ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ವಿಶೇಷ ಸೌಲಭ್ಯವುಳ್ಳ ಸ್ಟೀಲ್‌ಬರ್ಡ್ ಹೊಸ ಹೆಲ್ಮೆಟ್

ನಮ್ಮ ದೇಶದಲ್ಲಿ ಹೆಲ್ಮೆಟ್ ಖರೀದಿಗೆ ಎಷ್ಟು ಪ್ರಾಮುಖ್ಯತೆ ನೀಡುತ್ತೆವೆ ಎನ್ನುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ಅಮೂಲ್ಯವಾದ ಜೀವಕ್ಕಿಂತ ಮುಖ್ಯವಾಗಿ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬಿದ್ರೆ ಜೇಬು ಖಾಲಿಯಾಗುತ್ತೆ ಎನ್ನುವ ಭಯಕ್ಕಾಗಿ ಅದೆಷ್ಟೋ ಬೈಕ್ ಸವಾರರು ಹೆಲ್ಮೆಟ್ ಬಳಕೆ ಮಾಡುತ್ತಿರುವುದನ್ನು ನಾವೆಲ್ಲಾ ಒಪ್ಪಿಕೊಳ್ಳಬೇಕಾದ ಸತ್ಯ. ಹೀಗಾಗಿ ಬೈಕ್ ಸವಾರರನ್ನು ಸೆಳೆಯಲು ಸ್ಟೀಲ್‌ಬರ್ಡ್ ಸಂಸ್ಥೆಯು ಅತಿ ಕಡಿಮೆ ಬೆಲೆಯಲ್ಲಿ ಬಹುಉಪಯೋಗಿ ಹೆಲ್ಮೆಟ್ ಮಾದರಿಯೊಂದನ್ನು ಬಿಡುಗಡೆ ಮಾಡಿದೆ.

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ವಿಶೇಷ ಸೌಲಭ್ಯವುಳ್ಳ ಸ್ಟೀಲ್‌ಬರ್ಡ್ ಹೊಸ ಹೆಲ್ಮೆಟ್

ದ್ವಿಚಕ್ರ ವಾಹನ ಸವಾರರ ಜೀವರಕ್ಷಕವಾಗಿರುವ ಹೆಲ್ಮೆಟ್ ಬಗ್ಗೆ ಅದೆಷ್ಟೋ ಜಾಗೃತಿ ಅಭಿಯಾನ ಮಾಡಿದ್ರು ಹೆಲ್ಮೆಟ್ ಬಳಕೆ ಮಾಡದೆ ಜೀವ ಬಿಟ್ಟಿರುವ ಅದೆಷ್ಟೋ ದುರಂತಗಳನ್ನು ನಾವು ನೋಡಿದ್ದೇವೆ. ಅದರಲ್ಲೂ ದಂಡದಿಂದ ತಪ್ಪಿಸಿಕೊಳ್ಳಲು ಅಗ್ಗದ ಬೆಲೆಯ ಹೆಲ್ಮೆಟ್‌ಗಳನ್ನು ಬಳಕೆ ಮಾಡುತ್ತಿರುವುದು ಮತ್ತಷ್ಟು ದುರಂತಗಳಿಗೆ ಕಾರಣವಾಗುತ್ತಿದ್ದು, ಗುಣಮಟ್ಟದ ಹೆಲ್ಮೆಟ್ ಬಳಕೆಯೊಂದೆ ಸದ್ಯದ ಪರಿಸ್ಥಿತಿಯನ್ನು ಸುಧಾರಿಸಲು ಸಾಧ್ಯ ಎಂದು ಅರಿತಿರುವ ಸ್ಟೀಲ್‌ಬರ್ಡ್ ಸಂಸ್ಥೆಯು ಹ್ಯಾಂಡ್‌ಫ್ರೀ ಹೆಲ್ಮೆಟ್ ಪರಿಚಯಿಸಿದೆ.

