ಹೊಸ ಬಣ್ಣದ ಆಯ್ಕೆಯನ್ನು ಪಡೆಯಲಿದೆ 2021ರ ಹೋಂಡಾ ಆಫ್ರಿಕಾ ಟ್ವಿನ್ ಬೈಕ್
ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಹೊಸ ಆಫ್ರಿಕಾ ಟ್ವಿನ್ ಬೈಕ್ ಅನ್ನು ಈ ವರ್ಷದ ಮಾರ್ಚ್ ತಿಂಗಳಲ್ಲಿ ಬಿಡುಗಡೆಗೊಳಿಸಲಾಗಿತ್ತು. ಇನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 2021ರ ಹೋಂಡಾ ಸಿಆರ್ಎಫ್ 1100ಎಲ್ ಆಫ್ರಿಕಾ ಟ್ವಿನ್ ಸ್ಟ್ಯಾಂಡರ್ಡ್ ವೆರಿಯೆಂಟ್ ಹೊಸ ಬಣ್ಣದ ಆಯ್ಕೆಯನ್ನು ಪಡೆಯಲಿದೆ.

ಪರ್ಲ್ ಗ್ಲೇರ್ ವೈಟ್ ಬಣ್ಣವು ಈ ಹಿಂದೆ ಹೈ-ಸ್ಪೆಕ್ ಹೋಂಡಾ ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್‌ನಲ್ಲಿ ಮಾತ್ರ ಲಭ್ಯವಿತ್ತು. ಇದೀಗ ಗ್ರ್ಯಾಂಡ್ ಪ್ರಿಕ್ಸ್ ರೆಡ್ ಮತ್ತು ಮ್ಯಾಟ್ ಬ್ಯಾಲಿಸ್ಟಿಕ್ ಬ್ಲ್ಯಾಕ್ ಆಯ್ಕೆಗಳ ಜೊತೆಗೆ ಬೇಸ್ ಆಫ್ರಿಕಾ ಟ್ವಿನ್ ಸಹ ಪರ್ಲ್ ಗ್ಲೇರ್ ವೈಟ್ ಬಣ್ಣದ ಆಯ್ಕೆಯನ್ನು ಪಡೆಯಲಿದೆ. ಪ್ಯಾಲೆಟ್ನಲ್ಲಿನ ಇತರ ಆಯ್ಕೆಗಳು ‘ಸಿಆರ್ಎಫ್' ಗ್ರ್ಯಾಂಡ್ ಪ್ರಿಕ್ಸ್ ರೆಡ್ ಮತ್ತು ಮ್ಯಾಟ್ ಬ್ಯಾಲಿಸ್ಟಿಕ್ ಬ್ಲ್ಯಾಕ್ ಮೆಟಾಲಿಕ್. ಪರ್ಲ್ ಗ್ಲೇರ್ ವೈಟ್ ಬಣ್ಣಗಳ ಆಯ್ಕೆಗಳು ಸ್ಪೋರ್ಟ್ ವೆರಿಯೆಂಟ್ ನಲ್ಲಿ ಲಭ್ಯವಿದೆ.

