ಅನಾವರಣವಾಯ್ತು ಓರ್ಕ್ಸಾ ಮಾಂಟಿಸ್ ಎಲೆಕ್ಟ್ರಿಕ್ ಬೈಕ್
2019ರ ಇಂಡಿಯಾ ಬೈಕ್ ವೀಕ್‍ನಲ್ಲಿ ಓರ್ಕ್ಸಾ ಎನರ್ಜೀಸ್, ಮಾಂಟಿಸ್ ಎಲೆಕ್ಟ್ರಿಕ್ ಪರ್ಫಾರ್ಮೆನ್ಸ್ ಬೈಕ್ ಅನ್ನು ಅನಾವರಣಗೊಳಿಸಿದೆ. ಬೆಂಗಳೂರು ಮೂಲದ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ ಅಪ್ ಕಂಪನಿಯಾದ ಓರ್ಕ್ಸಾ ಎನರ್ಜೀಸ್, ಬೈಕ್ ಪ್ರೇಮಿಗಳಿಗಾಗಿ ಈ ಎಲೆಕ್ಟ್ರಿಕ್ ಬೈಕ್ ಅನ್ನು ಆರನೇ ಆವೃತ್ತಿಯ ಇಂಡಿಯಾ ಬೈಕ್ ವೀಕ್‌ನಲ್ಲಿ ಅನಾವರಣಗೊಳಿಸಿದೆ.

ಇಂಡಿಯಾ ಬೈಕ್ ವೀಕ್, ದೇಶಾದ್ಯಂತವಿರುವ ಬೈಕ್ ಪ್ರಿಯರು ಹೋಗಬೇಕಾದ ಸ್ಥಳಗಳಲ್ಲಿ ಒಂದಾಗಿದೆ. ಇದು ಭಾರತದ ಅತಿದೊಡ್ಡ ಬೈಕ್ ಮೇಳವಾಗಿದೆ. ಸಾವಿರಾರು ಜನರು ಇದರಲ್ಲಿ ಭಾಗಿಯಾಗುತ್ತಾರೆ. ಆದರೆ ಎಲೆಕ್ಟ್ರಿಕ್ ವಾಹನಗಳು ಐಬಿಡಬ್ಲ್ಯೂನಲ್ಲಿ ಕಾಣುವುದು ಅಪರೂಪ.

ಈ ಮೇಳದಲ್ಲಿ ಹೇರಳವಾದ ಮೋಜು ಮಸ್ತಿ ನೀಡುವ ರೆವ್ ಲಿಮಿಟರ್‍ನಿಂದ ಬೌನ್ಸ್ ಆಗುವ ರೆವ್ ಮಿಷಿನ್‍ಗಳನ್ನು ಕಾಣಬಹುದು. ಪ್ರಪಂಚದಾದ್ಯಂತವಿರುವ ಆಟೋಮೊಬೈಲ್ ಉದ್ಯಮವು ಎಲೆಕ್ಟ್ರಿಕ್ ವಾಹನಗಳತ್ತ ಬದಲಾಗುತ್ತಿದ್ದು, ವಾಹನ ಕಂಪನಿಗಳು ಈ ರೀತಿಯ ಮೇಳಗಳತ್ತ ಗಮನ ಹರಿಸಬೇಕು.

ಈ ಕಾರಣಕ್ಕೆ ಓರ್ಕ್ಸಾ ಮಾಂಟಿಸ್ ಬೈಕ್ ಅನ್ನು 2019ರ ಐಬಿಡಬ್ಲ್ಯೂನಲ್ಲಿ ಅನಾವರಣಗೊಳಿಸಿರುವುದು ಸರಿಯಾಗಿದೆ. ಓರ್ಕ್ಸಾ ಎನರ್ಜೀಸ್, ಬೆಂಗಳೂರು ಮೂಲದ ಎಲೆಕ್ಟ್ರಿಕ್ ವಾಹನಗಳ ಸ್ಟಾರ್ಟ್ ಅಪ್ ಕಂಪನಿಯಾಗಿದೆ. ಈ ಕಂಪನಿಯನ್ನು 2015ರಲ್ಲಿ ಸ್ಥಾಪಿಸಲಾಯಿತು.

ಈ ಕಂಪನಿಯು ಉದ್ಯಮಿಗಳನ್ನು ಬೆಂಬಲಿಸುವ ಏರ್‍ಬಸ್ ಬಿಜ್‍ಲ್ಯಾಬ್ ಆಕ್ಸೆಲೆರೇಷನ್ ಯೋಜನೆಯ ಭಾಗವಾಗಿದೆ. ರಂಜಿತಾ ರವಿ ಹಾಗೂ ಪ್ರಜ್ವಾಲ್ ಸಬ್ನಿಸ್ ಎಂಬುವವರು ಸೇರಿ ಎಲೆಕ್ಟ್ರಿಕ್ ಪರ್ಫಾರ್ಮೆನ್ಸ್ ಬೈಕ್‍ಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ಕಂಪನಿಯನ್ನು ಸ್ಥಾಪಿಸಿದರು.

