರಿಯರು ಅದೇ ಜಾವಾ ಸಂಸ್ಥೆಯ ವಿರುದ್ದ ಇದೀಗ ಆಕ್ರೋಶ ವ್ಯಕ್ತಪಡಿಸುವಂತಹ ಪರಿಸ್ಥಿತಿ ಎದುರಾಗಿದೆ.

ಜಾವಾ ಬೈಕ್ ಖರೀದಿಗೆ ಬುಕ್ ಮಾಡಿದ್ದ ಸಾವಿರಾರು ಗ್ರಾಹಕರು ಮುಲಾಜಿಲ್ಲದೆ ಕ್ಯಾನ್ಸಲ್ ಮಾಡಿದ್ರು..!

ಹೌದು, ಜಾವಾ ಬೈಕ್ ಪ್ರಿಯರು ಕೂಡಾ ನೀರಿಕ್ಷೆ ಮಾಡದ ರೀತಿಯಲ್ಲಿ ಮರಳಿ ಮಾರುಕಟ್ಟೆಗೆ ಪ್ರವೇಶಿಸಿದ್ದ ಜಾವಾ ಹೊಸ ಬೈಕ್‌‌ಗಳು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಲಕ್ಷಕ್ಕೂ ಅಧಿಕ ಸಂಖ್ಯೆಯ ಬುಕ್ಕಿಂಗ್ ಪಡೆದುಕೊಂಡಿದ್ದವು. ಆದರೆ ಇದೀಗ ಗ್ರಾಹಕರ ಬೇಡಿಕೆಯೆಂತೆ ಬೈಕ್ ಉತ್ಪಾದನೆ ಮಾಡಲು ಸಾಧ್ಯವಾಗದೆ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿದೆ. ಇದು ಬುಕ್ಕಿಂಗ್ ಮಾಡಿದ ಗ್ರಾಹಕರ ಕಾಯುವಿಕೆಯ ಅವಧಿಯನ್ನು ಹೆಚ್ಚಿಸುತ್ತಿದ್ದು, ಜಾವಾ ಬೈಕ್ ಖರೀದಿಗೆ ಬುಕ್ಕಿಂಗ್ ಮಾಡಿದ್ದ ಬಹುತೇಕ ಗ್ರಾಹಕರು ಬುಕ್ಕಿಂಗ್ ಹಿಂಪಡೆಯುತ್ತಿದ್ದಾರೆ.

ಜಾವಾ ಬೈಕ್ ಖರೀದಿಗೆ ಬುಕ್ ಮಾಡಿದ್ದ ಸಾವಿರಾರು ಗ್ರಾಹಕರು ಮುಲಾಜಿಲ್ಲದೆ ಕ್ಯಾನ್ಸಲ್ ಮಾಡಿದ್ರು..!

ಕಳೆದ ವರ್ಷ ನವೆಂಬರ್‌ನಲ್ಲಿ ಬಿಡುಗಡೆಯಾಗಿದ್ದ ಹೊಸ ವಿನ್ಯಾಸದ ಜಾವಾ ಮತ್ತು ಜಾವಾ 42 ಬೈಕ್ ಖರೀದಿಗೆ ಬುಕ್ಕಿಂಗ್ ಮಾಡಿ ಸುಮಾರು 10 ತಿಂಗಳು ಕಳೆದರೂ ಸಹ ಇದುವರೆಗೂ ಹೊಸ ಬೈಕ್ ವಿತರಣೆಯ ಸುಳಿವು ಸಿಗದಿರುವುದು ಗ್ರಾಹಕರನ್ನು ಮತ್ತಷ್ಟು ಕೆರಳಿಸಿದೆ.

ಜಾವಾ ಬೈಕ್ ಖರೀದಿಗೆ ಬುಕ್ ಮಾಡಿದ್ದ ಸಾವಿರಾರು ಗ್ರಾಹಕರು ಮುಲಾಜಿಲ್ಲದೆ ಕ್ಯಾನ್ಸಲ್ ಮಾಡಿದ್ರು..!

ಜಾವಾ ಬೈಕ್‌ಗಳನ್ನು ಮರುವಿನ್ಯಾಸಗೊಳಿಸಿ ಬಿಡುಗಡೆ ಮಾಡಿರುವ ಮಹೀಂದ್ರಾ ಒಡೆತನದ ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಇತ್ತೀಚೆಗೆ ಜಾವಾ ಬೈಕ್ ವಿತರಣೆಯ ಸಮಯವನ್ನು ತಿಳಿಯಲು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಎಸ್ಟಿಮೆಟರ್ ಆಯ್ಕೆ ತೆರಿದಿದ್ದು, ಬೈಕ್ ವಿತರಣೆಯ ಅವಧಿಯನ್ನು ತಿಳಿಯಲು ಇದು ಪ್ರಮುಖ ವೇದಿಕೆಯಾಗಿದೆ.