2021ರ ಹೋಂಡಾ ಆಫ್ರಿಕಾ ಟ್ವಿನ್ ಬೈಕಿನಲ್ಲಿ ಬಣ್ಣಗಳ ಆಯ್ಕೆಯನ್ನು ಹೊರತಾಗಿ ಇತರ ಯಾವುದೇ ಬದಲಾವಣೆಗಳನ್ನು ಹೊಂದಿರುವುದಿಲ್ಲ. ಭಾರತೀಯ ಮಾರುಕಟ್ಟೆಯಲ್ಲಿ ಆಫ್ರಿಕಾ ಟ್ವಿನ್ ಹೆಚ್ಚು ಪವರ್ ಫುಲ್ ಬೈಕ್ ಆಗಿದೆ. ಹೊಸ ಹೋಂಡಾ ಆಫ್ರಿಕಾ ಟ್ವಿನ್ ಬೈಕ್ 1,084ಸಿಸಿ ಎಂಜಿನ್ 101 ಬಿಹೆಚ್‍ಪಿ ಪವರ್ ಮತ್ತು 105 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಹಿಂದಿನ ಮಾದರಿಯ ಎಂಜಿನ್‍ಗಿಂತ 2.5 ಕಿ.ಗ್ರಾಂ ಹೆಚ್ಚು ತೂಕವನ್ನುಹೊಂದಿದೆ. ಈ ಎಂಜಿನ್‍ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಡಿಸಿಟಿ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಹೋಂಡಾ ಆಫ್ರಿಕಾ ಟ್ವಿನ್ ಬೈಕಿನ ಮುಂಭಾಗದಲ್ಲಿ ಶೋವಾ 45 ಎಂಎಂ ಕಾರ್ಟ್ರಿಡ್ಜ್ ಮಾದರಿಯ ಇನ್ವರ್ಡಡ್ ಟಿಲಿಸ್ಕೋಪಿಕ್ ಫೋರ್ಕ್‍ಗಳು ಮತ್ತು ಪ್ರೊ-ಲಿಂಕ್‍ನೊಂದಿಗೆ ಮೊನೊಬ್ಲಾಕ್ ಅಲ್ಯೂಮಿನಿಯಂ ಸ್ವಿಂಗ್ ಆರ್ಮ್ ಮತ್ತು ಹಿಂಭಾಗದಲ್ಲಿ ಶೋವಾ ಗ್ಯಾಸ್-ಚಾರ್ಜ್ಡ್ ಡ್ಯಾಂಪರ್ ಅನ್ನು ಒಳಗೊಂಡಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೋಂಡಾ ಆಫ್ರಿಕಾ ಟ್ವಿನ್ ಬೈಕ್ ಫ್ರೆಮ್ ನವೀಕರಿಸಲಾಗಿದೆ. ಆಫ್ರಿಕಾ ಟ್ವಿನ್ ಕಾರ್ನರಿಂಗ್ ಎಬಿಎಸ್, ರೇರ್ ಲಿಫ್ಟ್ ಕಂಟ್ರೋಲ್, ಕಾರ್ನರಿಂಗ್ ಎಬಿಎಸ್, ರೇರ್ ಲಿಫ್ಟ್ ಕಂಟ್ರೋಲ್ ಅನ್ನು ಹೊಂದಿದೆ.

ಇದಲ್ಲದೆ ಅಡ್ವೆಂಚರ್ ಸ್ಪೋರ್ಟ್ ಇಎಸ್ ಮಾದರಿಯು ಎಲೆಕ್ಟ್ರಾನಿಕ್ ಸಸ್ಪೆಂಷನ್ ಅನ್ನು ಹೊಂದಿದೆ. ಹೊಸ ಆಫ್ರಿಕಾ ಟ್ವಿನ್ ಪ್ರಮುಖ ಫೀಚರ್ಸ್ ಅಂದರೆ ಹೊಸ 6 ಇಂಚಿನ ಟಿಎಫ್‍ಟಿ ಟಚ್‍ಸ್ಕ್ರೀನ್ ಡಿಸ್‍ಪ್ಲೇ ಅನ್ನು ಹೊಂದಿದ್ದು, ಇದರೊಂದಿಗೆ ಆ್ಯಪಲ್ ಕಾರ್‍ಪ್ಲೇ ಅನ್ನು ಅಳವಡಿಸಲಾಗಿದೆ. ಹೊಸ ಬೈಕ್ ಆರು ಎಕ್ಸಸ್ ಐಎಂಯು ಮತ್ತು ಬ್ಲೂಟತ್ ಕನೆಕ್ಟಿವಿಟಿಯನ್ನು ಅಳವಡಿಸಲಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಆಫ್ರಿಕಾ ಟ್ವಿನ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುದಾದರೆ, ಈ ಮುಂಭಾಗದಲ್ಲಿ ಡ್ಯುಯಲ್ 310 ಎಂಎಂ ಹೈಡ್ರಾಲಿಕ್ ಡಿಸ್ಕ್ ಗಳು ಮತ್ತು ಹಿಂಭಾಗದಲ್ಲಿ 256 ಎಂಎಂ ಹೈಡ್ರಾಲಿಕ್ ಡಿಸ್ಕ್ ಅನ್ನು ಅಳವಡಿಸಿದ್ದಾರೆ. ಇದರೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಅಳವಡಿಸಲಾಗಿದೆ. ಈ ಬೈಕ್ ಆನ್ ರೋಡ್ ಮತ್ತು ಆಫ್-ರೋಡ್ ಗಳಲ್ಲಿ ಎಬಿಎಸ್ ಮೋಡ್ ಅನ್ನು ಸಹ ಹೊಂದಿದೆ.

ಹೋಂಡಾ ಆಫ್ರಿಕಾ ಟ್ವಿನ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಡುಕಾಟಿ ಮಲ್ಟಿಸ್ಟ್ರಾಡಾ, ಟ್ರಯಂಫ್ ಟೈಗರ್ ಮತ್ತು ಬಿಎಂಡಬ್ಲ್ಯು ಜಿಎಸ್ 1250 ಬೈಕ್‍ಗಳಿಗೆ ಪೈಪೋಟಿಯನ್ನು ನೀಡುತ್ತದೆ.


Click it and Unblock the Notifications