ಆಟೋ ಎಕ್ಸ್‌ಪೋ 2020: ಎರಡು ಎಲೆಕ್ಟ್ರಿಕ್ ವಾಹನಗಳನ್ನು ಅನಾವರಣಗೊಳಿಸಿದ ಇವಿ ಇಂಡಿಯಾ

ಭಾರತ ಮೂಲದ ಹಾಗೂ ಒಡಿಶಾದಲ್ಲಿ ಉತ್ಪಾದನಾ ಘಟಕವನ್ನು ಹೊಂದಿರುವ ಇವಿ ಇಂಡಿಯಾ ಕಂಪನಿಯು ದೆಹಲಿಯಲ್ಲಿ ನಡೆಯುತ್ತಿರುವ 2020ರ ಆಟೋ ಎಕ್ಸ್ ಪೋದಲ್ಲಿ ತನ್ನ ಸರಣಿಯ ಪ್ರೀಮಿಯಂ ಎಲೆಕ್ಟ್ರಿಕ್ ವಾಹನಗಳನ್ನು ಅನಾವರಣಗೊಳಿಸಿದೆ.

ಆಟೋ ಎಕ್ಸ್‌ಪೋ 2020: ಎರಡು ಎಲೆಕ್ಟ್ರಿಕ್ ವಾಹನಗಳನ್ನು ಅನಾವರಣಗೊಳಿಸಿದ ಇವಿ ಇಂಡಿಯಾ

ಇವಿ ಇಂಡಿಯಾ ರೆಟ್ರೋ ಶೈಲಿಯಲ್ಲಿರುವ ಒಂದು ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಸ್ಪೋರ್ಟಿ ಲುಕ್ ಹೊಂದಿರುವ ಒಂದು ಎಲೆಕ್ಟ್ರಿಕ್ ಬೈಕ್ ಅನ್ನು ಅನಾವರಣಗೊಳಿಸಿದೆ. ಈ ಎಲೆಕ್ಟ್ರಿಕ್ ಸ್ಕೂಟರಿಗೆ ಫೋರ್‍‍‍ಸೆಟಿ ಎಂದು ಹಾಗೂ ಎಲೆಕ್ಟ್ರಿಕ್ ಬೈಕಿಗೆ ಟೆಸೆರೋ ಎಂಬ ಹೆಸರನ್ನಿಡಲಾಗಿದೆ.

ಆಟೋ ಎಕ್ಸ್‌ಪೋ 2020: ಎರಡು ಎಲೆಕ್ಟ್ರಿಕ್ ವಾಹನಗಳನ್ನು ಅನಾವರಣಗೊಳಿಸಿದ ಇವಿ ಇಂಡಿಯಾ

ಈ ಎರಡು ವಾಹನಗಳು ಹಬ್ ಮೌಂಟೆಡ್ ಎಲೆಕ್ಟ್ರಿಕ್ ಮೋಟರ್ ಹಾಗೂ ಸ್ವಾಪಬಲ್ ಬ್ಯಾಟರಿಯನ್ನು ಹೊಂದಿವೆ. ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಲು 3ರಿಂದ 4 ಗಂಟೆಗಳು ಬೇಕಾಗುತ್ತವೆ. ಹಲವು ಅಂಶಗಳಲ್ಲಿ ಒಂದೇ ರೀತಿಯಾಗಿದ್ದರೂ ಈ ವಾಹನಗಳು ಕ್ರಮಿಸುವ ದೂರ ಬೇರೆಯಾಗಿದೆ.

ಆಟೋ ಎಕ್ಸ್‌ಪೋ 2020: ಎರಡು ಎಲೆಕ್ಟ್ರಿಕ್ ವಾಹನಗಳನ್ನು ಅನಾವರಣಗೊಳಿಸಿದ ಇವಿ ಇಂಡಿಯಾ

ಫೋರ್‍‍ಸೆಟಿ ಸ್ಕೂಟರ್ ಅನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 100 ಕಿ.ಮೀವರೆಗೂ ಚಲಿಸುತ್ತದೆ. ಟೆಸೆರೊ ಬೈಕ್ ಪೂರ್ತಿಯಾಗಿ ಚಾರ್ಜ್ ಆದ ನಂತರ 120 ಕಿ.ಮೀವರೆಗೂ ಚಲಿಸುತ್ತದೆ. ಈ ಎರಡೂ ಪ್ರೀಮಿಯಂ ಎಲೆಕ್ಟ್ರಿಕ್ ವಾಹನಗಳನ್ನು ಇನ್ನು ಕೆಲವು ತಿಂಗಳುಗಳಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಾಗುವುದು.

