ಜಾವಾ ಪೆರಾಕ್‍‍ನಂತೆ ರೆಡಿಯಾಯ್ತು ಹಳೆ ಯಜ್ಡಿ

ಹೊಸ ಜಾವಾ ಪೆರಾಕ್ ಬೈಕ್ ಅನ್ನು ತಿಂಗಳ ಹಿಂದಷ್ಟೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈ ಬೈಕಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.1.95 ಲಕ್ಷಗಳಾಗಿದೆ. ಬಾಬರ್ ಸ್ಟೈಲಿನ ಈ ಬೈಕ್ ಅನ್ನು ಒಂದು ವರ್ಷದ ಹಿಂದೆ ಅನಾವರಣಗೊಳಿಸಲಾಗಿತ್ತು.

ಜಾವಾ ಪೆರಾಕ್‍‍ನಂತೆ ರೆಡಿಯಾಯ್ತು ಹಳೆ ಯಜ್ಡಿ

ಅನಾವರಣಗೊಂಡಿದ್ದ ಜಾಗದಲ್ಲಿಯೇ ಈ ಬೈಕ್ ಅನ್ನು ಬಿಡುಗಡೆಗೊಳಿಸಲಾಯಿತು. ಈಗ ಬಿಡುಗಡೆಯಾಗಿರುವ ಪೆರಾಕ್ ಬೈಕ್ ಹಳೆಯ ತಲೆಮಾರಿನ ಪೆರಾಕ್ ಬೈಕ್ ಅಲ್ಲ ಎಂಬುದನ್ನು ಗಮನಿಸಬೇಕು. ಹಳೆಯ ತಲೆಮಾರಿನ ಪೆರಾಕ್ ಬೈಕ್ ಅನ್ನು ಐಡಿಯಲ್ ಜಾವಾ ಇಂಡಿಯಾ ಲಿಮಿಟೆಡ್ ಕಂಪನಿಯು ಮೈಸೂರಿನಲ್ಲಿದ್ದ ಉತ್ಪಾದನಾ ಘಟಕದಲ್ಲಿ 1960ರಿಂದ 1996ರವರೆಗೆ ಉತ್ಪಾದಿಸುತ್ತಿತ್ತು.

ಜಾವಾ ಪೆರಾಕ್‍‍ನಂತೆ ರೆಡಿಯಾಯ್ತು ಹಳೆ ಯಜ್ಡಿ

1940ರ ದಶಕದಲ್ಲಿದ್ದ ಪೆರಾಕ್ 250 ಹಾಗೂ 350ಯ ಟೂ ಸ್ಟ್ರೋಕ್ ಬೈಕ್‍‍ಗಳು ಭಾರತದಲ್ಲಿ ಬಹುದೊಡ್ಡ ಬೈಕ್‍‍ಗಳಾಗದೇ ಇದ್ದರೂ, ಇವುಗಳನ್ನು ಖರೀದಿಸುವ ಜನರಿದ್ದರು. ಈಗ ಈ ಬೈಕ್‍‍ಗಳು ಕಣ್ಣಿಗೆ ಬೀಳುವುದು ಅಪರೂಪ.

ಜಾವಾ ಪೆರಾಕ್‍‍ನಂತೆ ರೆಡಿಯಾಯ್ತು ಹಳೆ ಯಜ್ಡಿ

ಈ ಬೈಕ್‍‍ಗಳನ್ನು ಹೊಂದಿರುವವರು ಇವುಗಳನ್ನು ಕ್ಲಾಸಿಕ್ ಬೈಕ್ ಮೇಳಗಳಲ್ಲಿ ಪ್ರದರ್ಶಿಸುತ್ತಾರೆ. 4 ಸ್ಟ್ರೋಕ್ ವಾಹನಗಳು ಬಳಕೆಗೆ ಬಂದ ನಂತರ ಕ್ಲಾಸಿಕ್ ಜಾವಾ, ಯಜ್ಡಿ ಬೈಕುಗಳನ್ನು ಇಷ್ಟಪಡುವವರ ಸಂಖ್ಯೆಯು ಭಾರತದಲ್ಲಿ ಹೆಚ್ಚಾಗುತ್ತಾ ಹೋಯಿತು.

