ಬಿಎಸ್-6 ವರ್ಷನ್‌ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ವಿ15, ಡಿಸ್ಕವರ್ ಮಾದರಿಗಳು
ಕಳೆದ ಏಪ್ರಿಲ್ ತಿಂಗಳಲ್ಲಿ ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಬಿಎಸ್-6 ಮಾಲಿನ್ಯ ನಿಯಮವನ್ನು ಜಾರಿಗೆಗೊಳಿಸಿದರು. ಹಲವಾರು ಜನಪ್ರಿಯ ದ್ವಚಕ್ರ ಉತ್ಪಾದನಾ ಕಂಪನಿಗಳು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕಸದೇ ತನ್ನ ಸರಣಿಯಲ್ಲಿರುವ ಕೆಲವು ಮಾದರಿಗಳನ್ನು ಸ್ಥಗಿತಗೊಳಿಸಿದರು.

ಬಜಾಜ್ ಆಟೋ ಕಂಪನಿಯು ತನ್ನ ಸರಣಿಯಲ್ಲಿರುವ ಹಲವು ದ್ವಿಚಕ್ರ ವಾಹನಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಬಜಾಜ್ ಆಟೋ ಕಂಪನಿಯು ಡಿಸ್ಕವರ್ 110 ಮತ್ತು ವಿ15 ಮಾದರಿಗಳನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ. ಇದರಿಂದಾಗಿ ಈ ಮಾದರಿಗಳನ್ನು ಬಜಾಜ್ ಆಟೋ ಕಂಪನಿಯು ಈ ಮಾದರಿಗಳ ಸ್ಥಗಿತಗೊಳಿಸಲಾಗಿದೆ ಎಂದು ಹಲವರು ಅಂದುಕೊಂಡರು.

ಆದರೆ ಇದೀಗ ಈ ಅನುಮಾನಗಳಿಗೆ ಬ್ರೇಕ್ ಬಿದ್ದಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಈ ಡಿಸ್ಕವರ್ 110 ಮತ್ತು ವಿ15 ಮಾದರಿಗಳನ್ನು ಮತ್ತೊಮ್ಮೆ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಕಂಪನಿಯು ಸಜ್ಜಾಗುತ್ತಿದೆ.
MOST READ: ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಯಾಗಲಿದೆ ಹೀರೋ ಮೆಸ್ಟ್ರೋ ಸ್ಕೂಟರ್

ಹೋಂಡಾ, ಹೀರೋ ಮತ್ತು ಟಿವಿಎಸ್ ಕಂಪನಿಗಳು ಜನಪ್ರಿಯ ಮಾದರಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಿ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಆದರೆ ಬಜಾಜ್ ಕಂಪನಿಯು ಕಡಿಮೆ ಬೇಡಿಕೆ ಇರುವ ಮಾದರಿಗಳನ್ನು ಕೂಡ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಿದೆ.

ಬಜಾಜ್ ಆಟೋ ಕಂಪನಿಯು ಮುಂದಿನ ದಿನಗಳನ್ನು ಡಿಸ್ಕವರ್ 110 ಮತ್ತು ವಿ15 ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಿದೆ. ದೇಶಾದ್ಯಂತ ಕರೋನಾ ಸೋಂಕಿನ ಭೀತಿ ಇರುವುದರಿಂದ ಈ ಮಾದರಿಗಳ ಬಿಡುಗಡೆಯು ವಿಳಂಬವಾಗಬಹುದು.
MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಬಜಾಜ್ ಕಂಪನಿಯ ಬೈಕುಗಳ ಸರಣಿಯಲ್ಲಿ ಡಿಸ್ಕವರ್ ಹಳೆಯ ಮಾದರಿಗಳಾಗಿದೆ. ಡಿಸ್ಕವರಿ ಬೈಕುಗಳು 16 ವರ್ಷಗಳಿಂದ ಉತ್ಪಾದನೆಯಲ್ಲಿದೆ, ಈ ಬೈಕುಗಳನ್ನು ಕಂಪನಿಯು ಹಲವು ಬಾರಿ ನವೀಕರಣವನ್ನು ನಡೆಸಲಾಗಿದೆ.

ಡಿಸ್ಕವರ್ ಬೈಕುಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವುದರಿಂದ ಮಾಧ್ಯಮ ವರ್ಗದ ಜನರ ಗಮನಸೆಳೆಯುವಲ್ಲಿ ಯಶ್ವಸಿಯಾಗಿತ್ತು. ಆದರೆ ಹೀರೋ ಬೈಕುಗಳ ಪೈಪೋಟಿಯ ನಡುವೆ ಬಜಾಜ್ ಡಿಸ್ಕವರಿ ಬೈಕುಗಳ ಜನಪ್ರಿಯತೆಯು ಕಡಿಮೆಯಾಗಿದೆ.
MOST READ: ಬಿಎಸ್-6 ಎಂಜಿನ್‍ನಲ್ಲಿ ಬಿಡುಗಡೆಯಾಯ್ತು ವೆಸ್ಪಾ ಸ್ಕೂಟರ್‌ಗಳು

ಡಿಸ್ಕವರ್ ಮಾದರಿಗಳು ಬ್ರ್ಯಾಂಡ್‍ನ ಡಿಟಿಎಸ್ಸಿ ಟ್ವಿನ್-ಸ್ಪಾರ್ಕ್ ತಂತ್ರಜ್ಞಾನ ಮತ್ತು ಇತ್ತೀಚಿನ ಹಾರ್ಡ್‌ವೇರ್ ಹೊಂದಿರುವ ಎಂಜಿನ್‌ಗಳನ್ನು ಒಳಗೊಂಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಡಿಸ್ಕವರ್ ಮಾದರಿಗಳ 30 ಕ್ಕೂ ಹೆಚ್ಚು ರೂಪಾಂತರಗಳನ್ನು ತಯಾರಿಸಿ ಮಾರಾಟ ಮಾಡಿದೆ.

ಡಿಸ್ಕವರ್ 110 ಮತ್ತು ವಿ15 ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿವೆ. ಆದರೆ ಬಜಾಜ್ ಡಿಸ್ಕವರ್ 110 ಮತ್ತು ವಿ15 ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಲಿದೆ.


Click it and Unblock the Notifications