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ವಿಶೇಷ ಸೌಲಭ್ಯವುಳ್ಳ ಸ್ಟೀಲ್‌ಬರ್ಡ್ ಹೊಸ ಹೆಲ್ಮೆಟ್

ಬೈಕ್ ಚಾಲನೆ ವೇಳೆ ಬಹುತೇಕ ಸವಾರರು ಒಂದು ಕೈಯಲ್ಲಿ ಮೊಬೈಲ್ ಮತ್ತೊಂದು ಬೈಕ್ ಹ್ಯಾಂಡಲ್ ಹಿಡಿದು ಚಾಲನೆ ಮಾಡುವುದನ್ನು ಸರ್ವೇ ಸಾಮಾನ್ಯವಾಗಿದೆ. ಇದರಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದು, ಸ್ಟೀಲ್‌ಬರ್ಡ್ ಇದಕ್ಕಾಗಿಯೇ ಹೊಸ ಉಪಾಯ ಮಾಡಿದೆ.

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ವಿಶೇಷ ಸೌಲಭ್ಯವುಳ್ಳ ಸ್ಟೀಲ್‌ಬರ್ಡ್ ಹೊಸ ಹೆಲ್ಮೆಟ್

ಎಸ್‌ಬಿಎ-1 ಹೆಚ್ಎಫ್ ಎನ್ನುವ ಬಹುಉಪಯೋಗಿ ಹ್ಯಾಂಡ್‌ಫ್ರೀ ಹೆಲ್ಮೆಟ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಹೊಂದಿರುವ ಈ ಹೆಲ್ಮೆಟ್ ಮಾದರಿಯು ಸ್ಪೀಕರ್ಸ್ ಜೊತೆಗೆ ಫೋನ್ ನೋಟಿಫಿಕೇಷನ್‌ಗಳನ್ನು ಸವಾರನಿಗೆ ರವಾನಿಸುತ್ತೆ.

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ವಿಶೇಷ ಸೌಲಭ್ಯವುಳ್ಳ ಸ್ಟೀಲ್‌ಬರ್ಡ್ ಹೊಸ ಹೆಲ್ಮೆಟ್

ಜೊತೆಗೆ ಬೈಕ್ ಚಾಲನೆಗೂ ಮುನ್ನ ಸ್ಮಾರ್ಟ್‌ಫೋನ್ ಕನೆಕ್ಟ್ ಮಾಡಿದ್ದಲ್ಲಿ ಬೈಕ್ ಚಾಲನೆ ವೇಳೆ ಬರುವ ಕರೆಗಳನ್ನು ಫೋನ್ ಮುಟ್ಟದೆಯೇ ಹೆಲ್ಮೆಟ್‌ನಲ್ಲಿರುವ ನೀಡಲಾಗಿರುವ ಬಟನ್ ಒತ್ತುವ ಮೂಲಕ ಕರೆಗಳನ್ನು ಸ್ಪೀಕರಿಸಿ ಮಾಡಬಹುದಾಗಿದ್ದು, ಮ್ಯೂಜಿಕ್ ಸ್ಪೀಕರ್ಸ್‌ಗಳನ್ನು ಇದರಲ್ಲಿ ಜೋಡಿಸಲಾಗಿದೆ.

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ವಿಶೇಷ ಸೌಲಭ್ಯವುಳ್ಳ ಸ್ಟೀಲ್‌ಬರ್ಡ್ ಹೊಸ ಹೆಲ್ಮೆಟ್

