ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಬಜಾಜ್ ಡೋಮಿನಾರ್ ಬೈಕುಗಳು

ಬಜಾಜ್ ಆಟೋ ಕಂಪನಿಯು ತನ್ನ ಡೋಮಿನಾರ್ ಸರಣಿಯ ಬೈಕುಗಳ ಮಾರಾಟದಲ್ಲಿ ಉತ್ತಮ ಬೆಳವಣಿಗೆಯನ್ನು ಕಂಡಿದೆ. ಬಜಾಜ್ ಡೋಮಿನಾರ್ ಬೈಕುಗಳು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ.

ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಬಜಾಜ್ ಡೋಮಿನಾರ್ ಬೈಕುಗಳು

ಬಜಾಜ್ ಆಟೋ ಕಂಪನಿಯ ಡೋಮಿನಾರ್ ಸರಣಿಯಲ್ಲಿ ಡೋಮಿನಾರ್ 400 ಮತ್ತು ಡೋಮಿನಾರ್ 250 ಎಂಬ ಎರಡು ಬೈಕುಗಳಿವೆ. ಇದರಲ್ಲಿ ಡೊಮಿನಾರ್ 400 ಬೈಕನ್ನು 2016ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿತ್ತು. ಇನ್ನು ಡೋಮಿನಾರ್ 250 ಬೈಕ್ ಈ ವರ್ಷದ ಮಾರ್ಚ್ ತಿಂಗಳಲ್ಲಿ ಬಿಡುಗಡೆಗೊಂಸಿತ್ತು. ಡೋಮಿನಾರ್ 400 ಬೈಕ್ ಅರಂಭದಲ್ಲಿ ಮಾರಾಟದಲ್ಲಿ ದೊಡ್ಡ ಕುಸಿತವನ್ನು ಕಂಡಿತ್ತು. ಆದರೆ ಅಪ್ದೇಟ್ ಹೊಸ ಮಾದರಿಯು ಉತ್ತಮ ಬೇಡಿಕೆಯನ್ನು ಕಂಡಿದೆ.

ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಬಜಾಜ್ ಡೋಮಿನಾರ್ ಬೈಕುಗಳು

ಈ ವರ್ಷದ ಅಕ್ಟೋಬರ್‌ ತಿಂಗಳಲ್ಲಿ ಡೊಮಿನಾರ್ 400 ಮಾದರಿಯ 1,818 ಯುನಿಟ್‌ಗಳು ಮಾರಾಟವಾಗಿವೆ. ಇದು ಈ ವರ್ಷದ ಗರಿಷ್ಠ ಮಾಸಿಕ ಮಾರಾಟವಾಗಿದೆ. ಜನವರಿಯಿಂದ ಅಕ್ಟೋಬರ್ ವರೆಗೆ ಡೊಮಿನಾರ್ 400 ಮಾದರಿಯು ಒಟ್ಟು ಮಾರಾಟ 5,681 ಯುನಿಟ್‌ಗಳಾಗಿವೆ.

MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಬಜಾಜ್ ಡೋಮಿನಾರ್ ಬೈಕುಗಳು

2020ರ ಅಕ್ಟೋಬರ್‌ ತಿಂಗಳಿನಲ್ಲಿ ಡೋಮಿನಾರ್ 250 ಮಾದರಿಯ 1,750 ಯುನಿಟ್‌ಗಳು ಮಾರಾಟವಾಗಿವೆ. ಜನವರಿಯಿಂದ ಅಕ್ಟೋಬರ್ ವರೆಗೆ ಡೋಮಿನಾರ್ 250 ಮಾದರಿಯ 7,230 ಯುನಿಟ್‌ಗಳು ಮಾರಾಟವಾಗಿವೆ.

ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಬಜಾಜ್ ಡೋಮಿನಾರ್ ಬೈಕುಗಳು

ಹೊಸ ಬಜಾಜ್ ಡೋಮಿನಾರ್ 250 ಬೈಕ್ ತನ್ನದೆ ಸರಣಿಯ ಡೋಮಿನಾರ್ 400 ಬೈಕಿನ ಮಾದರಿಯಲ್ಲಿದೆ. ಆದರೆ ಡೋಮಿನಾರ್ 250 ಬೈಕಿನಲ್ಲಿ ಕೆಲವು ಬದಲಾವಣೆಗಳನ್ನು ಹೊಂದಿದೆ. ಹೊಸ ಡೋಮಿನಾರ್ 250 ಬೈಕ್ 'ಡಿ250' ಬ್ಯಾಡ್ಜ್ ನೊಂದಿಗೆ ಕೆಂಪು ಬಣ್ಣವನ್ನು ಹೊಂದಿದೆ. ಬಜಾಜ್ ಡೋಮಿನಾರ್ 250 ಬೈಕ್ ಸ್ಪೂರ್ಟಿ ವಿನ್ಯಾಸದೊಂದಿಗೆ ಆಕರ್ಷಕ ಲುಕ್ ಅನ್ನು ಹೊಂದಿದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಬಜಾಜ್ ಡೋಮಿನಾರ್ ಬೈಕುಗಳು

ಡೋಮಿನಾರ್ 400 ಮತ್ತು ಹೊಸ ಡೋಮಿನಾರ್ 250 ನಡುವಿನ ಕೆಲವು ವ್ಯತ್ಯಾಸಗಳಿವೆ. ಇದು ಕಡಿಮೆ ವೆಚ್ಚದ ಸ್ವಿಂಗಾರ್ಮ್, ಯುಎಸ್ಡಿ ಫೋರ್ಕ್ ಮತ್ತು ವಿಭಿನ್ನ ಅಲಾಯ್ ವ್ಹೀಲ್ ವಿನ್ಯಾಸಗಳಾಗಿದೆ.

ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಬಜಾಜ್ ಡೋಮಿನಾರ್ ಬೈಕುಗಳು

ಡೋಮಿನಾರ್ 400 ಬೈಕಿಗೆ ಹೋಲಿಸಿದರೆ ಹೊಸ ಬಜಾಜ್ ಡೋಮಿನಾರ್ 250 ಬೈಕಿನ ಟಯರ್ ಪ್ರೊಫೈಲ್‍‍ ಗಳು ಸಹ ಭಿನ್ನವಾಗಿದೆ. ಇನ್ನು ಈ ಬೈಕ್ ಡೋಮಿನಾರ್ 400 ಮಾದರಿಗಿಂತ ತೂಕ ಕಡಿಮೆಯಾಗಿದೆ.

MOST READ: ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಟೀಸರ್ ಚಿತ್ರ ಬಿಡುಗಡೆ

ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಬಜಾಜ್ ಡೋಮಿನಾರ್ ಬೈಕುಗಳು

ಡೋಮಿನಾರ್ 400, ಬೈಕಿನಲ್ಲಿ 373.3 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, ಡಿಒ‍ಹೆಚ್‍‍ಸಿ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8800 ಆರ್‍‍ಪಿಎಂನಲ್ಲಿ 39.4 ಬಿ‍‍ಹೆಚ್‍‍ಪಿ ಪವರ್ ಮತ್ತು 7000 ಆರ್‍‍ಪಿ‍ಎಂನಲ್ಲಿ 35 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಬಜಾಜ್ ಡೋಮಿನಾರ್ ಬೈಕುಗಳು

ಇನ್ನು ಬಿಎಸ್-6 ಬಜಾಜ್ ಡೋಮಿನಾರ್ 400 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಜಾವಾ, ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಮತ್ತು ಮೊಜೊ 300 ಬೈಕ್‍‍ಗಳಿಗೆ ಪೈಪೋಟಿಯನ್ನು ನೀಡಿದರೆ, ಬಜಾಜ್ ಡೋಮಿನಾರ್ 250 ಮಾದರಿಯು ಸುಜುಕಿ ಜಿಕ್ಸರ್ 250 ಮತ್ತು ಯಮಹಾ ಎಫ್‌ಜೆಡ್ 25 ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
Bajaj Dominar Records Sales Of 3,568 Units In Oct 2020. Read In Kannada.
Story first published: Saturday, November 21, 2020, 19:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X