ಡೀಲರ್ ಬಳಿ ತಲುಪಿದ ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕ್

ಬಜಾಜ್ ಆಟೋ ಕಂಪನಿಯು ಬಿಎಸ್-6 ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೊಸ ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕ್ ಬಿಡುಗಡೆಗೂ ಮುನ್ನ ಡೀಲರ್ ಗಳ ಬಳಿ ತಲುಪಲು ಪ್ರಾರಂಭವಾಗಿದೆ.

ಡೀಲರ್ ಬಳಿ ತಲುಪಿದ ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕ್

ಪಲ್ಸರ್ 125 ಸ್ಪ್ಲಿಟ್ ಸೀಟ್ ಹಿಂದಿನ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಕೇವಲ ಆಯ್ದ ರಾಜ್ಯಗಳಲ್ಲಿ ಮಾತ್ರ ಮಾರಾಟದಲ್ಲಿತ್ತು. ಈ ವರ್ಷದ ಆರಂಭದಲ್ಲಿ ಬಜಾಜ್ ಆಟೋ ಬಿಎಸ್-6 ಪಲ್ಸರ್ 125 ನಿಯಾನ್ ಬೈಕನ್ನು ಬಿಡುಗಡೆ ಮಾಡಿದ್ದರು. ಇದೀಗ ಬಜಾಜ್ ಆಟೋ ಕಂಪನಿಯು ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಆದರೆ ಈ ಬೈಕಿನ ಬಿಡುಗಡೆಯ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಈ ಹೊಸ ಬೈಕ್ ಡೀಲರ್ ಗಳ ಬಳಿ ತಲುಪಿರುವುದನ್ನು 91ವ್ಹೀಲ್ಸ್ ಬಹಿರಂಗಪಡಿಸಿದೆ.

ಡೀಲರ್ ಬಳಿ ತಲುಪಿದ ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕ್

ಹೊಸ ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕುಗಳು ಡೀಲರ್ ಗಳ ಬಳಿ ತಲುಪಿರುವುದರಿಂದ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸಬಹುದು. ಹಿಂದಿನ ಮಾದರಿಯಂತೆ ಹೊಸ ಪಲ್ಸರ್ 125 ಸ್ಪ್ಲಿಟ್ ಸೀಟ್ ಕೂಡ ಆಯ್ದ ರಾಜ್ಯಗಳಲ್ಲಿ ಮಾತ್ರ ಲಭ್ಯವಿರುತ್ತದೆ.

MOST READ: ಜನಪ್ರಿಯ ಬಿಎಸ್-6 ಸ್ಪೋರ್ಟ್ ಬೈಕಿನ ಬೆಲೆ ಹೆಚ್ಚಿಸಿದ ಟಿವಿಎಸ್

ಡೀಲರ್ ಬಳಿ ತಲುಪಿದ ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕ್

ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್ ಸೀಟ್ ಅನ್ನು ಬಜಾಜ್ ಪಲ್ಸರ್ 125 ನಿಯಾನ್ ಮಾದರಿಗೆ ಹೋಲಿಸಿದರೆ ಕೆಲವು ವಿಭಿನ್ನ ಸ್ಟೈಲಿಂಗ್ ಅನ್ನು ಹೊಂದಿದೆ. ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್ ಸೀಟ್ ಹೆಸರು ಹೇಳುವಂತೆ ಸ್ಪ್ಲಿಟ್-ಸೀಟ್ ಸೆಟಪ್ನೊಂದಿಗೆ ಬರುತ್ತದೆ.

ಡೀಲರ್ ಬಳಿ ತಲುಪಿದ ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕ್

ಇದಲ್ಲದೇ ಈ ಹೊಸ ಬೈಕಿನಲ್ಲಿ ಪಿಲಿಯನ್ ಗ್ರ್ಯಾಬ್ ರೈಲ್ ಮತ್ತು ಆಕರ್ಷಕ ಗ್ರಾಫಿಕ್ಸ್ ಹೊಂದಿರುವ ಎಂಜಿನ್ ಕೌಲ್ ಸಹ ಇದೆ. ಈ ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಡೀಲರ್ ಬಳಿ ತಲುಪಿದ ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕ್

ಇನ್ನು ಈ ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕ್ ಫ್ಯೂಯಲ್ ಟ್ಯಾಂಕ್ ವಿಸ್ತರಣೆಗಳು, ಫ್ರಂಟ್ ಫೆಂಡರ್, ಅಲಾಯ್ ವ್ಹೀಲ್ಸ್ ಮತ್ತು ಹಿಂಭಾಗದ ಕೌಲ್‌ನಲ್ಲೂ ಇದೇ ರೀತಿಯ ಬಣ್ಣ ಸಂಯೋಜಿತ ಡೆಕಲ್‌ಗಳನ್ನು ಒದಗಿಸಲಾಗಿದೆ,

ಡೀಲರ್ ಬಳಿ ತಲುಪಿದ ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕ್

ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕ್ ‘125' ಲೋಗೊ ಸಹ ಹೊಂದಿದೆ. ಒಟ್ಟಾರೆಯಾಗಿ ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕ್ ಬಿಎಸ್-6 ಪಲ್ಸರ್ 150 ಟ್ವಿನ್ ಡಿಸ್ಕ್ ಮಾದರಿಗೆ ಹೋಲುತ್ತದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಡೀಲರ್ ಬಳಿ ತಲುಪಿದ ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕ್

ಇನ್ನು ಈ ಬಜಾಜ್ ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕಿನ ಎಂಜಿನ್ ಬಿಎಸ್-6 ಪಲ್ಸರ್ 125 ನಿಯಾನ್ ಮಾದರಿಗೆ ಹೋಲುತ್ತದೆ. ಇದರಲ್ಲಿ 24 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 11 ಬಿಹೆಚ್‍ಪಿ ಪವರ್ ಮತ್ತು 11 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಡೀಲರ್ ಬಳಿ ತಲುಪಿದ ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕ್

ಬಜಾಜ್ ಪಲ್ಸರ್ ಸರಣಿಯ ಬೈಕ್‍‍ಗಳ ಜನಪ್ರಿಯತೆ ಕಳೆದುಕೊಂಡಿಲ್ಲ. ಹೆಚ್ಚಿನ ಯುವಕರಿಗೆ ಇಂದಿಗೂ ಪಲ್ಸರ್ ಬೈಕ್‍‍ಗಳ ಕ್ರೇಜ್ ಇದೆ. ಹೊಸ ಪಲ್ಸರ್ 125 ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಕೆಟಿಎಂ ಡ್ಯೂಕ್ 125 ಮತ್ತು ಆರ್‍‍ಸಿ 125 ಬೈಕ್‍ಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
Bajaj Pulsar 125 BS6 Motorcycle With Split Seats Arrives At Dealerships. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X