ಭಾರತದಲ್ಲಿ ಬಿಡುಗಡೆಯಾಗಲಿದೆ ಹೋಂಡಾ ನಿರ್ಮಾಣದ ಹೊಸ 200ಸಿಸಿ ಬೈಕ್

ಬಜೆಟ್ ಬೆಲೆಯು ಬೈಕ್ ಮಾದರಿಗಳಿಂದ ವಿವಿಧ ಮಾದರಿಯ ಐಷಾರಾಮಿ ಬೈಕ್ ಆವೃತ್ತಿಗಳ ಮಾರಾಟವನ್ನು ಹೊಂದಿರುವ ಹೋಂಡಾ ಕಂಪನಿಯು ಶೀಘ್ರದಲ್ಲೇ ಮಧ್ಯಮ ಆವೃತ್ತಿಯ ಹೊಚ್ಚ ಹೊಸ 200ಸಿಸಿ ಎಂಜಿನ್ ಸಾಮರ್ಥ್ಯದ ಬೈಕ್ ಮಾದರಿಯೊಂದನ್ನು ಬಿಡುಗಡೆಗೊಳಿಸಲು ಮುಂದಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೋಂಡಾ ನಿರ್ಮಾಣದ ಹೊಸ 200ಸಿಸಿ ಬೈಕ್

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೀರೋ ನಂತರ 2ನೇ ಅತಿದೊಡ್ಡ ಬೈಕ್ ಉತ್ಪಾದನಾ ಕಂಪನಿಯಾಗಿ ಹೊರಹೊಮ್ಮಿರುವ ಹೋಂಡಾ ಮೋಟಾರ್‌ಸೈಕಲ್ ಶೀಘ್ರದಲ್ಲೇ ಮತ್ತಷ್ಟು ಹೊಸ ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಕೆಟಿಎಂ ಡ್ಯೂಕ್ 200 ಬೈಕ್ ಮಾದರಿಗೆ ಪೈಪೋಟಿಯಾಗಿ ಹೊಸ ವಿನ್ಯಾಸ 200ಸಿಸಿ ಸ್ಟ್ರೀಟ್ ಫೈಟರ್ ಬೈಕ್ ಮಾದರಿಯೊಂದು ರಸ್ತೆಗಿಳಿಯುವುದು ಬಹುತೇಕ ಖಚಿತವಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೋಂಡಾ ನಿರ್ಮಾಣದ ಹೊಸ 200ಸಿಸಿ ಬೈಕ್

ಭಾರತದಲ್ಲಿ ಬಿಡುಗಡೆ ಮಾಡಲಿರುವ ಹೊಸ ಬೈಕ್ ಮಾದರಿಯಾಗಿ ಈಗಾಗಲೇ ಹಕ್ಕುಸ್ವಾಮ್ಯ ಪಡೆದುಕೊಂಡಿರುವ ಹೋಂಡಾ ಕಂಪನಿಯು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಸಿಬಿಎಫ್ 190 ಆರ್ ಬೈಕ್ ಮಾದರಿಯ ಹೊಲಿಕೆಯಲ್ಲೇ ಭಾರತದಲ್ಲೂ ಬಿಡುಗಡೆ ಮಾಡಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೋಂಡಾ ನಿರ್ಮಾಣದ ಹೊಸ 200ಸಿಸಿ ಬೈಕ್

ಸಿಬಿಎಫ್ 190 ಆರ್ ಮಾದರಿಯು ಸದ್ಯ ಚೀನಿ ಮತ್ತು ಲ್ಯಾಟಿನ್ ಅಮೆರಿಕ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಮಾದರಿಯು ಹೊಸ ಹೆಸರಿನೊಂದಿಗೆ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೋಂಡಾ ನಿರ್ಮಾಣದ ಹೊಸ 200ಸಿಸಿ ಬೈಕ್

