ಬಿಡುಗಡೆಗೆ ಸಿದ್ದವಾದ ಹೋಂಡಾ ಸಿಬಿಆರ್1000ಆರ್‌ಆರ್-ಆರ್ ಫೈರ್‌ಬ್ಲೇಡ್, ಫೈರ್‌ಬ್ಲೇಡ್ ಎಸ್‌ಪಿ
ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ಭಾರತದಲ್ಲಿ ತನ್ನ ಹೊಸ ಸೂಪರ್ ಬೈಕ್ ಮಾದರಿಗಳಾದ ಸಿಬಿಆರ್1000ಆರ್‌ಆರ್-ಆರ್ ಫೈರ್‌ಬ್ಲೇಡ್ ಮತ್ತು ಫೈರ್‌ಬ್ಲೇಡ್ ಎಸ್‌ಪಿ ಬೈಕ್ ಮಾದರಿಗಳನ್ನು ಬಿಡುಗಡೆ ಸಿದ್ದವಾಗಿದ್ದು, ಬುಕ್ಕಿಂಗ್ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿದೆ.

ಹೋಂಡಾ ಕಂಪನಿಯು ಭಾರತದಲ್ಲಿ ಈಗಾಗಲೇ ಹಲವು ಸೂಪರ್ ಬೈಕ್ ಮಾದರಿಗಳ ಮಾರಾಟವನ್ನು ಹೊಂದಿದ್ದು, ತನ್ನ ಶ್ರೇಷ್ಠ ಟ್ರ್ಯಾಕ್ ಪರ್ಫಾಮೆನ್ಸ್ ಬೈಕ್ ಮಾದರಿಯಾದ ಆರ್‌ಸಿ213ವಿ ಮೊಟೊಜಿಪಿ ಬೈಕ್ ಪ್ರೇರಣೆಯ ಸಿಬಿಆರ್1000ಆರ್‌ಆರ್-ಆರ್ ಫೈರ್‌ಬ್ಲೇಡ್, ಫೈರ್‌ಬ್ಲೇಡ್ ಎಸ್‌ಪಿ ಬೈಕ್‌ಗಳನ್ನು ದೇಶಿಯ ಮಾರುಕಟ್ಟೆಗೂ ಪರಿಚಯಿಸುವ ಸಿದ್ದತೆ ನಡೆಸಿದೆ. ಇದಕ್ಕಾಗಿ ಅಧಿಕೃತ ಬುಕ್ಕಿಂಗ್ ಆರಂಭಿಸಲಾಗಿದ್ದು, ಹೊಸ ಬೈಕ್‌ಗಳು ಅಗಸ್ಟ್ ಕೊನೆಯಲ್ಲಿ ಗ್ರಾಹಕರ ಕೈಸೇರಲಿವೆ.

ಸಿಬಿಆರ್1000ಆರ್‌ಆರ್-ಆರ್ ಫೈರ್‌ಬ್ಲೇಡ್, ಫೈರ್‌ಬ್ಲೇಡ್ ಎಸ್‌ಪಿ ಬೈಕ್‌ಗಳು ಹೋಂಡಾ ನಿರ್ಮಾಣದ ವಿಶೇಷ ಸೂಪರ್ ಬೈಕ್ ಮಾದರಿಗಳಾಗಿದ್ದು, ಈ ಬೈಕ್‌ಗಳನ್ನು ವಿಶೇಷವಾಗಿ ಟ್ರ್ಯಾಕ್ ಪರ್ಫಾಮೆನ್ಸ್‌ಗಾಗಿ ಅಭಿವೃದ್ದಿಗೊಳಿಸಲಾಗಿದೆ.

ಟ್ರ್ಯಾಕ್ ಪರ್ಫಾಮೆನ್ಸ್ ಕಳೆದ 28 ವರ್ಷಗಳಿಂದ ಮುಂಚೂಣಿಯಲ್ಲಿರುವ ಆರ್‌ಸಿ213ವಿ ಮೊಟೊಜಿಪಿ ಎಂಜಿನ್ ಆಧಾರದ ಮೇಲೆಯೇ ಹೊಸ ಸಿಬಿಆರ್1000ಆರ್‌ಆರ್-ಆರ್ ಫೈರ್‌ಬ್ಲೇಡ್, ಫೈರ್‌ಬ್ಲೇಡ್ ಎಸ್‌ಪಿ ಬೈಕ್‌ಗಳನ್ನು ಅಭಿವೃದ್ದಿಗೊಳಿಸಿದ್ದು, ಭಾರತದಲ್ಲಿ ಬಿಗ್‌ವಿಂಗ್ ಮಾರಾಟ ಮಳಿಗೆಗಳ ಮೂಲಕ ಮಾರಾಟವಾಗಲಿದೆ.

