ಸ್ಕ್ರಾಂಬ್ಲರ್ ಬೈಕಿನಂತೆ ಮಾಡಿಫೈಗೊಂಡ ಹೀರೊ ಕರಿಜ್ಮಾ

ಕ್ಯಾಲಿಕಟ್ ಮೂಲದ ಕಸ್ಟಮ್ ಬೈಕ್ ತಯಾರಕರಾದ ಮೊಹಮ್ಮದ್ ಆದಿಲ್‍‍ರವರು ತಮ್ಮ ಮೊದಲ ಬೈಕ್ ಅನ್ನು ಕಸ್ಟಮೈಸ್ ಮಾಡಿದ್ದಾರೆ. ಇವರು ಕಸ್ಟಮೈಸ್ ಮಾಡಿರುವ ಹೀರೋ ಕರಿಜ್ಮಾ ಆರ್ ಬೈಕಿಗೆ ಕಟಲಾನ್ ಎಂಬ ಹೆಸರನ್ನಿಡಲಾಗಿದೆ.

ಸ್ಕ್ರಾಂಬ್ಲರ್ ಬೈಕಿನಂತೆ ಮಾಡಿಫೈಗೊಂಡ ಹೀರೊ ಕರಿಜ್ಮಾ

ಈ ಕರಿಜ್ಮಾ ಆರ್ ಬೈಕ್ ಅನ್ನು ಭಾರೀ ಪ್ರಮಾಣದಲ್ಲಿ ಮಾಡಿಫೈ ಮಾಡಲಾಗಿದೆ. ಮಾಡಿಫೈಗೊಂಡ ನಂತರ ಈ ಸ್ಕ್ರಾಂಬ್ಲರ್ ಬೈಕಿನಂತೆ ಕಾಣುತ್ತಿದೆ. ಈ ಬಗ್ಗೆ ಮೊಹಮದ್ ಆದಿಲ್‍‍ರವರು ಕೆಲವು ಫೋಟೊಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್‍‍ಲೋಡ್ ಮಾಡಿದ್ದಾರೆ. ಇವುಗಳನ್ನು ಡಿಎಸ್ ಸ್ಮೋಕ್‍‍ನಲ್ಲಿ ಕಾಣಬಹುದು.

ಸ್ಕ್ರಾಂಬ್ಲರ್ ಬೈಕಿನಂತೆ ಮಾಡಿಫೈಗೊಂಡ ಹೀರೊ ಕರಿಜ್ಮಾ

ಮಾಡಿಫೈ ಮಾಡಲಾದ ಹೀರೊ ಕರಿಜ್ಮಾ ಆರ್ ಬೈಕಿನಲ್ಲಿ ಸರಳವಾಗಿರುವ ಹೆಡ್‍‍ಲೈಟ್ ಅಸೆಂಬ್ಲಿಯನ್ನು ಅಳವಡಿಸಲಾಗಿದೆ. ಮಾಡಿಫೈಗೊಂಡಿರುವ ಈ ಬೈಕಿನಲ್ಲಿ ಲೆನ್ಸ್ ಗ್ರಿಲ್, ಟರ್ನ್ ಸಿಗ್ನಲ್ ಇಂಡಿಕೇಟರ್ ಹಾಗೂ ರ್‍ಯಾಲಿ ಶೈಲಿಯ ಫ್ರಂಟ್ ಮಡ್‍‍ಗಾರ್ಡ್‍‍ಗಳನ್ನು ಅಳವಡಿಸಲಾಗಿದೆ.

ಸ್ಕ್ರಾಂಬ್ಲರ್ ಬೈಕಿನಂತೆ ಮಾಡಿಫೈಗೊಂಡ ಹೀರೊ ಕರಿಜ್ಮಾ

ಆರಾಮದಾಯಕ ಸವಾರಿಗಾಗಿ ಹೊಸ ಹ್ಯಾಂಡಲ್‍‍ಬಾರ್ ನೀಡಲಾಗಿದೆ. ಇದರ ಜೊತೆಗೆ ಬ್ರಷ್ಡ್ ಅಲ್ಯುಮಿನಿಯಂ ಸ್ವಿಚ್ ಗೇರ್ ಪ್ಯಾನೆಲ್, ಸಿಂಗಲ್ ಪಾಡ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಬೈಕಿನ ಸೈಡಿನಲ್ಲಿ ಸ್ಟಾರ್ಟರ್ ಹಾಗೂ ಕಿಲ್ ಸ್ವಿಚ್ ಮಾಡ್ಯೂಲ್‍‍ಗಳನ್ನು ಅಳವಡಿಸಲಾಗಿದೆ.

