ಕೆ‍‍ಟಿಎಂ 250 ಡ್ಯೂಕ್ ಬೈಕಿನ ಮೇಲೆ ಭರ್ಜರಿ ಆಫರ್

ಕೆ‍ಟಿಎಂ ಕಂಪನಿಯು ತಮ್ಮ ಜನಪ್ರಿಯ 250 ಡ್ಯೂಕ್ ನೇಕೆಡ್ ಬೈಕಿಗೆ ಭರ್ಜರಿ ಆಫರ್‍‍‍ಗಳನ್ನು ಘೋಷಿಸುವ ಮೂಲಕ ಡ್ಯೂಕ್ ಪ್ರಿಯರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಈ ಆಫರ್‍ ಎಕ್ಸ್ ಚೇಂಜ್ ಬೋನಸ್, ಕಡಿಮೆದರದೊಂದಿಗೆ ಜೀರೊ ಡೌನ್‍‍ಪೇಮೆಂಟ್ ಆಯ್ಕೆಯನ್ನು ಒಳಗೊಂಡಿದೆ.

ಕೆ‍‍ಟಿಎಂ 250 ಡ್ಯೂಕ್ ಬೈಕಿನ ಮೇಲೆ ಭರ್ಜರಿ ಆಫರ್

ಕೆ‍‍ಟಿಎಂನ ದೇಶದ್ಯಾಂತ ಎಲ್ಲಾ ಡೀಲರ್‍‍ಗಳ ಬಳಿ ಈ ಆಫರ್ ಲಭ್ಯವಿದೆ. ಪ್ರಸ್ತುತ ಗ್ರಾಹಕರು ಹೊಂದಿರುವ ಮಾದರಿಯ ಮೇಲೆ ಎಕ್ಸ್ ಚೇಂಜ್ ಬೋನಸ್ ಅವಲಂಬಿಸಿದೆ. ವಿನಿಮಯ ಆಫರ್ ಹೊರತಾಗಿ ಕಡಿಮೆ ಬಡ್ಡಿದರದೊಂದಿಗೆ ಶೂನ್ಯ ಡೌನ್ ಪೇಮೆಂಟ್ ಸಹ ಹೊಂದಿದೆ.

ಕೆ‍‍ಟಿಎಂ 250 ಡ್ಯೂಕ್ ಬೈಕಿನ ಮೇಲೆ ಭರ್ಜರಿ ಆಫರ್

ಖರೀದಿದಾರರು ದ್ವಿಚಕ್ರ ವಾಹನ ಸಾಲಕ್ಕಾಗಿ ಬಹು ಅವಧಿಯನ್ನು ಆಯ್ಕೆ ಮಾಡಬಹುದು. 12 ತಿಂಗಳ ಹಣಕಾಸು ಯೋಜನೆಗೆ ಕನಿಷ್ಠ ಶೇ.5.10 ನಷ್ಠು ಬಡ್ಡಿದರವನ್ನು ವಿಧಿಸಲಾಗುತ್ತದೆ. ಆದರೆ ಬಡ್ಡಿದರವು ಕ್ರಮವಾಗಿ 24 ತಿಂಗಳು ಮತ್ತು 36 ತಿಂಗಳ ಅವಧಿಯಲ್ಲಿ ಶೇ.6.50 ಮತ್ತು ಶೇ. 7.10%ಕ್ಕೆ ಏರುತ್ತದೆ. ಕಂಪನಿಯು ತಮ್ಮ ಎಂಟ್ರಿ ಲೆವೆಲ್ ಬೈಕ್ ಕೆ‍ಟಿಎಂ 125 ಡ್ಯೂಕ್‍‍ನೊಂದಿಗೆ ಆಕರ್ಷಕ ಹಣಕಾಸು ಆಯ್ಕೆಗಳನ್ನು ಘೋಷಿಸಿದೆ.

ಕೆ‍‍ಟಿಎಂ 250 ಡ್ಯೂಕ್ ಬೈಕಿನ ಮೇಲೆ ಭರ್ಜರಿ ಆಫರ್

ಈ ವರ್ಷದ ಡಿಸೆಂಬರ್ ಅಂತ್ಯದವರೆಗೆ ಗ್ರಾಹಕರು ಡ್ಯೂಕ್ 250 ನೊಂದಿಗೆ ಆಕರ್ಷಕ ಆಫ್‍ರ್ ಅನ್ನು ಪಡೆಯಬಹುದು. ಕೆಟಿಎಂ ಡ್ಯೂಕ್ 250 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ 1.97 ಲಕ್ಷಗಳಾಗಿದೆ. ಕೆ‍ಟಿಎಂ ಡ್ಯೂಕ್ 250 ಬೈಕ್ 248 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 9,000 ಆ‍‍ರ್‍‍ಪಿಎಂನಲ್ಲಿ 29.5 ಬಿಎಚ್‍ಪಿ ಪವರ್ ಮತ್ತು 7,500 ಆರ್‍‍ಪಿಎಂನಲ್ಲಿ 24 ಎನ್‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನಲ್ಲಿ 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಸ್ಲಿಪ್ ಅಸಿಸ್ಟೆಡ್ ಕ್ಲಚ್‍ ಜೋಡಿಸಲಾಗಿದೆ.

