ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲಿದೆ ಇಮೋಷನ್ ಮೋಟಾರ್ಸ್

ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಸಾಕಷ್ಟು ಬೆಳವಣಿಗೆ ಕಂಡುಬರುತ್ತಿದ್ದು, ಹಲವಾರು ಸ್ಟಾರ್ಟ್ಅಪ್ ಕಂಪನಿಯು ವಿವಿಧ ಬಗೆಗೆ ಹತ್ತಾರು ಎಲೆಕ್ಟ್ರಿಕ್ ವಾಹನ ಮಾದರಿಗಳನ್ನು ಸಿದ್ದಪಡಿಸಿ ಬಿಡುಗಡೆಗೆ ಸಜ್ಜುಗೊಂಡಿವೆ.

ಬಿಡುಗಡೆಯಾಗಲಿದೆ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಇವಿ ಬೈಕ್

ಸದ್ಯ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುತ್ತಿರುವ ಬಹುತೇಕ ಎಲೆಕ್ಟ್ರಿಕ್ ವಾಹನಗಳು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ ಮೋಟಾರ್ ಸೌಲಭ್ಯವನ್ನು ಹೊಂದಿದ್ದು, ಕೊಯಮತ್ತೂರು ಮೂಲದ ಸ್ಟಾರ್ಟ್ಅಪ್ ಆಟೋ ಕಂಪನಿಯೊಂದು ಮೊದಲ ಬಾರಿಗೆ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳನ್ನು ಅಭಿವೃದ್ದಿಪಡಿಸಿ ಶೀಘ್ರದಲ್ಲೇ ಮಾರಾಟಕ್ಕೆ ಚಾಲನೆ ನೀಡುವ ತವಕದಲ್ಲಿದೆ.

ಬಿಡುಗಡೆಯಾಗಲಿದೆ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಇವಿ ಬೈಕ್

ಇಮೋಷನ್ ಮೋಟಾರ್ಸ್ ಎನ್ನುವ ಕಂಪನಿಯೇ ಮೊದಲ ಬಾರಿಗೆ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಮಾದರಿಗಳನ್ನು ಸಿದ್ದಪಡಿಸಿದ್ದು, ಹೊಸ ಮೋಟಾರ್‌ಸೈಕಲ್‌ಗೆ ಸರ್ಜ್ ಎಂದು ಹೆಸರಿಡಲಾಗಿದೆ.

ಬಿಡುಗಡೆಯಾಗಲಿದೆ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಇವಿ ಬೈಕ್

ಸರ್ಜ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಎರಡು ಮಾದರಿಯಲ್ಲಿ ಮಾರಾಟಗೊಳ್ಳಲಿದ್ದು, ಬ್ಯಾಟರಿ ಪ್ಯಾಕ್ ಮತ್ತು ಫೀಚರ್ಸ್ ಅಳವಡಿಕೆಯ ಆಧಾರದ ಮೇಲೆ 6ಕೆ ಮತ್ತು 10ಕೆ ಎನ್ನುವ ಎರಡು ಮಾದರಿಗಳನ್ನು ಸಿದ್ದಪಡಿಸಲಾಗಿದೆ.

ಬಿಡುಗಡೆಯಾಗಲಿದೆ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಇವಿ ಬೈಕ್

6ಕೆ ಮಾದರಿಯು ಆರಂಭಿಕ ಆವೃತ್ತಿಯಾಗಿ ಮಾರಾಟವಾಗಲಿದ್ದರೆ 10ಕೆ ಮಾದರಿಯು ಹೈ ಎಂಡ್ ಆವೃತ್ತಿಯಾಗಿ ಮಾರಾಟಗೊಳ್ಳಲಿದ್ದು, ಹೊಸ ಎಲೆಕ್ಟ್ರಿಕ್ ಬೈಕ್‌ಗಳ ಕಾರ್ಯಕ್ಷಮತೆ ಅರಿಯಲು ಈಗಾಗಲೇ ಬರೋಬ್ಬರಿ 30 ಸಾವಿರ ಕಿ.ಮೀ ಟೆಸ್ಟಿಂಗ್ ನಡೆಸಲಾಗಿದೆ.

ಬಿಡುಗಡೆಯಾಗಲಿದೆ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಇವಿ ಬೈಕ್

ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಮಾದರಿಗಳಲ್ಲೇ ಅತ್ಯುತ್ತಮ ಫೀಚರ್ಸ್ ಹೊಂದಿರುವ ಸರ್ಜ್ ಮೋಟಾರ್‌ಸೈಕಲ್ ಮಾದರಿಗಳು ಹೈ ರೇಂಜ್ ಮೈಲೇಜ್ ಪ್ರೇರಣೆ ಹೊಂದಿದ್ದು, ಪ್ರತಿ ಚಾರ್ಜ್‌ಗೆ ಹೊಸ ಬೈಕ್‌ಗಳು ಗರಿಷ್ಠ 300ಕಿ.ಮೀ ಮೈಲೇಜ್ ಹಿಂದಿರುಗಿಸಲಿವೆ.

ಬಿಡುಗಡೆಯಾಗಲಿದೆ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಇವಿ ಬೈಕ್

ಹೊಸ ಎಲೆಕ್ಟ್ರಿಕ್ ಬೈಕ್‌ಗಳಲ್ಲಿ ತ್ರಿ 40ಎಹೆಚ್ 72ವಿ ಲೀ-ಅಯಾನ್ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು, ಸ್ಟ್ಯಾಂಡರ್ಡ್ ಮಾದರಿಯ ಚಾರ್ಜರ್‌ನಲ್ಲಿ ಪೂರ್ಣಪ್ರಮಾಣದ ಚಾರ್ಜಿಂಗ್‌ಗೆ ಮೂರುವರೆ ಗಂಟೆ ಸಮಯತೆಗೆದುಕೊಂಡಲ್ಲಿ ಡಿಸಿ ಫಾಸ್ಟ್ ಚಾರ್ಜರ್‌ನಲ್ಲಿ ಕೇವಲ 50 ನಿಮಿಷಗಳಲ್ಲಿ ಪೂರ್ಣಪ್ರಮಾಣದ ಚಾರ್ಜಿಂಗ್ ಮಾಡಬಹುದು.

MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ಬಿಡುಗಡೆಯಾಗಲಿದೆ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಇವಿ ಬೈಕ್

ಈ ಮೂಲಕ 6ಕೆ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಮಾದರಿಯು ತ್ರಿ ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಗಂಟೆಗೆ ಗರಿಷ್ಠ 100 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದರೆ, 10ಕೆ ಬೈಕ್ ಮಾದರಿಯು ಫೋರ್ ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಗಂಟೆಗೆ ಗರಿಷ್ಠ 120ಕಿ.ಮೀ ವೇಗದಲ್ಲಿ ಚಲಿಸುವ ವೈಶಿಷ್ಟ್ಯತೆ ಹೊಂದಿವೆ.

ಬಿಡುಗಡೆಯಾಗಲಿದೆ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಇವಿ ಬೈಕ್

ಎಲೆಕ್ಟ್ರಿಕ್ ಬೈಕ್ ಮಾದರಿಯಲ್ಲಿನ ಚಾಲನೆಯನ್ನು ಸಾಮಾನ್ಯ ಬೈಕ್ ಮಾದರಿಯಲ್ಲಿನ ಚಾಲನಾ ಅನುಭವವನ್ನು ಒದಗಿಸುವುದಕ್ಕಾಗಿಯೇ ಹೊಸ ಮಾದರಿಯ ಎಲೆಕ್ಟ್ರಿಕ್ ಬೈಕ್‌ಗಳನ್ನು ಸಿದ್ದಪಡಿಸಿರುವ ಇಮೋಷನ್ ಮೋಟಾರ್ಸ್ ಕಂಪನಿಯು ಹೊಸ ಬೈಕ್‌ಗಳನ್ನು 2021ರ ಆರಂಭದಲ್ಲಿ ಬಿಡುಗಡೆ ಮಾಡಲಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಬಿಡುಗಡೆಯಾಗಲಿದೆ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಇವಿ ಬೈಕ್

ಕಳೆದ ಫೆಬ್ರುವರಿಯಲ್ಲಿ ನಡೆದಿದ್ದ 2020ರ ದೆಹಲಿ ಆಟೋಎಕ್ಸ್‌ಪೋದಲ್ಲಿ ಕಾನ್ಸೆಪ್ಟ್ ಮಾದರಿಯನ್ನು ಪ್ರದರ್ಶನಗೊಳಿಸಿದ್ದ ಇಮೋಷನ್ ಮೋಟಾರ್ಸ್ ಕಂಪನಿಯು ಇದೇ ವರ್ಷ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡುವ ಯೋಜನೆ ಹೊಂದಿತ್ತು. ಆದರೆ ಕರೋನಾ ವೈರಸ್ ಪರಿಣಾಮ ಹೊಸ ಬೈಕ್ ಬಿಡುಗಡೆಯನ್ನು 2021ಕ್ಕೆ ಮುಂದೂಡಿಕೆ ಮಾಡಿದ್ದು, ಶೀಘ್ರದಲ್ಲೇ ಉತ್ಪಾದನಾ ಆವೃತ್ತಿಯನ್ನು ಅನಾವರಣಗೊಳಿಸಲಿದೆ.

ಬಿಡುಗಡೆಯಾಗಲಿದೆ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಇವಿ ಬೈಕ್

ಇನ್ನು ಹೊಸ ಎಲೆಕ್ಟ್ರಿಕ್ ಬೈಕ್‌ಗಳಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದ್ದು, ನ್ಯಾನಿಗೇಷನ್ ಪ್ರೇರಣೆಯ 7-ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕನ್ಸೊಲ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಜಿಯೋ ಟ್ಯಾಗಿಂಗ್, ಆ್ಯಂಟಿ ಥೆಫ್ಟ್, ಸ್ಮಾರ್ಟ್ ಕೀ, ರಿವರ್ಸ್ ಮೊಡ್ ಹೊಂದಿದೆಯ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಬಿಡುಗಡೆಯಾಗಲಿದೆ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಇವಿ ಬೈಕ್

ಹಾಗೆಯೇ ಬೈಕ್ ಸವಾರರ ಸುರಕ್ಷತೆಗಾಗಿ ಸಿಂಗಲ್ ಚಾನೆಲ್ ಎಬಿಎಸ್, ಮುಂಭಾಗದ ಚಕ್ರದಲ್ಲಿ 300-ಎಂಎಂ ಡಿಸ್ಕ್ ಬ್ರೇಕ್, ಹಿಂಭಾಗದ ಚಕ್ರದಲ್ಲಿ 230-ಎಂಎಂ ಡಿಸ್ಕ್ ಬ್ರೇಕ್‌, ಡಬಲ್ ಸೈಡ್ ಸ್ವಿಂಗ್ ಆರ್ಮ್ ಸೌಲಭ್ಯದೊಂದಿಗೆ ದುಬಾರಿ ಬೆಲೆ ಪಡೆದುಕೊಳ್ಳಲಿದೆ.

Most Read Articles

Kannada
English summary
eMotion Surge Electric Motorcycle Spotted Testing In Coimbatore. Read in Kannada.
Story first published: Wednesday, August 19, 2020, 19:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X