ಇನ್ನು ಬೈಕ್ ಚಾಲನೆ ವೇಳೆ ಫೋನ್‌ನಲ್ಲಿ ಮಾತನಾಡುವುದನ್ನೇ ನಿಷೇಧ ಮಾಡುತ್ತಿರುವ ವೇಳೆ ಇಂತಹ ಹೆಲ್ಮೆಟ್‌ಗಳಿಂದ ಅಪಾಯ ಹೆಚ್ಚು ಎನ್ನುವ ಮಾತುಗಳು ಸಹ ಕೇಳಿಬರುತ್ತಿದ್ದು, ಒಂದು ಸಮಾಧಾನಕಾರ ಸಂಗತಿ ಅಂದ್ರೆ ಬೈಕ್ ಚಾಲನೆಯಲ್ಲೂ ಮೊಬೈಲ್ ಅನ್ನು ಕೈಯಲ್ಲಿ ಹಿಡಿದುಕೊಂಡು ಚಾಲನೆ ಮಾಡುವುದನ್ನು ಇದರಿಂದ ತಪ್ಪಿಸಬಹುದಾಗಿದೆ.

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ವಿಶೇಷ ಸೌಲಭ್ಯವುಳ್ಳ ಸ್ಟೀಲ್‌ಬರ್ಡ್ ಹೊಸ ಹೆಲ್ಮೆಟ್

ಅಂದಾಹಾಗೆ ಈ ಹೆಲ್ಮೆಟ್ ಬೆಲೆಯನ್ನು ಸ್ಟೀಲ್‌ಬರ್ಡ್ ಸಂಸ್ಥೆಯು ರೂ. 2,589ಕ್ಕೆ ನಿಗದಿಗೊಳಿಸಿದ್ದು, ಒಟ್ಟು ಮೂರು ಬಣ್ಣಗಳಲ್ಲಿ ಖರೀದಿ ಮಾಡಬಹುದಾಗಿದೆ. ರೆಡ್, ಬ್ಲ್ಯಾಕ್ ಮತ್ತು ವೈಟ್ ಬಣ್ಣಗಳಲ್ಲಿ ಲಭ್ಯವಿರುವ ಎಸ್‌ಬಿಎ-1 ಹೆಚ್ಎಫ್ ಹೆಲ್ಮೆಟ್ ಮಾದರಿಯು ಬೇಡಿಕೆಗೆ ಅನುಗುಣವಾಗಿ 58ಸೆಂ.ಮಿ ನಿಂದ 60ಸೆಂ.ಮಿ ಗಾತ್ರದಲ್ಲಿ ದೊರೆಯಲಿವೆ.

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ವಿಶೇಷ ಸೌಲಭ್ಯವುಳ್ಳ ಸ್ಟೀಲ್‌ಬರ್ಡ್ ಹೊಸ ಹೆಲ್ಮೆಟ್

ಸಂಪೂರ್ಣ ವಾಟರ್‌ಪ್ರೂಫ್ ಸೌಲಭ್ಯವನ್ನು ಹೊಂದಿರುವ ಈ ಹೆಲ್ಮೆಟ್ ಬೈಕ್ ಸವಾರರಿಗೆ ಸಾಕಷ್ಟು ಅನುಕೂಲಕರವಾಗಿದ್ದು, ಹೆಲ್ಮೆಟ್ ಹಾಕಿದಾಗಲೂ ಸರಿಯಾಗಿ ಉಸಿರಾಡಲು ಮತ್ತು ಅತಿಯಾಗಿ ಬೆವರುವ ಬೈಕ್ ಸವಾರರಿಗೆ ಇದು ಉತ್ತಮ ಆಯ್ಕೆಯಾಗಿದೆ.

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ವಿಶೇಷ ಸೌಲಭ್ಯವುಳ್ಳ ಸ್ಟೀಲ್‌ಬರ್ಡ್ ಹೊಸ ಹೆಲ್ಮೆಟ್

ಹೆಲ್ಮೆಟ್‌ನಲ್ಲೂ ಎಸಿ ಸೌಲಭ್ಯ ಉಂಟು..!

