ಮತ್ತೆ ಮುಂದಕ್ಕೆ ಹೋದ ಕೆ‍‍ಟಿ‍ಎಂ ಡ್ಯೂಕ್ 790 ಬಿಡುಗಡೆ

ಕೆ‍‍ಟಿ‍ಎಂ ಕಂಪನಿಯು, ಡ್ಯೂಕ್ 790 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ದಿನಾಂಕವನ್ನು ಇದುವರೆಗೂ ಅಧಿಕೃತವಾಗಿ ಪ್ರಕಟಿಸಿಲ್ಲ. ಈ ಬೈಕ್ ಅನ್ನು ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಬಿಡುಗಡೆಗೊಳಿಸಬಹುದೆಂದು ನಿರೀಕ್ಷಿಸಲಾಗಿತ್ತು.

ಮತ್ತೆ ಮುಂದಕ್ಕೆ ಹೋದ ಕೆ‍‍ಟಿ‍ಎಂ ಡ್ಯೂಕ್ 790 ಬಿಡುಗಡೆ

ಕೆ‍‍ಟಿ‍ಎಂ ಡ್ಯೂಕ್ 790 ಬೈಕಿನ ಬಿಡುಗಡೆಯ ದಿನಾಂಕವನ್ನು ಮತ್ತೆ ಮುಂದೂಡಲಾಗಿದ್ದು, ಡ್ಯೂಕ್ 790 ಬೈಕ್ ಅನ್ನು ಈ ವರ್ಷದ ಸೆಪ್ಟೆಂಬರ್‍‍ನಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಕೆಲವು ಡೀಲರ್‍‍ಗಳು ಖಚಿತಪಡಿಸಿದ್ದಾರೆ. ಈ ಬೈಕ್ ಸಿ‍‍ಕೆ‍ಡಿ ವಿಧಾನದಲ್ಲಿ ಭಾರತಕ್ಕೆ ಬಂದಿಳಿಯಲಿದೆ. ಹೀಗೆ ಬರುವ ಬೈಕ್ ಅನ್ನು ಪುಣೆಯಲ್ಲಿರುವ ಬಜಾಜ್ ತಯಾರಕ ಘಟಕದಲ್ಲಿ ಆಸ್ಟ್ರಿಯಾದಿಂದ ಬರುವ ಅಧಿಕಾರಗಳ ನೇತೃತ್ವದಲ್ಲಿ ತಯಾರಿಸಲಾಗುವುದು.

ಮತ್ತೆ ಮುಂದಕ್ಕೆ ಹೋದ ಕೆ‍‍ಟಿ‍ಎಂ ಡ್ಯೂಕ್ 790 ಬಿಡುಗಡೆ

ಕೆಟಿ‍ಎಂ ಕಂಪನಿಯ ಮಿಡ್ಲ್ ವೇಟ್ ವಿಭಾಗದಲ್ಲಿರುವ ಈ ನೇಕೆಡ್ ರೋಡ್‍‍ಸ್ಟರ್ ಬೈಕ್ ಹೊಸ ರೀತಿಯ ಎಲ್‍‍ಸಿ8ಸಿ 799 ಸಿಸಿ, ಲಿಕ್ವಿಡ್ ಕೂಲ್ಡ್, ಪ್ಯಾರೆಲಲ್ ಟ್ವಿನ್ ಎಂಜಿನ್ ಹೊಂದಿರಲಿದೆ. ಈ ಬೈಕಿನಲ್ಲಿರುವ ಎಂಜಿನ್ 103 ಹೆಚ್‍‍ಪಿಯನ್ನು 9,000 ಆರ್‍‍ಪಿ‍ಎಂನಲ್ಲಿ ಹಾಗೂ 86 ಎನ್‍ಎಂ ಟಾರ್ಕ್ ಅನ್ನು 8,000 ಆರ್‍‍ಪಿ‍ಎಂ ನಲ್ಲಿ ಉತ್ಪಾದಿಸಲಿದೆ.

ಮತ್ತೆ ಮುಂದಕ್ಕೆ ಹೋದ ಕೆ‍‍ಟಿ‍ಎಂ ಡ್ಯೂಕ್ 790 ಬಿಡುಗಡೆ

ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಗೇರ್‍‍ಬಾಕ್ಸ್ ಇರಲಿದೆ. ಈ ಬೈಕಿನಲ್ಲಿ ಪಿ‍ಎ‍ಎಸ್‍‍ಸಿ ಸ್ಲಿಪ್ ಅಸಿಸ್ಟ್ ಕ್ಲಚ್ ಹಾಗೂ ಕ್ವಿಕ್ ಶಿಫ್ಟ್ ಅಸಿಸ್ಟ್ ಇರಲಿದೆ. ಇದರ ಜೊತೆಗೆ ಈ ಬೈಕಿನಲ್ಲಿ ರೈಡ್ ಬೈ ವೈರ್ ಥ್ರಾಟಲ್ ಇರಲಿದ್ದು, ಸ್ಪೋರ್ಟ್, ಸ್ಟ್ರೀಟ್, ರೇನ್ ಹಾಗೂ ಟ್ರಾಕ್ ಎಂಬ ನಾಲ್ಕು ವಿವಿಧ ಬಗೆಯ ರೈಡರ್ ಮೋಡ್‍‍ಗಳನ್ನು ಒದಗಿಸಲಿದೆ.