ಓರ್ಕ್ಸಾ ಮಾಂಟಿಸ್ ಬೈಕ್ ಮೂಲಕ ಈ ಉದ್ದೇಶವು ಈಡೇರುತ್ತಿದೆ. ಓರ್ಕ್ಸಾ ಮಾಂಟಿಸ್ ಒಂದು ವಿಶಿಷ್ಟವಾದ ಬೈಕ್ ಆಗಿದೆ. ವಿನ್ಯಾಸದ ಸ್ಟೈಲಿಂಗ್ ಎದ್ದು ಕಾಣುತ್ತದೆ. ಬೈಕಿನ ಮುಂಭಾಗದಲ್ಲಿ, ಪ್ರೊಜೆಕ್ಟರ್ ಯುನಿಟ್‍ಗಳನ್ನು ಹೊಂದಿರುವ ಟ್ವಿನ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳಿವೆ. ಪ್ರೊಜೆಕ್ಟರ್‌ಗಳ ಅಡಿಯಲ್ಲಿ ಎರಡು ಎಕ್ಸ್ ಟೆಂಷನ್‍ಗಳಿವೆ.

ಟ್ಯಾಂಕ್ ಬಳಿಯ ಬಾಡಿವರ್ಕ್, ಫೇರಿಂಗ್ ಹಾಗೂ ಹಿಂಭಾಗದ ಕೊನೆಯ ವಿನ್ಯಾಸಗಳೆಲ್ಲವೂ ಶಾರ್ಪ್ ಹಾಗೂ ಎಡ್ಜಿಯಾಗಿವೆ. ಓರ್ಕ್ಸಾ ಮಾಂಟಿಸ್‌ನಲ್ಲಿರುವ ಎಂಜಿನ್ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ ಈ ಎಂಜಿನ್ ಅದ್ಭುತವಾದ ಪರ್ಫಾಮೆನ್ಸ್ ನೀಡುವುದೆಂದು ಹೇಳಲಾಗಿದೆ.
MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಮಾಂಟಿಸ್ ಬೈಕಿನ ವೇಗವು ಪ್ರತಿ ಗಂಟೆಗೆ 140 ಕಿ.ಮೀಗಳಾಗಿದೆ. ಪೂರ್ಣವಾಗಿ ಚಾರ್ಜ್ ಮಾಡಿದ ಬ್ಯಾಟರಿಯಲ್ಲಿ 200 ಕಿ.ಮೀವರೆಗೂ ಚಲಿಸುತ್ತದೆ ಎಂದು ಓರ್ಕ್ಸಾ ಹೇಳಿಕೊಂಡಿದೆ. ಬೈಕಿನಲ್ಲಿರುವ ಆರು ಬ್ಯಾಟರಿಗಳನ್ನು ಸುಮಾರು ನಾಲ್ಕು ಗಂಟೆಗಳಲ್ಲಿ 0-100%ವರೆಗೂ ಚಾರ್ಜ್ ಮಾಡಬಹುದು.
MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಓರ್ಕ್ಸಾ ಮಾಂಟಿಸ್ ಬೈಕ್, ಬ್ಯಾಟರಿ ಸ್ವಾಪಿಂಗ್ ಟೆಕ್ನಾಲಜಿಯನ್ನು ಹೊಂದಿದೆ. ಈ ಬೈಕಿನಲ್ಲಿರುವ ಸೈಡ್ ಪ್ಯಾನಲ್‌ಗಳು ಮೊಟೊರೈಸ್ಡ್ ಆಗಿವೆ. ಬ್ಯಾಟರಿಗಳನ್ನು ಅಗತ್ಯ ಬಿದ್ದರೆ ಬದಲಾಯಿಸಬಹುದು. ಇದು ಕನೆಕ್ಟೆಡ್ ಬೈಕ್ ಆಗಿದ್ದು, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹೊಂದಿದೆ.
MOST READ: ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ಇದನ್ನು ಸ್ಮಾರ್ಟ್‍ಫೋನಿಗೆ ಕನೆಕ್ಟ್ ಮಾಡಿಕೊಂಡು ಬೈಕ್ ಹಾಗೂ ಸವಾರಿಯ ಮಾಹಿತಿಯನ್ನು ಪಡೆಯಬಹುದು. ಓರ್ಕ್ಸಾ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಬೇರೆ ಕಂಪನಿಗಳಿಗೆ ಸರಬರಾಜು ಮಾಡಲು ಅಭಿವೃದ್ಧಿಪಡಿಸಿರುವುದಾಗಿ ಹೇಳಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಓರ್ಕ್ಸಾ ಮಾಂಟಿಸ್ ವಿಶಿಷ್ಟವಾಗಿ ಕಾಣುವುದರ ಜೊತೆಗೆ ಹಲವಾರು ಫೀಚರ್‍ಗಳನ್ನು ಹೊಂದಿದೆ. ಇದರಿಂದಾಗಿ ಬೇರೆ ಕಂಪನಿಯ ಬೈಕ್‍ಗಳಿಗೆ ಪೈಪೋಟಿ ನೀಡಬಹುದು. ಈ ಬೈಕ್ ಅನ್ನು ಯಾವಾಗ ಬಿಡುಗಡೆಗೊಳಿಸಲಾಗುವುದೆಂದು ತಿಳಿಸಿಲ್ಲ. ಬಿಡುಗಡೆಯಾದ ನಂತರ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವ ಸಾಧ್ಯತೆಗಳಿವೆ.


Click it and Unblock the Notifications