ಜುಲೈ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಬೈಕುಗಳಿವು
2019ರ ಜುಲೈ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಬೈಕುಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಈ ಪಟ್ಟಿಯಲ್ಲಿ ಹೀರೋ ಮೋಟೊಕಾರ್ಪ್ ಬೈಕುಗಳು ಎಂದಿನಂತೆ ಅಗ್ರಸ್ಥಾನವನ್ನು ಅಲಂಕರಿಸಿವೆ. ಹೀರೋ ಮೋಟೊಕಾರ್ಪ್ ಕಂಪನಿಯ ಸ್ಪ್ಲೆಂಡರ್ ಹಾಗೂ ಹೆಚ್‍ಎಫ್ ಡೀಲಕ್ಸ್ ಗಳು ಮೊದಲ ಎರಡು ಸ್ಥಾನದಲ್ಲಿವೆ. ಹೋಂಡಾ ಕಂಪನಿಯ ಸಿಬಿ ಶೈನ್ ಮೂರನೇ ಸ್ಥಾನದಲ್ಲಿದೆ.

ಹೀರೋ ಸ್ಪ್ಲೆಂಡರ್ 2019 ರ ಜುಲೈ ತಿಂಗಳಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ. ಹೀರೋ ಸ್ಪ್ಲೆಂಡರ್ ಪ್ರಯಾಣಿಕರ ಮೋಟಾರ್ ಸೈಕಲ್ ಸೆಗ್‍ಮೆಂಟಿನಲ್ಲಿ ಬಹಳ ಜನಪ್ರಿಯವಾದ ಬೈಕ್ ಆಗಿದೆ.
ಕಂಪನಿಯು ಜುಲೈ ತಿಂಗಳಿನಲ್ಲಿ 1,78,907 ಯುನಿಟ್ ಬೈಕುಗಳನ್ನು ಮಾರಾಟ ಮಾಡಿದೆ. ಜುಲೈ 2018ರಲ್ಲಿ 2.60 ಬೈಕುಗಳನ್ನು ಮಾರಾಟ ಮಾಡಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 30% ನಷ್ಟು ಕುಸಿತ ಉಂಟಾಗಿದೆ.

ಹೀರೋ ಹೆಚ್ಎಫ್ ಡೀಲಕ್ಸ್ ಎರಡನೇ ಸ್ಥಾನದಲ್ಲಿದೆ. ಜುಲೈ ತಿಂಗಳಿನಲ್ಲಿ ಈ ಬೈಕಿನ 1,69,632 ಯುನಿಟ್ ಮಾರಾಟ ಮಾಡಲಾಗಿದೆ. ಹೆಚ್‌ಎಫ್ ಡೀಲಕ್ಸ್ ದೇಶಿಯ ಮಾರುಕಟ್ಟೆಯಲ್ಲಿ ಸ್ಪ್ಲೆಂಡರ್ ಜೊತೆಗೆ ಮಾರಾಟವಾಗುವ ಪ್ರಯಾಣಿಕರ ಮಟ್ಟದ ಮೋಟಾರ್‌ಸೈಕಲ್ ಆಗಿದೆ.
| Rank | Motorcycle | Jul-19 | Jul-18 | Diff% |
| 1 | Hero Splendor | 1,78,907 | 2,60,865 | -31.42 |
| 2 | Hero HF Deluxe | 1,69,632 | 1,83,694 | -7.66 |
| 3 | Honda CB Shine | 94,559 | 86,160 | 9.75 |
| 4 | Hero Glamour | 71,160 | 74,553 | -4.55 |
| 5 | Bajaj Pulsar | 62,469 | 63,388 | -1.45 |
| 6 | Bajaj Platina | 52,489 | 40,074 | 30.98 |
| 7 | Hero Passion | 43,439 | 88,354 | -50.84 |
| 8 | Bajaj CT 100 | 39,728 | 76,776 | -48.25 |
| 9 | Royal Enfield Classic 350 | 29,439 | 44,054 | -33.18 |
| 10 | Honda CB Unicorn | 28,250 | 24,753 | 14.13 |

ಹೀರೋ ಹೆಚ್ಎಫ್ ಡೀಲಕ್ಸ್ 2019ರ ಜುಲೈನಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದ್ದರೂ, ಮಾರಾಟದಲ್ಲಿ ಕುಸಿತವನ್ನು ದಾಖಲಿಸಿದೆ. ಆದರೆ, ಹೀರೋ ಹೆಚ್ಎಫ್ ಡೀಲಕ್ಸ್ ಮಾರಾಟದ ಕುಸಿತವು, ಸ್ಪ್ಲೆಂಡರ್ ಬೈಕುಗಳಿಗೆ ಹೋಲಿಸಿದರೆ, 7%ನಷ್ಟು ಹೆಚ್ಚಾಗಿದೆ.

ಹೋಂಡಾ ಸಿಬಿ ಶೈನ್ 2019ರ ಜುಲೈ ತಿಂಗಳಲ್ಲಿ ಬೈಕ್ ಮಾರಾಟದ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಸಿಬಿ ಶೈನ್ ಹಿಂದಿನ ತಿಂಗಳಲ್ಲಿ ಹೆಚ್ಚಿನ ಮಾರಾಟವನ್ನು ದಾಖಲಿಸಿದೆ. ಕಂಪನಿಯು 2019ರ ಜುಲೈನಲ್ಲಿ 94,559 ಯುನಿಟ್ ಬೈಕುಗಳನ್ನು ಮಾರಾಟ ಮಾಡಲಾಗಿದ್ದರೆ, ಕಳೆದ ವರ್ಷ ಇದೇ ತಿಂಗಳಲ್ಲಿ 86,160 ಯುನಿಟ್‍ಗಳು ಮಾರಾಟವಾಗಿದ್ದವು.

