ಬಹುನೀರಿಕ್ಷಿತ ಕೆಟಿಎಂ 390 ಅಡ್ವೆಂಚರ್ ಬೈಕ್ ಪರ್ಫಾಮೆನ್ಸ್ ಟೀಸರ್ ಬಿಡುಗಡೆ

ಮಿಲಾನ್ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ನಂತರ 390 ಅಡ್ವೆಂಚರ್ ಬೈಕ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿರುವ ಕೆಟಿಎಂ ಸಂಸ್ಥೆಯು ಹೊಸ ಬೈಕ್ ಎಂಜಿನ್ ಪರ್ಫಾಮೆನ್ಸ್ ಕುರಿತಾಗಿ ಅಂತಿಮ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದ್ದು, ಇದೇ ವರ್ಷಾಂತ್ಯದಲ್ಲಿ ಹೊಸ ಬೈಕ್ ಬಿಡುಗಡೆ ಮಾಡುವ ಸುಳಿವು ನೀಡಿದೆ.

ಬಹುನೀರಿಕ್ಷಿತ ಕೆಟಿಎಂ 390 ಅಡ್ವೆಂಚರ್ ಬೈಕ್ ಪರ್ಫಾಮೆನ್ಸ್ ಟೀಸರ್ ಬಿಡುಗಡೆ

2019ರ ಡಿಸೆಂಬರ್ 6 ಮತ್ತು 7ರಂದು ನಡೆಯಲಿರುವ 'ಇಂಡಿಯಾ ಬೈಕ್ ವೀಕ್' ಸಮ್ಮೇಳನದಲ್ಲಿ ಹೊಸ 390 ಅಡ್ವೆಂಚರ್ ಬಿಡುಗಡೆ ಮಾಡುವ ಕುರಿತಾದ ನಿಖರ ಮಾಹಿತಿ ದೊರೆತ್ತಿದ್ದು, ಕಾರಣಾಂತರಗಳಿಂದ ಹೊಸ ಬೈಕ್ ಬಿಡುಗಡೆಯನ್ನು ಮುಂದೂಡುತ್ತಾ ಬಂದಿದ್ದ ಕೆಟಿಎಂ ಸಂಸ್ಥೆಯು ಇದೀಗ ಅಡ್ವೆಂಚರ್ ಬೈಕ್ ಪ್ರಿಯರನ್ನು ಸೆಳೆಯಲು ಸಜ್ಜಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಸೂಪರ್ ಬೈಕ್‌ಗಳನ್ನು ಮಾರಾಟ ಮಾಡುವ ಕೆಟಿಎಂ ಸಂಸ್ಥೆಯು ಭಾರತದಲ್ಲೂ ವಿವಿಧ ನಮೂನೆಯ ಬೈಕ್ ಆವೃತ್ತಿಗಳನ್ನು ಮಾರಾಟ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ಅಡ್ವೆಂಚರ್ ಆವೃತ್ತಿಗಳ ಮಾರಾಟವನ್ನು ಆರಂಭಿಸುತ್ತಿದೆ.

ಬಹುನೀರಿಕ್ಷಿತ ಕೆಟಿಎಂ 390 ಅಡ್ವೆಂಚರ್ ಬೈಕ್ ಪರ್ಫಾಮೆನ್ಸ್ ಟೀಸರ್ ಬಿಡುಗಡೆ

ಕೆಟಿಎಂ ಬಿಡುಗಡೆ ಮಾಡಲು ನಿರ್ಧರಿಸಿರುವ 390 ಅಡ್ವೆಂಚರ್ ಬೈಕ್‌ಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ 1290 ಸೂಪರ್ ಅಡ್ವೆಂಚರ್ ಬೈಕ್ ಹೋಲಿಕೆಯನ್ನೇ ಪಡೆದುಕೊಂಡಿದ್ದು, ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಹಿಮಾಲಯನ್ ಬೈಕಿಗೆ ಪ್ರತಿಸ್ಪರ್ಧಿಯಾಗಿ ಈ ಬೈಕ್ ಮಾರಾಟಗೊಳ್ಳಲಿದೆ.

