ಅಡ್ವೆಂಚರ್ ವಿಭಾಗಕ್ಕೆ ಕೆಟಿಎಂ ಸಂಸ್ಥೆಯಿಂದ ಮತ್ತೊಂದು ಹೊಸ ಬೈಕ್

ಡ್ಯೂಕ್ ಬೈಕ್ ಸರಣಿ ಮೂಲಕ ಪ್ರೀಮಿಯಂ ಬೈಕ್ ವಿಭಾಗದಲ್ಲಿ ತನ್ನದೇ ಆದ ಜನಪ್ರಿಯತೆ ಸಾಧಿಸಿರುವ ಕೆಟಿಎಂ ಸಂಸ್ಥೆಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಬೈಕ್ ಮಾದರಿಗಳನ್ನು ಬಿಡುಗಡೆಗೊಳಿಸುವ ಇರಾದೆಯಲ್ಲಿದ್ದು, ಸುದ್ದಿ ಮೂಲಗಳ ಪ್ರಕಾರ 790 ಅಡ್ವೆಂಚರ್ ಮತ್ತು 790 ಅಡ್ವೆಂಚರ್ ಆರ್ ಬೈಕ್ ಮಾದರಿಗಳನ್ನು ಪರಿಚಯಿಸಲಿದೆಯೆಂತೆ.

ಅಡ್ವೆಂಚರ್ ವಿಭಾಗಕ್ಕೆ ಕೆಟಿಎಂ ಸಂಸ್ಥೆಯಿಂದ ಮತ್ತೊಂದು ಹೊಸ ಬೈಕ್

ಕಳೆದ ನವೆಂಬರ್‌ನಲ್ಲಿ ಡ್ಯೂಕ್ 125 ಬಿಡುಗಡೆಯ ನಂತರ ಹೊಸದಾಗಿ 390 ಅಡ್ವೆಂಚರ್ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸುವುದಾಗಿ ಹೇಳಿಕೊಂಡಿದ್ದ ಕೆಟಿಎಂ ಸಂಸ್ಥೆಯು, ಈಗಾಗಲೇ ಹೊಸ ಬೈಕ್ ಅನ್ನು ದೇಶದ ವಿವಿಧಡೆ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ. ಇದರ ಬೆನ್ನಲ್ಲೇ ಡ್ಯೂಕ್ 790,790 ಅಡ್ವೆಂಚರ್ ಮತ್ತು 790 ಅಡ್ವೆಂಚರ್ ಆರ್ ಬೈಕ್‌ಗಳನ್ನು ಸಹ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಯೋಜನೆ ರೂಪಿಸಿದ್ದು, ಹೊಸ ಬೈಕ್‌ಗಳು ಪರ್ಫಾಮೆನ್ಸ್ ಮತ್ತು ಅಡ್ವೆಂಚರ್ ಎರಡು ವಿಭಾಗದಲ್ಲೂ ಭಾರೀ ಕುತೂಹಲ ಹುಟ್ಟುಹಾಕಿವೆ.

ಅಡ್ವೆಂಚರ್ ವಿಭಾಗಕ್ಕೆ ಕೆಟಿಎಂ ಸಂಸ್ಥೆಯಿಂದ ಮತ್ತೊಂದು ಹೊಸ ಬೈಕ್

ಕೆಟಿಎಂ ಬಿಡುಗಡೆ ಮಾಡಲಿರುವ ಒಟ್ಟು 5 ಹೊಸ ಬೈಕ್‌ಗಳು ಸಂಪೂರ್ಣವಾಗಿ ಸಿಕೆಡಿ ಮೂಲಕವೇ ಭಾರತದಲ್ಲಿ ಮಾರಾಟವಾಗಲಿದ್ದು, ಬೈಕ್ ಬಿಡಿಭಾಗಗಳು ಮತ್ತು ಎಂಜಿನ್ ಮಾದರಿಯನ್ನು ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಂಡು ಇಲ್ಲಿ ಮರು ಜೋಡಣೆ ಮಾಡಿ ಮಾರಾಟ ಮಾಡಲಾಗುತ್ತೆ.

ಅಡ್ವೆಂಚರ್ ವಿಭಾಗಕ್ಕೆ ಕೆಟಿಎಂ ಸಂಸ್ಥೆಯಿಂದ ಮತ್ತೊಂದು ಹೊಸ ಬೈಕ್

ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕೆಟಿಎಂ ಸಂಸ್ಥೆಯು ಈಗಾಗಲೇ 1290 ಸೂಪರ್ ಡ್ಯೂಕ್‌ನಂತಹ ಹೈ ಪರ್ಫಾಮೆನ್ಸ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಭಾರತದಲ್ಲೂ ಇತ್ತೀಚೆಗೆ ಹೆಚ್ಚುತ್ತಿರುವ ಸೂಪರ್ ಬೈಕ್‌ಗಳ ಬೇಡಿಕೆಯಿಂದಾಗಿ ತನ್ನ ಜನಪ್ರಿಯ ಮಾದರಿಗಳನ್ನು ಇಲ್ಲೂ ಪರಿಚಯಿಸುತ್ತಿದೆ.