ಕೆ‍‍ಟಿಎಂ 250 ಡ್ಯೂಕ್ ಬೈಕಿನ ಮೇಲೆ ಭರ್ಜರಿ ಆಫರ್

ಕೆ‍ಟಿಎಂ ಡ್ಯೂಕ್ 250 ಮುಂಭಾಗದಲ್ಲಿ 43 ಎಂಎಂ ಅಪ್‍ಸೈಡ್ ಡೌನ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸಸ್ಪೆಂಷನ್ ಹೊಂದಿದ್ದು, ಇವೆರಡನ್ನೂ ಡಬ್ಲ್ಯುಪಿ ಯಿಂದ ಎರವಲು ಪಡೆಯಲಾಗಿದೆ. ಬೈಕಿ‍ನಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಬ್ರೇಕ್‍‍ಗಳಿಗಾಗಿ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಯು‍‍ನಿ‍ಟ್ ಅನ್ನು ಅಳವಡಿಸಲಾಗಿದೆ. ಸ್ಟ್ಯಾಂಡರ್ಡ್ ಡ್ಯುಯಲ್ ಚಾನೆಲ್ ಎಬಿಎಸ್ ಸಿಸ್ಟಂ ಅನ್ನು ಅಳವಡಿಸಿ ಇನ್ನಷ್ಟು ಸುರಕ್ಷತೆಯನ್ನು ಹೆಚ್ಚಿಸಲಾಗಿದೆ.

ಕೆ‍‍ಟಿಎಂ 250 ಡ್ಯೂಕ್ ಬೈಕಿನ ಮೇಲೆ ಭರ್ಜರಿ ಆಫರ್

ಡ್ಯೂಕ್ 250 ತನ್ನ ಶ್ರೇಣಿಯ ಡ್ಯೂಕ್ 390 ಬೈಕಿನಿಂದ ವಿನ್ಯಾಸ ಸೇರಿದಂತೆ ಅನೇಕ ಅಂಶಗಳನ್ನು ಎರವಲು ಪಡೆದಿದೆ. ಇದು ಚಾಸಿಸ್, ಸ್ವಿಂಗಾರ್ಮ್ ಅನ್ನು ಕೂಡ ಹೊಂದಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಕೆ‍‍ಟಿಎಂ 250 ಡ್ಯೂಕ್ ಬೈಕಿನ ಮೇಲೆ ಭರ್ಜರಿ ಆಫರ್

ಡ್ಯೂಕ್ 250 ದೊಡ್ಡ ಎಲ್ಇಡಿ ಹೆಡ್‍‍ಲ್ಯಾಂಪ್ ಅನ್ನು ಹೊಂದಿದೆ. ಡ್ಯೂಕ್ 200 ನಲ್ಲಿದ್ದಂತಹ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಕೆ‍ಟಿಎಂ ಡ್ಯೂಕ್ 250 ಆರೇಂಜ್ ಮತ್ತು ವೈಟ್ ಬಣ್ಣವನ್ನು ಹೊಂದಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಕೆ‍‍ಟಿಎಂ 250 ಡ್ಯೂಕ್ ಬೈಕಿನ ಮೇಲೆ ಭರ್ಜರಿ ಆಫರ್

ಕೆ‍ಟಿಎಂ ಬಹುನಿರೀಕ್ಷಿತ 390 ಅಡ್ವೆಂಚೆರ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಕೆ‍ಟಿಎಂ ತಮ್ಮ ಡ್ಯೂಕ್ 250 ಮಾದರಿಯಲ್ಲಿ ಆಕರ್ಷಕ ಭರ್ಜರಿ ಆಫರ್ ಅನ್ನು ಘೋಷಿಸಿದೆ. ಆಕರ್ಷಕ ಆಫರ್‍‍ನಿಂದ ಹಬ್ಬದ ವೇಳೆಯಲ್ಲಿ ಹೆಚ್ಚಿನ ಮಾರಾಟವಾಗುವುದು ಖಚಿತ. ಕೆ‍ಟಿಎಂ 10 ತಿಂಗಳಲ್ಲಿ 50,000 ಯು‍‍ನಿ‍ಟ್‍ಗಳ ಮಾರಾಟವಾಗಿದ್ದು, ಮುಂಬರುವ ದಿನಗಳಲ್ಲಿ ಮಾರಾಟಗಳ ಸಂಖ್ಯೆ ಹೆಚ್ಚಾಗಲಿದೆ.

Article Published On: Friday, October 18, 2019, 17:35 [IST]
English summary
KTM Duke 250 Finance Options On Offer: Low Interest Rate & Exchange Bonus Offered Across India - Read in Kannada
Read more on ಕೆಟಿಎಂ ktm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+