ಮಾರಾಟದಲ್ಲಿ ಸೊನ್ನೆ ಸುತ್ತಿದ ಮಹೀಂದ್ರಾ ಮೊಜೊ ಮತ್ತು ಯುಎಂ ಮೋಟಾರ್‌ಸೈಕಲ್

ಸಾಂಪ್ರದಾಯಿಕ ಬೈಕ್ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಗುಡ್ ಬೈ ಹೇಳಿ ಪರ್ಫಾಮೆನ್ಸ್ ಬೈಕ್ ಮಾದರಿಗಳಿಗೆ ಮಾತ್ರವೇ ಒತ್ತು ನೀಡುತ್ತಿರುವ ಮಹೀಂದ್ರಾ ಸಂಸ್ಥೆಯು ಯುಟಿ300 ಮಾರಾಟದಲ್ಲೂ ನೆಲಕಚ್ಚಿದ್ದು, ಇದರ ಜೊತೆಗೆ ಯುಎಂ ಮೋಟಾರ್‌ಸೈಕಲ್ ಸಂಸ್ಥೆಯು ಸಹ ಗ್ರಾಹಕರನ್ನು ಆಕರ್ಷಿಸಲು ಸಾಧ್ಯವಾಗದೇ ನಷ್ಟ ಅನುಭವಿಸುತ್ತಿವೆ.

ಮಾರಾಟದಲ್ಲಿ ಸೊನ್ನೆ ಸುತ್ತಿದ ಮಹೀಂದ್ರಾ ಮೊಜೊ ಮತ್ತು ಯುಎಂ ಮೋಟಾರ್‌ಸೈಕಲ್

ಹೌದು, ಮಹೀಂದ್ರಾ ಮತ್ತು ಯುಎಂ ಮೋಟಾರ್‌ಸೈಕಲ್ ಸಂಸ್ಥೆಯು ಏಪ್ರಿಲ್ ಅವಧಿಯಲ್ಲಿ ಒಂದೇ ಒಂದು ಬೈಕ್ ಅನ್ನು ಸಹ ಮಾರಾಟ ಮಾಡಲು ಸಾಧ್ಯವಾಗದೇ ತೀವ್ರ ಹಿನ್ನಡೆ ಅನುಭವಿಸಿದ್ದು, ಮಹೀಂದ್ರಾ ಯುಟಿ300 ಮತ್ತು ಯುಎಂ ರೆನೆಗೆಡ್ ಬೈಕ್‌ಗಳನ್ನು ಯಾವೊಬ್ಬ ಗ್ರಾಹಕರನು ಕೂಡಾ ಬೈಕ್ ಬಗೆಗೆ ವಿಚಾರಣೆ ಮಾಡದಿರುವುದು ನಷ್ಟದ ಹಾದಿ ಹಿಡಿದಿವೆ.

ಮಾರಾಟದಲ್ಲಿ ಸೊನ್ನೆ ಸುತ್ತಿದ ಮಹೀಂದ್ರಾ ಮೊಜೊ ಮತ್ತು ಯುಎಂ ಮೋಟಾರ್‌ಸೈಕಲ್

ಕಳೆದ 2018ರ ಮಾರ್ಚ್‌ನಲ್ಲಿ ಮೊಜೊ ಯುಟಿ300 ಬೈಕ್‌ಗಳನ್ನು ಪರಿಚಯಿಸಿದ್ದ ಮಹೀಂದ್ರಾ ಸಂಸ್ಥೆಯು ಕೆಲವೇ ದಿನಗಳ ಹಿಂದಷ್ಟೇ ವಿಶೇಷ ವಿನ್ಯಾಸದ ಡ್ಯುಯಲ್ ಟೋನ್ ಬಣ್ಣದ ಆಯ್ಕೆಯಲ್ಲಿ ಬಿಡುಗಡೆ ಮಾಡಿತ್ತು ಆದರೂ ಕೂಡಾ ಗ್ರಾಹಕರನ್ನು ಸೆಳೆಯಲು ಸಾಧ್ಯವಾಗಿಲ್ಲ.