ಜಾವಾ ಬೈಕ್ ಖರೀದಿಗೆ ಬುಕ್ ಮಾಡಿದ್ದ ಸಾವಿರಾರು ಗ್ರಾಹಕರು ಮುಲಾಜಿಲ್ಲದೆ ಕ್ಯಾನ್ಸಲ್ ಮಾಡಿದ್ರು..!

ಕಳೆದ ನವೆಂಬರ್‌ನಲ್ಲಿ ಬುಕ್ಕಿಂಗ್ ಮಾಡಿದ್ದ ಗ್ರಾಹಕರಿಗೆ ಹೊಸ ಬೈಕ್ ವಿತರಣೆ ಶುರು ಮಾಡಿದ್ದರೂ ಕೂಡಾ ಇದುವರೆಗೂ ಶೇ.10ರಷ್ಟು ಗ್ರಾಹಕರಿಗೂ ಹೊಸ ಬೈಕ್ ವಿತರಣೆಯಾಗಿಲ್ಲ. ಹೀಗಿರುವಾಗ ನವೆಂಬರ್‌ನಲ್ಲಿ ಬುಕ್ಕಿಂಗ್ ಮಾಡಿದ ಗ್ರಾಹಕರಿಗೂ ಇದೀಗ ಜಾವಾ ಎಸ್ಟಿಮೆಟರ್‌ನಲ್ಲಿ ಮುಂದಿನ ಡಿಸೆಂಬರ್‌ ತನಕ ಕಾಯುವಿಕೆಯ ಸೂಚನೆ ನೀಡುತ್ತಿರುವುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದ ಕ್ಲಾಸಿಕ್ ಬೈಕ್ ಖರೀದಿಯ ಯೋಜನೆಯಲ್ಲಿದ್ದ ಗ್ರಾಹಕರು ಇದೀಗ ಆರ್‌ಇ ಬೈಕ್‌ಗಳತ್ತ ಮುಖಮಾಡುತ್ತಿದ್ದಾರೆ.

ಜಾವಾ ಬೈಕ್ ಖರೀದಿಗೆ ಬುಕ್ ಮಾಡಿದ್ದ ಸಾವಿರಾರು ಗ್ರಾಹಕರು ಮುಲಾಜಿಲ್ಲದೆ ಕ್ಯಾನ್ಸಲ್ ಮಾಡಿದ್ರು..!

ಯಾವುದೋ ಒಂದು ಜನಪ್ರಿಯ ಬೈಕ್ ಅಥವಾ ಕಾರು ಮಾದರಿಯನ್ನು ಖರೀದಿ ಮಾಡುವಾಗ ಬೇಡಿಕೆ ಹೆಚ್ಚಾಗಿದ್ದರೆ ಗ್ರಾಹಕರು ಕಾಯುವುದು ಅನಿವಾರ್ಯತೆಯಿರುತ್ತದೆ. ಆದ್ರೆ ಜಾವಾ ಮಾತ್ರ ಹೊಸ ಬೈಕ್ ಬಿಡುಗಡೆ ಮಾಡಿ 10 ತಿಂಗಳು ಕಳೆದರೂ ಇವತ್ತು, ನಾಳೆ ಎನ್ನತ್ತಲೇ ದಿನದೂಡುತ್ತಿರುವುದು ಗ್ರಾಹಕ ತಾಳ್ಮೆ ಕಳೆದುಕೊಳ್ಳುವಂತೆ ಮಾಡುತ್ತಿದೆ.

ಜಾವಾ ಬೈಕ್ ಖರೀದಿಗೆ ಬುಕ್ ಮಾಡಿದ್ದ ಸಾವಿರಾರು ಗ್ರಾಹಕರು ಮುಲಾಜಿಲ್ಲದೆ ಕ್ಯಾನ್ಸಲ್ ಮಾಡಿದ್ರು..!

