ಹೊಸ ಬಣ್ಣದೊಂದಿಗೆ ಡೀಲರ್‍ ಬಳಿ ತಲುಪಿದ 2020ರ ಕೆಟಿಎಂ ಡ್ಯೂಕ್ 250

ಕೆಟಿಎಂ ಇಂಡಿಯಾ ತನ್ನ ಸರಣಿಯಲ್ಲಿರುವ ಬೈಕ್‍‍ಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುತ್ತಿದೆ. ಇದರ ಭಾಗವಾಗಿ ಮೊದಲಿಗೆ 390 ಅಡ್ವಂಚರ್ ಬೈಕ್ ಅನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಹೊಸ ಬಣ್ಣದೊಂದಿಗೆ ಡೀಲರ್‍ ಬಳಿ ತಲುಪಿದ 2020ರ ಕೆಟಿಎಂ ಡ್ಯೂಕ್ 250

ಕೆಟಿಎಂ ಇಂಡಿಯಾ ಇದೀಗ ಬಿಎಸ್-6 ಡ್ಯೂಕ್ 250 ಬೈಕ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದರ ನಡುವೆ ಹೊಸ ಡ್ಯೂಕ್ 250 ಬೈಕ್ ಹೊಸ ಬಣ್ಣದೊಂದಿಗೆ ವಿತರಕರ ಬಳಿ ತಲುಪಿದೆ ಎಂದು ರಶ್‍‍ಲೇನ್ ಚಿತ್ರದೊಂದಿಗೆ ವರದಿ ಪ್ರಕಟಿಸಿದೆ. ಹೊಸ ಕೆ‍ಟಿಎಂ ಡ್ಯೂಕ್ ಬ್ಲ್ಯಾಕ್ - ಆರೇಂಜ್, ಸಿಲ್ವರ್ - ಆರೇಂಜ್ ಮತ್ತು ಸಿಲ್ವರ್-ಬ್ಲ್ಯಾಕ್ ಬಣ್ಣಗಳನ್ನು ಹೊಂದಿದೆ.

ಹೊಸ ಬಣ್ಣದೊಂದಿಗೆ ಡೀಲರ್‍ ಬಳಿ ತಲುಪಿದ 2020ರ ಕೆಟಿಎಂ ಡ್ಯೂಕ್ 250

ಹೊಸ ಡ್ಯೂಕ್ 250 ಬೈಕಿನ ಈ ಚಿತ್ರದಲ್ಲಿ ಗಮನಾರ್ಹವಾದ ನವೀಕರಣಗಳಿಲ್ಲ. ಹೊಸ ಬಣ್ಣಗಳಿಂದ ಮತ್ತು ಗ್ರಾಫಿಕ್ಸ್ ಗಳಿಂದಾಗಿ ಹೊಸ ಡ್ಯೂಕ್ 250 ಆಕರ್ಷಕ ಲುಕ್ ಅನ್ನು ಹೊಂದಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕೆ‍ಟಿಎಂ ಡ್ಯೂಕ್ 250 ಬೈಕ್ 248 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 9,000 ಆ‍‍ರ್‍‍ಪಿಎಂನಲ್ಲಿ 29.5 ಬಿಎಚ್‍ಪಿ ಪವರ್ ಮತ್ತು 7,500 ಆರ್‍‍ಪಿಎಂನಲ್ಲಿ 24 ಎನ್‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಬಣ್ಣದೊಂದಿಗೆ ಡೀಲರ್‍ ಬಳಿ ತಲುಪಿದ 2020ರ ಕೆಟಿಎಂ ಡ್ಯೂಕ್ 250

ಈ ಎಂಜಿನ್‍‍ನಲ್ಲಿ 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಸ್ಲಿಪ್ ಅಸಿಸ್ಟೆಡ್ ಕ್ಲಚ್‍ ಜೋಡಿಸಲಾಗಿದೆ. ಹೊಸ ಕೆಟಿಎಂ ಡ್ಯೂಕ್ ಬಗ್ಗೆ ಇತರ ಮಾಹಿತಿಗಳು ಬಹಿರಂಗವಾಗಿಲ್ಲ. ಮಾರುಕಟ್ಟೆಯಲ್ಲಿರುವ ಕೆ‍ಟಿಎಂ ಡ್ಯೂಕ್ 250 ಮುಂಭಾಗದಲ್ಲಿ 43 ಎಂಎಂ ಅಪ್‍ಸೈಡ್ ಡೌನ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸಸ್ಪೆಂಷನ್ ಹೊಂದಿದೆ.