ಜಾವಾ ಪೆರಾಕ್‍‍ನಂತೆ ರೆಡಿಯಾಯ್ತು ಹಳೆ ಯಜ್ಡಿ

ಈ ಕಾರಣಕ್ಕಾಗಿ ತಮ್ಮಲ್ಲಿರುವ ಹಳೆಯ ಯಜ್ಡಿ ಬೈಕ್‍‍ಗಳನ್ನು ಮಾಡಿಫೈಗೊಳಿಸಲು ಬೈಕ್ ಪ್ರಿಯರು ಮುಂದಾದರು. ಇದೇ ರೀತಿ ಹಳೆಯ ಯಜ್ಡಿ ಬೈಕ್ ಹೊಂದಿರುವರೊಬ್ಬರು ತಮ್ಮ ಬೈಕ್ ಅನ್ನು ಪೆರಾಕ್ ಬೈಕಿನ ರೀತಿಯಲ್ಲಿ ಮಾಡಿಫೈ ಮಾಡಿದ್ದಾರೆ.

ಜಾವಾ ಪೆರಾಕ್‍‍ನಂತೆ ರೆಡಿಯಾಯ್ತು ಹಳೆ ಯಜ್ಡಿ

ಈ ಬೈಕಿನ ಮಾಲೀಕರು ಇದನ್ನು 2019ರ ಇಂಡಿಯಾ ಬೈಕ್ ವೀಕ್‍‍ನಲ್ಲಿ ಪ್ರದರ್ಶಿಸಿದ್ದರು. ಈ ಬೈಕಿನಲ್ಲಿರುವ ಎಲ್ಲಾ ಮೆಕಾನಿಕಲ್ ಅಂಶಗಳು ಟೂ ಸ್ಟ್ರೋಕ್ ಆಗಿವೆ. ಆದರೆ ಬೈಕ್ ಅನ್ನು ಮಾತ್ರ ಹೊಸ ತಲೆಮಾರಿನ ಜಾವಾ ಪೆರಾಕ್ ರೀತಿಯಲ್ಲಿ ಮಾಡಿಫೈಗೊಳಿಸಲಾಗಿದೆ.

ಜಾವಾ ಪೆರಾಕ್‍‍ನಂತೆ ರೆಡಿಯಾಯ್ತು ಹಳೆ ಯಜ್ಡಿ

ಮೆಟಾಲಿಕ್ ಗ್ರೇ ಹಾಗೂ ಟ್ಯಾನ್ ಬಣ್ಣದ ಸಿಂಗಲ್ ಸೀಟ್ ಹೊಂದಿರುವ ಈ ಬೈಕ್ ಆಕರ್ಷಕವಾಗಿ ಕಾಣುತ್ತದೆ. ಈ ಬೈಕಿನಲ್ಲಿರುವ ಕೆಲವು ಬಿಡಿಭಾಗಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಅವುಗಳು ಹೊಸ ಜಾವಾ ಪೆರಾಕ್ ಬೈಕಿನಲ್ಲಿರುವ ಬಿಡಿ ಭಾಗಗಳ ರೀತಿಯಲ್ಲಿ ಕಾಣುವುದಿಲ್ಲ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಜಾವಾ ಪೆರಾಕ್‍‍ನಂತೆ ರೆಡಿಯಾಯ್ತು ಹಳೆ ಯಜ್ಡಿ

ಹೊಸ ಜಾವಾ ಪೆರಾಕ್ ಬೈಕಿನಲ್ಲಿ 334 ಸಿಸಿಯ ಲಿಕ್ವಿಡ್ ಕೂಲ್ಡ್ 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 30 ಬಿ‍‍ಹೆಚ್‍‍ಪಿ ಪವರ್ ಹಾಗೂ 31 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಜಾವಾ ಪೆರಾಕ್‍‍ನಂತೆ ರೆಡಿಯಾಯ್ತು ಹಳೆ ಯಜ್ಡಿ

ಈ ಎಂಜಿನ್‍ನಲ್ಲಿ 6 ಸ್ಫೀಡಿನ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಹಳೆಯ ತಲೆಮಾರಿನ ಜಾವಾ 350 ಬೈಕಿನಲ್ಲಿ 344 ಸಿಸಿಯ ಏರ್ ಕೂಲ್ಡ್ ಟೂ ಸ್ಟ್ರೋಕ್ ಎಂಜಿನ್ ಅಳವಡಿಸಲಾಗಿತ್ತು. ಈ ಎಂಜಿನ್ 14 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುತ್ತಿತ್ತು.

