ಭಾರತದಲ್ಲಿ ದುಬಾರಿ ಬೆಲೆಯ ಸಿಟಿ125 ಹಂಟರ್ ಕ್ಲಬ್ ಮೊಪೆಡ್ ಬಿಡುಗಡೆ ಮಾಡಲಿದೆಯಾ ಹೋಂಡಾ?

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ ದುಬಾರಿಯ ಬೆಲೆಯ ಮೊಪೆಡ್ ಆವೃತ್ತಿಯಾದ ಸಿಟಿ125 ಹಂಟರ್ ಕ್ಲಬ್ ಮಾದರಿಯನ್ನು ವಿದೇಶಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಇದೀಗ ಕಂಪನಿಯು ಭಾರತದಲ್ಲೂ ಬಿಡುಗಡೆಗೆ ಸಿದ್ದವಾಗಿರುವ ಸುಳಿವು ನೀಡಿದೆ.

ಭಾರತದಲ್ಲಿ ದುಬಾರಿ ಬೆಲೆಯ ಸಿಟಿ125 ಹಂಟರ್ ಕ್ಲಬ್ ಮೊಪೆಡ್ ಬಿಡುಗಡೆ ಮಾಡಲಿದೆಯಾ ಹೋಂಡಾ?

ಹೌದು, ಸದ್ಯ ಜಪಾನ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಸಿಟಿ125 ಹಂಟರ್ ಕ್ಲಬ್ ಮೊಪೆಡ್ ಮಾದರಿಯು ಮುಂದಿನ ತಿಂಗಳು ಥೈಲ್ಯಾಂಡ್‌ನಲ್ಲೂ ಬಿಡುಗಡೆಗೂ ಸಿದ್ದವಾಗಿದ್ದು, ಹೊಸ ಮೊಪೆಡ್ ಭಾರತದಲ್ಲೂ ಬಿಡುಗಡೆಯಾಗುವ ಸುಳಿವು ಸಿಕ್ಕಿದೆ. ಆದರೆ ಈ ಕುರಿತು ಹೋಂಡಾ ಕಂಪನಿಯಿಂದ ಯಾವುದೇ ಅಧಿಕೃತವಾದ ಮಾಹಿತಿ ಇಲ್ಲವಾದರೂ ದುಬಾರಿ ಮೊಪೆಡ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗಾಗಿ ಪೆಟೆಂಟ್(ಹಕ್ಕುಸ್ವಾಮ್ಯ) ಚಿತ್ರವನ್ನು ಕೇಂದ್ರ ಸಾರಿಗೆ ಇಲಾಖೆಯಲ್ಲಿ ದಾಖಲಿಸಲಾಗಿದೆ.

ಭಾರತದಲ್ಲಿ ದುಬಾರಿ ಬೆಲೆಯ ಸಿಟಿ125 ಹಂಟರ್ ಕ್ಲಬ್ ಮೊಪೆಡ್ ಬಿಡುಗಡೆ ಮಾಡಲಿದೆಯಾ ಹೋಂಡಾ?

ಹೀಗಾಗಿ ಹೋಂಡಾ ನಿರ್ಮಾಣ ಐಷಾರಾಮಿ ಫೀಚರ್ಸ್‌ವುಳ್ಳ ಸಿಟಿ125 ಹಂಟಕ್ ಕ್ಲಬ್ ಮೊಪೆಡ್ ಮಾದರಿಯು ಭಾರತದಲ್ಲೂ ಬಿಡುಗಡೆಯಾಗಬಹುದಾದ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗಿದ್ದು, ಆಫ್-ರೋಡ್ ವೈಶಿಷ್ಟ್ಯತೆಯ ಐಷಾರಾಮಿ ಮೊಪೆಡ್ ಮಾದರಿಯೊಂದನ್ನು ಹಂತ ಹಂತವಾಗಿ ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಪರಿಚಯಿಸಲಾಗುತ್ತಿದೆ.

ಭಾರತದಲ್ಲಿ ದುಬಾರಿ ಬೆಲೆಯ ಸಿಟಿ125 ಹಂಟರ್ ಕ್ಲಬ್ ಮೊಪೆಡ್ ಬಿಡುಗಡೆ ಮಾಡಲಿದೆಯಾ ಹೋಂಡಾ?

