ಭಾರತದಲ್ಲಿ ಬಿಡುಗಡೆಗೊಂಡ ಬಿಎಂಡಬ್ಲ್ಯು ಅಡ್ವೆಂಚರ್ ಬೈಕ್

ಬಿಎಂಡಬ್ಲ್ಯು ಮೋಟೊರಾಡ್ ಇತ್ತೀಚಿಗೆ ತನ್ನ ಹೊಸ ಎಫ್ 850 ಜಿ‍ಎಸ್ ಅಡ್ವೆಂಚರ್ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಹೊಸ ಬಿಎಂಡಬ್ಲ್ಯು ಎಫ್ 850 ಜಿ‍ಎಸ್ ಬೈಕಿನ ಬೆಲೆಯು ಭಾರತದಲ್ಲಿನ ಎಕ್ಸ್ ಶೋರೂಂ ದರದಂತೆ ರೂ. 15.40 ಲಕ್ಷಗಳಾಗಿದೆ. ಎಫ್ 850 ಜಿ‍ಎಸ್ ಅಡ್ವೆಂಚರ್ ಟೂರರ್ ಬೈಕಿನಲ್ಲಿ ಶಾರ್ಪ್ ಡಿಸೈನ್‍‍ಗಳಿದ್ದು, ಮೊದಲಿಗಿಂತ ಹೆಚ್ಚು ಆಫ್ ರೋಡ್ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಗೊಂಡ ಬಿಎಂಡಬ್ಲ್ಯು ಅಡ್ವೆಂಚರ್ ಬೈಕ್

ಹೊಸ ಬಿಎಂಡಬ್ಲ್ಯು ಎಫ್ 850 ಜಿ‍ಎಸ್ ಅಡ್ವೆಂಚರ್ ಬೈಕನ್ನು ಭಾರತಕ್ಕೆ ಕಂಪ್ಲೀಟ್ ಬಿಲ್ಟ್ ಯೂನಿಟ್ ಆಗಿ ಆಮದು ಮಾಡಿಕೊಳ್ಳಲಾಗುವುದು. ಈ ಅಡ್ವೆಂಚರ್ ಟೂರರ್ ಬೈಕ್‍‍ನ ಬುಕ್ಕಿಂಗ್ ಇಂದಿನಿಂದ ದೇಶಾದ್ಯಂತವಿರುವ ಎಲ್ಲಾ ಬಿಎಂಡಬ್ಲ್ಯು ಮೋಟೊರಾಡ್ ಡೀಲರ್‍‍ಗಳಲ್ಲಿ ಶುರುವಾಗಲಿದೆ. ಬಿಎಂಡಬ್ಲ್ಯು ಗ್ರೂಪ್ ಇಂಡಿಯಾದ ಉಸ್ತುವಾರಿ ಅಧ್ಯಕ್ಷರಾದ ಡಾ.ಹನ್ಸ್ ಕ್ರಿಶ್ಚಿಯನ್ ಬೇರ್ತೆಲ್ ರವರು ಮಾತನಾಡಿ ಈ ಬಗ್ಗೆ ಮಾತನಾಡಿದ್ದಾರೆ.

ಭಾರತದಲ್ಲಿ ಬಿಡುಗಡೆಗೊಂಡ ಬಿಎಂಡಬ್ಲ್ಯು ಅಡ್ವೆಂಚರ್ ಬೈಕ್

ಹತ್ತು ವರ್ಷಗಳಿಗಿಂತ ಹೆಚ್ಚು ಕಾಲದಿಂದ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ, ಬಿಎಂಡಬ್ಲ್ಯು ಮೋಟೊರಾಡ್ ಎಫ್ ಸೀರಿಸ್‍‍ನಲ್ಲಿರುವ ಜಿ‍ಎಸ್ ಮಾದರಿಯ ಬೈಕುಗಳನ್ನು ಪ್ರಿಮೀಯಂ ಸರಣಿಯಿಂದ ಮಿಡಲ್ ಕ್ಲಾಸ್‍‍ನ ಟ್ರಾವೆಲ್ ಮತ್ತು ಅಡ್ವೆಂಚರ್ ಸೆಗ್‍‍ಮೆಂಟಿಗೆ ಬದಲಾಯಿಸಲಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ಬಿಎಂಡಬ್ಲ್ಯು ಅಡ್ವೆಂಚರ್ ಬೈಕ್

ಹೊಸ ಬಿಎಂಡಬ್ಲ್ಯು ಎಫ್ 850 ಜಿ‍ಎಸ್ ಅಡ್ವೆಂಚರ್ ಬೈಕ್ ನ ಬಿಡುಗಡೆಯೊಂದಿಗೆ ನಾವು ಪ್ರಿಮೀಯಂ ಬಿಎಂಡಬ್ಲ್ಯು ಬೈಕುಗಳ ಸರಣಿಯ ಸೆಗ್‍‍ಮೆಂಟನ್ನು ವಿಸ್ತರಿಸುತ್ತಿದ್ದೇವೆ. ಹೊಸ ಬಿಎಂಡಬ್ಲ್ಯು ಎಫ್ 850 ಜಿ‍ಎಸ್ ಅಡ್ವೆಂಚರ್ ಬೈಕ್, ಟ್ರಾವೆಲ್ ಪ್ರಿಯರಿಗೆ ಇಷ್ಟವಾಗಲಿದೆ.