ಮಾರಾಟದಲ್ಲಿ ಸೊನ್ನೆ ಸುತ್ತಿದ ಮಹೀಂದ್ರಾ ಮೊಜೊ ಮತ್ತು ಯುಎಂ ಮೋಟಾರ್‌ಸೈಕಲ್

ಒಸಿಯನ್ ಬ್ಲ್ಯೂ ಮತ್ತು ವೈಟ್ ಬಣ್ಣ ಮಿಶ್ರಿತ ಒಂದು ಮಾದರಿಯಾದರೇ, ರೆಡ್ ಮತ್ತು ಸಿಲ್ವರ್ ಮಿಶ್ರಿತ ಇನ್ನೊಂದು ಆಯ್ಕೆ ಬಹುತೇಕ ಬೈಕ್ ಸವಾರರಿಗೆ ಇಷ್ಟವಾಗುವ ಬಣ್ಣದ ಆಯ್ಕೆಯನ್ನು ನೀಡಲಾಗಿತ್ತು. ಆದ್ರೆ ಮೊದಮೊದಲು ಗ್ರಾಹಕನ್ನು ಸೆಳೆದಿದ್ದ ಮೊಜೊ ಯುಟಿ300 ಬೈಕ್ ಇದೀಗ ಸಂಪೂರ್ಣ ನೆಲಕಚ್ಚಿದೆ.

ಮಾರಾಟದಲ್ಲಿ ಸೊನ್ನೆ ಸುತ್ತಿದ ಮಹೀಂದ್ರಾ ಮೊಜೊ ಮತ್ತು ಯುಎಂ ಮೋಟಾರ್‌ಸೈಕಲ್

ಸದ್ಯ ಮಾರುಕಟ್ಟೆಯಲ್ಲಿ ಆನ್ ರೋಡ್ ಪ್ರಕಾರ ರೂ. 1.80 ಲಕ್ಷ ಬೆಲೆ ಹೊಂದಿರುವ ಯುಟಿ300 ಮಾದರಿಯು ಪ್ರತಿಸ್ಪರ್ಧಿ ಬೈಕ್ ಮಾದರಿಗಳಿಂದ ತೀವ್ರ ಪೈಪೋಟಿ ಎದುರಿಸುತ್ತಿದ್ದು, ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಮೊಜೊ ಯುಟಿ300 ಬೈಕ್ ಉತ್ಪಾದನೆ ಮತ್ತು ಮಾರಾಟಕ್ಕೂ ಮಹೀಂದ್ರಾ ಗುಡ್ ಬೈ ಹೇಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮಾರಾಟದಲ್ಲಿ ಸೊನ್ನೆ ಸುತ್ತಿದ ಮಹೀಂದ್ರಾ ಮೊಜೊ ಮತ್ತು ಯುಎಂ ಮೋಟಾರ್‌ಸೈಕಲ್

ಮೊಜೊ ಎಕ್ಸ್‌ಟಿ300 ಬೈಕ್ ಮಾದರಿಯು 295-ಸಿಸಿ ಸಿಂಗಲ್ ಸಿಲಿಂಡರ್ ಫ್ಯೂಲ್ ಇಜೆಕ್ಷೆಡ್ ಎಂಜಿನ್ ಹೊಂದಿದ್ದು, 25-ಬಿಎಚ್‌ಪಿ ಮತ್ತು 30-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು. ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್ ಪಡೆದುಕೊಂಡಿದೆ.

ಮಾರಾಟದಲ್ಲಿ ಸೊನ್ನೆ ಸುತ್ತಿದ ಮಹೀಂದ್ರಾ ಮೊಜೊ ಮತ್ತು ಯುಎಂ ಮೋಟಾರ್‌ಸೈಕಲ್

ಪರ್ಫಾಮೆನ್ಸ್ ಪ್ರಿಯರಿಗಾಗಿ ಪೆರೆಲಿ ಡೈಬ್ಲೊ ರೊಸೋ II ಟೈರ್ ಮಾದರಿಗಳನ್ನು ಇಲ್ಲಿ ಬಳಸಲಾಗಿದ್ದು, ಮುಂಭಾಗದ ಚಕ್ರದಲ್ಲಿ 320ಎಂಎಂ ಮತ್ತು ಹಿಂಭಾಗದ ಚಕ್ರದಲ್ಲಿ 240ಎಂಎಂ ಡಿಸ್ಕ್ ಬ್ರೇಕ್ ಇದೆ. ಇದರೊಂದಿಗೆ ಎಲ್ಇಡಿ ಡಿಆರ್‌ಎಲ್ ಪಾಡ್ ಹೆಡ್‌ಲ್ಯಾಂಪ್‌, 21 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ವ್ಯವಸ್ಥೆ ಮೊಜೊ ಎಕ್ಸ್‌ಟಿ300 ಬೈಕಿನಲ್ಲಿವೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಮಾರಾಟದಲ್ಲಿ ಸೊನ್ನೆ ಸುತ್ತಿದ ಮಹೀಂದ್ರಾ ಮೊಜೊ ಮತ್ತು ಯುಎಂ ಮೋಟಾರ್‌ಸೈಕಲ್

