ಬ್ರೇಕ್ ಸಮಸ್ಯೆ ಸರಿಪಡಿಸಲು ನಿಂಜಾ 300 ಬೈಕ್ ರಿಕಾಲ್

ಕವಾಸಕಿ ಕಂಪನಿಯು 2018ರ ನಂತರ ತಯಾರಾದ ನಿಂಜಾ300 ಬೈಕುಗಳನ್ನು ಹಿಂಪಡೆಯಲು ಸೂಚಿಸಿದೆ. 2018ರ ಕವಾಸಕಿ ನಿಂಜಾ300 ಬೈಕಿನ ಕೆಲವು ಬಿಡಿಭಾಗಗಳನ್ನು ಸ್ಥಳಿಯವಾಗಿ ಸಿದ್ಧಪಡಿಸಲಾಗಿತ್ತು. ಇದರಲ್ಲಿ ಬ್ರೇಕಿಂಗ್ ಸಿಸ್ಟಂಗಳೂ ಸೇರಿವೆ.

ಬ್ರೇಕ್ ಸಮಸ್ಯೆ ಸರಿಪಡಿಸಲು ನಿಂಜಾ 300 ಬೈಕ್ ರಿಕಾಲ್

ಈ ಬೈಕುಗಳನ್ನು ಹಿಂಪಡೆದು ಸ್ಥಳಿಯವಾಗಿ ನಿರ್ಮಿಸಿದ್ದ ಮುಂಭಾಗದ ಬ್ರೇಕ್ ಮಾಸ್ಟರ್ ಸಿಲಿಂಡರ್‍‍ಗಳನ್ನು ಬದಲಿಸಲಾಗುವುದು. ಆಟೋಕಾರ್ ವರದಿಗಳ ಪ್ರಕಾರ, ಮುಂಭಾಗದಲ್ಲಿರುವ ಬ್ರೇಕ್ ಮಾಸ್ಟರ್ ಸಿಲಿಂಡರ್‍‍‍ನಲ್ಲಿ ಕೆಲವು ತೊಂದರೆಗಳಿದ್ದು, ಬ್ರೇಕ್ ಫೇಲ್ ಆಗುವ ಸಾಧ್ಯತೆಗಳಿವೆ ಎಂದು ಕವಾಸಕಿ ಕಂಪನಿ ತಿಳಿಸಿದೆ.

ಬ್ರೇಕ್ ಸಮಸ್ಯೆ ಸರಿಪಡಿಸಲು ನಿಂಜಾ 300 ಬೈಕ್ ರಿಕಾಲ್

ಕವಾಸಕಿ ಕಂಪನಿಯು ದೋಷಪೂರಿತ ಭಾಗಗಳನ್ನು ಉಚಿತವಾಗಿ ಬದಲಾಯಿಸಲಿದೆ. ಪ್ರಸಿದ್ಧ ಸ್ಪೋರ್ಟ್ ಬೈಕ್ ಕಂಪನಿಯಾದ ಕವಾಸಕಿ ಬೈಕಿನ ಮಾಲೀಕರನ್ನು ಸಂಪರ್ಕಿಸುತ್ತಿದ್ದು, ಹತ್ತಿರದಲ್ಲಿರುವ ಕವಾಸಕಿ ಸರ್ವಿಸ್ ಸೆಂಟರ್‍‍ನಿಂದ ಬಿಡಿಭಾಗವನ್ನು ಬದಲಾಯಿಸಿಕೊಳ್ಳುವಂತೆ ಕೇಳಿಕೊಂಡಿದೆ.

ಬ್ರೇಕ್ ಸಮಸ್ಯೆ ಸರಿಪಡಿಸಲು ನಿಂಜಾ 300 ಬೈಕ್ ರಿಕಾಲ್

ಸರಿಯಾಗಿ ಒಂದು ವರ್ಷದ ಹಿಂದೆ ಕವಾಸಕಿ ಕಂಪನಿಯು 2018ರ ನಿಂಜಾ 300 ಬೈಕ್ ಅನ್ನು ಬಿಡುಗಡೆಗೊಳಿಸಿತ್ತು. 2018ರ ನಿಂಜಾ 300 ಬೈಕ್ ಉಳಿದ ಟ್ವಿನ್ ಸಿಲಿಂಡರ್ ಬೈಕುಗಳಿಗೆ ಹೋಲಿಸಿದರೆ ಕಡಿಮೆ ಬೆಲೆಯನ್ನು ಹೊಂದಿದೆ. ಈ ಬೈಕ್ ಬಿಡುಗಡೆಯಾದಾಗ ರೂ.2.98 ಲಕ್ಷ ಬೆಲೆ ಹೊಂದಿತ್ತು.