ಹೋಂಡಾ ಕಂಪನಿಯ ಈಗಾಗಲೇ ಸೂಪರ್ ಕ್ಲಬ್ ಸಿ125, ಪಿಸಿಎಕ್ಸ್ 150, ಮಂಕಿ 125 ಮತ್ತು ಸಿಆರ್‌ಎಫ್125ಎಫ್ ಡರ್ಕ್ ಬೈಕ್ ಮಾದರಿಗಳನ್ನು ಹೊಂದಿದ್ದರು ಸಹ ಇದೀಗ ಬಿಡುಗಡೆ ಮಾಡಲಾಗಿರುವ ಸಿಟಿ125 ಮೊಪೆಡ್ ಮಾದರಿಯು ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಭಾರತದಲ್ಲಿ ದುಬಾರಿ ಬೆಲೆಯ ಸಿಟಿ125 ಹಂಟರ್ ಕ್ಲಬ್ ಮೊಪೆಡ್ ಬಿಡುಗಡೆ ಮಾಡಲಿದೆಯಾ ಹೋಂಡಾ?

ಸದ್ಯ ಜಪಾನ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರುವ ಸಿಟಿ 125 ಮಾದರಿಯು ಇದೀಗ ಥೈಲ್ಯಾಂಡ್‌ನಲ್ಲೂ ಬಿಡುಗಡೆಯಾಗುತ್ತಿದ್ದು, ಹೊಸ ವಾಹನದ ಹೆಸರಿನಲ್ಲಿ ತುಸು ಬದಲಾವಣೆ ಮಾಡಿ ಬಿಡುಗಡೆ ಮಾಡಲಾಗುತ್ತಿದೆ.

ಭಾರತದಲ್ಲಿ ದುಬಾರಿ ಬೆಲೆಯ ಸಿಟಿ125 ಹಂಟರ್ ಕ್ಲಬ್ ಮೊಪೆಡ್ ಬಿಡುಗಡೆ ಮಾಡಲಿದೆಯಾ ಹೋಂಡಾ?

ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಈ ಮೊಪೆಡ್ ಬೆಲೆಯು ಸದ್ಯ ರೂ.3 ಲಕ್ಷ (440,000 ಜಪಾನೀಸ್ ಯೆನ್) ಬೆಲೆ ಪಡೆದುಕೊಂಡಿದ್ದು, 125ಸಿಸಿ ಸ್ಕೂಟರ್ ಮತ್ತು ಬೈಕ್ ಮಾದರಿಗಳಲ್ಲೇ ಇದು ಅತಿ ದುಬಾರಿ ಬೆಲೆ ವಾಹನ ಮಾದರಿಯಾಗಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಭಾರತದಲ್ಲಿ ದುಬಾರಿ ಬೆಲೆಯ ಸಿಟಿ125 ಹಂಟರ್ ಕ್ಲಬ್ ಮೊಪೆಡ್ ಬಿಡುಗಡೆ ಮಾಡಲಿದೆಯಾ ಹೋಂಡಾ?

ಸಿಟಿ125 ಮೊಪೆಡ್ ಮಾದರಿಯನ್ನು ವಿಶೇಷವಾಗಿ ಆಫ್-ರೋಡ್ ಸಾಹಸ ಪ್ರದರ್ಶನಕ್ಕಾಗಿಯೇ ನಿರ್ಮಾಣ ಮಾಡಲಾಗಿದ್ದು, ರಗಡ್ ಲುಕ್ ನೀಡುವುದಕ್ಕಾಗಿ ಹೈ ಮೌಂಟೆಡ್ ಎಕ್ಸಾಸ್ಟ್ ಮತ್ತು ಪರ್ಫಾಮೆನ್ಸ್ ಬೈಕ್ ಮಾದರಿಯಲ್ಲಿ ನೀಡಲಾಗುವ ಏರ್ ಇನ್ ಟೆಕ್ ಡಟ್ ಸೌಲಭ್ಯವು ಈ ಮೊಪೆಡ್‌ನಲ್ಲಿದೆ.

ಭಾರತದಲ್ಲಿ ದುಬಾರಿ ಬೆಲೆಯ ಸಿಟಿ125 ಹಂಟರ್ ಕ್ಲಬ್ ಮೊಪೆಡ್ ಬಿಡುಗಡೆ ಮಾಡಲಿದೆಯಾ ಹೋಂಡಾ?