ಮತ್ತೆ ಮುಂದಕ್ಕೆ ಹೋದ ಕೆ‍‍ಟಿ‍ಎಂ ಡ್ಯೂಕ್ 790 ಬಿಡುಗಡೆ

ಈ ಬೈಕ್ ಬೇರೆ ಬಗೆಯ ರೈಡ್ ಸಹಾಯಗಳಾದ ಮೋಟಾರ್ ಸ್ಲಿಪ್ ರೆಗ್ಯುಲೇಷನ್, ಟ್ರಾಕ್ಷನ್ ಕಂಟ್ರೋಲ್, ಕಾರ್ನರಿಂಗ್ ಎ‍‍ಬಿ‍ಎಸ್ ಹಾಗೂ ವ್ಹೀಲ್ ಕಂಟ್ರೋಲ್‍‍ಗಳನ್ನು ಸಹ ನೀಡಲಿದೆ. ಈ ಬೈಕಿನಲ್ಲಿರುವ ಇನ್ನೊಂದು ವಿಶೇಷತೆಯೆಂದರೆ, ಈ ಬೈಕ್ ಸೂಪರ್ ಮೋಟೊ ಮೋಡ್ ನೀಡಲಿದ್ದು, ಇದರಿಂದಾಗಿ ಚಾಲಕರು ಹಿಂದಿರುವ ವ್ಹೀಲ್‍‍ನಲ್ಲಿನ ಎ‍‍ಬಿ‍ಎಸ್ ಸುರಕ್ಷೆಯನ್ನು ಸ್ವಿಚ್ ಆಫ್ ಮಾಡಬಹುದಾಗಿದೆ. ಈ ಬೈಕಿನ ಮುಂಭಾಗದಲ್ಲಿ ಡಬ್ಲ್ಯು‍‍ಪಿ ಸೋರ್ಸಿನ 43 ಎಂಎಂ ಅಪ್ ಸೈಡ್ ಡೌನ್ ನಾನ್ ಅಡ್ಜಸ್ಟಬಲ್ ಫೋರ್ಕ್‍‍ಗಳನ್ನು ಹಾಗೂ ಹಿಂಭಾಗದಲ್ಲಿ ಮೊನೊಶಾಕ್‍ ಸಸ್ಪೆಂಷನ್‍‍ಗಳನ್ನು ಅಳವಡಿಸಲಾಗಿದೆ.

MOST READ: ಬುಗಾಟಿ ಹೈಪರ್ ಕಾರು ಹೊಂದಿರುವ ಭಾರತೀಯರು

ಮತ್ತೆ ಮುಂದಕ್ಕೆ ಹೋದ ಕೆ‍‍ಟಿ‍ಎಂ ಡ್ಯೂಕ್ 790 ಬಿಡುಗಡೆ

ಬ್ರೇಕಿಂಗ್ ಅನ್ನು ಮುಂಭಾಗದಲ್ಲಿರುವ ಡಬಲ್ ಡಿಸ್ಕ್ ಹಾಗೂ ಹಿಂಭಾಗದಲ್ಲಿರುವ ಸಿಂಗಲ್ ಡಿಸ್ಕ್ ಗಳು ನಿಯಂತ್ರಿಸುತ್ತವೆ. ಡ್ಯೂಕ್ 390 ಬೈಕಿನ ರೀತಿಯಲ್ಲಿಯೇ ಡ್ಯೂಕ್ 790 ಬೈಕ್ ಸಹ ಪೂರ್ಣವಾದ ಎಲ್‍‍ಇ‍‍ಡಿ ಲೈಟಿಂಗ್ ಸೆಟ್‍ಅಪ್, ಸ್ಮಾರ್ಟ್ ಫೋನ್‍‍ಗಳಿಗಾಗಿ ಸುಧಾರಿತ ಟೆಕ್ನಾಲಜಿಯ ಟಿ‍ಎಫ್‍‍ಟಿ ಕ್ಲಸ್ಟರ್‍‍ನ ಬ್ಲೂಟೂಟ್ ಕನೆಕ್ಟಿಟಿವಿಟಿ ಹೊಂದಿದೆ.

MOST READ: ಜೀಪ್ ಕಂಪಾಸ್ ಹೊಂದಿರುವ ಭಾರತದ ಖ್ಯಾತ ಸೆಲೆಬ್ರಿಟಿಗಳು

ಮತ್ತೆ ಮುಂದಕ್ಕೆ ಹೋದ ಕೆ‍‍ಟಿ‍ಎಂ ಡ್ಯೂಕ್ 790 ಬಿಡುಗಡೆ

ಹೊಸ ಕೆ‍‍ಟಿ‍ಎಂ ಡ್ಯೂಕ್ 790 ಬೈಕ್ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಈ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.8.5 ಲಕ್ಷಗಳಾಗುವ ಸಾಧ್ಯತೆಗಳಿವೆ.

MOST READ: ಮುಖೇಶ್ ಅಂಬಾನಿ ಬಳಿಯಿರುವ ದುಬಾರಿ ಕಾರುಗಳಿವು

ಮತ್ತೆ ಮುಂದಕ್ಕೆ ಹೋದ ಕೆ‍‍ಟಿ‍ಎಂ ಡ್ಯೂಕ್ 790 ಬಿಡುಗಡೆ

ಈ ಹೊಸ ಡ್ಯೂಕ್ 790 ಬೈಕ್ ಬಿಡುಗಡೆಯಾದ ನಂತರ ಟ್ರಯಂಫ್ ಸ್ಟ್ರೀಟ್ ಟ್ರಿಪಲ್, ಸುಜುಕಿ ಜಿ‍ಎಸ್‍ಎಕ್ಸ್-ಎಸ್750, ಕವಾಸಕಿ ಝಡ್900, ಡುಕಾಟಿ ಮಾನ್‍‍ಸ್ಟರ್ ಬೈಕುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on ಕೆಟಿಎಂ ktm
English summary
ktm duke 790 launch postponed again in india - Read in kannada
Story first published: Monday, June 3, 2019, 14:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X