ಸ್ಕ್ರಾಂಬ್ಲರ್ ಬೈಕಿನಂತೆ ಮಾಡಿಫೈಗೊಂಡ ಹೀರೊ ಕರಿಜ್ಮಾ

ಕಟಲಾನ್ ಬೈಕಿನ ಫ್ಯೂಯಲ್ ಟ್ಯಾಂಕ್ ಮೇಲೆ ಕಂಪಾಸ್ ಅಳವಡಿಸಲಾಗಿದೆ. ಈ ಫ್ಯೂಯಲ್ ಟ್ಯಾಂಕ್ ಕೆಳಗೆ ಚಿಕ್ಕದಾದ ವೈರಿಂಗ್‍‍ಗಳಿದ್ದರೆ, ಸ್ವಿಂಗ್ ಆರ್ಮ್ ಬಳಿಯಲ್ಲಿ ಅಚ್ಚುಕಟ್ಟಾಗಿ ಜೋಡಿಸಲಾದ ಬ್ಯಾಟರಿಯನ್ನು ನೀಡಲಾಗಿದೆ.

ಸ್ಕ್ರಾಂಬ್ಲರ್ ಬೈಕಿನಂತೆ ಮಾಡಿಫೈಗೊಂಡ ಹೀರೊ ಕರಿಜ್ಮಾ

ಹೀರೊ ಕರಿಜ್ಮಾದಲ್ಲಿದ್ದ ಏರ್ ಇನ್‍‍ಟೇಕ್ ಸಿಸ್ಟಂ ಅನ್ನು ಈಗ ಸೈಡ್ ಪ್ಯಾನೆಲ್‍‍ನ ಹಿಂದೆ ನೀಡಲಾಗಿದೆ. ಮುಂಭಾಗದಲ್ಲಿದ್ದ ಫೋರ್ಕ್‍‍ಗಳ ಬದಲಿಗೆ ಹೀರೊ ಇಂಪಲ್ಸ್ ಬೈಕಿನಲ್ಲಿರುವಂತಹ ಫೋರ್ಕ್‍‍ಗಳನ್ನು ಅಳವಡಿಸಲಾಗಿದ್ದು, ಇದರಿಂದಾಗಿ ಹೆಚ್ಚು ದೂರ ಹಾಗೂ ವಿವಿಧ ರಸ್ತೆಗಳಲ್ಲಿ ಚಲಿಸುವಾಗ ಹ್ಯಾಂಡ್ಲಿಂಗ್ ಉತ್ತಮವಾಗಿರಲಿದೆ.

ಸ್ಕ್ರಾಂಬ್ಲರ್ ಬೈಕಿನಂತೆ ಮಾಡಿಫೈಗೊಂಡ ಹೀರೊ ಕರಿಜ್ಮಾ

ಫುಟ್ ಪೆಗ್ ಹಾಗೂ ಗೇರ್ ಲಿವರ್ ಅನ್ನು ಬದಲಿಸಿ ಒರಟಾಗಿರುವ ಹೆಚ್ಚು ಬಾಳಿಕೆ ಬರುವಂತಹದ್ದನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಮಾಡಿಫೈ ಬೈಕಿನಲ್ಲಿ ಕೈಯಿಂದ ತಯಾರಿಸಿರುವ ಟಾಪ್ ಮೌಂಟೆಡ್ ಸ್ಟೇನ್‍‍ಲೆಸ್ ಸ್ಟೀಲ್ ಎಕ್ಸಾಸ್ಟ್ ಸಿಸ್ಟಂ ಅಳವಡಿಸಲಾಗಿದೆ.

ಸ್ಕ್ರಾಂಬ್ಲರ್ ಬೈಕಿನಂತೆ ಮಾಡಿಫೈಗೊಂಡ ಹೀರೊ ಕರಿಜ್ಮಾ

ಒಂದು ಮಫ್ಲರ್‍‍ಗೆ ಕಪ್ಪು ಬಣ್ಣವನ್ನು ಬಳಿಯಲಾಗಿದ್ದು, ಸೈಡ್ ಪ್ಯಾನೆಲ್‍‍ನ ಹಿಂದೆ ಇಡಲಾಗಿದೆ, ಇದರ ಮೇಲೆ 82 ಎಂದು ಬರೆಯಲಾಗಿದೆ. ಬೇರೆ ಮಫ್ಲರ್‍‍ಗಳು ಸ್ಟೇನ್‍‍ಲೆಸ್ ಸ್ಟೀಲ್ ಬಣ್ಣವನ್ನು ಹೊಂದಿದ್ದು, ಹಿಂಬದಿಯಲ್ಲಿ ಕಾರುಗಳಲ್ಲಿರುವಂತಹ ಫ್ಲೆಕ್ಸ್ ಪೈಪ್ ಹೊಂದಿವೆ.

