ಸಾಮಾಜಿಕ ಜಾಲತಾಣದಲ್ಲಿ ಆಟೋಮ್ಯಾಟಿಕ್ ಆಗಿ ಪೋಸ್ಟ್ ಮಾಡಲಿದೆ ಈ ಸಾಧನ..!

ಹೆಚ್ಚಿನವರು ಪ್ರಯಾಣ ಮಾಡುವಾಗ ಆ ಪ್ರಯಾಣದ ಫೋಟೊಗಳನ್ನು ತೆಗೆದುಕೊಳ್ಳುವ ಬಗ್ಗೆ ಯೋಚಿಸುವುದಿಲ್ಲ. ಅವುಗಳು ಕೇವಲ ಅವರ ಮನಸ್ಸಿನಲ್ಲಿ ಉಳಿಯುತ್ತವೆ. ಆದರೆ ಇತ್ತೀಚಿಗೆ ಅಭಿವೃದ್ಧಿಪಡಿಸಲಾಗಿರುವ ಸಾಧನವೊಂದು ಪ್ರವಾಸದ ಬಗ್ಗೆ ಹೇಳಲು ಅವುಗಳ ಚಿತ್ರಗಳನ್ನು ಹಂಚಿಕೊಳ್ಳಲು ಸಹಾಯ ಮಾಡಲಿದೆ. ಇದು ಸ್ಮಾರ್ಟೆಸ್ಟ್ ಕಥೆಗಾರನಂತಿದೆ.

ಸಾಮಾಜಿಕ ಜಾಲತಾಣದಲ್ಲಿ ಆಟೋಮ್ಯಾಟಿಕ್ ಆಗಿ ಪೋಸ್ಟ್ ಮಾಡಲಿದೆ ಈ ಸಾಧನ..!

ಈ ಸಾಧನದ ಹೆಸರು ಕೊಗೊ. ಕೊಗೊವನ್ನು ಕೊಗೊ ಬೋಟ್ ಹಾಗೂ ಇಂಟೆಲಿಜೆನ್ಸ್ ಸಾಫ್ಟ್‌ವೇರ್ ಎಂಬ ಎರಡು ಸಂಗತಿಗಳಿಂದ ತಯಾರಿಸಲಾಗಿದೆ. ಬೋಟ್ ಜಿಪಿಎಸ್ ಟ್ರ್ಯಾಕರ್‌ ಇನ್ ಬಿಲ್ಟ್ ಆಗಿದ್ದು, ಒಬ್ಬರು ಇರುವ ಸ್ಥಳವನ್ನು ಖಚಿತವಾಗಿ ತಿಳಿಸುತ್ತದೆ. ಸಾಫ್ಟ್‌ವೇರ್ ಇಡೀ ವಿಷಯವನ್ನು ಒಟ್ಟಿಗೆ ಇರಿಸಲು ಸಹಾಯ ಮಾಡುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ಆಟೋಮ್ಯಾಟಿಕ್ ಆಗಿ ಪೋಸ್ಟ್ ಮಾಡಲಿದೆ ಈ ಸಾಧನ..!

ಕೊಗೊ ಬೋಟ್ ಆಫ್ ದಿ ಶೆಲ್ಫ್ ಜಿಪಿಎಸ್ ಸಾಧನದಷ್ಟು ಚಿಕ್ಕದಾಗಿದೆ. ಈ ಸಾಧನವನ್ನು ಪ್ರತಿ ದಿನ ಚಾರ್ಜ್ ಮಾಡಬೇಕಾಗುತ್ತದೆ. ಈ ಸಾಧನವನ್ನು ಬೈಕ್, ಕಾರಿನ ಡ್ಯಾಶ್‌ಬೋರ್ಡ್‌ಗೆ ಜೋಡಿಸಬಹುದು ಅಥವಾ ಬೆನ್ನಿಗೂ ಕಟ್ಟಿಕೊಳ್ಳಬಹುದು.

ಸಾಮಾಜಿಕ ಜಾಲತಾಣದಲ್ಲಿ ಆಟೋಮ್ಯಾಟಿಕ್ ಆಗಿ ಪೋಸ್ಟ್ ಮಾಡಲಿದೆ ಈ ಸಾಧನ..!