125-ಸಿಸಿ ಫಿಜಿಎಂಐ ಎಫ್ಐ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಸಿಟಿ125 ಮೊಪೆಡ್ ಮಾದರಿಯು 4-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 8.8-ಬಿಎಚ್‌ಪಿ ಮತ್ತು 11-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, 5.4-ಲೀಟರ್ ಫ್ಯೂಲ್ ಟ್ಯಾಂಕ್ ಸೌಲಭ್ಯವಿದೆ.

MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್

ಭಾರತದಲ್ಲಿ ದುಬಾರಿ ಬೆಲೆಯ ಸಿಟಿ125 ಹಂಟರ್ ಕ್ಲಬ್ ಮೊಪೆಡ್ ಬಿಡುಗಡೆ ಮಾಡಲಿದೆಯಾ ಹೋಂಡಾ?

ಮೇಲ್ನೊಟಕ್ಕೆ ಟಿವಿಎಸ್ ಎಕ್ಸ್ಎಲ್100 ಮಾದರಿಯಂತೆ ಕಂಡರೂ ತಾಂತ್ರಿಕವಾಗಿ ಬಲಿಷ್ಠವಾಗಿರುವ ಸಿಟಿ125 ಮೊಪೆಡ್ ಮಾದರಿಯು ಒಟ್ಟು 120ಕೆ.ಜಿ ತೂಕ ಹೊಂದಿದ್ದು, ಅಡ್ವೆಂಚರ್ ಚಾಲನೆಗೆ ಅತ್ಯುತ್ತಮ ಮೊಪೆಡ್ ಮಾದರಿಯಾಗಿದೆ.

ಭಾರತದಲ್ಲಿ ದುಬಾರಿ ಬೆಲೆಯ ಸಿಟಿ125 ಹಂಟರ್ ಕ್ಲಬ್ ಮೊಪೆಡ್ ಬಿಡುಗಡೆ ಮಾಡಲಿದೆಯಾ ಹೋಂಡಾ?

ಹಾಗೆಯೇ ಹೊಸ ಸಿಟಿ125 ಮೊಪೆಡ್‌ನಲ್ಲಿ ಸಿಂಗಲ್ ಚಾನೆಲ್ ಎಬಿಎಸ್ ಜೊತೆ ಎರಡು ಬದಿಯ ಚಕ್ರದಲ್ಲೂ ಡಿಸ್ಕ್ ಬ್ರೇಕ್, ಆಫ್ ರೋಡ್ ಟೈರ್, ಸ್ಟಿಲ್ ಫೆಂಡರ್, ಕ್ರ್ಯಾಶ್ ಗಾರ್ಡ್, ಹಿಟ್ ಪ್ರೋಟೆಕ್ಟರ್, ಡಿಜಿಟಲ್ ಸ್ಪೀಡೋ ಮೀಟರ್, ಫುಲ್ ಎಲ್ಇಡಿ ಲೈಟ್ಸ್, ಸೇರಿದಂತೆ ಹಲವು ಸುರಕ್ಷಾ ಸೌಲಭ್ಯಗಳಿವೆ.

MOST READ: ಕರೋನಾ ವೈರಸ್ ಪರಿಣಾಮ ದ್ವಿಚಕ್ರ ವಾಹನ ಖರೀದಿಗೆ ಹೆಚ್ಚಿದ ಬೇಡಿಕೆ

ಭಾರತದಲ್ಲಿ ದುಬಾರಿ ಬೆಲೆಯ ಸಿಟಿ125 ಹಂಟರ್ ಕ್ಲಬ್ ಮೊಪೆಡ್ ಬಿಡುಗಡೆ ಮಾಡಲಿದೆಯಾ ಹೋಂಡಾ?

ಈ ಮೂಲಕ ಆಫ್-ರೋಡ್ ವೈಶಿಷ್ಟ್ಯತೆಯ ಎಂಟ್ರಿ ಲೆವೆಲ್ ಬೈಕ್ ಮಾದರಿಗಳಿಂತಲೂ ದುಬಾರಿ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಸಿಟಿ125 ಮೊಪೆಡ್ ಮಾದರಿಯ ಸದ್ಯ ಜಪಾನ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದ್ದು, ಮುಂಬರುವ ದಿನಗಳಲ್ಲಿ ಹಲವು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗುವ ಸಿದ್ದತೆಯಲ್ಲಿದೆ.

Article Published On: Friday, June 19, 2020, 8:45 [IST]
English summary
Honda CT125 Hunter Cub Moped Patent Filed In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+