ಬಹುನೀರಿಕ್ಷಿತ ಕೆಟಿಎಂ 390 ಅಡ್ವೆಂಚರ್ ಬೈಕ್ ಪರ್ಫಾಮೆನ್ಸ್ ಟೀಸರ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಬಿಡುಗಡೆಗೆ ಸಜ್ಜಾಗಿರುವ ಕೆಟಿಎಂ 390 ಬೈಕ್ ಮಾದರಿಯು ಬಿಎಸ್-6 ವೈಶಿಷ್ಟ್ಯತೆಯ 373-ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರಲಿದ್ದು, ಬೆಸ್ಟ್ ಪರ್ಫಾಮೆನ್ಸ್ ಮಾದರಿಯಾಗಿ 43-ಬಿಎಚ್‌ಪಿ ಮತ್ತು 37-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ಬಹುನೀರಿಕ್ಷಿತ ಕೆಟಿಎಂ 390 ಅಡ್ವೆಂಚರ್ ಬೈಕ್ ಪರ್ಫಾಮೆನ್ಸ್ ಟೀಸರ್ ಬಿಡುಗಡೆ

ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್ ಅಳವಡಿಕೆ ಹೊಂದಿರುವ 390 ಅಡ್ವೆಂಚರ್ ಬೈಕ್‌ ಮಾದರಿಯು, ಸುಧಾರಿತ ವಿನ್ಯಾಸಗಳಾದ ಟಿಪಿಎಫ್ ಇನ್ಟ್ರುಮೆಂಟ್ ಡಿಸ್‌ಪ್ಲೇ, ಲಾಂಗ್ ಟ್ರಾವೆಲ್ ಫ್ರಂಟ್ ಮತ್ತು ರಿಯರ್ ಸಸ್ಷೆನ್ ಜೋಡಣೆ ಹೊಂದಿರಲಿವೆ. ಇದರ ಹೊರತಲಾಗಿ ಕೆಲವು ಮುಖ್ಯ ತಾಂತ್ರಿಕ ಅಂಶಗಳನ್ನು ಗೌಪ್ಯವಾಗಿ ಇಡಲಾಗಿದ್ದು, ಬಿಡುಗಡೆಯ ಹೊತ್ತಿಗೆ ಮತ್ತಷ್ಟು ಮಾಹಿತಿ ಸಿಗಲಿದೆ.

ಬಹುನೀರಿಕ್ಷಿತ ಕೆಟಿಎಂ 390 ಅಡ್ವೆಂಚರ್ ಬೈಕ್ ಪರ್ಫಾಮೆನ್ಸ್ ಟೀಸರ್ ಬಿಡುಗಡೆ

ಇವುಗಳಲ್ಲದೇ ಬೈಕಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್ ತಂತ್ರಜ್ಞಾನದೊಂದಿಗೆ ಡ್ಯುಯಲ್ ಡಿಸ್ಕ್ ಬ್ರೇಕ್, ಸ್ಲಿಪ್ಪರ್ ಕ್ಲಚ್, ರೈಡ್ ಬೈ ವೈರ್ ಟೆಕ್ನಾಲಜಿ ಮತ್ತು ಪರ್ಫಾಮೆನ್ಸ್‌ಗೆ ಸಹಕಾರಿಯಾಗಬಲ್ಲ ಡ್ಯುಯಲ್-ಸ್ಪೋಟ್ ಟೈರ್ ಮಾದರಿಗಳನ್ನು ಬಳಕೆ ಮಾಡಿರುವುದು ಬೈಕ್ ಕಾರ್ಯಕ್ಷಮತೆಗೆ ಮತ್ತಷ್ಟು ಬಲಬಂದಿದೆ.

ಈ ಕುರಿತಂತೆ ಪರ್ಫಾಮೆನ್ಸ್ ವಿಡಿಯೋ ಒಂದನ್ನು ಬಿಡುಗಡೆ ಮಾಡಿರುವ ಕೆಟಿಎಂ ಸಂಸ್ಥೆಯು ಭಾರತದಲ್ಲಿ ಹೊಸ ಅಧ್ಯಾಯ ಶುರು ಮಾಡುವ ತವಕದಲ್ಲಿದೆ.