ಇದಲ್ಲದೇ ಜಾವಾ ಬೈಕ್ ಡೀಲರ್ಸ್ ಸಹ ಗ್ರಾಹಕರಿಗೆ ಮೋಸ ಮಾಡುತ್ತಿರುವ ಪ್ರಕರಣಗಳು ಕಂಡುಬರುತ್ತಿದ್ದು, ಬೈಕ್ ವಿತರಣೆ ವೇಳೆ ನಿಗದಿತ ಆನ್‌ರೋಡ್ ಬೆಲೆಗಳಿಂತಲೂ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

MOST READ: ಭಾರತದ ವಿವಿಧ ರಾಜ್ಯಗಳ ಪೊಲೀಸರ ಬಳಿಯಿರುವ ಬೈಕುಗಳಿವು

ಜಾವಾ ಬೈಕ್ ಖರೀದಿಗೆ ಬುಕ್ ಮಾಡಿದ್ದ ಗ್ರಾಹಕರು ಮುಲಾಜಿಲ್ಲದೆ ಕ್ಯಾನ್ಸಲ್ ಮಾಡಿದ್ರು..!

ಬೆಂಗಳೂರಿನ ಪ್ರಮುಖ ಜಾವಾ ಡೀಲರ್ಸ್‌ಗಳಲ್ಲೇ ಗ್ರಾಹಕರಿಂದ ಕಾನೂನುಬಾಹಿರವಾಗಿ ಹ್ಯಾಂಡ್‌ಲಿಂಗ್ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದ್ದು, ಮೊನ್ನೆಯಷ್ಟೇ ಗ್ರಾಹಕರೊಬ್ಬರು ದಾಖಲೆಯ ಸಮೇತ ಡೀಲರ್ಸ್ ಮೋಸದ ಬಗ್ಗೆ ಕಂಪನಿಯ ಗಮನಕ್ಕೆ ತಂದಿದ್ದರು.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಜಾವಾ ಬೈಕ್ ಖರೀದಿಗೆ ಬುಕ್ ಮಾಡಿದ್ದ ಗ್ರಾಹಕರು ಮುಲಾಜಿಲ್ಲದೆ ಕ್ಯಾನ್ಸಲ್ ಮಾಡಿದ್ರು..!

ಜೊತೆಗೆ ಹೊಸ ಜಾವಾ ಬೈಕ್ ಖರೀದಿ ಮಾಡಿದ ಕೇವಲ 20 ದಿನಗಳಲ್ಲಿ ತುಕ್ಕು ಹಿಡಿಯುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗುತ್ತಿದ್ದು, ಬೈಕ್‌ಗಳನ್ನು ಬೆಲೆಯಲ್ಲಿ ಬಿಡುಗಡೆ ಮಾಡುವುದಕ್ಕಾಗಿ ಕಳಪೆ ಬೀಡಿಭಾಗಗಳನ್ನು ಜೋಡಣೆ ಮಾಡುತ್ತಿದೆಯಾ? ಎನ್ನುವಂತಹ ಅನುಮಾನಗಳು ಶುರುವಾಗಿವೆ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಜಾವಾ ಬೈಕ್ ಖರೀದಿಗೆ ಬುಕ್ ಮಾಡಿದ್ದ ಗ್ರಾಹಕರು ಮುಲಾಜಿಲ್ಲದೆ ಕ್ಯಾನ್ಸಲ್ ಮಾಡಿದ್ರು..!

ಗ್ರಾಹಕರೊಬ್ಬರು ನೀಡಿದ ಮಾಹಿತಿ ಅನ್ವಯ ಜಾವಾ 42 ಬೈಕ್ ಒಂದರಲ್ಲಿ ಹ್ಯಾಂಡಲ್ ಬಾರ್ ಬೋಲ್ಟ್‌, ಎಕ್ಸಾಸ್ಟ್ ಮುಂಭಾಗ, ಡಿಜಿಟಲ್ ಕಸ್ಟರ್ ಬಳಿಯಲ್ಲಿ ಹಾಗೂ ಸೈಡ್ ಸ್ಯಾಂಡ್ ಬಳಿಯ ವ್ಡೆಡಿಂಗ್ ಕೂಡಾ ತುಕ್ಕು ಹಿಡಿಯುತ್ತಿರುವುದು ಕಂಡುಬಂದಿದ್ದು, ತಕ್ಷಣವೇ ಈ ಕುರಿತು ಗಮನಹರಿಸಬೇಕಾಗಿ ಜಾವಾ ಸಂಸ್ಥೆಗೆ ಮನವಿ ಮಾಡಿದ್ದಾರೆ.

ಜಾವಾ ಬೈಕ್ ಖರೀದಿಗೆ ಬುಕ್ ಮಾಡಿದ್ದ ಗ್ರಾಹಕರು ಮುಲಾಜಿಲ್ಲದೆ ಕ್ಯಾನ್ಸಲ್ ಮಾಡಿದ್ರು..!