ಹೆಲ್ಮೆಟ್ ಬಳಕೆ ಅಂದ್ರೆ ಕೆವರಿಗೆ ಅಲರ್ಜಿ ಅಂತಾ ಕಾಣುತ್ತೆ. ಟ್ರಾಫಿಕ್ ಪೊಲೀಸರು ದಂಡ ಹಾಕಿದ್ರು ಪರವಾಗಿಲ್ಲ ಹೆಲ್ಮೆಟ್ ಹಾಕೋದಿಲ್ಲ ಎನ್ನುವರರು ನಮ್ಮ ಸುತ್ತುಮುತ್ತ ಹಲವಾರು ಜನ ಇದ್ದಾರೆ. ಇದಕ್ಕೆ ಅವರು ಕೋಡುವ ಕಾರಣವೇ ಬೇರೆ. ತುಂಬಾ ಹೊತ್ತು ಹೆಲ್ಮೆಟ್ ಹಾಕುವುದರಿಂದ ತಲೆಗೂದಲು ಉದುರುತ್ತೆ ಅಂತಾ ಜೀವ ರಕ್ಷಕ ಹೆಲ್ಮೆಟ್ ಬಳಕೆಗೆ ಹಿಂದೇಟು ಹಾಕುತ್ತಾರೆ. ಆದ್ರೆ ಅದಕ್ಕೆ ಇನ್ಮುಂದೆ ಚಿಂತಿಸಬೇಕಿಲ್ಲ.

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ವಿಶೇಷ ಸೌಲಭ್ಯವುಳ್ಳ ಸ್ಟೀಲ್‌ಬರ್ಡ್ ಹೊಸ ಹೆಲ್ಮೆಟ್

ಹೌದು, ಆಟೋ ಉದ್ಯಮದಲ್ಲಿ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ವಾಹನ ಸವಾರರ ಸುರಕ್ಷತೆಗಾಗಿ ದಿನಕ್ಕೊಂದು ಹೊಸ ಸೌಲಭ್ಯಗಳನ್ನು ಪರಿಚಯಿಸಲಾಗುತ್ತಿದ್ದು, ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗಿರುವ ಫೆಹರ್ ಹೆಲ್ಮೆಟ್ ಉತ್ಪಾದನಾ ಸಂಸ್ಥೆಯು ಬೈಕ್ ಸವಾರರಿಗೆ ಸಹಾಯಕವಾಗಬಲ್ಲ ಹವಾನಿಯಂತ್ರಿತ ಹೆಲ್ಮೆಟ್ ಮಾದರಿಗಳನ್ನು ಪರಿಚಯಿಸುವುದು ಭಾರೀ ಚರ್ಚೆಗೆ ಕಾರಣವಾಗಿದೆ.

MOST READ: ಬ್ರೇಕ್ ಫೇಲ್ ಆದಾಗ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ವಿಶೇಷ ಸೌಲಭ್ಯವುಳ್ಳ ಸ್ಟೀಲ್‌ಬರ್ಡ್ ಹೊಸ ಹೆಲ್ಮೆಟ್

ಫೆಹರ್ ACH-1 ಹೆಸರಿನೊಂದಿಗೆ ಎಸಿ ಸೌಲಭ್ಯ ಹೊಂದಿರುವ ಹೆಲ್ಮೆಟ್ ಪರಿಚಯಿಸಲಾಗಿದ್ದು, ಇದು ವಿಶ್ವದ ಮೊದಲ ಹವಾನಿಯಂತ್ರಿತ ಹೆಲ್ಮೆಟ್ ಮಾದರಿಯ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ ಅಂದ್ರೆ ನೀವು ನಂಬಲೇಬೇಕು.