ಈ ಪಟ್ಟಿಯ ಮಧ್ಯ ಭಾಗದಲ್ಲಿ ಹೀರೋ ಗ್ಲಾಮರ್, ಬಜಾಜ್ ಪಲ್ಸರ್, ಬಜಾಜ್ ಪ್ಲಾಟಿನಾ ಹಾಗೂ ಹೀರೋ ಪ್ಯಾಶನ್ ಬೈಕುಗಳಿವೆ. ಈ ಬೈಕುಗಳು ಕ್ರಮವಾಗಿ ನಾಲ್ಕು, ಐದು, ಆರು ಹಾಗೂ ಏಳನೇ ಸ್ಥಾನಗಳಲ್ಲಿವೆ.

ಹೀರೋ ಗ್ಲಾಮರ್ ಹಿಂದಿನ ತಿಂಗಳಲ್ಲಿ 71,160 ಯುನಿಟ್ ಮಾರಾಟವನ್ನು ದಾಖಲಿಸಿದೆ. ಈ ಪ್ರಮಾಣವು 2019ರ ಜೂನ್‌ನಲ್ಲಿನ ಬಜಾಜ್ ಪಲ್ಸರ್ ಮಾರಾಟಕ್ಕಿಂತ ಹೆಚ್ಚಾಗಿದೆ. ಜುಲೈ ತಿಂಗಳಿನಲ್ಲಿ ಬಜಾಜ್ ಪಲ್ಸರ್‍ನ 62,469 ಯುನಿಟ್‌ಗಳ ಮಾರಾಟವಾಗಿದೆ.
MOST READ: ಭಾರತದ ವಿವಿಧ ರಾಜ್ಯಗಳ ಪೊಲೀಸರ ಬಳಿಯಿರುವ ಬೈಕುಗಳಿವು

2019ರ ಜುಲೈ ತಿಂಗಳಲ್ಲಿ ಬಜಾಜ್ ಪ್ಲಾಟಿನಾದ 52,489 ಹಾಗೂ ಹೀರೋ ಪ್ಯಾಶನ್ ಬೈಕಿನ 43,439 ಯುನಿಟ್‍ಗಳ ಮಾರಾಟವಾಗಿದೆ. ಈ ಪಟ್ಟಿಯಲ್ಲಿ ಬಜಾಜ್ ಸಿಟಿ 100 ಎಂಟನೇ ಸ್ಥಾನದಲ್ಲಿದ್ದು, ಜುಲೈ ತಿಂಗಳಿನಲ್ಲಿ 39,728 ಯುನಿಟ್‌ಗಳ ಮಾರಾಟವಾಗಿದೆ.
MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

29,439 ಯುನಿಟ್ಗಳ ಮಾರಾಟದೊಂದಿಗೆ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ ಒಂಬತ್ತನೇ ಸ್ಥಾನದಲ್ಲಿದೆ. 28,250 ಯುನಿಟ್‌ಗಳೊಂದಿಗೆ ಹೋಂಡಾ ಸಿಬಿ ಯೂನಿಕಾರ್ನ್ ಹತ್ತನೇ ಸ್ಥಾನದಲ್ಲಿದೆ. ಈ ಸ್ಥಾನದಲ್ಲಿದ್ದ ಟಿವಿಎಸ್ ಅಪಾಚೆಯ ಸ್ಥಾನಕ್ಕೆ ಕಾಲಿಟ್ಟಿರುವ ಹೋಂಡಾ ಸಿಬಿ ಯೂನಿಕಾರ್ನ್, ಜೂನ್ ತಿಂಗಳಿಗಿಂತ 14%ನಷ್ಟು ಹೆಚ್ಚಿನ ಮಾರಾಟವನ್ನು ದಾಖಲಿಸಿದೆ.
MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಕಳೆದ ಕೆಲವು ತಿಂಗಳುಗಳಿಂದ ಭಾರತದಲ್ಲಿನ ಹೆಚ್ಚು ಮಾರಾಟವಾಗುವ ಬೈಕುಗಳ ಪಟ್ಟಿ ಬಹುತೇಕ ಬದಲಾಗದೆ ಹಾಗೆಯೇ ಮುಂದುವರೆದಿದೆ. ವಾಹನ ಉದ್ಯಮವು ಸದ್ಯಕ್ಕೆ ನಿಧಾನಗತಿಯ ಪ್ರಗತಿಯನ್ನು ಕಾಣುತ್ತಿದೆ. ಇದು ದೇಶದ ಹೆಚ್ಚಿನ ವಾಹನ ತಯಾರಕ ಕಂಪನಿಗಳ ಮಾರಾಟದ ಮೇಲೆ ಪರಿಣಾಮ ಬೀರಿದೆ. ಮುಂಬರುವ ಹಬ್ಬದ ವೇಳೆಗೆ, ಉದ್ಯಮವು ಮತ್ತೆ ಚೇತರಿಕೆ ಕಾಣಲಿದೆ ಎಂದು ಉದ್ಯಮದ ಬಗ್ಗೆ ತಿಳಿದಿರುವವರು ಹೇಳುತ್ತಾರೆ.


Click it and Unblock the Notifications