ಅಡ್ವೆಂಚರ್ ವಿಭಾಗಕ್ಕೆ ಕೆಟಿಎಂ ಸಂಸ್ಥೆಯಿಂದ ಮತ್ತೊಂದು ಹೊಸ ಬೈಕ್

ಕಳೆದ ನವೆಂಬರ್‌ನಲ್ಲೇ 790 ಅಡ್ವೆಂಚರ್ ಮತ್ತು 790 ಅಡ್ವೆಂಚರ್ ಆರ್ ಬೈಕ್‌ಗಳನ್ನು ಇಟಾಲಿಯ ಮಿಲಾನ್ ಆಟೋ ಮೇಳದಲ್ಲಿ ಅನಾವರಣ ಮಾಡಿ ಮುಂದಿನ ಕೆಲವೇ ದಿನಗಳಲ್ಲಿ ಯರೋಪ್ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸುವ ಸುಳಿವು ನೀಡಿತ್ತು. ಆದ್ರೆ ಈ ಹೊಸ ಬೈಕ್‌ಗಳನ್ನು ಭಾರತಕ್ಕೂ ಪರಿಚಯಿಸುವ ಮಾಹಿತಿಯನ್ನು ಗೌಪ್ಯವಾಗಿಸಿದ್ದ ಕೆಟಿಎಂ ಸಂಸ್ಥೆಯು ಇದೇ ಮೊದಲ ಬಾರಿ ಹೊಸ ಬೈಕ್‌ಗಳು ಭಾರತದಲ್ಲೂ ಖರೀದಿಗೆ ಲಭ್ಯವಾಗಲಿವೆ ಎಂದಿದೆ.

ಅಡ್ವೆಂಚರ್ ವಿಭಾಗಕ್ಕೆ ಕೆಟಿಎಂ ಸಂಸ್ಥೆಯಿಂದ ಮತ್ತೊಂದು ಹೊಸ ಬೈಕ್

ಇನ್ನು ಹೊಸ 790 ಅಡ್ವೆಂಚರ್ ಮತ್ತು 790 ಅಡ್ವೆಂಚರ್ ಆರ್ ಬೈಕ್‌ಗಳು ನೋಡಲು 1290 ಅಡ್ವೆಂಚರ್ ಬೈಕ್‍‍ಗಳಂತೆಯೇ ವಿನ್ಯಾಸ ಹೊಂದಿದ್ದು, ಆಫ್-ರೋಡಿಂಗ್ ಕೌಶಲ್ಯಕ್ಕೆ ತಕ್ಕ ಹಾಗೆ ವಿನ್ಯಾಸಗೊಳಿಸಲಾಗಿದೆ. ಇವು ಟ್ವಿನ್ ಸಿಲೆಂಡರ್ ಮೋಟಾರ್‍‍ಸೈಕಲ್ ಆಗಿದ್ದು, ಅಡ್ವೆಂಚರ್ ರೈಡಿಂಗ್ ಪ್ರಿಯರಿಗೆ ಉತ್ತಮ ಅನುಭವವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಅಡ್ವೆಂಚರ್ ವಿಭಾಗಕ್ಕೆ ಕೆಟಿಎಂ ಸಂಸ್ಥೆಯಿಂದ ಮತ್ತೊಂದು ಹೊಸ ಬೈಕ್

ಎಂಜಿನ್ ಸಾಮರ್ಥ್ಯ

ಕೆಟಿಎಂ 790 ಅಡ್ವೆಂಚರ್ ಮತ್ತು 790 ಅಡ್ವೆಂಚರ್ ಆರ್ ಬೈಕ್‍ಗಳು 799ಸಿಸಿ ಪ್ಯಾರಲೆಲ್ ಟ್ವಿನ್ ಲಿಕ್ವಿಡ್ ಕೂಲ್ಡ್ ಎಂಜಿನ್ ಮೂಲಕ 95-ಬಿಹೆಚ್‍‍ಪಿ ಮತ್ತು 88-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎರಡು ಬೈಕ್‌ಗಳ ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಅಡ್ವೆಂಚರ್ ವಿಭಾಗಕ್ಕೆ ಕೆಟಿಎಂ ಸಂಸ್ಥೆಯಿಂದ ಮತ್ತೊಂದು ಹೊಸ ಬೈಕ್

ಹಾಗೆಯೇ ಹೊಸ ಕೆಟಿಎಂ 790 ಅಡ್ವೆಂಚರ್ ಆರ್ ಬೈಕ್‌ಗಳು 263-ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 880-ಎಂಎಂ ಉದ್ದವನ್ನು ಪಡೆದುಕೊಂಡಿದ್ದು, ಅಡ್ವೆಂಚರ್ 790 ಬೈಕ್ ಮಾದರಿಯು 233-ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 850-ಎಂಎಂ ಸೀಟ್ ಹೈಟ್ ಅನ್ನು ಪಡೆದುಕೊಂಡಿವೆ.