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ವಿಶೇಷ ಸೌಲಭ್ಯವುಳ್ಳ ಸ್ಟೀಲ್‌ಬರ್ಡ್ ಹೊಸ ಹೆಲ್ಮೆಟ್

ವಾಸ್ತವವಾಗಿ, ಬಹುತೇಕ ಬೈಕ್ ಸವಾರರು ಟ್ರಾಫಿಕ್ ಪೊಲೀಸರು ದಂಡ ಹಾಕುತ್ತಾರೆ ಎನ್ನುವ ಭಯದಿಂದಲೇ ಹೆಲ್ಮೆಟ್ ಬಳಕೆ ಮಾಡುತ್ತಿದ್ದಾರೆ ಹೊರತು, ಸ್ವಯಂ ಪ್ರೇರಣೆಯಿಂದ ಜೀವ ರಕ್ಷಕವಾಗಿ ಕಾರ್ಯನಿರ್ವಹಣೆ ಮಾಡುವ ಹೆಲ್ಮೆಟ್ ಬಳಕೆ ಮಾಡುತ್ತಿರುವ ಬೈಕ್ ಸವಾರರು ತುಂಬಾ ವಿರಳ.

MOST READ: ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ವಿಶೇಷ ಸೌಲಭ್ಯವುಳ್ಳ ಸ್ಟೀಲ್‌ಬರ್ಡ್ ಹೊಸ ಹೆಲ್ಮೆಟ್

ಇದಕ್ಕೆ ಕಾರಣ, ದೀರ್ಘ ಕಾಲದವರೆಗೆ ಹೆಲ್ಮೆಟ್ ಬಳಕೆಗೆ ಮಾಡುವುದರಿಂದ ತಲೆಗೂದಲು ಉದುರುತ್ತೆ ಎಂಬ ಕಾರಣ ಹೇಳುವ ಹಲವು ಬೈಕ್ ಸವಾರರು, ಬೆವರಿನ ಸಮಸ್ಯೆಯಿಂದಾಗಿ ಹೆಲ್ಮೆಟ್ ಉಸಾಬರಿಯೇ ಸಾಕು ಎನ್ನುವಷ್ಟು ರೋಸಿ ಹೋಗಿತ್ತಾರೆ. ಆದ್ರೆ ಅದಕ್ಕೆ ಇನ್ನು ಚಿಂತಿಸಬೇಕಿಲ್ಲ.

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ವಿಶೇಷ ಸೌಲಭ್ಯವುಳ್ಳ ಸ್ಟೀಲ್‌ಬರ್ಡ್ ಹೊಸ ಹೆಲ್ಮೆಟ್

ಬೈಕ್ ಪ್ರಿಯರ ಎಸಿ ಹೆಲ್ಮೆಟ್..!

ವಿಶ್ವದರ್ಜೆಯ ಹೆಲ್ಮೆಟ್ ಉತ್ಪನ್ನಗಳನ್ನು ಪರಿಚಯಿಸುತ್ತಿರುವ ಫೆಹರ್ ಸಂಸ್ಥೆಯು ಈಗಾಗಲೇ ಹಲವು ಬಗೆಯ ಹೆಲ್ಮೆಟ್‌ಗಳನ್ನು ಪರಿಚಯಿಸಿದ್ದು, ಇದೀಗ ಬೈಕ್ ಸವಾರರ ನೆರವಿಗೆ ಬರುವಂತಹ ಹವಾನಿಯಂತ್ರಿತ ಹೆಲ್ಮೆಟ್‌ಗಳನ್ನು ಅಭಿವೃದ್ಧಿಗೊಳಿಸಿ ಮಾರಾಟಕ್ಕೆ ಸಿದ್ದವಾಗಿದೆ.

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ವಿಶೇಷ ಸೌಲಭ್ಯವುಳ್ಳ ಸ್ಟೀಲ್‌ಬರ್ಡ್ ಹೊಸ ಹೆಲ್ಮೆಟ್

ತಲೆ ಬಿಸಿ ಬೇಡ..

ಫೆಹರ್ ACH-1 ಹೆಲ್ಮೆಟ್ ಬಳಕೆಯಿಂದ ಬೆವರಿನ ಸಮಸ್ಯೆ ನಿಮ್ಮ ಬಳಿ ಸುಳಿಯಲಾರದು. ಯಾಕೆಂದ್ರೆ ಹೆಲ್ಮೆಟ್ ಒಳಭಾಗದಲ್ಲಿ 15 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚು ಬಿಸಿ ಉತ್ಪತ್ತಿಯಾದಲ್ಲಿ ಸ್ವಯಂ ನಿಯಂತ್ರಿತ ಎಸಿ ಕಾರ್ಯನಿರ್ವಹಣೆ ಶುರುವಾಗುತ್ತೆ.