ಭಾರತದಲ್ಲಿ ಎರಡು ಮಾದರಿಯ ಬೈಕ್ ಮಾರಾಟ ಕೇಂದ್ರಗಳನ್ನು ಹೊಂದಿರುವ ಹೋಂಡಾ ಕಂಪನಿಯು ಸಾಮಾನ್ಯ ಬೈಕ್‌ಗಳನ್ನು ಸಾಮಾನ್ಯ ಮಾರಾಟ ಮಳಿಗೆಗಳಲ್ಲಿ ಮತ್ತು ಸೂಪರ್ ಬೈಕ್ ಮಾದರಿಗಳನ್ನು ಬಿಗ್‌ವಿಂಗ್ ಮಾರಾಟ ಮಳಿಗೆಗಳಲ್ಲಿ ಮಾರಾಟ ಮಾಡುತ್ತಿದೆ.

ಸದ್ಯ ಖರೀದಿಗೆ ಲಭ್ಯವಿರುವ ಹೋಂಡಾ ಸೂಪರ್ ಬೈಕ್ ಬಿಗ್‌ವಿಂಗ್ ಮೂಲಕ ಮಾರಾಟವಾಗುತ್ತಿದ್ದು, ಹೊಸ ಸಿಬಿಆರ್1000ಆರ್‌ಆರ್-ಆರ್ ಫೈರ್‌ಬ್ಲೇಡ್, ಫೈರ್‌ಬ್ಲೇಡ್ ಎಸ್‌ಪಿ ಬೈಕ್‌ಗಳು ಇದೆ ಮಾರಾಟ ಸೌಲಭ್ಯದಲ್ಲಿ ಖರೀದಿಗೆ ಲಭ್ಯವಿರಲಿವೆ.
MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಸಿಬಿಆರ್1000ಆರ್‌ಆರ್-ಆರ್ ಫೈರ್‌ಬ್ಲೇಡ್ ಮತ್ತು ಫೈರ್‌ಬ್ಲೇಡ್ ಎಸ್‌ಪಿ ಬೈಕ್ ಮಾದರಿಯು ತಾಂತ್ರಿಕವಾಗಿ ಒಂದೇ ಮಾದರಿಯಾಗಿದ್ದು, ಬೆಲೆಯಲ್ಲಿ ತುಸು ದುಬಾರಿಯಾಗಿರುವ ಫೈರ್‌ಬ್ಲೇಡ್ ಎಸ್‌ಪಿ ಹೆಚ್ಚುವರಿ ಬಣ್ಣಗಳ ಆಯ್ಕೆಯೊಂದಿಗೆ ಕೆಲವು ಹೆಚ್ಚುವರಿ ಪ್ರೀಮಿಯಂ ಫೀಚರ್ಸ್ ಹೊಂದಿರಲಿದೆ.

ಹೊಸ ಬೈಕ್‌ಗಳಲ್ಲಿ ಆರ್‌ಸಿ213ವಿ ಮೊಟೊಜಿಪಿ ಬೈಕ್ ಆಧಾರದ ಮೇಲೆ ಎಂಜಿನ್, ಏರೋ ಡೈನಾಮಿಕ್ ಡಿಸೈನ್ ಮತ್ತು ಚಾರ್ಸಿ ತಂತ್ರಜ್ಞಾನವನ್ನು ಎರವಲು ಪಡೆದುಕೊಳ್ಳಲಾಗಿದ್ದು, 1,000-ಸಿಸಿ ಇನ್-ಲೈನ್ ಫೋರ್ ಸಿಲಿಂಡರ್ ಎಂಜಿನ್ ಜೋಡಿಸಲಾಗಿದೆ.
MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ಈ ಮೂಲಕ 214.5-ಬಿಎಚ್‌ಪಿ ಮತ್ತು 113-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿರುವ ಹೊಸ ಎಂಜಿನ್ ಮಾದರಿಯು ಗೋಲ್ಡ್ ವಿಂಗ್ ಬೈಕ್ ಮಾದರಿಗಿಂತ ಕೆಳ ದರ್ಜೆಯಲ್ಲಿ ಮಾರಾಟಗೊಳ್ಳಲಿದ್ದು, ಸಿಕೆಡಿ ಆಮದು ನೀಡಿಯಲ್ಲಿ ಭಾರತದಲ್ಲಿ ಮಾರಾಟವಾಗುವ ಹೊಸ ಬೈಕ್ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 18 ಲಕ್ಷದಿಂದ ರೂ. 22 ಲಕ್ಷ ಇರಬಹುದೆಂದು ನೀರಿಕ್ಷಿಸಲಾಗಿದೆ.


Click it and Unblock the Notifications








