ಇಐಸಿಎಂನಲ್ಲಿ ಅನಾವರಣಗೊಂಡ ಬಹುನಿರೀಕ್ಷಿತ ಕೆಟಿಎಂ 890 ಡ್ಯೂಕ್ ಆರ್
ಕೆಟಿಎಂ 890 ಡ್ಯೂಕ್ ಆರ್ ಬೈಕನ್ನು 2019ರ ಇಐಸಿಎಂಎನಲ್ಲಿ ಅನಾವರಣಗೊಳಿಸಲಾಗಿದೆ. ಹೊಸ ಕೆಟಿಎಂ 890 ಡ್ಯೂಕ್ ಆರ್ ಬೈಕು ಕೆಟಿಎಂ ಕಂಪನಿಯ ಮಿಡ್ ಸೆಗ್‍ಮೆಂಟಿಗೆ ಹೊಸ ಸೇರ್ಪೆಡೆಯಾಗಿದೆ. ಹೊಸ ಕೆಟಿಎಂ 890 ಡ್ಯೂಕ್ ಆರ್ ಬೈಕು ತನ್ನದೆ ಸರಣಿಯ 790 ಡ್ಯೂಕ್ ಮಾದರಿಯಲ್ಲಿದೆ ಮತ್ತು ಇದು ಬ್ರಾಂಡ್‍ನ ಸರಣಿಯಲ್ಲಿ ಉನ್ನತ ಸ್ಥಾನವನ್ನು ಹೊಂದಿದೆ.

ಹೊಸ ಕೆಟಿಎಂ 890 ಡ್ಯೂಕ್ ಆರ್ ಬೈಕು ತನ್ನ ಸರಣಿಯ 790 ಬೈಕಿನ ಮಾದರಿಯ ವಿನ್ಯಾಸವನ್ನು ಹೊಂದಿದೆ. ದೊಡ್ಡದಾದ 890 ಡ್ಯೂಕ್ ಆರ್ ಬೈಕು ಕೆಲವು ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ, ಇದರಿಂದ ಈ ಎರಡು ಮಾದರಿಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯಲು ಸಹಾಯವಾಗಲಿದೆ.

ಈ ಹೊಸ ಬೈಕು ವೈಟ್ ಮತ್ತು ಆರೇಂಜ್ ಬಣ್ಣಗಳನ್ನು ಹೊಂದಿದ್ದು, ಆರೇಂಜ್ ಬಣ್ಣದ ಟಯರ್ ರಿಮ್ ಮತ್ತು ಹಿಂಭಾಗದ ಸೀಟ್ ಕೌಲ್ ಅನ್ನು ಒಳಗೊಂಡಿದೆ. ಹೊಸ 890 ಡ್ಯೂಕ್ ತನ್ನ ಸರಣಿಯ 790 ಡ್ಯೂಕ್‍ಗಿಂತ ಸ್ವಲ್ಪ ಎತ್ತರದ ಸೀಟ್ ಮತ್ತು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.

ಕೆಟಿಎಂ 890 ಡ್ಯೂಕ್ ಆರ್ ಬೈಕು ತನ್ನ ಸರಣಿಯ 790 ಡ್ಯೂಕ್ ಬೈಕಿಗಿಂತ ಉತ್ತಮ ಬಿಟ್‍ಗಳನ್ನು ಹೊಂದಿದೆ. ಇದು ವಿನ್ಯಾಸ ಮತ್ತು ಎಲೆಕ್ಟ್ರಾನಿಕ್ ಪ್ಯಾಕೇಜ್ ಅನ್ನು ಒಳಗೊಂಡಿದೆ. 890 ಡ್ಯೂಕ್ ಎಬಿಎಸ್, ಟ್ರಾಕ್ಷನ್ ಕಂಟ್ರೂಲ್, ಲಾಂಚ್ ಕಂಟ್ರೂಲ್, ಮಲ್ಟಿಪಲ್ ರೈಡಿಂಗ್ ಮೋಡ್ ಮತ್ತು ಸ್ವಿಚೆಬಲ್ ಎಬಿಎಸ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.

ಇದರೊಂದಿಗೆ ಹೊಸ ಬೈಕಿನಲ್ಲಿ ಎಲ್ಇಡಿ ಹೆಡ್‍ಲ್ಯಾಂಪ್, ಎಲ್‍ಇಡಿ ಡಿಆರ್‍ಎಲ್, ಎಲ್ಇಡಿ ಟೇಲ್ ಲೈಟ್‍ಗಳು, ಸ್ಮಾರ್ಟ್ ಪೋನ್‍ಗಾಗಿ ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಟಿಎಫ್‍ಟಿ ಕಲರ್ ಡಿಸ್‍ಪ್ಲೇ ಮತ್ತು ಇತರ ವೈಶಿಷ್ಟ್ಯಗಳಿವೆ.