ಇದರೊಂದಿಗೆ 300ಸಿಸಿ ವಿಭಾಗದ ಬೈಕ್‌ಗಳನ್ನು ಖರೀದಿಸುವ ಗ್ರಾಹಕರಿಗೆ ವಿವಿಧ ಡ್ಯುಯಲ್ ಟೋನ್ ಬಣ್ಣಗಳಲ್ಲಿ ಲಭ್ಯವಿರುವ ಮೊಜೊ ಎಕ್ಸ್‌ಟಿ300 ಬೈಕ್‌ಗಳು ಖರೀದಿಗೆ ಉತ್ತಮ ಮಾದರಿಯಾಗಿದ್ದರೂ ಸಹ ಮಾರಾಟದಲ್ಲಿ ಭಾರೀ ಹಿನ್ನಡೆ ಅನುಭವಿಸಿದೆ.

ಮಾರಾಟದಲ್ಲಿ ಸೊನ್ನೆ ಸುತ್ತಿದ ಮಹೀಂದ್ರಾ ಮೊಜೊ ಮತ್ತು ಯುಎಂ ಮೋಟಾರ್‌ಸೈಕಲ್

ಇನ್ನು ಅಮೆರಿಕದ ಜನಪ್ರಿಯ ಬೈಕ್ ಉತ್ಪಾದನಾ ಸಂಸ್ಥೆಯಾದ ಯುಎಂ ಮೋಟಾರ್ ಸೈಕಲ್ಸ್ ಭಾರತದಲ್ಲಿ ವಿವಿಧ ಮಾದರಿಯ ಕ್ರೂಸರ್ ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದು, ಮೊಜಾವೆ ಮತ್ತು ಕಮಾಂಡೊ ಕ್ಲಾಸಿಕ್ ಬೈಕ್‌ಗಳನ್ನು ಮಾರಾಟಮಾಡುತ್ತಿದೆ.

MOST READ: ಒಂದೇ ನಂಬರಿನಲ್ಲಿ ಎರಡು ಕಾರು, ಕೊನೆಗೂ ಸಿಕ್ಕಿ ಬಿದ್ದ ನಕಲಿ ಕಾರು ಮಾಲೀಕ..!

ಮಾರಾಟದಲ್ಲಿ ಸೊನ್ನೆ ಸುತ್ತಿದ ಮಹೀಂದ್ರಾ ಮೊಜೊ ಮತ್ತು ಯುಎಂ ಮೋಟಾರ್‌ಸೈಕಲ್

ಬೆಲೆಗಳಲ್ಲೂ ಸಹ ಆಕರ್ಷಣೆಯಾಗಿರುವ ಯುಎಂ ಬೈಕ್‌ಗಳನ್ನು ಗ್ರಾಹಕರು ತಿರುಗಿಯೂ ನೋಡದ ಸ್ಥಿತಿ ನಿರ್ಮಾಣವಾಗಿದ್ದು, ಕಳೆದ ಎರಡ್ಮೂರು ತಿಂಗಳಿನಿಂದ ಒಂದೇ ಒಂದು ಬೈಕ್ ಮಾರಾಟವಾಗಿಲ್ಲ. ಇದರ ಮಧ್ಯೆ ಮತ್ತೆ ನಾಲ್ಕು ಹೊಸ ಬೈಕ್‌ಗಳನ್ನು ಪರಿಚಯಿಸಲು ಸಜ್ಜಾಗುತ್ತಿರುವ ಯುಎಂ ಸಂಸ್ಥೆಯು ಆರ್ಥಿಕವಾಗಿ ಭಾರೀ ನಷ್ಟ ಅನುಭವಿಸುವ ಸುಳಿಯಲ್ಲಿದೆ.

Most Read Articles

Kannada
English summary
Mahindra Mojo & UM Motorcycles Sales Down To 0 Units. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X