MOST READ: ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ಜಾವಾ ಪೆರಾಕ್‍‍ನಂತೆ ರೆಡಿಯಾಯ್ತು ಹಳೆ ಯಜ್ಡಿ

ಈ ಎಂಜಿನ್‍‍ನಲ್ಲಿ 4 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿತ್ತು. ಭಾರತದಲ್ಲಿ ಜಾವಾ ಹಾಗೂ ಯಜ್ಡಿ ಬೈಕುಗಳಿಗೆ ಬಹು ಸಂಖ್ಯೆಯ ಅಭಿಮಾನಿಗಳಿದ್ದರೂ ಅವರಿಗೆ ಈ ಎರಡೂ ಬೈಕ್‍‍ಗಳು ಒಂದಕ್ಕೊಂದು ಹೇಗೆ ಸಂಬಂಧ ಹೊಂದಿವೆ ಎಂದು ತಿಳಿದಿಲ್ಲ.

ಜಾವಾ ಪೆರಾಕ್‍‍ನಂತೆ ರೆಡಿಯಾಯ್ತು ಹಳೆ ಯಜ್ಡಿ

1962ರಲ್ಲಿ ಐಡಿಯಲ್ ಜಾವಾ ಕಂಪನಿಯನ್ನು ಆರಂಭಿಸಿದಾಗ, ಕಂಪನಿಯು ಜಾವಾ ಹೆಸರನ್ನು ಜೆಕ್ ದೇಶದ ಮಾತೃ ಕಂಪನಿಯಿಂದ ಪಡೆಯಿತು. ನಂತರ ಸೆಮಿ ಕ್ನಾಕ್ಡ್ ಆವೃತ್ತಿಯ ಜಾವಾ 250 ಬೈಕ್ ಅನ್ನು 1969ರವರೆಗೆ ಉತ್ಪಾದಿಸಿತು.

ಜಾವಾ ಪೆರಾಕ್‍‍ನಂತೆ ರೆಡಿಯಾಯ್ತು ಹಳೆ ಯಜ್ಡಿ

1973ರಲ್ಲಿ ಜಾವಾ ಹೆಸರನ್ನು ಬಳಸಲು ಇದ್ದ ಅವಧಿಯು ಮುಕ್ತಾಯಗೊಂಡಿತು. ಇದರ ಜೊತೆಗೆ ಸಹಭಾಗಿತ್ವವು ಸಹ ಕೊನೆಯಾಯಿತು. ಇದಾದ ನಂತರ ಐಡಿಯಲ್ ಜಾವಾ ಕಂಪನಿಯು, ಜಾವಾ ಬೈಕ್‍‍ಗಳಲ್ಲಿದ್ದ ಎಂಜಿನ್, ಪ್ಲಾಟ್‍‍ಫಾರಂ ಮುಂತಾದವುಗಳನ್ನು ಬಳಸಿಕೊಂಡು ಯಜ್ಡಿ ಬೈಕಿನ ಉತ್ಪಾದನೆಯನ್ನು ಶುರು ಮಾಡಿತು.

ಜಾವಾ ಪೆರಾಕ್‍‍ನಂತೆ ರೆಡಿಯಾಯ್ತು ಹಳೆ ಯಜ್ಡಿ

ಐಡಿಯಲ್ ಜಾವಾ ಕಂಪನಿಯನ್ನು ರುಸ್ತುಂ ಇರಾನಿ ಹಾಗೂ ಫಾರೂಖ್ ಇರಾನಿ ಎಂಬುವವರು ಆರಂಭಿಸಿದರು. ಇವರು ಪರ್ಶಿಯನ್‍‍ನ ಯಜದ್ ಸಮುದಾಯಕ್ಕೆ ಸೇರಿದವರು. ಈ ಸಮುದಾಯವು ಯಜ್ಡಿ ಎಂದು ಜನಪ್ರಿಯವಾಗಿದೆ.

Source: Rushlane

More from DriveSpark

Article Published On: Thursday, December 12, 2019, 17:58 [IST]
English summary
Yezdi bike modified like Jawa Perak - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+