ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಹೋಂಡಾ ಎಕ್ಸ್-ಬ್ಲೇಡ್ 160 ಬೈಕ್

ಹೋಂಡಾ ಇಂಡಿಯಾ ಕಂಪನಿಯು ತನ್ನ ಬಿಎಸ್-6 ಎಕ್ಸ್-ಬ್ಲೇಡ್ 160 ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಹೋಂಡಾ ಎಕ್ಸ್-ಬ್ಲೇಡ್ 160 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವಾರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಹೋಂಡಾ ಎಕ್ಸ್-ಬ್ಲೇಡ್ 160 ಬೈಕ್

ಬಿಎಸ್-6 ಹೋಂಡಾ ಎಕ್ಸ್-ಬ್ಲೇಡ್ 160 ಬೈಕ್ ಕೆಲವು ನವೀಕರಣಗಳೊಂದಿಗೆ ಹೊಸ ಸ್ಟೈಲಿಂಗ್ ಅನ್ನು ಹೊಂದಿರಲಿದೆ ಎಂದು ನಿರೀಕ್ಷಿಸುತ್ತೇವೆ. ಬಿಎಸ್-6 ಹೋಂಡಾ ಎಕ್ಸ್-ಬ್ಲೇಡ್ ಬೈಕ್ ಹೊಸ ಬಣ್ಣಗಳ ಆಯ್ಕೆ ಮತ್ತು ಹೊಸ ಗ್ರಾಫಿಕ್ಸ್ ಅನ್ನು ಹೊಂದಿರುತ್ತದೆ. ಇನ್ನು ಈ ಬೈಕಿನಲ್ಲಿ ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಹೊಸ ವಿಂಡ್ ಷೀಲ್ಡ್ ಸಹ ಅಳವಡಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಹೋಂಡಾ ಎಕ್ಸ್-ಬ್ಲೇಡ್ 160 ಬೈಕ್

ಬಿಎಸ್-6 ಹೋಂಡಾ ಎಕ್ಸ್-ಬ್ಲೇಡ್ 160 ಬೈಕಿನಲ್ಲಿ 162.7 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 12.7 ಬಿಹೆಚ್‌ಪಿ ಪವರ್ ಮತ್ತು 14 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೀಡಿಸಲಾಗಿದೆ.

MOST READ: ಬಿಎಸ್-6 ಹೋಂಡಾ ಲಿವೊ ಬೈಕಿನ ಟೀಸರ್ ಬಿಡುಗಡೆ

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಹೋಂಡಾ ಎಕ್ಸ್-ಬ್ಲೇಡ್ 160 ಬೈಕ್

ಬಿಎಸ್-6 ಹೋಂಡಾ ಎಕ್ಸ್-ಬ್ಲೇಡ್ 160 ಬೈಕ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಅನ್ನು ಹೊಂದಿರುತ್ತದೆ. ಇನ್ನು ಈ ಬೈಕಿನ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಹೊಂದಿರುತ್ತದೆ. ಇದರೊಂದಿಗೆ ಸ್ಟ್ಯಾಂಡರ್ಡ್ ಎಬಿಎಸ್ ಅನ್ನು ನೀಡಲಾಗುತ್ತದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಹೋಂಡಾ ಎಕ್ಸ್-ಬ್ಲೇಡ್ 160 ಬೈಕ್

ಪ್ರಸ್ತುತ ತಲೆಮಾರಿನ ಬಿಎಸ್-4 ಹೋಂಡಾ ಎಕ್ಸ್-ಬ್ಲೇಡ್ 160 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.90,797 ಗಳಾಗಿದೆ. ಇನ್ನು ಬಿಎಸ್-6 ಹೋಂಡಾ ಎಕ್ಸ್-ಬ್ಲೇಡ್ 160 ಪ್ರೀಮಿಯಂ ಬೈಕಿಗೆ ಪ್ರಸ್ತುತ ಮಾದರಿಗಿಂತ ರೂ.8,000 ದಿಂದ ರೂ.10,000 ಗಳವರೆಗೆ ಹೆಚ್ಚಿಸಬಹುದು.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಹೋಂಡಾ ಎಕ್ಸ್-ಬ್ಲೇಡ್ 160 ಬೈಕ್

ಜಪಾನಿನ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ತನ್ನ ಬಿಎಸ್-6 ಸಿಬಿ ಹಾರ್ನೆಟ್ 160ಆರ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೊಸ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ತಿಂಗಳು ಬಿಡುಗಡೆಯಾಗಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಹೋಂಡಾ ಎಕ್ಸ್-ಬ್ಲೇಡ್ 160 ಬೈಕ್

ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಬಿಎಸ್-4 ಹೋಂಡಾ ಸಿಬಿ ಹಾರ್ನೆಟ್ 160ಆರ್‌ ಬೈಕಿನ ಹೆಸರನ್ನು ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿತ್ತು. ಈ ಹೋಂಡಾ ಸಿಬಿ ಹಾರ್ನೆಟ್ 160ಆರ್‌ ಬೈಕನ್ನು ಸ್ಥಗಿತಗೊಳಿಸಿದ ಬಳಿಕ ಇದೀಗ ಬಿಎಸ್ 6 ಆವೃತ್ತಿಯಲ್ಲಿ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಹೋಂಡಾ ಎಕ್ಸ್-ಬ್ಲೇಡ್ 160 ಬೈಕ್

ಕರೋನಾ ಪರಿಣಾಮದಿಂದಾಗಿ ದೇಶಾದ್ಯಂತ ಲಾಕ್ ಡೌನ್ ಇದ್ದ ಕಾರಣ ಬಿಎಸ್ 6 ಹೋಂಡಾ ಸಿಬಿ ಹಾರ್ನೆಟ್ 160ಆರ್‌ ಬೈಕ್ ಬಿಡುಗಡೆಯಾಗಲು ವಿಳಂಬವಾಗಿದೆ. ಹೊಸ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕಿನಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್, ಹಝಾರ್ಡ್ ಲ್ಯಾಂಪ್ ಫಂಕ್ಷನ್, ಬ್ಲೂನ್ ಬ್ಯಾಕ್‌ಲೈಟ್, ಹೊಸ ಗ್ರಾಫಿಕ್ಸ್ ಮತ್ತು ಬಣ್ಣಗಳೊಂದಿಗೆ ರಿಫ್ರೆಶ್ಡ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ನೊಂದಿಗೆ ಹಲವಾರು ಇನ್ನಿತರ ಫೀಚರುಗಳನ್ನು ಹೊಂದಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಹೋಂಡಾ ಎಕ್ಸ್-ಬ್ಲೇಡ್ 160 ಬೈಕ್

ಹೋಂಡಾ ಕಂಪನಿಯು ಪೋರ್ಟ್ಫೋಲಿಯೊದಲ್ಲಿರುವ ಎಲ್ಲಾ ಬೈಕುಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತಿದೆ. ಕಂಪಮಿಯು ಈಗಾಗಲೇ 125 ಸಿಸಿ ಸರಣಿಯಲ್ಲಿರುವ ಎಲ್ಲಾ ಬೈಕುಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.

Article Published On: Monday, June 29, 2020, 14:22 [IST]
English summary
Honda X-Blade 160 BS6 Model To Launch Soon Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+