ಆಟೋ ಎಕ್ಸ್‌ಪೋ 2020: ಎರಡು ಎಲೆಕ್ಟ್ರಿಕ್ ವಾಹನಗಳನ್ನು ಅನಾವರಣಗೊಳಿಸಿದ ಇವಿ ಇಂಡಿಯಾ

ಫೋರ್‍‍ಸೆಟಿ ಎಲೆಕ್ಟ್ರಿಕ್ ಸ್ಕೂಟರ್ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಟೆಸೆರೊ ಎಲೆಕ್ಟ್ರಿಕ್ ಬೈಕ್ ಅನ್ನು ಸೆಪ್ಟೆಂಬರ್‍‍ನಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಸ್ಕೂಟರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 60ರಿಂದ 70 ಕಿ.ಮೀಗಳಾಗಿರಲಿದೆ.

ಆಟೋ ಎಕ್ಸ್‌ಪೋ 2020: ಎರಡು ಎಲೆಕ್ಟ್ರಿಕ್ ವಾಹನಗಳನ್ನು ಅನಾವರಣಗೊಳಿಸಿದ ಇವಿ ಇಂಡಿಯಾ

ಟೆಸೆರೊ ಎಲೆಕ್ಟ್ರಿಕ್ ಬೈಕ್ ಪ್ರತಿ ಗಂಟೆಗೆ 90-100 ಕಿ.ಮೀ ವೇಗವನ್ನು ಹೊಂದಿರಲಿದೆ. ಈ ಎರಡು ಎಲೆಕ್ಟ್ರಿಕ್ ವಾಹನಗಳ ಬೆಲೆಯು ರೂ.1 ಲಕ್ಷಕ್ಕಿಂತ ಕಡಿಮೆಯಾಗಿರಲಿದೆ. ಈ ವಾಹನಗಳ ಮತ್ತಷ್ಟು ವಿವರಗಳು ಬಿಡುಗಡೆಯಾಗಬೇಕಿದೆ.

ಆಟೋ ಎಕ್ಸ್‌ಪೋ 2020: ಎರಡು ಎಲೆಕ್ಟ್ರಿಕ್ ವಾಹನಗಳನ್ನು ಅನಾವರಣಗೊಳಿಸಿದ ಇವಿ ಇಂಡಿಯಾ

ಈ ಎಲೆಕ್ಟ್ರಿಕ್ ವಾಹನಗಳಲ್ಲಿರುವ ಬ್ಯಾಟರಿಗಳ ಮೇಲೆ 3ರಿಂದ 5 ವರ್ಷಗಳ ವಾರಂಟಿ ನೀಡಲಾಗುವುದು. ಒಡಿಶಾದಲ್ಲಿ ಉತ್ಪಾದನಾ ಘಟಕವನ್ನು ಹೊಂದಿರುವ ಇವಿ ಕಂಪನಿಯು ಕಳೆದ ವರ್ಷದ ಅಕ್ಟೋಬರ್‍‍ನಿಂದ ತನ್ನ ಮಾರುಕಟ್ಟೆಯನ್ನು ವಿಸ್ತರಿಸುತ್ತಿದೆ.

ಆಟೋ ಎಕ್ಸ್‌ಪೋ 2020: ಎರಡು ಎಲೆಕ್ಟ್ರಿಕ್ ವಾಹನಗಳನ್ನು ಅನಾವರಣಗೊಳಿಸಿದ ಇವಿ ಇಂಡಿಯಾ

ಇವಿ ಕಂಪನಿಯು ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ 45ಕ್ಕೂ ಹೆಚ್ಚು ನಗರಗಳಲ್ಲಿ ಡೀಲರ್‍‍ಶಿಪ್‍‍ಗಳನ್ನು ಹೊಂದಿದೆ. ಇದುವರೆಗೂ ಇವಿ ಕಂಪನಿಯು 1,200 ಕ್ಕೂ ಹೆಚ್ಚು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.

ಆಟೋ ಎಕ್ಸ್‌ಪೋ 2020: ಎರಡು ಎಲೆಕ್ಟ್ರಿಕ್ ವಾಹನಗಳನ್ನು ಅನಾವರಣಗೊಳಿಸಿದ ಇವಿ ಇಂಡಿಯಾ

ಆಂಧ್ರ ಪ್ರದೇಶ, ತೆಲಂಗಾಣ, ಛತ್ತೀಸ್‍‍ಗಢ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳಗಳಲ್ಲಿ ಶೋರೂಂಗಳನ್ನು ಹೊಂದಿರುವ ಇವಿ ಕಂಪನಿಯು ದೆಹಲಿ ಹಾಗೂ ಮಹಾರಾಷ್ಟ್ರಗಳಲ್ಲಿ ಹೊಸದಾಗಿ ಶೋರೂಂಗಳನ್ನು ತೆರೆಯಲು ಮುಂದಾಗಿದೆ.

Most Read Articles

Kannada
English summary
Eeve India unveils two electric vehicles at 2020 Auto Expo. Read in Kannada.
Story first published: Friday, February 7, 2020, 13:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X