ನವೆಂಬರ್ ತಿಂಗಳ ಬುಕ್ಕಿಂಗ್ ಆರಂಭಿಸಿದ ರಿವೋಲ್ಟ್
ಕೆಲ ದಿನಗಳ ಹಿಂದಷ್ಟೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹೊಸ ರಿವೋಲ್ಟ್ ಎಲೆಕ್ಟ್ರಿಕ್ ಬೈಕುಗಳನ್ನು ಈಗ ಮಾರಾಟ ಮಾಡಲಾಗುತ್ತಿದೆ. ರಿವೋಲ್ಟ್ ಮೋಟಾರ್ಸ್, ಇಂದು ಹೊರಡಿಸಿರುವ ಪ್ರಕಟಣೆಯಲ್ಲಿ, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳುಗಳ ಡೆಲಿವರಿಗಾಗಿ ಬುಕ್ಕಿಂಗ್ ಸ್ವೀಕರಿಸುವುದಿಲ್ಲ ಎಂದು ತಿಳಿಸಿದೆ.

ಈಗ ನವೆಂಬರ್ ತಿಂಗಳಿನ ಡೆಲಿವರಿಗಾಗಿ ಬುಕ್ಕಿಂಗ್ ಆರಂಭಿಸಲಾಗಿದೆ. ರಿವೋಲ್ಟ್ ತನ್ನ ಪ್ರಕಟಣೆಯಲ್ಲಿ ನಿಮ್ಮ ಉತ್ಸಾಹವು ಅನಿಯಮಿತವಾಗಿದ್ದರೆ, ಅದಕ್ಕೆ ಪ್ರತಿಯಾಗಿ ರಿವೋಲ್ಟ್ ಸಿಗಲಿದೆ. ನಿಮ್ಮ ಪ್ರೀತಿ ಹಾಗೂ ಬೆಂಬಲಕ್ಕಾಗಿ ಧನ್ಯವಾದಗಳು.

ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ಬುಕ್ಕಿಂಗ್‍ಗಳನ್ನು ಈಗ ಸ್ಥಗಿತಗೊಳಿಸಲಾಗಿದೆ. ಆದರೆ ನವೆಂಬರ್ ಹಾಗೂ ಡಿಸೆಂಬರ್ ತಿಂಗಳ ಬುಕ್ಕಿಂಗ್‌ಗಳನ್ನು ಆರಂಭಿಸಲಾಗಿದೆ ಎಂದು ತಿಳಿಸಿದೆ. ರಿವೋಲ್ಟ್ ಬೈಕುಗಳನ್ನು ಸದ್ಯಕ್ಕೆ ಪುಣೆ ಹಾಗೂ ದೆಹಲಿಯಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ.

2ನೇ ಹಂತದಲ್ಲಿ ಈ ಬೈಕ್ ಅನ್ನು ಬಿಡುಗಡೆಗೊಳಿಸುವಾಗ ದೇಶದ ಇತರ ನಗರಗಳಲ್ಲಿ ಈ ಎಲೆಕ್ಟ್ರಿಕ್ ಬೈಕ್ ಅನ್ನು ಮಾರಾಟ ಮಾಡಲಾಗುವುದು. ರಿವೋಲ್ಟ್ ಕಂಪನಿಯು ಇದುವರೆಗೂ ಉಳಿದ ನಗರಗಳ ಬಿಡುಗಡೆಯ ದಿನವನ್ನು ಬಹಿರಂಗಪಡಿಸಿಲ್ಲ.

ರಿವೋಲ್ಟ್ ಎಲೆಕ್ಟ್ರಿಕ್ ಬೈಕುಗಳ ಬಗ್ಗೆ ಹೇಳುವುದಾದರೆ, ಈ ಎಲೆಕ್ಟ್ರಿಕ್ ಬೈಕ್ ಅನ್ನು ಆರ್‌ವಿ 300, ಆರ್‌ವಿ 400 ಮತ್ತು ಆರ್‌ವಿ 400 ಪ್ರೀಮಿಯಂ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಬೈಕ್‌ಗಳಿಗಾಗಿ ಕ್ರಮವಾಗಿ ರೂ.2999, ರೂ.3499 ಹಾಗೂ ರೂ.3999ಗಳನ್ನು ಒಟ್ಟು 37 ತಿಂಗಳ ಕಾಲ ಪಾವತಿಸಿದರೆ, ಈ ಬೈಕ್ ನಿಮ್ಮದಾಗಲಿದೆ.

