250 ಅಡ್ವೆಂಚರ್ ಬೈಕಿನ ಬಿಡುಗಡೆಯನ್ನು ಖಚಿತಪಡಿಸಿದ ಕೆಟಿಎಂ
ಕೆಟಿಎಂ ಇಂಡಿಯಾ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಮೊದಲ ಅಡ್ವೆಂಚರ್ ಟೂರರ್ ಬೈಕ್ ಆದ 390 ಅಡ್ವೆಂಚರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೊಸ ಕೆಟಿಎಂ 390 ಅಡ್ವೆಂಚರ್ ಬೈಕ್ ಅನ್ನು 2020ರ ಜನವರಿಯಿಂದ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುವುದು.

ಕೆಟಿಎಂ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 390 ಅಡ್ವೆಂಚರ್ ಬೈಕ್ ಅನ್ನು ಮಾತ್ರ ಬಿಡುಗಡೆಗೊಳಿಸುತ್ತಿಲ್ಲ. ಆಟೋ ಕಾರ್ ಇಂಡಿಯಾ ವರದಿಗಳ ಪ್ರಕಾರ,ಕೆಟಿಎಂ ಕಂಪನಿಯು ಭಾರತದಲ್ಲಿ 250 ಅಡ್ವೆಂಚರ್ ಬೈಕ್ ಅನ್ನು ಸಹ ಬಿಡುಗಡೆಗೊಳಿಸಲಿದೆ.

ಕೆಟಿಎಂ 250 ಅಡ್ವೆಂಚರ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ 2020ರ ಮಧ್ಯ ಭಾಗದಲ್ಲಿ ಬಿಡುಗಡೆಗೊಳಿಸಲಾಗುವುದೆಂದು ಕೆಟಿಎಂ ಇಂಡಿಯಾ ಖಚಿತಪಡಿಸಿದೆ. ಈ ಬೈಕ್ 390 ಅಡ್ವೆಂಚರ್ ಬೈಕಿನ ಕೆಳಗಿನ ಸ್ಥಾನದಲ್ಲಿರಲಿದೆ.

250 ಅಡ್ವೆಂಚರ್ ಬೈಕ್ ಅನ್ನು ಕೆಟಿಎಂ ಕಂಪನಿಯು ಅಡ್ವೆಂಚರ್ ಬೈಕ್ ಸೆಗ್‍ಮೆಂಟಿನ ಎಂಟ್ರಿ ಲೆವೆಲ್‍ನಲ್ಲಿ ಬಿಡುಗಡೆಗೊಳಿಸಲಿದೆ. ಕೆಟಿಎಂ 250 ಅಡ್ವೆಂಚರ್ ಬೈಕ್, 390 ಅಡ್ವೆಂಚರ್ ಬೈಕಿನಲ್ಲಿರುವಂತಹ ವಿನ್ಯಾಸ, ಚಾಸೀಸ್ ಹಾಗೂ ಫ್ರೇಂಗಳನ್ನು ಹೊಂದಿರಲಿದೆ.

ಕೆಟಿಎಂ 250 ಬೈಕಿನಲ್ಲಿ 390 ಅಡ್ವೆಂಚರ್ ಬೈಕಿನಲ್ಲಿರುವಂತಹ ಬಾಡಿ ಪ್ಯಾನೆಲ್, ಬೆಲ್ಲಿ ಪ್ಯಾನ್, ಫ್ಯೂಯಲ್ ಟ್ಯಾಂಕ್ ಎಕ್ಸ್ ಟೆಂಷನ್, ರೇಡಿಯೇಟರ್ ಶ್ರೌಡ್ ಹಾಗೂ ಟೇಲ್ ಸೆಕ್ಷನ್‍ಗಳಿವೆ. ಆದರೆ ಈ ಎರಡೂ ಬೈಕ್‍ಗಳಲ್ಲಿ ಸಣ್ಣ ಪುಟ್ಟ ಬದಲಾವಣೆಗಳಿರಲಿವೆ.

250 ಬೈಕ್, 390 ಅಡ್ವೆಂಚರ್ ಬೈಕಿಗಿಂತ ವಿಭಿನ್ನವಾದ ಬಾಡಿ ಗ್ರಾಫಿಕ್ಸ್ ನೊಂದಿಗೆ ಬರಲಿದೆ. ಕೆಟಿಎಂ 250 ಬೈಕ್ ಹಾಲೊಜೆನ್ ಹೆಡ್‍ಲ್ಯಾಂಪ್ ಯುನಿಟ್ ಹೊಂದಿದ್ದರೆ, 390 ಅಡ್ವೆಂಚರ್ ಬೈಕ್ ಪೂರ್ಣ ಪ್ರಮಾಣದ ಎಲ್‍ಇಡಿ ಯುನಿಟ್ ಹೊಂದಿದೆ.

