ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಶಿಯೋಮಿ

ಸ್ಮಾರ್ಟ್ ಫೋನ್‍‍ಗಳಿಗೆ ಹೆಸರುವಾಸಿಯಾದ ಶಿಯೋಮಿ ಕಂಪನಿಯು ಹೊಸ ಹಿಮೋ ಹೆಚ್ 1 ಎಲೆಕ್ಟ್ರಿಕ್ ಸೈಕಲ್ ಅನ್ನು ಪರಿಚಯಿಸಿದೆ. ಈ ಶಿಯೋಮಿ ವಾಹನವನ್ನು ಸುಲಭವಾಗಿ ಕೊಂಡೊಯ್ಯುವಂತೆ ವಿನ್ಯಾಸಗೊಳಿಸಲಾಗಿದೆ.

ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಶಿಯೋಮಿ

ಇದರ ಬೆಲೆ 425 ಡಾಲರ್ ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಸುಮಾರು ರೂ.30,000ಗಳಾಗುತ್ತದೆ. ಕಡಿಮೆ ತೂಕವನ್ನು ಹೊಂದಿರುವ ಈ ಮುದ್ದಾದ ಸೈಕಲ್‍‍ನ ಒಟ್ಟು ತೂಕವು 13 ಕೆ.ಜಿಗಳಾಗಿದೆ.

ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಶಿಯೋಮಿ

ಈ ಸೈಕಲ್ ಅನ್ನು ಎ3 ಗಾತ್ರದ ಕಾಗದಕ್ಕಿಂತ ಚಿಕ್ಕದಾಗಿ ಫೋಲ್ಡ್ ಮಾಡಬಹುದಾಗಿದೆ. ಫ್ರೇಮ್‌ನ ಕೆಳಗೆ ಮಡಚುವ ಎರಡು ವ್ಹೀಲ್‍‍ಗಳೊಂದಿಗೆ ಇದರ ಫೋಲ್ಡ್ ಮಾಡಬಹುದಾದ ಗುಣಗಳು ಕಂಡುಬರುತ್ತವೆ. ಫ್ರೇಮ್ ಸ್ವತಃ ಅರ್ಧದಷ್ಟು ಫೋಲ್ಡ್ ಆಗುತ್ತದೆ.

ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಶಿಯೋಮಿ

ನಂತರ ಸೀಟ್ ಪೋಸ್ಟ್ ಹಾಗೂ ಸೀಟ್ ಸಹ ಫೋಲ್ಡ್ ಆಗುತ್ತದೆ. ಹ್ಯಾಂಡಲ್‌ಬಾರ್‌ಗಳು ಫ್ಲಾಟ್ ಆಗಿ ಫೋಲ್ಟ್ ಆಗುತ್ತವೆ. ಪ್ರತಿಯೊಂದು ಫೋಲ್ಡಿಂಗ್ ಮೆಕಾನಿಸಂ ಇನ್ ಬಿಲ್ಟ್ ಲಾಕ್ ಅನ್ನು ಹೊಂದಿದ್ದು ಫೋಲ್ಡ್ ಆಗಿರುವುದನ್ನು ಭದ್ರಪಡಿಸುತ್ತವೆ.

ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಶಿಯೋಮಿ

ಶಿಯೋಮಿ ಎಲೆಕ್ಟ್ರಿಕ್ ಸೈಕಲ್ ಹಿಮೋ ಹೆಚ್ 1 ತನ್ನದೇ ಆದ ಕ್ಯಾರಿ ಕೇಸ್ ಅನ್ನು ಹೊಂದಿದೆ. ಬೋರ್ಡ್ ಫೀಚರ್‍‍ಗಳಲ್ಲಿ ಅಡ್ಜಸ್ಟಬಲ್ ಹ್ಯಾಂಡಲ್‌ಬಾರ್‌, ಎಲ್‌ಇಡಿ ಸ್ಪೀಡೋಮೀಟರ್ ಹಾಗೂ ಬ್ಯಾಟರಿ ಮೀಟರ್‍‍ಗಳಿವೆ.

ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಶಿಯೋಮಿ

ಈ ಸೈಕಲ್ ಹೆಡ್‌ಲ್ಯಾಂಪ್ ಸ್ವಿಚ್‍ನ ಸ್ಥಿತಿ, ಬ್ಯಾಟರಿ ಸ್ಥಿತಿ ಹಾಗೂ ಸ್ಪೀಡ್ ಮಾಹಿತಿಯನ್ನು ನೀಡುವ ಹೆಚ್‌ಡಿ ವಾಟರ್‍‍ಪ್ರೂಫ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಡಿಸ್‍‍ಪ್ಲೇಯನ್ನು ಹೊಂದಿದೆ. ಈ ಸೈಕಲ್ ಕೊನೆಯ ಮೈಲಿ ಪ್ರಯಾಣಕ್ಕೆ, ಉದ್ಯಾನವನಗಳಿಗೆ, ಕ್ಯಾಂಪಸ್‌ಗಳಿಗೆ ಅಥವಾ ಕಚೇರಿಗಳಿಗೆ ಹೇಳಿ ಮಾಡಿಸಿದಂತಿದೆ.

ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಶಿಯೋಮಿ

ಪೂರ್ಣವಾದ ಫ್ರೇಂ‍‍ಗಳು ಕಾಂಪ್ಯಾಕ್ಟ್ ಆಗಿರುತ್ತವೆ. ಈ ಸೈಕಲ್ ಅನ್ನು ಕಾರಿನ ಹಿಂದಿನ ಸೀಟಿನಲ್ಲಿ ಅಥವಾ ಬೆನ್ನಿನ ಮೇಲೆಯೂ ಸಾಗಿಸಬಹುದು. ಈ ಸೈಕಲ್ 75 ಕೆ.ಜಿವರೆಗಿನ ತೂಕವನ್ನು ಸಾಗಿಸುತ್ತದೆ ಎಂದು ಹೇಳಲಾಗಿದೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಶಿಯೋಮಿ

ಈ ಸೈಕಲ್ ಕುಷನ್ ಸೀಟ್ ಹಾಗೂ ಒಂದು ಜೊತೆ ಫುಟ್ ಪೆಡಲ್‌ಗಳನ್ನು ಹೊಂದಿದೆ. ಇವುಗಳನ್ನು ಮುಂಭಾಗದಲ್ಲಿರುವ ಟಯರ್‌ಗಳ ಪಕ್ಕದಲ್ಲಿ ಇರಿಸಲಾಗುತ್ತದೆ. ಸೈಕಲ್ ಚಾಲನೆಯಲ್ಲಿರುವಾಗ ಫುಟ್‌ರೆಸ್ಟ್ ಆಗಿ ಕಾರ್ಯನಿರ್ವಹಿಸುತ್ತದೆ.

MOST READ: ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಫಾಸ್ಟ್‌ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?

ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಶಿಯೋಮಿ

18 ಕಿ.ಮೀ ಟಾಪ್ ಸ್ಪೀಡ್‍‍ನಲ್ಲಿ ಸಾಗುವ ಶಿಯೋಮಿ ಹಿಮೋ ಇ-ಸೈಕಲ್‍‍ನಲ್ಲಿ 180 ವ್ಯಾಟ್ ಮೋಟರ್ ಅಳವಡಿಸಲಾಗಿದೆ. ಈ ಮೋಟರ್ 6 ಎ‍ಹೆಚ್ ಲಿಥಿಯಂ ಅಯಾನ್ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಮನೆಯಲ್ಲಿರುವ ಸಾಕೆಟ್‍‍ಗಳ ಮೂಲಕ 4ರಿಂದ 6 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಶಿಯೋಮಿ

ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ ಈ ಸೈಕಲ್ ಸುಮಾರು 30 ಕಿ.ಮೀ ಚಲಿಸುತ್ತದೆ. ಈ ಸೈಕಲ್ ಅನ್ನು ಅಮೇರಿಕಾ ಹಾಗೂ ಭಾರತದಲ್ಲಿ ಬಿಡುಗಡೆಗೊಳಿಸುವುದಿಲ್ಲವೆಂದು ಕಂಪನಿ ಹೇಳಿದೆ. ಆದರೆ ಖರೀದಿದಾರರು ಕಂಪನಿಯ ಇ-ಕಾಮರ್ಸ್ ವೆಬ್‌ಸೈಟ್ ಮೂಲಕ ಸಂಬಂಧಪಟ್ಟ ತೆರಿಗೆಗಳನ್ನು ಪಾವತಿಸಿ ಖರೀದಿಸಬಹುದು.

ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಶಿಯೋಮಿ

ಇದು ಶಿಯೋಮಿ ಕಂಪನಿಯು ಬಿಡುಗಡೆಗೊಳಿಸಿರುವ ಮೊದಲ ಇ ಸೈಕಲ್ ಅಲ್ಲ. ಕಳೆದ ವರ್ಷ ಕಂಪನಿಯು ಮೊದಲಿಗೆ ಹಿಮೋ ವಿ1 ಎಂಬ ಇ ಸೈಕಲ್ ಅನ್ನು 269 ಡಾಲರ್ ಬೆಲೆಗೆ ಬಿಡುಗಡೆಗೊಳಿಸಿತ್ತು. ನಂತರ ಹಿಮೋ ಸಿ20 ಎಂಬ ಇ ಸೈಕಲ್ ಅನ್ನು 375 ಡಾಲರ್ ಬೆಲೆಗೆ ಬಿಡುಗಡೆಗೊಳಿಸಿತ್ತು.

ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಶಿಯೋಮಿ

ಹಿಮೋ ಟಿ1 ಎಲೆಕ್ಟ್ರಿಕ್ ಮೊಪೆಡ್ ಬೆಲೆ 450 ಡಾಲರ್‍‍ಗಳಾದರೆ, ಸಿ16 ಎಲೆಕ್ಟ್ರಿಕ್ ಬೈಸಿಕಲ್ ಬೆಲೆ 284 ಡಾಲರ್‍‍ಗಳಾಗಿದೆ.

Most Read Articles

Kannada
English summary
Xiaomi Himo H1 foldable electric cycle launched - Read in Kannada
Story first published: Friday, November 29, 2019, 15:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X