ಪೂರ್ತಿ ಹಣವನ್ನು ಒಂದೇ ಬಾರಿ ಪಾವತಿಸಿ ರಿವೋಲ್ಟ್ ಬೈಕುಗಳನ್ನು ಪಡೆಯಲು ಸಾಧ್ಯವಿಲ್ಲ. ಕಂಪನಿಯು ನಿಗದಿಪಡಿಸಿರುವ ಇಎಂಐ ಯೋಜನೆಯನ್ನು ಪಾಲಿಸಬೇಕಾಗುತ್ತದೆ. ಈ ಮೊತ್ತದಲ್ಲಿ ಮೆಂಟೆನೆನ್ಸ್ ನ ಸಂಪೂರ್ಣ ವೆಚ್ಚ, ಬ್ಯಾಟರಿ, ಟಯರ್, ಬಿಡಿಭಾಗಗಳ ನಿರ್ವಹಣಾ ವೆಚ್ಚಗಳು ಸೇರಿವೆ. ನೀವು ಖರ್ಚು ಮಾಡಬೇಕಾಗಿರುವುದು ಈ ಬೈಕ್ ಅನ್ನು ಚಾರ್ಜ್ ಮಾಡಲು ಬೇಕಾಗುವ ವಿದ್ಯುತ್ ಮೇಲೆ ಮಾತ್ರ.

ರಿವೋಲ್ಟ್ ಆರ್‍ವಿ 300 ಇಕೋ ಮೋಡ್‌ನಲ್ಲಿ ಪ್ರತಿ ಗಂಟೆಗೆ 150 ಕಿ.ಮೀ ವೇಗದಲ್ಲಿ ಚಲಿಸಿದರೆ, ಆರ್‌ವಿ 400 ಇದೇ ಮೋಡ್‌ನಲ್ಲಿ 180 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಎಲ್ಲಾ ಬೈಕುಗಳಲ್ಲಿರುವ ಬಹುತೇಕ ಬಿಡಿಭಾಗಗಳು ಒಂದೇ ಆಗಿದ್ದರೂ, ಬ್ಯಾಟರಿಯ ಗಾತ್ರ, ತೂಕ ಹಾಗೂ ಬೆಲೆಯಲ್ಲಿ ಮಾತ್ರ ವ್ಯತ್ಯಾಸಗಳಿವೆ.
MOST READ: ಜೆಸಿಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ರಿವೋಲ್ಟ್ ಇಂಟೆಲಿಕಾರ್ಪ್ ಪ್ರೈ. ಲಿಮಿಟೆಡ್ ಗುರುಗ್ರಾಮದಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ಕಂಪನಿಯ ಉತ್ಪಾದನಾ ಘಟಕವು ಹರಿಯಾಣದ ಮಾನೇಸರ್‌ನಲ್ಲಿದೆ. ಕಂಪನಿಯು ಉತ್ತಮವಾದ ಕಾರ್ಯಕ್ಷಮತೆ ಹಾಗೂ ವಿನ್ಯಾಸವನ್ನು ನೀಡಲು ಬದ್ಧವಾಗಿದೆ.
MOST READ: ಪೆಟ್ರೋಲ್ ಬಂಕ್‍ನಿಂದ ಹೊರಡುವ ಮುನ್ನ ಎಚ್ಚರ..!

ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಆಮದು ಮಾಡಿಕೊಳ್ಳಲಾದ ಬ್ಯಾಟರಿ ಪ್ಯಾಕ್ ಹಾಗೂ ಮೋಟರ್ ಅನ್ನು ಹೊಂದಿದೆ. ಆದರೆ ಬೈಕಿನಲ್ಲಿರುವ ಎಲೆಕ್ಟ್ರಾನಿಕ್ ಕಂಟ್ರೋಲ್ ಯುನಿಟ್ (ಇಸಿಯು) ಹಾಗೂ ಬ್ಯಾಟರಿ ಮ್ಯಾನೇಜ್‍ಮೆಂಟ್ ಸಿಸ್ಟಂ (ಬಿಎಂಎಸ್)ಗಳನ್ನು ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿದೆ.
MOST READ: ಕಾರ್ ಕದ್ದಿದ್ದು ಆಯ್ತು, ಈಗ ಖದೀಮರ ಕಣ್ಣು ಲೊಗೊ ಮೇಲೆ..!

ರಿವೋಲ್ಟ್ ಎಲೆಕ್ಟ್ರಿಕ್ ಬೈಕುಗಳನ್ನು ಖರೀದಿಸುವ ಗ್ರಾಹಕರು ಫೇಮ್ 2 ಯೋಜನೆಯಡಿಯಲ್ಲಿ ಸಬ್ಸಿಡಿ ಪಡೆಯಲಿದ್ದಾರೆ. ಈ ಸಬ್ಸಿಡಿಯನ್ನು, 40 ಕಿ.ಮೀನಿಂದ 80 ಕಿ.ಮೀವರೆಗಿನ ವೇಗದಲ್ಲಿ ಚಲಿಸುವ ಹಾಗೂ ಕನಿಷ್ಠ 50% ಬಿಡಿಭಾಗಗಳನ್ನು ಸ್ಥಳೀಯವಾಗಿ ತಯಾರಿಸಲಾಗಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮೇಲೆ ನೀಡಲಾಗುತ್ತದೆ.


Click it and Unblock the Notifications