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ವಿಶೇಷ ಸೌಲಭ್ಯವುಳ್ಳ ಸ್ಟೀಲ್‌ಬರ್ಡ್ ಹೊಸ ಹೆಲ್ಮೆಟ್

ಇದು ಕೆಲವೇ ನಿಮಿಷಗಳಲ್ಲಿ ಹೆಲ್ಮೆಟ್ ಒಳಭಾಗದಲ್ಲಿ ಬಿಸಿ ಗಾಳಿಯನ್ನ ಹೊರಹಾಕುವುದಲ್ಲದೇ ತಲೆ ತಂಪಾಗುವಂತೆ ಮಾಡುತ್ತೆ. ಈ ಮೂಲಕ ದೂರದ ಪ್ರಯಾಣದಲ್ಲೂ ಯಾವುದೇ ಕಿರಿಕಿರಿಯಾಗದಂತೆ ಬೈಕ್ ಸವಾರಿಗೆ ನೆರವಾಗುತ್ತೆ ಎನ್ನಬುಹುದು.

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ವಿಶೇಷ ಸೌಲಭ್ಯವುಳ್ಳ ಸ್ಟೀಲ್‌ಬರ್ಡ್ ಹೊಸ ಹೆಲ್ಮೆಟ್

ಹೇಗೆ ಕಾರ್ಯನಿರ್ವಹಿಸುತ್ತೆ?

ಹೆಲ್ಮೆಟ್ ಹಿಂಭಾಗದಲ್ಲಿ ಎಸಿ ಯುನಿಟ್ ಅಳವಡಿಸಲಾಗಿದ್ದು, ಇದರಲ್ಲಿ ರೈಡರ್ಸ್ ಮೋಟಾರ್‌ಸೈಕಲ್ ಸಂಸ್ಥೆಯು ಬ್ಯಾಟರಿ ಬಳಕೆ ಮಾಡಲಾಗಿದೆ. ಇದು ರೀಚಾರ್ಜ್ ಮಾಡಬಹುದು ಬ್ಯಾಟರಿ ಮಾದರಿಯಾಗಿದ್ದು, ಒಂದು ಬಾರಿ ಚಾರ್ಜ್ ಮಾಡಿದಲ್ಲಿ 6 ಗಂಟೆಗಳ ಕಾಲ ಕಾರ್ಯನಿರ್ವಹಣೆ ಮಾಡಬಲ್ಲದು.

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ವಿಶೇಷ ಸೌಲಭ್ಯವುಳ್ಳ ಸ್ಟೀಲ್‌ಬರ್ಡ್ ಹೊಸ ಹೆಲ್ಮೆಟ್

ನಿಮಗೆ ಅಗತ್ಯವಿದ್ದಲ್ಲಿ ಹೆಚ್ಚುವರಿಯಾಗಿ ಬ್ಯಾಕ್ ಅಪ್ ಸಹ ಖರೀದಿ ಮಾಡಬಹುದಾಗಿದ್ದು, ಬೇರೆ ಬೇರೆ ಬೆಲೆಗಳಲ್ಲಿ ಲಭ್ಯವಿರುವ 3000mAh ಮತ್ತು 12,00mAh ಪವರ್ ಪ್ರೇರಿತ ಬ್ಯಾಕ್ ಅಪ್ ಬ್ಯಾಟರಿಗಳನ್ನು ಆಯ್ಕೆ ಮಾಡುವುದರಿಂದ ದೂರದ ಪ್ರಯಾಣದ ವೇಳೆ ಇವು ಸಹಕಾರಿಯಾಗುತ್ತವೆ.