ಭಾರತದಲ್ಲಿ ಬಿಡುಗಡೆಗೊಂಡ ಬಿಎಂಡಬ್ಲ್ಯು ಅಡ್ವೆಂಚರ್ ಬೈಕ್

ಇದರ ಜೊತೆಗೆ ಆಫ್ ರೋಡ್ ಪಯಣವನ್ನು ಇಷ್ಟಪಡುವವರಿಗೆ, ದೇಶಗಳನ್ನು ಸುತ್ತುವವರಿಗೆ ಒಂದು ಸುಂದರ ಅನುಭವವನ್ನು ನೀಡುವುದರ ಜೊತೆಗೆ ಅವರ ಪಯಣದಲ್ಲಿ ಅವರಿಗೆ ಸಂಗಾತಿಯಾಗಬಲ್ಲದು ಎಂದು ತಿಳಿಸಿದರು. ಎಫ್ 850 ಜಿ‍ಎಸ್ ಅಡ್ವೆಂಚರ್‍ ಬೈಕ್, ಸ್ಟಾಂಡರ್ಡ್ ಮೋಟಾರ್‍‍ಸೈಕಲ್‍‍ನ ಮೇಲೆ ಆಧಾರಿತವಾಗಿದೆ. ಆದರೆ ಇದು ರಿ-ಡಿಸೈನ್ ಬಾಡಿ ವರ್ಕ್‍‍ಗಳನ್ನು ಒಳಗೊಂಡಿರುವುದಿಲ್ಲ. ಎಫ್ 850 ಜಿ‍ಎಸ್ ಅಡ್ವೆಂಚರ್‍ ಬೈಕ್, ಸ್ಟಾಂಡರ್ಡ್ ಮಾದರಿಗಿಂತ ಹೆಚ್ಚು ಆಫ್ ರೋಡ್ ಮಾದರಿಯಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ಬಿಎಂಡಬ್ಲ್ಯು ಅಡ್ವೆಂಚರ್ ಬೈಕ್

ಬಾಡಿ ವರ್ಕ್‍‍ನಲ್ಲಿರುವ ಬದಲಾವಣೆಗಳೆಂದರೆ - ದೊಡ್ಡ ವಿಂಡ್‍‍ಶೀಲ್ಡ್, ಅಗಲವಾದ ಫ್ರಂಟ್ ಬೀಕ್, ಮರುವಿನ್ಯಾಸಗೊಂಡ ರೇಡಿಯೆಟರ್, ದೊಡ್ಡ ಲಗೇಜ್ ರ್‍ಯಾಕ್, ಎಂಜಿನ್ ಗಾರ್ಡ್‍‍ಗಳು, ರಿವೈಸ್ಡ್ ಟ್ಯಾಂಕ್ ಪ್ಯಾನೆಲ್ ಗಳನ್ನು ಹೊಂದಿದೆ. ಎಫ್ 850 ಜಿ‍ಎಸ್ ಅಡ್ವೆಂಚರ್‍ ಬೈಕಿನಲ್ಲಿ 23 ಲೀಟರ್ ಸಾಮರ್ಥ್ಯದ ದೊಡ್ಡ ಟ್ಯಾಂಕ್ ಇದ್ದರೆ, ಸ್ಟಾಂಡರ್ಡ್ ಮಾದರಿಯಲ್ಲಿ 15 ಲೀಟರಿನ ಟ್ಯಾಂಕ್ ಇದೆ. ಎಫ್ 850 ಜಿ‍ಎಸ್ ಅಡ್ವೆಂಚರ್ ಬೈಕಿನಲ್ಲಿ 853 ಸಿಸಿಯ ವಾಟರ್ ಕೂಲ್ಡ್, ಪ್ಯಾರಲೆಲ್ ಟ್ವಿನ್ ಸಿಲಿಂಡರ್ ಎಂಜಿನ್ ಇದ್ದು, 90 ಬಿಹೆಚ್‍‍ಪಿಯನ್ನು 8,000 ಆರ್‍‍ಪಿ‍ಎಂ ನಲ್ಲಿ ಮತ್ತು 86 ಎನ್‍ಎಂ ಟಾರ್ಕ್ ಅನ್ನು 6,250 ಆರ್‍‍ಪಿ‍ಎಂನಲ್ಲಿ ಉತ್ಪಾದಿಸುತ್ತದೆ. ಇದರಲ್ಲಿ 6 ಸ್ಪೀಡಿನ ಗೇರ್ ಬಾಕ್ಸ್ ಅಳವಡಿಸಲಾಗಿದೆ.