ಹೊಸ ಕೆಟಿಎಂ 890 ಡ್ಯೂಕ್ ಆರ್ ಬೈಕು 890 ಸಿಸಿ ಪ್ಯಾರೆಲಲ್ ಟ್ವಿನ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 120 ಬಿಹೆಚ್‍ಪಿ ಪವರ್ ಮತ್ತು 99 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 790 ಡ್ಯೂಕ್‍ಗಿಂತ 15 ಬಿಹೆಚ್‍ಪಿ ಪವರ್ ಮತ್ತು 14 ಎನ್‍ಎಂ ಟಾರ್ಕ್ ಅನ್ನು ಹೆಚ್ಚು ಉತ್ಪಾದಿಸುತ್ತದೆ. ಕೆಟಿಎಂ 890 ಡ್ಯೂಕ್‍ನಲ್ಲಿರುವ ಸಸ್ಪೆಂಷನ್ ಅನ್ನು ಡಬ್ಲ್ಯು ಅಪೆಕ್ಸ್ ಸಿಸ್ಟಂ ಮೂಲಕ ಸಂಪೂರ್ಣವಾಗಿ ಹೊಂದಾಣಿಕೆ ಮಾಡಬಹುದಾಗಿದೆ. ಬ್ರೇಕಿಂಗ್‍ಗಾಗಿ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಕೆಟಿಎಂ 890 ಡ್ಯೂಕ್ ಮುಂದಿನ ವಾರಗಳಲ್ಲಿ ಜಾಗತಿಕ ಮಟ್ಟದಲ್ಲಿ ಮಾರಾಟವಾಗಲಿದೆ. ಸದ್ಯಕ್ಕೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದಿಲ್ಲ. ಅಸ್ಟ್ರಿಯನ್ ಕಂಪನಿ ಇತ್ತೀಚೆಗೆ 790 ಡ್ಯೂಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಹೊಸ ಕೆಟಿಎಂ 790 ಡ್ಯೂಕ್ ಬೈಕ್ ಅನ್ನು ಭಾರತದಲ್ಲಿ ಕೇವಲ 100 ಯುನಿಟ್‍ಗಳಿಗೆ ಸೀಮಿತಗೊಳಿಸಿ ಬಿಡುಗಡೆಗೊಳಿಸಿತ್ತು. ಕೆಟಿಎಂ ಈ ಮಾದರಿಯನ್ನು ಬಿಎಸ್-6 ಎಂಜಿನ್ ನಿಯಮಕ್ಕೆ ಅನುಸಾರವಾಗಿ ನವೀಕರಿಸಿ ನಂತರದ ಹಂತದಲ್ಲಿ ಮತ್ತೊಮ್ಮೆ ಬಿಡುಗಡೆಗೊಳಿಸಲಿದೆ.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಕೆಟಿಎಂ 390 ಅಡ್ವೆಂಚರ್ ಬೈಕ್ ಅನ್ನು 2019ರ ಇಐಸಿಎಂಎನಲ್ಲಿ ಅನಾವರಣಗೊಳಿಸುವ ಅವಕಾಶವನ್ನು ಪಡೆದುಕೊಂಡಿದೆ. ಕೆಟಿಎಂ 390 ಅಡ್ವೆಂಚರ್ ಬೈಕು ದೇಶಿಯ ಮಾರುಕಟ್ಟೆಯಲ್ಲಿ ಬಹುನಿರೀಕ್ಷಿತ ಬೈಕುಗಳಲ್ಲಿ ಒಂದಾಗಿದೆ. ಐಬಿಡಬ್ಲ್ಯು ವೇಳೆಯಲ್ಲಿ ಭಾರತದಲ್ಲಿ 390 ಅಡ್ವೆಂಚರ್ ಬೈಕನ್ನು ಬಿಡುಗಡೆಗೊಳಿಸುವ ನಿರೀಕ್ಷೆಯಿದೆ.
MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಕೆಟಿಎಂ 890 ಡ್ಯೂಕ್ ಆರ್ ಅನ್ನು ಸ್ಟೀರಾಯ್ಡಗಳ ಮೇಲಿನ 790 ಡ್ಯೂಕ್ ಎಂದು ಹೇಳಬಹುದು. ಹೊಸ 890 ಡ್ಯೂಕ್ ನೇಕಡ್ ಸ್ಟ್ರೀಟ್‍ಫೈಟರ್ ಬೈಕ್ ಎಲೆಕ್ಟ್ರಾನಿಕ್ ಪ್ಯಾಕೇಜ್ ಅನ್ನು ಹೊಂದಿದೆ. ಕೆಟಿಎಂ 890 ಡ್ಯೂಕ್ ಆರ್ ಬೈಕು ಸದ್ಯಕ್ಕೆ ಭಾರತದಲ್ಲಿ ಬಿಡುಗಡೆಯಾಗದಿರುವುದು ಕೆಟಿಎಂ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.


Click it and Unblock the Notifications








