ಹೆಚ್ಚಿದ ಉದ್ಯೋಗ ಅಭದ್ರತೆ- ಹೊಸ ಸ್ಕೂಟರ್‌ಗಳ ಮಾರಾಟದ ಮೇಲೆ ವ್ಯತರಿಕ್ತ ಪರಿಣಾಮ
ದೇಶಿಯ ಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ ಹೊಸ ವಾಹನಗಳ ಮಾರಾಟ ಪ್ರಮಾಣದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. 11 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸ್ಕೂಟರ್‌ಗಳ ಮಾರಾಟದಲ್ಲಿ ದಾಖಲೆಯ ಕುಸಿತವಾಗಿದ್ದು, ಕಾರುಗಳ ಮಾರಾಟದಲ್ಲೂ ಅಷ್ಟಾಗಿ ಬೆಳವಣಿಗೆ ಕಂಡುಬರದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಯಾವುದೇ ಒಂದು ಉದ್ಯಮದಲ್ಲಿ ವರ್ಷದಿಂದ ವರ್ಷಕ್ಕೆ ದುಪ್ಪಟ್ಟು ಪ್ರಮಾಣದ ಬೆಳವಣಿಗೆಯನ್ನು ಬಯಸುವುದು ತಪ್ಪಲ್ಲ. ಆದ್ರೆ ಇತರೆ ಉದ್ಯಮ ವಲಯಗಳಿಂತ ತುಸು ಭಿನ್ನ ಎನ್ನಿಸುವ ಆಟೋ ಉದ್ಯಮದಲ್ಲಿ ನಿರಂತರವಾಗಿ ಒಂದೇ ರೀತಿಯ ಬೆಳವಣಿಗೆಯನ್ನು ಕಾಯ್ದುಕೊಳ್ಳುವುದು ತುಸು ಕಷ್ಟಸಾಧ್ಯ. ಯಾಕೆಂದ್ರೆ ಅದು ಗ್ರಾಹಕರ ಆಯ್ಕೆ ಮತ್ತು ಖರೀದಿಸುವ ಶಕ್ತಿಯ ಮೇಲೆ ಸಂಪೂರ್ಣ ಅವಲಂಬನೆಯಾಗಿದ್ದು, ಕಳೆದ ಕೆಲ ವರ್ಷಗಳಿಂದ ಮಾರುಕಟ್ಟೆಯಲ್ಲಿ ತುಸು ಬಿಗುವಿನ ವಾತಾವರಣ ನಿರ್ಮಾಣ ಮಾಡಿದೆ ಎನ್ನುವುದು ವಾಸ್ತವಾಂಶ.

ಸದ್ಯ ಮಾಹಿತಿಗಳ ಪ್ರಕಾರ, 2018-19ರ ಆರ್ಥಿಕ ವರ್ಷದಲ್ಲಿ ದೇಶಾದ್ಯಂತ ಒಟ್ಟು 67 ಲಕ್ಷ ಸ್ಕೂಟರ್‌ಗಳು ಮಾರಾಟವಾಗಿದ್ದು, ಇದು ಈ ಹಿಂದಿನ ಆರ್ಥಿಕ ವರ್ಷದ ಸ್ಕೂಟರ್ ಮಾರಾಟ ಪ್ರಮಾಣಕ್ಕೆ ಹೊಲಿಕೆ ಮಾಡಿದ್ದಲ್ಲಿ ಶೇ.0.27ರಷ್ಟು ಕುಸಿತ ಕಂಡುಬಂದಿದೆ.

ಅರೇ, ಕೇವಲ ಶೇ.0.27ರಷ್ಟು ಸ್ಕೂಟರ್ ಮಾರಾಟ ಇಳಿಕೆ ಕಂಡುಬಂದಲ್ಲಿ ಉದ್ಯೋಗ ಅಭದ್ರತೆಯೇ ಹೇಗೆ ಕಾರಣ ಎಂಬ ಪ್ರಶ್ನೆ ಮೂಡಬಹುದು. ಯಾಕೆಂದ್ರೆ ಹೊಸ ಸ್ಕೂಟರ್‌ಗಳು ಅತಿ ಹೆಚ್ಚು ಮಾರಾಟವಾಗುವುದೇ ಮೆಟ್ರೋ ನಗರಗಳಲ್ಲಿ ಮತ್ತು 2ನೇ ದರ್ಜೆಯ ಮಹಾನಗರಗಳಲ್ಲಿ ಎನ್ನುವುದು ನಿಮಗೆಲ್ಲಾ ಗೊತ್ತಿರುವ ವಿಚಾರ.

ಹೀಗಿರುವಾಗ ಸ್ಕೂಟರ್ ಮಾರಾಟದಲ್ಲಿ ಕಳೆದ 11 ವರ್ಷಗಳಿಂದ ಸತತ ಏರಿಕೆ ಕಂಡಿತ್ತು. ಆದ್ರೆ ಕಳೆದ 2018-19ರ ಆರ್ಥಿಕ ವರ್ಷದಲ್ಲಿ ಇದು ಮೊದಲ ಬಾರಿಗೆ ದಾಖಲೆ ಪ್ರಮಾಣದಲ್ಲಿ ಇಳಿಕೆ ಕಂಡಿದ್ದು, ಕೇಂದ್ರ ಸರ್ಕಾರವು ಜಾರಿಗೆ ತಂದ ಜಿಎಸ್‌ಟಿ ನಿರ್ಣಯವು ಐಟಿ ವಲಯದ ಮೇಲೆ ಭಾರೀ ಪರಿಣಾಮ ಬೀರಿದೆ.