ಬ್ರೇಕ್ ಸಮಸ್ಯೆ ಸರಿಪಡಿಸಲು ನಿಂಜಾ 300 ಬೈಕ್ ರಿಕಾಲ್

ಮುಂಚೆ ಇದ್ದ ಬೈಕಿಗೆ ಹೋಲಿಸಿದರೆ, ರೂ.65,000 ಕಡಿಮೆ ಬೆಲೆಯನ್ನು ಹೊಂದಿತ್ತು. ಬ್ರೇಕ್‌, ವ್ಹೀಲ್, ಟಯರ್‌, ಪ್ಲಾಸ್ಟಿಕ್‌ಗಳಂತಹ ಕೆಲವು ಬಿಡಿಭಾಗಗಳನ್ನು ಸ್ಥಳಿಯವಾಗಿ ಉತ್ಪಾದಸಿದ ಕಾರಣ ಬೈಕಿನ ಬೆಲೆ ಕಡಿಮೆಯಾಗಿತ್ತು. ಈ ಸೂಪರ್‌ಸ್ಪೋರ್ಟ್ ಬೈಕ್ ಎಂಆರ್‌ಎಫ್‌ ಕಂಪನಿಯ ಟಯರ್‌ಗಳು ಹಾಗೂ ಎಂಡ್ಯೂರೆನ್ಸ್‌ ಬ್ರೇಕ್‌ಗಳನ್ನು ಹೊಂದಿದೆ. ಎಂಡ್ಯೂರೆನ್ಸ್ ಬ್ರೇಕ್‌ಗಳಲ್ಲಿ ಸಮಸ್ಯೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಬೈಕುಗಳನ್ನು ಹಿಂಪಡೆಯಲಾಗುತ್ತಿದೆ.

ಬ್ರೇಕ್ ಸಮಸ್ಯೆ ಸರಿಪಡಿಸಲು ನಿಂಜಾ 300 ಬೈಕ್ ರಿಕಾಲ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಬ್ರೇಕ್‌ಗಳಲ್ಲಿ ಯಾವ ರೀತಿಯ ಸಮಸ್ಯೆಗಳಿಗೆ ಎಂಬುದರ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಕವಾಸಕಿ ನಿಂಜಾ 300 ಬೈಕ್ ಲಿಕ್ವಿಡ್ ಕೂಲ್ಡ್, 296 ಸಿಸಿ ಪ್ಯಾರಲೆಲ್ ಟ್ವಿನ್ ಎಂಜಿನ್ ಹೊಂದಿದ್ದು, ಗರಿಷ್ಠ 39 ಬಿಹೆಚ್‌ಪಿ ಪವರ್ ಹಾಗೂ 27 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರಲ್ಲಿರುವ 6 ಸ್ಪೀಡ್ ಗೇರ್ ಬಾಕ್ಸ್ ಹಿಂದಿನ ಚಕ್ರವನ್ನು ಚಲಾಯಿಸುತ್ತದೆ.

ಬ್ರೇಕ್ ಸಮಸ್ಯೆ ಸರಿಪಡಿಸಲು ನಿಂಜಾ 300 ಬೈಕ್ ರಿಕಾಲ್

ಸ್ಥಳೀಯವಾಗಿ ಉತ್ಪಾದಿಸಲಾದ ಬಿಡಿಭಾಗಗಳನ್ನು ಹೊಂದಿದ್ದ ಈ ಬೈಕ್ ಅನ್ನು ಬಿಡುಗಡೆಗೊಳಿಸಿದ ನಂತರ ಮಾರಾಟ ಪ್ರಮಾಣವು ಹೆಚ್ಚಾಗಿತ್ತು. ಈ ಬೈಕ್, ಕವಾಸಕಿ ನಿಂಜಾ 400 ಬೈಕಿಗಿಂತ ಉದ್ದವಾಗಿದೆ. ಮಾರಾಟದಲ್ಲಿ ಬೇರೆ ಕಂಪನಿಯ 300 ಸಿಸಿ ಬೈಕುಗಳಿಗೆ ಪೈಪೋಟಿ ನೀಡಿತ್ತು.

ಬ್ರೇಕ್ ಸಮಸ್ಯೆ ಸರಿಪಡಿಸಲು ನಿಂಜಾ 300 ಬೈಕ್ ರಿಕಾಲ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಬೈಕುಗಳನ್ನು ಹಿಂಪಡೆಯುವುದರಿಂದ ಕಂಪನಿಯ ಜನಪ್ರಿಯತೆಯು ಹಾಳಾಗಬಹುದು, ಆದರೂ ಇದೊಂದು ದಿಟ್ಟ ಕ್ರಮವಾಗಿದೆ. ಸಮಸ್ಯೆಯು ಚಿಕ್ಕದಿರುವಾಗಲೇ ಸರಿಪಡಿಸುವುದು ಉತ್ತಮವಾದ ಯೋಜನೆಯಾಗಿದೆ. ಬ್ರೇಕ್ ಫೇಲ್ ಆದರೆ ದೊಡ್ಡ ಸಮಸ್ಯೆಗಳಿಗೆ ಕಾರಣವಾಗಬಹುದು. ಕವಾಸಕಿ ನಿಂಜಾ300ನ ಯಾವುದೇ ಬೈಕುಗಳ ಬ್ರೇಕ್ ಫೇಲ್ ಆದ ಪ್ರಕರಣಗಳು ವರದಿಯಾಗಿಲ್ಲ. ಈ ರೀತಿಯಾಗಿ ಬೈಕುಗಳನ್ನು ಹಿಂಪಡೆದು, ಕವಾಸಕಿ ಕಂಪನಿಯು ಸುರಕ್ಷತೆಗೆ ಆದ್ಯತೆ ನೀಡುತ್ತಿದೆ.

Most Read Articles

Kannada
English summary
Kawasaki Ninja 300 Recalled To Replace Faulty Brake Component — Is Your Motorcycle Involved? - Read in kannada
Story first published: Wednesday, July 24, 2019, 10:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X