ಸದ್ಯ ಭಾರತದಲ್ಲಿ ಸಿಬಿಆರ್ 250 ಆರ್ ಮತ್ತು ಸಿಬಿ300ಆರ್ ಬೈಕ್‌ಗಳ ಮಾರಾಟವನ್ನು ಸ್ಥಗಿತಗೊಳಿಸಿರುವ ಹೋಂಡಾ ಕಂಪನಿಯು ಯುನಿಕಾನ್ 160 ಮತ್ತು ಸಿಬಿ 300ಆರ್ ಮಾದರಿ ನಡುವಿನ ಸ್ಥಾನವನ್ನು ಭರ್ತಿ ಮಾಡುವುದಕ್ಕಾಗಿ ಹೊಸ ಬೈಕ್ ಮಾದರಿಯನ್ನು ಸಿದ್ದಪಡಿಸಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೋಂಡಾ ನಿರ್ಮಾಣದ ಹೊಸ 200ಸಿಸಿ ಬೈಕ್

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸಿಬಿಎಫ್ 190 ಆರ್ ಮಾದರಿಯು 184 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 15-ಬಿಎಚ್‌ಪಿ ಮತ್ತು 15-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ಭಾರತದಲ್ಲಿ ಬಿಡುಗಡೆಯಾಗಲಿದೆ ಹೋಂಡಾ ನಿರ್ಮಾಣದ ಹೊಸ 200ಸಿಸಿ ಬೈಕ್

ಹೊಸ ಎಂಜಿನ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ಎಲ್ಲಾ ಸಾಧ್ಯತೆಗಳಿದ್ದು, 200 ಸಿಸಿ ಎಂಜಿನ್‌ನೊಂದಿಗೆ ಮಾರಾಟಗೊಳ್ಳುತ್ತಿರುವ ಹಲವು ಬೈಕ್ ಮಾದರಿಗಳಿಗೆ ಇದು ಉತ್ತಮ ಪೈಪೋಟಿಯಾಗಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೋಂಡಾ ನಿರ್ಮಾಣದ ಹೊಸ 200ಸಿಸಿ ಬೈಕ್

ಕೆಟಿಎಂ ಡ್ಯೂಕ್ 200, ಬಜಾಜ್ ಪಲ್ಸರ್ ಎಸ್ಎಸ್200, ಹೀರೋ ಎಕ್ಸ್‌ಟ್ರಿಮ್ 200 ಆರ್ ಮತ್ತು ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಮಾದರಿಗಳಿಗೆ ಇದು ಉತ್ತಮ ಪ್ರತಿಸ್ಪರ್ಧಿ ಮಾದರಿಯಾಗಲಿದ್ದು, ಹಲವಾರು ಪ್ರೀಮಿಯಂ ಫೀಚರ್ಸ್ ಪಡೆದುಕೊಳ್ಳಲಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಭಾರತದಲ್ಲಿ ಬಿಡುಗಡೆಯಾಗಲಿದೆ ಹೋಂಡಾ ನಿರ್ಮಾಣದ ಹೊಸ 200ಸಿಸಿ ಬೈಕ್

ಮಾರ್ಡನ್ ಸ್ಟೈಲ್‌ನೊಂದಿಗೆ ಅಭಿವೃದ್ದಿಗೊಂಡಿರುವ ಹೊಸ ಬೈಕ್ ಮಾದರಿಯು ಸ್ಲಿಕ್ ಟೈಲ್ ಲೈಟ್, ಎಲ್ಇಡಿ ಲೈಟಿಂಗ್ಸ್, ಕ್ಲಿಪ್ ಆನ್-ಹ್ಯಾಂಡಲ್‌ಬಾರ್ಸ್ ಮತ್ತು ಫುಲ್ ಡಿಜಿಟಲ್ ಇನ್ಟ್ರುಮೆಂಟ್ ಸೌಲಭ್ಯಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.25 ಲಕ್ಷದಿಂದ ರೂ.1.30 ಲಕ್ಷ ಬೆಲೆಯೊಂದಿಗೆ ಮಾರಾಟಗೊಳ್ಳುವ ಸಾಧ್ಯತೆಗಳಿವೆ.

Most Read Articles

Kannada
English summary
New Honda 200cc Bike Is Ready To Launch In India. Read in Kannada.
Story first published: Saturday, July 11, 2020, 22:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X