MOST READ: ಕ್ಯಾಮೆರಾ ಕಣ್ಣಿಗೆ ಬಿದ್ದ ಹೊಸ ಬಿಎಂಡಬ್ಲ್ಯು 7 ಕಾರು

ಎಫ್ 850 ಜಿ‍ಎಸ್ ಅಡ್ವೆಂಚರ್ ಬೈಕ್, 21 ಇಂಚಿನ ಫ್ರಂಟ್ ಮತ್ತು 17 ಇಂಚಿನ ರೇರ್ ಸ್ಪೋಕ್ ವ್ಹೀಲ್‍‍ಗಳ ಮೇಲೆ ಚಲಿಸುತ್ತದೆ. ಈ ಅಡ್ವೆಂಚರ್ ಬೈಕ್, ಮುಂಭಾಗದಲ್ಲಿ 43 ಎಂಎಂ ನ ಸಸ್ಪೆಂಷನ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೋನೊಶಾಕ್‍‍ಗಳನ್ನು ಹೊಂದಿದೆ, ಎರಡೂ ಸಹ ಪ್ರಿ-ಲೋಡ್ ಹಾಗೂ ರಿ-ಬೌಂಡ್ ಅಡ್ಜಸ್ಟಾಬಿಲಿಟಿಗಳನ್ನು ಹೊಂದಿವೆ. ಎಫ್ 850 ಜಿ‍ಎಸ್ ಅಡ್ವೆಂಚರ್ ಬೈಕ್ ನ ಬ್ರೇಕಿಂಗ್ ಸಿಸ್ಟಂನ ಮುಂಭಾಗದಲ್ಲಿ ಡ್ಯೂಯಲ್ 305 ಎಂಎಂ ಡಿಸ್ಕ್ ಗಳು ಮತ್ತು ಹಿಂಭಾಗದಲ್ಲಿ ಸಿಂಗಲ್ 265 ಎಂಎಂ ಡಿಸ್ಕ್ ಗಳಿವೆ. ಈ ಬ್ರೇಕಿಂಗ್ ಸಿಸ್ಟಂನ ಅನುಕೂಲಕ್ಕಾಗಿ ಡ್ಯುಯಲ್ ಚಾನೆಲ್‍‍ನ ಸ್ವಿಚೆಬಲ್ ಎ‍‍ಬಿ‍ಎಸ್ ಇದೆ.

ಎಫ್ 850 ಜಿ‍ಎಸ್ ಅಡ್ವೆಂಚರ್‍ ಬೈಕ್ ನಲ್ಲಿ ಎಲ್‍ಇ‍‍ಡಿ ಹೆಡ್ ಲ್ಯಾಂಪ್, ಟೇಲ್ ಲೈಟ್, ಎಲ್‍ಇಡಿ ಡಿ‍ಆರ್‍ಎಲ್‍‍ಗಳು, ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್, ಸ್ವಿಚೆಬಲ್ ಎ‍‍ಬಿ‍ಎಸ್, ಕ್ರೂಸ್ ಕಂಟ್ರೋಲ್, ಡೈನಾಮಿಕ್ ಇ‍ಎಸ್‍ಎ, ಗೇರ್ ಶಿಫ್ಟ್ ಅಸಿಸ್ಟ್, ಟೂ ರೈಡಿಂಗ್ ಮೋಡ್ ಮತ್ತು ಬ್ಲೂ ಟೂತ್ ಕನೆಕ್ಟಿವಿಟಿ ಹೊಂದಿರುವ 6.5 ಇಂಚಿನ ಟಿ‍ಎಫ್‍‍ಟಿ ಡಿಸ್‍‍ಪ್ಲೇ ಗಳಿವೆ.

ಭಾರತದಲ್ಲಿ ಬಿಡುಗಡೆಗೊಂಡ ಬಿಎಂಡಬ್ಲ್ಯು ಅಡ್ವೆಂಚರ್ ಬೈಕ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಎಫ್ 850 ಜಿ‍ಎಸ್ ಅಡ್ವೆಂಚರ್ ಬೈಕ್, ಸ್ಟಾಂಡರ್ಡ್ ಮೋಟಾರ್‍‍ಸೈಕಲ್‍‍ನ ಆಫ್ ರೋಡ್ ಆವೃತ್ತಿಯಾಗಿದೆ. ಎಫ್ 850 ಜಿ‍ಎಸ್ ಅಡ್ವೆಂಚರ್ ಭಾರತೀಯ ಮಾರುಕಟ್ಟೆಯಲ್ಲಿ ಕವಾಸಕಿ ವರ್ಸಿಸ್ 650, ಸುಜುಕಿ ವಿ-ಸ್ಟಾರ್ಮ್ ಎಕ್ಸ್ ಟಿ ಮತ್ತು ಡುಕಾಟಿ ಮಲ್ಟಿಸ್ಟ್ರಾಡ 950 ಬೈಕುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
New BMW F 850 GS Adventure Launched In India — Prices Start At Rs 15.4 Lakh - Read in kannada
Story first published: Tuesday, May 14, 2019, 17:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X