ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಬಜಾಜ್ ಸಿಟಿ 110 ಬೈಕ್

ಬಜಾಜ್ ಆಟೋ ತನ್ನ ಸರಣಿಯ ಹಲವಾರು ಜನಪ್ರಿಯ ಮಾದರಿಗಳ ಬೆಲೆಯನ್ನು ಹೆಚ್ಚಿಸಿದೆ. ಈ ಪಟ್ಟಿಯಲ್ಲಿ ಜನಪ್ರಿಯ ಸಿಟಿ 110 ಬೈಕ್ ಕೂಡ ಸೇರಿದೆ. ಬಜಾಜ್ ಆಟೋ ಕಂಪನಿಯು ಸಿಟಿ 110 ಬೈಕಿನ ಒಂದು ರೂಪಾಂತರದ ಬೆಲೆಯನ್ನು ಮಾತ್ರ ಹೆಚ್ಚಿಸಿದೆ.

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಬಜಾಜ್ ಸಿಟಿ 110 ಬೈಕ್

ಬಿಎಸ್-6 ಬಜಾಜ್ ಸಿಟಿ 110 ಬೈಕು ಕಿಕ್-ಸ್ಟಾರ್ಟ್ ಮತ್ತು ಎಲೆಕ್ಟ್ರಿಕ್-ಸ್ಟಾರ್ಟ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಇದರಲ್ಲಿ ಕಂಪನಿಯು ಕಿಕ್ ಸ್ಟಾರ್ಟ್ ರೂಪಾಂತರದ ಬೆಲೆಯನ್ನು ಮಾತ್ರ ಹೆಚ್ಚಿಸಿದೆ. ಟಾಪ್-ಸ್ಪೆಕ್ ಎಲೆಕ್ಟ್ರಿಕ್-ಸ್ಟಾರ್ಟ್ ಮಾದರಿಯ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬಿಎಸ್-6 ಬಜಾಜ್ ಸಿಟಿ 110 ಬೈಕಿನ ಕಿಕ್ ಸ್ಟಾರ್ಟ್ ರೂಪಾಂತರದ ಬೆಲೆಯನ್ನು ರೂ.1,498 ರವರೆಗೆ ಹೆಚ್ಚಿಸಿದೆ.

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಬಜಾಜ್ ಸಿಟಿ 110 ಬೈಕ್

ಇದೀಗ ಬಿಎಸ್-6 ಬಜಾಜ್ ಸಿಟಿ 110 ಬೈಕಿನ ಕಿಕ್ ಸ್ಟಾರ್ಟ್ ರೂಪಾಂತರದ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.48,410ಗಳಾಗಿದೆ. ಇತ್ತೀಚೆಗೆ ಈ ಬೈಕನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು.

MOST READ: ಜನಪ್ರಿಯ ಬಿಎಸ್-6 ಸಿಟಿ 100 ಬೈಕಿನ ಬೆಲೆ ಹೆಚ್ಚಿಸಿದ ಬಜಾಜ್

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಬಜಾಜ್ ಸಿಟಿ 110 ಬೈಕ್

ಬಿಎಸ್-6 ಬಜಾಜ್ ಸಿಟಿ 110 ಬೈಕಿನಲ್ಲಿ ಇತರ ಮಾದರಿಗಳಂತೆ ಫ್ಯೂಯಲ್-ಇಂಜೆಕ್ಷನ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುವಾಗ ಎಂಜಿನ್‌ನೊಂದಿಗೆ ಎಲೆಕ್ಟ್ರಾನಿಕ್ ಕಾರ್ಬ್ಯುರೇಟರ್ ಅನ್ನು ಬಳಸಿದೆ

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಬಜಾಜ್ ಸಿಟಿ 110 ಬೈಕ್

ಈ ಬೈಕಿನಲ್ಲಿ 115.45 ಸಿಸಿ, ಏರ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 7000 ಆರ್‌ಪಿಎಂನಲ್ಲಿ 8.4 ಬಿಹೆಚ್‌ಪಿ ಪವರ್ ಮತ್ತು 5000 ಆರ್‌ಪಿಎಂನಲ್ಲಿ 9.81 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 4-ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಬಜಾಜ್ ಸಿಟಿ 110 ಬೈಕ್