ಹೊಸ ಬೈಕ್ ಇಷ್ಟು ಬೇಗ ತುಕ್ಕು ಹಿಡಿಯುತ್ತಿರುವುದು ಸಹಜವಾಗಿಯೇ ಕೆಲವು ಅನುಮಾನಗಳಿಗೆ ಕಾರಣವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಎಲ್ಲಾ ಘಟನೆ ನೋಡುತ್ತಿರುವ ಗ್ರಾಹಕರು ಈ ಹಿಂದೆ ಪಾವತಿ ಮಾಡಲಾದ ರೂ. 5 ಸಾವಿರ ಹಿಂದಕ್ಕೆ ಪಡೆದು ಪರ್ಯಾಯ ಬೈಕ್ ಖರೀದಿಯತ್ತ ಮುಖಮಾಡುತ್ತಿದ್ದಾರೆ.

ಜಾವಾ ಬೈಕ್ ಖರೀದಿಗೆ ಬುಕ್ ಮಾಡಿದ್ದ ಗ್ರಾಹಕರು ಮುಲಾಜಿಲ್ಲದೆ ಕ್ಯಾನ್ಸಲ್ ಮಾಡಿದ್ರು..!

ಇನ್ನು ಜಾವಾ ಬೈಕ್‌ಗಳು ದಶಕಗಳ ಹಿಂದೆ ಭಾರತದಲ್ಲಿ ಅಬ್ಬರಿಸಿ ಮರೆಯಾಗಿದ್ದಲ್ಲದೆ ಇದೀಗ ನವ ವಿನ್ಯಾಸ ಹಾಗೂ ನೂತನ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಜಾವಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಬೈಕ್ ನಿರ್ಮಿಸುವಲ್ಲಿ ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಯಶಸ್ವಿಯಾದರೂ ನಿಗದಿತ ಅವಧಿಯಲ್ಲಿ ಬೈಕ್ ವಿತರಣೆಯಲ್ಲಿ ಹಿಂದೆ ಬಿದ್ದಿದೆ.

ಜಾವಾ ಬೈಕ್ ಖರೀದಿಗೆ ಬುಕ್ ಮಾಡಿದ್ದ ಗ್ರಾಹಕರು ಮುಲಾಜಿಲ್ಲದೆ ಕ್ಯಾನ್ಸಲ್ ಮಾಡಿದ್ರು..!

ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಒಟ್ಟು ಮೂರು ಹೊಸ ಬೈಕ್‌ಗಳನ್ನು ಅನಾವರಣಗೊಳಿದ್ದು, ಇದರಲ್ಲಿ ಜಾವಾ, ಜಾವಾ 42 ಬೈಕ್‌ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಪೆರಾಕ್ ಎನ್ನುವ ಕಸ್ಟಮ್ ಮಾದರಿಯನ್ನು ಮುಂಬರುವ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದೆ.

ಜಾವಾ ಬೈಕ್ ಖರೀದಿಗೆ ಬುಕ್ ಮಾಡಿದ್ದ ಗ್ರಾಹಕರು ಮುಲಾಜಿಲ್ಲದೆ ಕ್ಯಾನ್ಸಲ್ ಮಾಡಿದ್ರು..!

ಹೊಸ ಬೈಕ್‌ಗಳ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೆಟ್ರೋ ಜಾವಾ ಮಾದರಿಗೆ ರೂ. 1.64 ಲಕ್ಷ, ಜಾವಾ 42 ಮಾದರಿಗೆ ರೂ. 1.55 ಲಕ್ಷ ಮತ್ತು ಅನಾವರಣ ಮಾಡಲಾದ ಜಾವಾ ಪೆರಾಕ್ ಬೈಕಿಗೆ ರೂ. 1.89 ಲಕ್ಷ ಬೆಲೆ ನಿಗದಿಪಡಿಸಲಾಗಿದೆ. ಇದರ ಹೊರತಲಾಗಿ ಗ್ರಾಹಕರು ತಮ್ಮ ಹೊಸ ಬೈಕ್‌ಗಳಿಗೆ ಹೆಚ್ಚುವರಿ ದರ ಪಾವತಿಸಿ ಬೇಡಿಕೆ ಅನ್ವಯ ಆಕ್ಸ್‌ಸರಿಸ್ ಪಡೆದುಕೊಳ್ಳಬಹುದಾಗಿದೆ.

Article Published On: Friday, August 23, 2019, 17:39 [IST]
English summary
Jawa owners have begun cancelling bookings after the company's online delivery estimator showed an increased waiting period. The delivery estimator went live today but it seems to have had a negative impact on buyers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+