Just In
Don't Miss!
- Movies
ಸುದೀಪ್ 'ಫ್ಯಾಂಟಮ್' ಸಿನಿಮಾದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್?
- News
ಖಾತೆ ಹಂಚಿಕೆ ಅಸಮಾಧಾನ: ಸಚಿವ ಸ್ಥಾನಕ್ಕೆ ಜೆ.ಸಿ. ಮಾಧುಸ್ವಾಮಿ ರಾಜೀನಾಮೆ?
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Sports
ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಹೋಂಡಾ ಸಿಬಿಆರ್250ಆರ್‌ಆರ್ ಬೈಕ್ ಬಿಡುಗಡೆ
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ತನ್ನ ಹೊಸ ಸಿಬಿಆರ್250ಆರ್‌ಆರ್ ಸ್ಪೋರ್ಟ್ಸ್ ಬೈಕನ್ನು ಮಲೇಷ್ಯಾದಲ್ಲಿ ಬಿಡುಗಡೆಗೊಳಿಸಿದೆ. ಹೊಸ ಹೋಂಡಾ ಸಿಬಿಆರ್250ಆರ್‌ಆರ್ ಸ್ಪೋರ್ಟ್ಸ್ ಬೈಕನ್ನು ಹಲವಾರು ನವೀಕರಣಗಳನ್ನು ನಡೆಸಿ ಕೆಲವು ಹೊಸ ಫೀಚರ್‍ಗಳೊಂದಿಗೆ ಬಿಡುಗಡೆಗೊಳಿಸಿದೆ.

ಈ ಹೊಸ ಹೋಂಡಾ ಸಿಬಿಆರ್250ಆರ್‌ಆರ್ ಬೈಕ್ ಮ್ಯಾಟ್ ಗನ್ ಪವರ್ ಬ್ಲ್ಯಾಕ್ ಮೆಟಾಲಿಕ್, ಪರ್ಲ್ ಗ್ಲೇರ್ ವೈಟ್, ಗ್ರ್ಯಾಂಡ್ ಪ್ರಿಕ್ಸ್ ರೆಡ್ ಮತ್ತು ಗ್ರ್ಯಾಂಡ್ ಪ್ರಿಕ್ಸ್ ರೆಡ್ ಎಂಬ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ. ಹೊಸ ಹೋಂಡಾ ಸಿಬಿಆರ್250ಆರ್‌ಆರ್ ಬೈಕಿನ ಬೆಲೆಯು ಮಲೇಷ್ಯಾದಲ್ಲಿ ಭಾರತೀಯ ಕರೆನ್ಸಿ ಪ್ರಕಾರ ರೂ.4.73 ಗಳಾಗಿದೆ. ಈ ಹೋಂಡಾ ಸಿಬಿಆರ್ 250 ಆರ್‌ಆರ್ ಮಾದರಿಯು ಯಮಹಾ ವೈಝೆಡ್-ಆರ್ 25 ಮತ್ತು ಕವಾಸಕಿ ನಿಂಜಾ 250 ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.

ಹೊಸ ಹೋಂಡಾ ಸಿಬಿಆರ್250ಆರ್‌ಆರ್ ಬೈಕ್ 249 ಸಿಸಿ ಲಿಕ್ವಿಡ್-ಕೂಲ್ಡ್ ಡಿಒಹೆಚ್‌ಸಿ ಇನ್ ಲೈನ್-ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 13,000 ಆರ್‌ಪಿಎಂನಲ್ಲಿ 40 ಬಿಹೆಚ್‌ಪಿ ಪವರ್ ಹಾಗೂ 11,000 ಆರ್‌ಪಿಎಂನಲ್ಲಿ 25 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಅಳವಡಿಸಲಾಗಿದೆ. ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸಿಬಿಆರ್ 250 ಆರ್‌ಆರ್ ಬೈಕ್ 249 ಸಿಸಿ ಪ್ಯಾರೆಲಲ್-ಟ್ವಿನ್, 8-ವಾಲ್ವ್, ಡಿಒಸಿಹೆಚ್, ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ.