MOST READ: ಇನ್ಮುಂದೆ ಹೀಗೆಲ್ಲಾ ಮಾಡಿದ್ರೆ ನಿಮ್ಮ ವಾಹನ ನೋಂದಣಿ ರದ್ದಾಗುತ್ತೆ..!

ಅಡ್ವೆಂಚರ್ ವಿಭಾಗಕ್ಕೆ ಕೆಟಿಎಂ ಸಂಸ್ಥೆಯಿಂದ ಮತ್ತೊಂದು ಹೊಸ ಬೈಕ್

ಜೊತೆಗೆ ರೈಡರ್ ಸುರಕ್ಷತೆಗಾಗಿ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಸುರಕ್ಷಾ ಸೌಲಭ್ಯಗಳನ್ನು ನೀಡಲಾಗಿದ್ದು, ಕಾರ್ನರ್‌ಗಳಲ್ಲಿ ಸ್ವಿಚ್ ಮಾಡಬಹುದಾದ ಎಬಿಎಸ್, ಆಫ್ ರೋಡ್ ಎಬಿಎಸ್, ಟ್ರಾಕ್ಷನ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಮತ್ತು ಬೈಕ್ ಮುಂಭಾಗದ ಚಕ್ರದಲ್ಲಿ ಟ್ವಿನ್ 320-ಎಂಎಂ ಕ್ಯಾಲಿಪರ್ ಡಿಸ್ಕ್ ಬ್ರೇಕ್, ಹಿಂಭಾಗದ ಚಕ್ರದಲ್ಲಿ 260-ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಅಡ್ವೆಂಚರ್ ವಿಭಾಗಕ್ಕೆ ಕೆಟಿಎಂ ಸಂಸ್ಥೆಯಿಂದ ಮತ್ತೊಂದು ಹೊಸ ಬೈಕ್

ಹೀಗಾಗಿ ಗ್ರಾಹಕರ ತಮ್ಮ ಬೇಡಿಕೆಗೆ ಅನುಗುಣವಾಗಿ 790 ಅಡ್ವೆಂಚರ್ ಅಥವಾ 790 ಅಡ್ವೆಂಚರ್ ಆರ್ ಬೈಕ್‌ಗಳನ್ನು ಆಯ್ಕೆ ಮಾಡಬಹುದಾಗಿದ್ದು, ಇದೇ ವರ್ಷ ಏಪ್ರಿಲ್ ಅಂತ್ಯಕ್ಕೆ ಇಲ್ಲವೇ ಮೇ ಆರಂಭದಲ್ಲಿ 790 ಅಡ್ವೆಂಚರ್, 790 ಅಡ್ವೆಂಚರ್ ಆರ್, 390 ಅಡ್ವೆಂಚರ್, 390 ಅಡ್ವೆಂಚರ್ ಆರ್ ಬೈಕ್‌ಗಳು ಖರೀದಿ ಲಭ್ಯವಾಗುವುದು ಬಹುತೇಕ ಖಚಿತವಾಗಿದೆ.

MOST READ: ಮಾಡಿಫೈ ಬೈಕ್ ಸವಾರರಿಗೆ ಭಿಕ್ಷುಕರ ವೇಷದಲ್ಲಿ ಬಂದು ಶಾಕ್ ಕೊಟ್ಟ ಪೊಲೀಸರು..!

ಅಡ್ವೆಂಚರ್ ವಿಭಾಗಕ್ಕೆ ಕೆಟಿಎಂ ಸಂಸ್ಥೆಯಿಂದ ಮತ್ತೊಂದು ಹೊಸ ಬೈಕ್

ಇನ್ನು ಹೊಸ ಬೈಕ್‌ಗಳನ್ನು ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳುತ್ತಿರುವುದರಿಂದ ಬೈಕ್ ಬೆಲೆಗಳು ತುಸು ದುಬಾರಿ ಎನ್ನಿಸಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ 390 ಅಡ್ವೆಂಚರ್ ಬೆಲೆ ರೂ. 2.90 ಲಕ್ಷದಿಂದ ರೂ. 3.10 ಲಕ್ಷಕ್ಕೆ ಮತ್ತು 790 ಅಡ್ವೆಂಚರ್‌ ಬೈಕ್ ಬೆಲೆಯು ರೂ. 7 ಲಕ್ಷದಿಂದ ರೂ. 8.50 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Source: OVERDRIVE

Article Published On: Wednesday, March 27, 2019, 8:30 [IST]
English summary
KTM 790 Adventure To Launch In India. Read in Kannada.
Read more on ಕೆಟಿಎಂ ktm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+