ಬೋಟ್ ನೈಜ ಸಮಯದ ರಸ್ತೆಗಳನ್ನು ಟ್ರ್ಯಾಕ್ ಮಾಡಿದರೆ, ಸಾಫ್ಟ್‌ವೇರ್ ಕೊಗೊ ಮ್ಯಾಜಿಕ್ ಅನ್ನು ಚಲಾಯಿಸುತ್ತದೆ. ಬಳಕೆದಾರರು ತಲುಪಬೇಕಿರುವ ಸ್ಥಳವನ್ನು ಟೈಪ್ ಮಾಡಿದ ನಂತರ, ಸಾಫ್ಟ್‌ವೇರ್ ಸ್ವಯಂಚಾಲಿತವಾಗಿ ಟ್ರಿಪ್ ಶೀರ್ಷಿಕೆ, ಟ್ರಿಪ್ ವಿವರಣೆಯನ್ನು ರಚಿಸುತ್ತದೆ. ಪ್ರಯಾಣವು ಆರಂಭವಾಗುತ್ತಿದ್ದಂತೆ, ಸಾಫ್ಟ್‌ವೇರ್ ಹ್ಯಾಶ್‌ಟ್ಯಾಗ್‌ಗಳನ್ನು ರಚಿಸುತ್ತದೆ. ವಾಹನ ನಿಂತ ಜಾಗವನ್ನು ದಾಖಲಿಸುತ್ತದೆ. ಫೋಟೊಗಳನ್ನು ಪ್ರಯಾಣದೊಂದಿಗೆ ಸಿಂಕ್ ಮಾಡುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ಆಟೋಮ್ಯಾಟಿಕ್ ಆಗಿ ಪೋಸ್ಟ್ ಮಾಡಲಿದೆ ಈ ಸಾಧನ..!

ಸವಾರನು ಯಾವುದಾದರೂ ಘಟನೆಗಳನ್ನು ಮರೆತರೆ ಕೊಗೊ ಅವುಗಳ ಸಾಮಾಜಿಕ ಪೋಸ್ಟ್‌ಗಳನ್ನು ಸೇರಿಸುತ್ತದೆ. ಉದಾಹರಣೆಗೆ ಇದನ್ನು ಬಳಸುವವರು ಇಂಡಿಯಾ ಬೈಕ್ ವೀಕ್‍‍ನಲ್ಲಿದ್ದರೆ, ಕೊಗೊ ಅವುಗಳನ್ನು ಆಟೋಮ್ಯಾಟಿಕ್ ಆಗಿ ರಚಿಸಿ, ಪೋಸ್ಟ್ ಮಾಡುತ್ತದೆ. ಈ ಪೋಸ್ಟ್ ಈಗಷ್ಟೇ ಮುಗಿದ ಐಬಿಡಬ್ಲ್ಯೂ ಎಂದು ಟ್ಯಾಗ್ ಮಾಡುತ್ತದೆ. ಇದರ ಜೊತೆಗೆ ಕೊಗೊ ಲೈಸೆನ್ಸ್ ಇಲ್ಲದ ಫ್ರೀ ಫೋಟೊಗಳನ್ನು ತೆಗೆಯುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ಆಟೋಮ್ಯಾಟಿಕ್ ಆಗಿ ಪೋಸ್ಟ್ ಮಾಡಲಿದೆ ಈ ಸಾಧನ..!

ಈ ಸಾಧನವು ಹೇಗೆ ಕೆಲಸ ಮಾಡುತ್ತದೆ?

ಸಾಧನವನ್ನು ಸ್ವಿಚ್ ಆನ್ ಮಾಡಿದ ನಂತರ, ಕೊಗೊ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ನಲ್ಲಿ ಸ್ಟಾರ್ಟ್ ಟ್ರಿಪ್ ಎಂದು ಒತ್ತಿದರೆ, ಸಾಧನದಲ್ಲಿರುವ ಸಿಮ್ ಕಾರ್ಡ್ ಎಲ್ಲಾ ಜಿಪಿಎಸ್ ಡೇಟಾ, ಪರಿಸರದ ಡೇಟಾ ಹಾಗೂ ಭೌಗೋಳಿಕ ನಿರ್ದೇಶಾಂಕಗಳನ್ನು ಪತ್ತೆ ಮಾಡುತ್ತದೆ. ಇದು ನೆಟ್‌ವರ್ಕ್ ಇಲ್ಲದಿದ್ದರೂ ಕಾರ್ಯ ನಿರ್ವಹಿಸುತ್ತದೆ. ಈ ಸಾಧನವು ಮೂರು ವಾರಗಳಷ್ಟು ಡೇಟಾವನ್ನು ಸಂಗ್ರಹಿಸುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ಆಟೋಮ್ಯಾಟಿಕ್ ಆಗಿ ಪೋಸ್ಟ್ ಮಾಡಲಿದೆ ಈ ಸಾಧನ..!

ಇದಾದ ನಂತರ ಬೋಟ್ ಹಾಗೂ ಸಾಫ್ಟ್‌ವೇರ್ ವಿಭಿನ್ನವಾದ ಕಥೆಗಳು, ಪ್ರವಾಸದ ಶೀರ್ಷಿಕೆಗಳು, ಪ್ರವಾಸ ವಿವರಣೆಗಳು ಹಾಗೂ ಬಳಕೆದಾರರು ತೆಗೆದ ಫೋಟೊಗಳನ್ನು ಸಿಂಕ್ ಮಾಡುತ್ತವೆ. ಇವುಗಳನ್ನು ಬಳಕೆದಾರರ ಫಾಲೋವರ್ಸ್ ನೋಡುವಂತೆ ಪೋಸ್ಟ್ ಮಾಡಲಾಗುತ್ತದೆ.