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ವಿಶೇಷ ಸೌಲಭ್ಯವುಳ್ಳ ಸ್ಟೀಲ್‌ಬರ್ಡ್ ಹೊಸ ಹೆಲ್ಮೆಟ್

ಹಗುರುವಾಗಿದೆ ಈ ಎಸಿ ಹೆಲ್ಮೆಟ್...

ಫೆಹರ್ ಹೆಲ್ಮೆಟ್‌ನಲ್ಲಿ ಎಸಿ ಯುನಿಟ್ ಬಳಕೆ ಮಾಡಿದ್ದರೂ ಸಹ ಸಾಮಾನ್ಯ ಹೆಲ್ಮೆಟ್‌ನಂತೆಯೇ ಅತಿ ಹಗುರವಾಗಿದ್ದು, ಗುಣಮಟ್ಟದ ಮೇಲ್ಪದರದೊಂದಿಗೆ 1 ಕೆ.ಜಿ 450 ಗ್ರಾಂ ತೂಕ ಪಡೆದುಕೊಂಡಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಇತರೆ ದುಬಾರಿ ಹೆಲ್ಮೆಟ್‌ಗಳಿಗೆ ಹೋಲಿಕೆ ಮಾಡಿದಲ್ಲಿ ಇದು ಉತ್ತಮ ಎನ್ನಬಹುದು.

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ವಿಶೇಷ ಸೌಲಭ್ಯವುಳ್ಳ ಸ್ಟೀಲ್‌ಬರ್ಡ್ ಹೊಸ ಹೆಲ್ಮೆಟ್

ಸೌಲಭ್ಯಕ್ಕೆ ತಕ್ಕಂತೆ ಹೆಲ್ಮೆಟ್ ಬೆಲೆ..!

ಎಸಿ ಸೌಲಭ್ಯ ಹೊಂದಿರುವ ಈ ಹೆಲ್ಮೆಟ್ ತುಸು ದುಬಾರಿ ಎನ್ನಿಸಿದರೂ ನೀಡಿರುವ ಸೌಲಭ್ಯಕ್ಕೆ ಅದು ದುಬಾರಿ ಆಗದೇ ಇರಲಾರದು. ಸದ್ಯ ಮಾರುಕಟ್ಟೆಯಲ್ಲಿ ರೂ.42 ಸಾವಿರ ಬೆಲೆ ಹೊಂದಿರುವ ಈ ಹೆಲ್ಮೆಟ್ ಸೂಪರ್ ಬೈಕ್ ಸವಾರರ ಆಕರ್ಷಣೆ ಕಾರಣವಾಗಿದೆ.

ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ವಿಶೇಷ ಸೌಲಭ್ಯವುಳ್ಳ ಸ್ಟೀಲ್‌ಬರ್ಡ್ ಹೊಸ ಹೆಲ್ಮೆಟ್

ಪ್ರಸ್ತುತ ಮಾರುಕಟ್ಟೆಯಲ್ಲಿ ವಿಶ್ವದರ್ಜೆಯ ಹಲವು ಐಷಾರಾಮಿ ಹೆಲ್ಮೆಟ್‌ಗಳು ಮಾರಾಟಕ್ಕಿದ್ದು, ಸಾವಿರದಿಂದ ಲಕ್ಷದ ತನಕ ಹೆಲ್ಮೆಟ್ ಬೆಲೆ ಇವೆ ಅಂದ್ರೆ ನೀವು ನಂಬಲೇಬೇಕು. ಅವುಗಳಲ್ಲಿ ಫೆಹರ್ ACH-1 ಹೆಲ್ಮೆಟ್ ಮೊದಲ ಬಾರಿಗೆ ಎಸಿ ಸೌಲಭ್ಯ ಹೊಂದಿದೆ ಎನ್ನುವುದೇ ವಿಶೇಷ.

Most Read Articles

Kannada
English summary
Steelbird SBA-1 HF Hands-Free Helmet Launched In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X