ವರದಿಗಳ ಪ್ರಕಾರ ಕೆಟಿಎಂ 250 ಅಡ್ವೆಂಚರ್ ಬೈಕ್, 390 ಬೈಕಿನಲ್ಲಿರುವಂತಹ ಅಲಾಯ್ ವ್ಹೀಲ್ ಹಾಗೂ ಟಯರ್‍ಗಳನ್ನು ಹೊಂದಿರಲಿದೆ. ಇವುಗಳಲ್ಲಿ ಮುಂಭಾಗದಲ್ಲಿರುವ 19 ಇಂಚಿನ ವ್ಹೀಲ್ ಹಾಗೂ ಹಿಂಭಾಗದಲ್ಲಿರುವ 17 ಇಂಚಿನ ವ್ಹೀಲ್‍ಗಳು ಸೇರಿವೆ.
MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಕೆಟಿಎಂ 250 ಅಡ್ವೆಂಚರ್ ಬೈಕ್ ಮುಂಭಾಗದಲ್ಲಿ 100/90 ಹಾಗೂ ಹಿಂಭಾಗದಲ್ಲಿ 130/80 ಪ್ರೊಫೈಲ್‍ನ ಟಯರ್‍ಗಳನ್ನು ಹೊಂದಿರಲಿದೆ. ಇದರ ಜೊತೆಗೆ ಈ ಬೈಕಿನಲ್ಲಿ ಟಿಎಫ್‍ಟಿ ಡಿಸ್‍ಪ್ಲೇ, ಮುಂಭಾಗದಲ್ಲಿ 43 ಎಂಎಂನ ಯುಎಸ್‍ಡಿ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊ ಶಾಕ್ ಸಸ್ಪೆಂಷನ್‍ಗಳಿರಲಿವೆ.
MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿಎಲ್ ಕಳೆದುಕೊಂಡ ಡ್ರೈವರ್..!

390 ಅಡ್ವೆಂಚರ್ ಬೈಕಿನಲ್ಲಿರುವ ಹಲವು ಫೀಚರ್‍ಗಳು 250 ಅಡ್ವೆಂಚರ್ ಬೈಕಿನಲ್ಲಿರುವುದಿಲ್ಲ. 250 ಅಡ್ವೆಂಚರ್ ಬೈಕಿನಲ್ಲಿ 249ಸಿಸಿಯ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ ಬಿಎಸ್ 6 ಎಂಜಿನ್ ಅಳವಡಿಸಲಾಗುವುದು. ಈ ಎಂಜಿನ್ 30 ಬಿಹೆಚ್‍ಪಿ ಪವರ್ ಹಾಗೂ 24 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6 ಸ್ಪೀಡಿನ ಗೇರ್‍ಬಾಕ್ಸ್ ನೀಡಲಾಗುವುದು.
MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಕೆಟಿಎಂ 390 ಅಡ್ವೆಂಚರ್ ಬೈಕಿನ ಬಿಡುಗಡೆಯನ್ನು ಬಹುಕಾಲದಿಂದ ನಿರೀಕ್ಷಿಸಲಾಗುತ್ತಿದೆ. ಇದರ ಜೊತೆಗೆ 250 ಅಡ್ವೆಂಚರ್ ಬೈಕ್ ಅನ್ನು ಬಿಡುಗಡೆಗೊಳಿಸುತ್ತಿರುವುದು ಬೈಕ್ ಪ್ರಿಯರನ್ನು ಮತ್ತಷ್ಟು ರೋಮಾಂಚನಗೊಳಿಸಿದೆ.

ಕೆಟಿಎಂ 250 ಅಡ್ವೆಂಚರ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗುವ ಸಾಧ್ಯತೆಗಳಿವೆ. ಬಿಡುಗಡೆಯಾದ ನಂತರ ಕೆಟಿಎಂ 250 ಅಡ್ವೆಂಚರ್ ಬೈಕ್ ಹೀರೋ ಎಕ್ಸ್ ಪಲ್ಸ್ 200 ಹಾಗೂ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕ್‍ಗಳಿಗೆ ಪೈಪೋಟಿ ನೀಡಲಿದೆ.
ವಿಶೇಷ ಸೂಚನೆ: ಇಲ್ಲಿ ಬಳಸಲಾಗಿರುವ ಚಿತ್ರಗಳು ಸಾಂದರ್ಭಿಕ ಚಿತ್ರಗಳು


Click it and Unblock the Notifications