ಬಿಎಸ್-6 ಬಜಾಜ್ ಸಿಟಿ 110 ಬೈಕಿನಲ್ಲಿ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಹೊಂದಿರುವ ಹ್ಯಾಲೊಜೆನ್ ಹೆಡ್‌ಲ್ಯಾಂಪ್ ಅನ್ನು ಅಳವಡಿಸಿದ್ದಾರೆ. ಇನ್ನು ಇದರೊಂದಿಗೆ ಎಕ್ಸಾಸ್ಟ್, ಕ್ರ್ಯಾಶ್ ಗಾರ್ಡ್ ಮತ್ತು ಎಂಜಿನ್ ಬ್ಯಾಷ್ ಪ್ಲೇಟ್, ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸಿಂಗಲ್-ಪೀಸ್ ಸೀಟ್ ಮತ್ತು ಚೈನ್ ಕವರ್ ಅನ್ನು ಹೊಂದಿದೆ.

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಬಜಾಜ್ ಸಿಟಿ 110 ಬೈಕ್

ಈ ಬೈಕಿನಲ್ಲಿ ರಿಯರ್-ಫೆಂಡರ್ ಮತ್ತು ಹೆಡ್ ಲ್ಯಾಂಪ್ ಲೌಲ್ ನಲ್ಲಿ ಸ್ಟೈಲಿಶ್ ಬಾಡಿ ಗ್ರಾಫಿಕ್ಸ್ ಅನ್ನು ಸಹ ಹೊಂದಿದೆ, ಇದು ಈ ಬೈಕಿಗೆ ಪ್ರೀಮಿಯಂ ಲುಕ್ ಅನ್ನು ನೀಡಿದೆ. ಈ ಬೈಕಿನಲ್ಲಿ 10.5-ಲೀಟರ್ ಫ್ಯೂಯಲ್ ಟ್ಯಾಂಕ್ ಅನ್ನು ಸಹ ಹೊಂದಿದೆ.

MOST READ: ದುಬಾರಿಯಾಯ್ತು ಬಿಎಸ್-6 ಬಜಾಜ್ ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಬೈಕ್

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಬಜಾಜ್ ಸಿಟಿ 110 ಬೈಕ್

ಇದರೊಂದಿಗೆ ಬಜಾಜ್ ಆಟೋ ಕಂಪನಿಯು ತನ್ನ ಜನಪ್ರಿಯ ಎಂಟ್ರಿ ಲೆವೆಲ್ ಸಿಟಿ ಬಿಎಸ್-6 ಮಾದರಿಯ ಬೆಲೆಯನ್ನು ಕೂಡ ಹೆಚ್ಚಿಸಿದೆ. ಬಿಎಸ್-6 ಬಜಾಜ್ ಸಿಟಿ 100 ಬೈಕಿನ ಕಿಕ್ ಸ್ಟಾರ್ಟ್ ಮತ್ತು ಸೆಲ್ಫ್ ಸ್ಟಾರ್ಟ್ ಎಂಬ ಎರಡು ರೂಪಾಂತರಗಳ ಬೆಲೆಯನ್ನು ರೂ.1,996ರವರೆಗೆ ಹೆಚ್ಚಿಸಿದೆ.

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಬಜಾಜ್ ಸಿಟಿ 110 ಬೈಕ್

ಬಜಾಜ್ ಆಟೋ ಕಂಪನಿಯು ಹೆಚ್ಚಿನ ಎಂಟ್ರಿ ಲೆವೆಲ್ ಬೈಕುಗಳ ಬೆಲೆಯನ್ನು ಹೆಚ್ಚಿಸಿದೆ. ಸಿಟಿ 110 ದೇಶಾದ್ಯಂತ ಜನಪ್ರಿಯತೆ ಹೊಂದಿರುವ ಮಾದರಿಯಾಗಿದೆ. ಈ ಬೈಕಿನ ಬೆಲೆ ಏರಿಕೆಯು ಮಾರಾಟದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನಿರೀಕ್ಷಿಸುತ್ತೇವೆ

Most Read Articles

Kannada
English summary
Bajaj CT 110 BS6 Prices Marginally Increased. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X