ಹೊಸ ಬಣ್ಣದೊಂದಿಗೆ ಡೀಲರ್‍ ಬಳಿ ತಲುಪಿದ 2020ರ ಕೆಟಿಎಂ ಡ್ಯೂಕ್ 250

ಬೈಕಿ‍ನಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಬ್ರೇಕ್‍‍ಗಳಿಗಾಗಿ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಯು‍‍ನಿ‍ಟ್ ಅನ್ನು ಅಳವಡಿಸಲಾಗಿದೆ. ಸ್ಟ್ಯಾಂಡರ್ಡ್ ಡ್ಯುಯಲ್ ಚಾನೆಲ್ ಎಬಿಎಸ್ ಸಿಸ್ಟಂ ಅನ್ನು ಅಳವಡಿಸಿ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.

ಹೊಸ ಬಣ್ಣದೊಂದಿಗೆ ಡೀಲರ್‍ ಬಳಿ ತಲುಪಿದ 2020ರ ಕೆಟಿಎಂ ಡ್ಯೂಕ್ 250

ಡ್ಯೂಕ್ 250 ತನ್ನ ಶ್ರೇಣಿಯ ಡ್ಯೂಕ್ 390 ಬೈಕಿನಿಂದ ವಿನ್ಯಾಸ ಸೇರಿದಂತೆ ಅನೇಕ ಅಂಶಗಳನ್ನು ಎರವಲು ಪಡೆದಿದೆ. ಇದು ಚಾಸಿಸ್, ಸ್ವಿಂಗ್ಆರ್ಮ್ ಅನ್ನು ಕೂಡ ಹೊಂದಿದೆ. ಡ್ಯೂಕ್ 250 ದೊಡ್ಡ ಎಲ್ಇಡಿ ಹೆಡ್‍‍ಲ್ಯಾಂಪ್ ಅನ್ನು ಹೊಂದಿದೆ. ಡ್ಯೂಕ್ 200 ನಲ್ಲಿದ್ದಂತಹ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

ಹೊಸ ಬಣ್ಣದೊಂದಿಗೆ ಡೀಲರ್‍ ಬಳಿ ತಲುಪಿದ 2020ರ ಕೆಟಿಎಂ ಡ್ಯೂಕ್ 250

ಬಿಡುಗಡೆಯಾದ ಕೆಟಿಎಂ 390 ಅಡ್ವೆಂಚರ್ ಬೈಕ್ 73.2 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 43 ಬಿ‍‍ಹೆಚ್‍‍ಪಿ ಪವರ್ ಹಾಗೂ 37 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಬಣ್ಣದೊಂದಿಗೆ ಡೀಲರ್‍ ಬಳಿ ತಲುಪಿದ 2020ರ ಕೆಟಿಎಂ ಡ್ಯೂಕ್ 250

ಈ ಎಂಜಿನ್‍‍ನೊಂದಿಗೆ 6 ಸ್ಪೀಡಿನ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಎಂಜಿನ್‍ನೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಅಳವಡಿಸಲಾಗಿದೆ. ಎಬಿಎಸ್ ಆಫ್ ರೋಡ್ ಮೋಡ್ ಅನ್ನು ಹೊಂದಿದೆ.

ಹೊಸ ಬಣ್ಣದೊಂದಿಗೆ ಡೀಲರ್‍ ಬಳಿ ತಲುಪಿದ 2020ರ ಕೆಟಿಎಂ ಡ್ಯೂಕ್ 250

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕೆಟಿಎಂ ಡ್ಯೂಕ್ 250 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ 1.97 ಲಕ್ಷಗಳಾಗಿದೆ. ಇನ್ನೂ ಹೊಸ ಕೆಟಿ‍ಎಂ ಡ್ಯೂಕ್ 250 ಬೈಕಿಗೆ ಹಿಂದಿನ ಮಾದರಿಗಿಂತ ರೂ.10 ಸಾವಿರದಷ್ಟು ಹೆಚ್ಚಾಗಬಹುದು.

Most Read Articles

Kannada
Read more on ಕೆಟಿಎಂ ktm
English summary
2020 KTM Duke 250 BS6 in new colours – Arrives at dealer. Read in Kannada.
Story first published: Wednesday, January 22, 2020, 14:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X