MOST READ: ವಾಹನ ಡೀಲರ್‍‍ಗಳ ಟ್ರೇಡ್ ಸರ್ಟಿಫಿಕೇಟ್ ಅಮಾನತುಗೊಳಿಸಿದ ಸಾರಿಗೆ ಇಲಾಖೆ

ಸಾಮಾಜಿಕ ಜಾಲತಾಣದಲ್ಲಿ ಆಟೋಮ್ಯಾಟಿಕ್ ಆಗಿ ಪೋಸ್ಟ್ ಮಾಡಲಿದೆ ಈ ಸಾಧನ..!

ಬೆಲೆ ಎಷ್ಟಾಗುತ್ತದೆ. ಎಲ್ಲಿ ಖರೀದಿಸಬೇಕು?

ಸದ್ಯಕ್ಕೆ ಕಂಪನಿಯ ವೆಬ್‌ಸೈಟ್ ಮೂಲಕ ಆಹ್ವಾನ ಪಡೆಯಬೇಕು. ಡಿಸೆಂಬರ್ 20ರಿಂದ ಕಂಪನಿಯು ಇಮೇಲ್ ಮೂಲಕ ಆಹ್ವಾನಗಳನ್ನು ಕಳುಹಿಸುತ್ತದೆ. ಖರೀದಿಸ ಬಯಸುವವರು ಈ ಸಾಧನಕ್ಕಾಗಿ ರೂ.7,750 ಪಾವತಿಸಬೇಕಾಗುತ್ತದೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಸಾಮಾಜಿಕ ಜಾಲತಾಣದಲ್ಲಿ ಆಟೋಮ್ಯಾಟಿಕ್ ಆಗಿ ಪೋಸ್ಟ್ ಮಾಡಲಿದೆ ಈ ಸಾಧನ..!

ಈ ಹಣವು ಕೊಗೊ ಬಾಟ್, ಸಿಮ್ ಕಾರ್ಡ್, ಒಂದು ವರ್ಷ ಅವಧಿಯ ಇಂಟರ್ನೆಟ್ ಡೇಟಾಗಳನ್ನು ಒಳಗೊಂಡಿದೆ. ಜಿಪಿಎಸ್ ಹಾಗೂ ಡೇಟಾ ಬಳಕೆಗಾಗಿ ಗ್ರಾಹಕರು ಪ್ರತಿ ವರ್ಷ ರೂ.1,400 ಪಾವತಿಸಬೇಕಾಗುತ್ತದೆ. ಇದರಲ್ಲಿ ಕೊಗೊದ ಮ್ಯಾಜಿಕಲ್ ಕಥೆ ಹೇಳುವುದು ಸಹ ಸೇರಿದೆ. ಕೊಗೊ ಸಾಧನವು ಆನ್‍‍ಲೈನ್ ಮೂಲಕ ಹಾಗೂ ದೇಶಾದ್ಯಂತವಿರುವ 200ಕ್ಕೂ ಹೆಚ್ಚು ರಿಟೇಲ್ ಮಳಿಗೆಗಳಲ್ಲಿ ದೊರೆಯುತ್ತದೆ. ಈ ಸಾಧನವನ್ನು 2020ರ ಜನವರಿಯಿಂದ ವಿತರಿಸಲಾಗುವುದು.

MOST READ: 500 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಒಲಾ..!

ಸಾಮಾಜಿಕ ಜಾಲತಾಣದಲ್ಲಿ ಆಟೋಮ್ಯಾಟಿಕ್ ಆಗಿ ಪೋಸ್ಟ್ ಮಾಡಲಿದೆ ಈ ಸಾಧನ..!

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಕೊಗೊ ಸಾಧನವು ಬಹು ಜನರು ನಿರೀಕ್ಷೆ ಮಾಡುವಂತಹ ಸಾಧನವಾಗಿದೆ. ಈಗ ಇಡೀ ಜಗತ್ತು ಸಾಮಾಜಿಕ ಮಾಧ್ಯಮದ ಮೇಲೆ ನಿಂತಿದೆ. ಕೊಗೊ ಜನರನ್ನು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿಡಲಿದೆ. ಇದರಲ್ಲಿ ಆನ್‍‍ಬೋರ್ಡ್ ಜಿ‍ಪಿ‍ಎಸ್ ಟ್ರಾಕರ್ ಸಹ ಅಳವಡಿಸಲಾಗಿದೆ.

Most Read Articles

Kannada
English summary
Automated Social Media Storyteller KOGO Showcased In India: Priced At Rs 7,750 - Read in Kannada
Story first published: Tuesday, December 17, 2019, 18:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X