ಜಿಎಸ್‌ಟಿ ಜಾರಿಯಿಂದಾಗಿ ಮೆಟ್ರೋ ನಗರಗಳಲ್ಲಿ ವ್ಯಾಪಕವಾಗಿ ಹರಡಿಕೊಂಡಿರುವ ಐಟಿ ವಲಯದ ಮೇಲೆ ಪರಿಣಾಮ ಬೀರಿದ್ದು, ಇದಕ್ಕೆ ವ್ಯತರಿಕ್ತ ಎಂಬಂತೆ ಐಟಿ ವಲಯದಲ್ಲಿ ಲಕ್ಷಾಂತರ ಉದ್ಯೋಗಗಳು ಕಡಿತಗೊಳ್ಳುತ್ತಿವೆ. ಹೀಗಾಗಿ ಉದ್ಯೋಗ ಅಭದ್ರತೆಯಲ್ಲಿರುವವರು ಹೊಸ ವಾಹನ ಖರೀದಿ ಯೋಜನೆಯನ್ನು ಮುಂದಕ್ಕೆ ಹಾಕುತ್ತಿದ್ದು, ಇದು ವಾಹನ ಮಾರಾಟ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.
MOST READ: ನೋ ಪಾರ್ಕಿಂಗ್‌ನಲ್ಲಿದ್ದ ಹೋಂಡಾ ಡಿಯೋ ಸ್ಕೂಟರ್ ಪೀಸ್ ಪೀಸ್ ಮಾಡಿದ ಪೊಲೀಸ್..!

ಇದರ ಪರಿಣಾಮವಾಗಿ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳು ನಷ್ಟ ಅನುಭವಿಸುತ್ತಿದ್ದು, ಮಾರಾಟವಾಗದೇ ಸಂಗ್ರವಾಗಿರುವ ಸ್ಟಾಕ್ ಇದೀಗ ಆರ್ಥಿಕವಾಗಿ ಹೊರೆಯಾಗುತ್ತಿದೆ. ಹೀಗಾಗಿ ಮೆಟ್ರೋ ಮತ್ತು 2ನೇ ದರ್ಜೆಯ ಮಹಾನಗರಗಳಲ್ಲಿ ಬಹುತೇಕ ಆಟೋ ಡೀಲರ್ಸ್‌ಗಳು ಹೊಸ ವಾಹನಗಳ ಮಾರಾಟದಲ್ಲಿ ನಿಗದಿತ ಗುರಿಮುಟ್ಟಲು ಸಾಧ್ಯವಾಗದೇ ನಷ್ಟಕ್ಕೆ ಸಿಲುಕಿದ್ದಾರೆ.

ಇದರ ಜೊತೆಗೆ ಹೆಚ್ಚುತ್ತಿರುವ ಇಂಧನಗಳ ಬೆಲೆ, ಹೊಸ ವಾಹನಗಳ ನಿರ್ವಹಣೆ, ಟ್ರಾಫಿಕ್ ಸಮಸ್ಯೆ ಮತ್ತು ವರದಾನವಾಗುತ್ತಿರುವ ಮೆಟ್ರೋ ಸೇವೆಗಳು ಕೂಡಾ ಹೊಸ ವಾಹನ ಖರೀದಿಗೆ ಹಿನ್ನೆಡೆಯಾಗುತ್ತಿದ್ದು, ಇದರಿಂದ ಮುಂಬರುವ ದಿನಗಳಲ್ಲಿ ಆಟೋ ಉದ್ಯಮದಲ್ಲಿ ಮತ್ತಷ್ಟು ಉದ್ಯೋಗ ಕಡಿತವಾಗುವ ಭೀತಿ ಎದುರಾಗಿದೆ.
MOST READ: ಹೊಸ ಬೈಕ್ ಹೊಸ ರೂಲ್ಸ್- ಸಿಬಿಎಸ್ ಮತ್ತು ಎಬಿಎಸ್ ಇಲ್ಲದ ಬೈಕ್ ಖರೀದಿ ಬೇಡವೇ ಬೇಡ..!

ಆದ್ರೆ ನುರಿತ ಆರ್ಥಿಕ ತಜ್ಞರ ಪ್ರಕಾರ ಲೋಕಸಭಾ ಚುನಾವಣೆಯ ನಂತರ ಆಟೋ ಉದ್ಯಮದಲ್ಲಿ ಚೇತರಿಕೆ ಕಂಡುಬರುವ ವಿಶ್ವಾಸ ವ್ಯಕ್ತಪಡಿಸಿದ್ದು, ಆಟೋ ಉದ್ಯಮದಲ್ಲಿ ಆಗುತ್ತಿರುವ ನಿರಂತರ ಬದಲಾವಣೆಗಳಿಂದಾಗಿಯೇ ಹೊಸ ವಾಹನ ಖರೀದಿ ಪ್ರಕ್ರಿಯೆಗೆ ತುಸು ಹಿಂದೆ ಬಿದ್ದಿದೆ ಎಂದಿದ್ದಾರೆ.

ಇನ್ನು ಮೆಟ್ರೋ ಮತ್ತು 2ನೇ ದರ್ಜೆಯ ಮಹಾನಗರಗಳಲ್ಲಿ ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿ ಜೋರಾಗಿದ್ದು, ಅಚ್ಚರಿ ಎಂಬಂತೆ ಕಳೆದ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ತುಸು ಬೆಳವಣಿಗೆ ಕಂಡುಬಂದಿದೆ.
Source: TOI


Click it and Unblock the Notifications