ಸ್ಕ್ರಾಂಬ್ಲರ್ ಬೈಕಿನಂತೆ ಮಾಡಿಫೈಗೊಂಡ ಹೀರೊ ಕರಿಜ್ಮಾ

ಇದರಿಂದಾಗಿ ಕಠಿಣವಾದ ರಸ್ತೆಗಳಲ್ಲಿಯೂ ಸುಲಭವಾಗಿ ಚಲಿಸಲು ಸಾಧ್ಯವಾಗಲಿದೆ. ಈ ಬೈಕಿನಲ್ಲಿ ಕೈಯಿಂದ ತಯಾರಿಸಿದ ಬಾಶ್ ಪ್ಲೇಟ್ ಸಹ ನೀಡಲಾಗಿದೆ. ಸ್ಕ್ರಾಂಬ್ಲರ್ ಬೈಕಿನಂತಿರುವ ಕರಿಜ್ಮಾ ಆರ್ ಬೈಕಿನ ಮುಂಭಾಗದಲ್ಲಿ 90/90-19 ಟಿಂಮ್ಸನ್ ಟಯರ್‍‍ಗಳು ಹಾಗೂ ಹಿಂಭಾಗದಲ್ಲಿ 120/90-17 ರಾಲ್ಕೊ ಟಯರ್‍‍ಗಳಿವೆ.

ಸ್ಕ್ರಾಂಬ್ಲರ್ ಬೈಕಿನಂತೆ ಮಾಡಿಫೈಗೊಂಡ ಹೀರೊ ಕರಿಜ್ಮಾ

ಈ ಟಯರ್‍‍ಗಳು ಯಾವುದೇ ರೀತಿಯ ಕಠಿಣ ರಸ್ತೆಗಳಲ್ಲೂ ಸರಾಗವಾಗಿ ಚಲಿಸುತ್ತವೆ. ಈ ಬೈಕಿನ ಟ್ಯಾಂಕ್ ಮೇಲೆ ಬ್ರಿಟಿಷ್ ಗ್ರೀನ್ ಹಾಗೂ ಸ್ಯಾಟಿನ್ ಬಣ್ಣವಿದ್ದರೆ, ಸೈಡ್ ಪ್ಯಾನೆಲ್ ಹಾಗೂ ಫ್ರಂಟ್ ಮಡ್‍‍ಗಾರ್ಡ್ ಸ್ಯಾಟಿನ್ ಬಣ್ಣವನ್ನು, ಹ್ಯಾಂಡಲ್ ಬಾರ್ ಹಾಗೂ ವ್ಹೀಲ್ ರಿಮ್‍‍ಗಳು ಕಪ್ಪು ಬಣ್ಣವನ್ನು ಹೊಂದಿವೆ.

ಸ್ಕ್ರಾಂಬ್ಲರ್ ಬೈಕಿನಂತೆ ಮಾಡಿಫೈಗೊಂಡ ಹೀರೊ ಕರಿಜ್ಮಾ

ಈ ಮಾಡಿಫೈ ಬೈಕಿನ ಎಂಜಿನ್‍‍ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ಬೈಕ್ ಹೀರೊ ಕರಿಜ್ಮಾ ಆರ್‍‍ನಲ್ಲಿರುವ 223 ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.

ಸ್ಕ್ರಾಂಬ್ಲರ್ ಬೈಕಿನಂತೆ ಮಾಡಿಫೈಗೊಂಡ ಹೀರೊ ಕರಿಜ್ಮಾ

ಈ ಎಂಜಿನ್ 19.2 ಬಿ‍‍ಹೆಚ್‍‍ಪಿ ಪವರ್ ಹಾಗೂ 19.35 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. ಪವರ್ - ತೂಕದ ರೇಷಿಯೊ ಪ್ರಕಾರ ಮಾಡಿಫೈಗೊಂಡಿರುವ ಈ ಬೈಕ್ ಕರಿಜ್ಮಾ ಆರ್ ಬೈಕಿಗಿಂತ ಹೆಚ್ಚು ಪರ್ಫಾಮೆನ್ಸ್ ನೀಡುವ ಸಾಧ್ಯತೆಗಳಿವೆ.

ಸ್ಕ್ರಾಂಬ್ಲರ್ ಬೈಕಿನಂತೆ ಮಾಡಿಫೈಗೊಂಡ ಹೀರೊ ಕರಿಜ್ಮಾ

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಕರಿಜ್ಮಾ ಆರ್ ಬೈಕ್ ಅನ್ನು ವಿಭಿನ್ನವಾಗಿ ಮಾಡಿಫೈಗೊಳಿಸಿರುವ ಮೊಹಮದ್ ಆದಿಲ್‍‍ರವರಿಗೆ ಅಭಿನಂದನೆಗಳನ್ನು ಸಲ್ಲಿಸಲೇ ಬೇಕು. ಈ ಮಾಡಿಫಿಕೇಶನ್ ಮಾಡಲು 2 ವರ್ಷಗಳಷ್ಟು ಸಮಯವನ್ನು ತೆಗೆದುಕೊಳ್ಳಲಾಗಿದೆ.

Most Read Articles

Kannada
English summary
Hero Karizma R Modified By Calicut Based Mohamed Adhil. Read in Kannada.
Story first published: Monday, January 27, 2020, 14:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X