MOST READ: ಭಾರತದಲ್ಲಿ ಸದ್ದು ಮಾಡಿದ್ದ ಮೊದಲ 100 ಸಿಸಿ ಬೈಕಿನ ಬಗ್ಗೆ ನಿಮಗೆಷ್ಟು ಗೊತ್ತು?!

ಬಹುನೀರಿಕ್ಷಿತ ಕೆಟಿಎಂ 390 ಅಡ್ವೆಂಚರ್ ಬೈಕ್ ಪರ್ಫಾಮೆನ್ಸ್ ಟೀಸರ್ ಬಿಡುಗಡೆ

ಬಿಡುಗಡೆಯ ಅವಧಿ ಮತ್ತು ಬೆಲೆಗಳು (ಅಂದಾಜು)

2019ರ ಡಿಸೆಂಬರ್‌ನಲ್ಲಿ ನಡೆಯಲಿರುವ ಇಂಡಿಯಾ ಬೈಕ್ ವೀಕ್ ಸಮ್ಮೇಳನದಲ್ಲಿ ಭಾಗಿಯಾದ ನಂತರವಷ್ಟೇ 390 ಅಡ್ವೆಂಚರ್ ಬೈಕ್‌ ಖರೀದಿಗೆ ಲಭ್ಯವಾಗಲಿದ್ದು, ಹೊಸ ಬೈಕ್ ಬೆಲೆಯು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 2.30 ಲಕ್ಷದಿಂದ ರೂ. 2.50 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

MOST READ: ಕಾರು ಅಪ್ಪಚ್ಚಿಯಾದರೂ ಬದುಕುಳಿದ ಕಾರು ಚಾಲಕ

ಬಹುನೀರಿಕ್ಷಿತ ಕೆಟಿಎಂ 390 ಅಡ್ವೆಂಚರ್ ಬೈಕ್ ಪರ್ಫಾಮೆನ್ಸ್ ಟೀಸರ್ ಬಿಡುಗಡೆ

ಹೀಗಾಗಿ ಕೆಟಿಎಂ 390 ಅಡ್ವೆಂಚರ್ ಬೈಕ್‌ಗಳು ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಗೊಂಡಿದ್ದೆ ಆದಲ್ಲಿ ಮಾರುಕಟ್ಟೆಯಲ್ಲಿ ಸದ್ಯ ಜನಪ್ರಿಯವಾಗಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮತ್ತು ಇತ್ತೀಚೆಗಷ್ಟೆ ಬಿಡುಗಡೆಯಾದ ಎಂಟ್ರಿ ಲೆವಲ್ ಬಿಎಂಡಬ್ಲ್ಯು ಜಿ310 ಜಿಎಸ್ ಬೈಕ್ ಮಾದರಿಗೂ ಇದು ತೀವ್ರ ಪೈಪೋಟಿ ನೀಡಲಿದೆ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಬಹುನೀರಿಕ್ಷಿತ ಕೆಟಿಎಂ 390 ಅಡ್ವೆಂಚರ್ ಬೈಕ್ ಪರ್ಫಾಮೆನ್ಸ್ ಟೀಸರ್ ಬಿಡುಗಡೆ

ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಅಡ್ವೆಂಚರ್ ಆವೃತ್ತಿಗಳಿಗೆ ವಿಶೇಷ ಬೇಡಿಕೆಯಿದ್ದು, ಈ ಹಿನ್ನೆಲೆಯಲ್ಲಿ ಕೆಟಿಎಂ ಸಂಸ್ಥೆಯು ತನ್ನ ಬಹುನೀರಿಕ್ಷಿತ 390 ಅಡ್ವೆಂಚರ್ ಮಾದರಿಗಳನ್ನು ಬಿಡುಗಡೆ ಮಾಡುತ್ತಿದೆ. ನಿಗದಿತ ಅವಧಿಯಲ್ಲಿ ಬಿಡುಗಡೆಗೊಂಡಲ್ಲಿ ಹೊಸ ಬೈಕ್‌ಗಳು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಠಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

Article Published On: Tuesday, November 12, 2019, 17:35 [IST]
English summary
KTM has released official video for 390 Adventure bike to show off its capabilities in rough terrains.
Read more on ಕೆಟಿಎಂ ktm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+