ದೀಪಾವಳಿ ಸಂಭ್ರಮ: ಜನಪ್ರಿಯ ಬೆನೆಲ್ಲಿ ಇಂಪೀರಿಯಲ್ 400 ಬೈಕಿನ ಮೇಲೆ ಭರ್ಜರಿ ಆಫರ್
ಬೆನೆಲ್ಲಿ ಇಂಡಿಯಾ ಕಂಪನಿಯು ದೀಪಾವಳಿ ಹಬ್ಬದ ಪ್ರಯುಕ್ತ ತನ್ನ ಇಂಪೀರಿಯೇಲ್ 400 ಬೈಕಿನ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಬೆನಲ್ಲಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಇಂಪೀರಿಯೇಲ್ 400 ಬೈಕನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆ.

ಭಾರತೀಯ ಮಾರುಕಟ್ಟೆಯಲ್ಲಿ ರೆಟ್ರೊ-ಕ್ಲಾಸಿಕ್ ಬೆನೆಲ್ಲಿ ಇಂಪೀರಿಯೇಲ್ 400 ಬೈಕಿನ ಮೇಲೆ ಒಟ್ಟು ರೂ.12,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ದೀಪಾವಳಿ ಹಬ್ಬಕ್ಕೆ ಬೆನೆಲ್ಲಿ ಇಂಡಿಯಾ ಕಂಪನಿಯು ತಮ್ಮ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಬೆನೆಲ್ಲಿ ಇಂಪೀರಿಯೇಲ್ 400 ಬೈಕ್ ರೆಡ್ ಮತ್ತು ವೈಟ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಈ ದೀಪಾವಳಿ ಆಫರ್ ಕೇವಲ ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ.

ಬೆನೆಲ್ಲಿ ರೆಟ್ರೊ ಇಂಪೀರಿಯೇಲ್ 400 ಬೈಕಿನ ಮೇಲೆ ಆಕರ್ಷಕ ಫೆನಾನ್ಸ್ ಆಫರ್ ಅನ್ನು ಸಹ ನೀಡುತ್ತಿದೆ. ಕಂಪನಿಯು ರೂ.4,999 ಲೋ ಇಎಂಐ ಮತ್ತು ಎಕ್ಸ್ ಶೋರೂಂ ಬೆಲೆಯ ಶೇ.85 ರಷ್ಟು ಗರಿಷ್ಠ ಹಣವನ್ನು ಒಳಗೊಂಡಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಈ ಹೊಸ ಬೆನೆಲ್ಲಿ ಇಂಪೀರಿಯೇಲ್ 400 ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.99 ಲಕ್ಷಗಳಾಗಿದೆ. ಇಂಪೀರಿಯಲ್ 400 ಬೈಕಿಗೆ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿದೆ.

ಇನ್ನು ಬೆನೆಲ್ಲಿ ಇಂಪೀರಿಯಲ್ 400 ಹಿಂದಿನ ಮಾದರಿಯನ್ನು 2019ರಲ್ಲಿ ಬಿಡುಗಡೆಗೊಳಿಸಿದ್ದರು. ಇನ್ನು ಬಿಎಸ್-6 ಬೆನೆಲ್ಲಿ ಇಂಪೀರಿಯಲ್ 400 ಬೈಕಿನಲ್ಲಿ 374 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಈ ಎಂಜಿನ್ 6000 ಆರ್‌ಪಿಎಂನಲ್ಲಿ 20 ಬಿಹೆಚ್‌ಪಿ ಪವರ್ ಮತ್ತು 3500 ಆರ್‌ಪಿಎಂನಲ್ಲಿ 29 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿರುವುದನ್ನು ಹೊರತುಪಡಿಸಿದರೆ ಇತರ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಹೊಸ ಇಂಪೀರಿಯಲ್ 400 ಬೈಕ್, ಮುಂಭಾಗದಲ್ಲಿ 19 ಇಂಚಿನ ಹಾಗೂ ಹಿಂಭಾಗದಲ್ಲಿ 18 ಇಂಚಿನ ಟಯರ್‌ಗಳನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಕ್ಲಾಸಿಕ್ ಲುಕ್ ಆನ್ನು ಹೊಂದಿದೆ. ಈ ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಮುಂಭಾಗದಿಂದ ಆಕರ್ಷಕವಾಗಿ ಕಾಣುತ್ತದೆ. ಕ್ಲಾಸಿಕ್ ಲುಕ್ ಗಾಗಿ ದುಂಡಾಗಿರುವ ಹೆಡ್‌ಲ್ಯಾಂಪ್‌ಗಳನ್ನು ನೀಡಲಾಗಿದೆ. ಇದರ ಜೊತೆಗೆ ಈ ಬೈಕ್‌ನಲ್ಲಿ ಟ್ವಿನ್ ಪಾಡ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನೀಡಲಾಗಿದೆ.

ಇಂಪೀರಿಯೇಲ್ 400 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಜಾವ ಬೈಕುಗಳಿಗೆ ಮತ್ತು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮಾದರಿಗೆ ನೇರ ಪೈಪೋಟಿಯನ್ನು ನೀಡುತ್ತದೆ. ಇಂಪೀರಿಯೇಲ್ 400 ಬೈಕಿನ ಮೇಲೆ ಭರ್ಜರಿ ಆಫರ್ ಅನ್ನು ನೀಡಿರುವುದರಿಂದ ಈ ಹಬ್ಬದ ಸೀಸನ್ ನಲ್ಲಿ ಹೆಚ್ಚು ಮಾರಾಟವಾಗಲು ಸಹಾಯವಾಗಬಹುದು.


Click it and Unblock the Notifications