ಈ ಎಂಜಿನ್ 12,500 ಆರ್‌ಪಿಎಂನಲ್ಲಿ 38 ಬಿಹೆಚ್‌ಪಿ ಪವರ್ ಹಾಗೂ 11,000 ಆರ್‌ಪಿಎಂನಲ್ಲಿ 23 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಜೋಡಿಸಲಾಗಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

249 ಸಿಸಿ ಎಂಜಿನ್ ಹೊಂದಿರುವ 2020ರ ಸಿಬಿಆರ್ 250 ಆರ್ಆರ್ ಬೈಕಿನಲ್ಲಿ ಹೊಸ ವಿನ್ಯಾಸದ ಪಿಸ್ಟನ್ ಅಳವಡಿಸಲಾಗಿದೆ. ಎಂಜಿನ್ ಪವರ್ ಉತ್ಪಾದನೆಯು 38 ಬಿಹೆಚ್‌ಪಿಯಿಂದ 40 ಬಿಹೆಚ್‌ಪಿಗೆ ಪವರ್ ಅನ್ನು ಏರಿಸಿದೆ.

ಹೊಸ ಹೋಂಡಾ ಸಿಬಿಆರ್250ಆರ್‌ಆರ್ ಬೈಕ್ ಸ್ಲಿಪ್ಪರ್ ಕ್ಲಚ್ ಹಾಗೂ ಬೈ-ಡೈರೆಕ್ಷನಲ್ ಕ್ವಿಕ್ ಶಿಫ್ಟರ್ ಗಳನ್ನು ಹೊಂದಿರಲಿದೆ. ಹೋಂಡಾದ ಈ ಹೊಸ ಕ್ವಾರ್ಟ್-ಲೀಟರ್ ಬೈಕ್ ಸ್ಮಾರ್ಟ್ ಕೀ ಸಿಸ್ಟಂ ಅನ್ನು ನೀಡುತ್ತದೆ. ಈ ಸಿಸ್ಟಂ ಕೀ ಲೆಸ್ ಇಗ್ನಿಷನ್ ಒದಗಿಸುತ್ತದೆ.
MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಕೀ ಫ್ಯಾಬ್‌ನಲ್ಲಿರುವ ಲಾಕ್ ಬಟನ್ ಮೂಲಕ ಬೈಕ್ ಮಾಲೀಕರು ಹ್ಯಾಂಡಲ್‌ಬಾರ್‌ಗಳನ್ನು ಲಾಕ್ ಹಾಗೂ ಅನ್ಲಾಕ್ ಮಾಡಬಹುದು. ಹೋಂಡಾ ಸಿಬಿಆರ್ 250 ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಬೈಕುಗಳಲ್ಲಿ ಒಂದಾಗಿದೆ.

ಹೊಸ ಹೋಂಡಾ ಸಿಬಿಆರ್250ಆರ್‌ಆರ್ ಬೈಕಿನ ಸಸ್ಪೆಂಕ್ಷನ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 37 ಎಂಎಂ ಯುಎಸ್ಡಿ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಪ್ರೊ-ಲಿಂಕ್ 5-ಹಂತದ ಮೊನೊಶಾಕ್ ಸಸ್ಪೆಂಕ್ಷ ಅನ್ನು ಹೊಂದಿದೆ.

ಇನ್ನು ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೈಕಿನಲ್ಲಿ ಎರಡು ಕಡೆಗಳಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಅಳವಡಿಸಳಾಗಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ನೀಡಿದೆ.

ಹೋಂಡಾ ಕಂಪನಿಯು ಹೊಸ ಸಿಬಿಆರ್250ಆರ್‌ಆರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ. ಹೊಸ ಸಿಬಿಆರ್ 250 ಆರ್ಆರ್ ಬೈಕಿನಲ್ಲಿ ಪವರ್‌ಫುಲ್ ಎಂಜಿನ್ ಮತ್ತು ಹೊಸ ತಂತ್ರಜ್ಞಾನವನ್ನು ಹೊಂದಿದೆ.