Just In
- 44 min ago ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
- 53 min ago ನಿಮ್ಮ ಬಳಿ 7 ಲಕ್ಷ ರೂಪಾಯಿ ಇದ್ದರೆ ಸಾಕು.. ಕನಸಿನ ಕಾರನ್ನು ಮನೆ ತರಬಹುದು!
- 16 hrs ago ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- 16 hrs ago ಟೊಯೊಟಾದ ಫಾರ್ಚ್ಯೂನರ್ನಲ್ಲೂ ಸಿಗಲಿದೆ ಹೈಬ್ರಿಡ್: ಇದರ ಮೈಲೇಜ್ ಕೇಳಿ ಸುಸ್ತಾದ ಗ್ರಾಹಕರು!
Don't Miss!
- Movies ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- News Heavy Rain: ಭಾರೀ ಗಾಳಿ, ಮಳೆಗೆ ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು: ಸಿಡಿಲು ಬಡಿದು 25 ಮೇಕೆಗಳ ಸಾವು
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Lifestyle ಹೊಟ್ಟೆಯೇ ಇಲ್ಲದೆ ಬದುಕಿದ್ದ ನತಾಶಾ ದಿಡ್ಡಿ ನಿಧನ...! ಈಕೆ ಯಾರು ಗೊತ್ತಾ?
- Finance ಸುಗಮ, ಸುರಕ್ಷಿತ ಸಂಚಾರಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದ ಬೆಂಗಳೂರು ಸಂಚಾರಿ ಪೊಲೀಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅನಾವರಣವಾಗಲಿದೆ ಹೋಂಡಾ ಫೋರ್ಜಾ 750 ಮ್ಯಾಕ್ಸಿ ಸ್ಕೂಟರ್
ಹೋಂಡಾ ಮೋಟಾರ್ಸೈಕಲ್ ಅಂಡ್ ಸ್ಕೂಟರ್ ಕಂಪನಿಯು ತನ್ನ ಫೋರ್ಜಾ 750 ಮ್ಯಾಕ್ಸಿ ಸ್ಕೂಟರ್ನ ಎರಡನೇ ಟೀಸರ್ ವೀಡಿಯೋವನ್ನು ಬಿಡುಗಡೆಗೊಳಿಸಲಿದೆ. ಇದೇ ತಿಂಗಳ 14ರಂದು ಈ ಹೊಸ ಹೋಂಡಾ ಫೋರ್ಜಾ 750 ಮ್ಯಾಕ್ಸಿ ಸ್ಕೂಟರ್ ಅನಾವರಣವಾಗಲಿದೆ.
ಈ ಹಿಂದೆ ಹೋಂಡಾ ಕಂಪನಿಯು ಮೊದಲ ಟೀಸರ್ ಚಿತ್ರ ಬಿಡುಗಡೆಗೊಂಡಾಗ ಹೊಸ ಫೋರ್ಜಾ 350 ಸಿಸಿ ಮ್ಯಾಕ್ಸಿ ಸ್ಕೂಟರ್ ಎಂದು ವರದಿಗಳು ಪ್ರಕಟವಾಗಿತ್ತು. ಆದರೆ ಇತ್ತೀಚೆಗೆ ಹೋಂಡಾ ಕಂಪನಿಯು ಹೊಸ ಸ್ಕೂಟರ್ ಟೀಸರ್ ವೀಡಿಯೋವನ್ನು ಬಿಡುಗಡೆಗೊಳಿಸಿತ್ತು. ಟೀಸರ್ ವೀಡಿಯೋದಲ್ಲಿ ಇದು ಫೋರ್ಜಾ ಸರಣಿಯ ಮ್ಯಾಕ್ಸಿ-ಸ್ಕೂಟರ್ಗಳಿಗೆ ಸೇರ್ಪಡೆಗೊಳ್ಳುವ ಇತ್ತೀಚಿನ ಮಾದರಿ ಫೋರ್ಜಾ 750 ಎಂದು ಖಚಿತವಾಗಿದೆ. ಇದೀಗ ಹೋಂಡಾ ಕಂಪನಿಯು ಫೋರ್ಜಾ 750 ಸ್ಕೂಟರ್ನ ಎರಡನೇ ಟೀಸರ್ ವೀಡಿಯೋವನ್ನು ಬಿಡುಗಡೆಗೊಳಿಸಿದೆ.
ಇನ್ನು ಹೊಸ ಫೋರ್ಜಾ 750 ಮ್ಯಾಕ್ಸಿ-ಸ್ಕೂಟರ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಎಂಜಿನ್ ಸ್ಟ್ರಾಟ್/ಸ್ಟಾಪ್ ಬಟನ್ ಅನ್ನು ನೀಡಿದ್ದಾರೆ. ಇನ್ನು ಪುಲ್ ಡಿಜಿಟಲ್ ಮತ್ತು ಕಲರ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಜೊತೆಗೆ ಸ್ಪೀಡೋಮೀಟರ್, ರೆವ್ ಕೌಂಟರ್, ಫ್ಯೂಯಲ್ ಗೇಜ್, ಟ್ರಿಪ್ ಮೀಟರ್ ಮುಂತಾದ ಮಾಹಿತಿಯನ್ನು ನೀಡುತ್ತದೆ.
MOST
READ:
ದುಬಾರಿಯಾಯ್ತು
ಬಿಎಸ್-6
ಟಿವಿಎಸ್
ಎನ್ಟಾರ್ಕ್
125
ಸ್ಕೂಟರ್
ಹೊಸ ಹೋಂಡಾ ಫೋರ್ಜಾ 750 ಸ್ಕೂಟರ್ನಲ್ಲಿನ ಕ್ಲಸ್ಟರ್ ನೊಂದಿಗೆ ಸ್ಮಾರ್ಟ್ ಪೋನ್ ಬ್ಲೂಟೂತ್ ಮೂಲಕ ಕನೆಕ್ಟ್ ಮಾಡಬಹುದಾಗಿದೆ. ಇದರರ್ಥ ಫೋರ್ಜಾ 750 ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕರೆ ಮತ್ತು ಮ್ಯೂಸಿಕ್ ನಂತಹ ಫೀಚರ್ ಅನ್ನು ಹೊಂದಿರುವ ಸಾಧ್ಯತೆಗಳಿದೆ.
ಹೊಸ ಹೋಂಡಾ ಫೋರ್ಜಾ 750 ಸ್ಕೂಟರ್ ಎಂಜಿನ್ ಮಾಹಿತಿಯನ್ನು ಇನ್ನು ಕೂಡ ಬಹಿರಂಗಪಡಿಸಲಿಲ್ಲ. ಇನ್ನು ಈ ಹೊಸ ಮ್ಯಾಕ್ಸಿ-ಸ್ಕೂಟರ್ ವಿಭಿನ್ನ ರೈಡಿಂಗ್ ಮೋಡ್ ಗಳನ್ನು ಹೊಂದಿರುತ್ತದೆ ಎಂದು ಟೀಸರ್ ವೀಡಿಯೋದಿಂದ ತಿಳಿಯುತ್ತದೆ.
MOST READ: ಎಪ್ರಿಲಿಯಾ ಎಸ್ಎಕ್ಸ್ಆರ್ 160 ಸ್ಕೂಟರ್ ಟೀಸರ್ ಚಿತ್ರ ಬಿಡುಗಡೆ
ಇನ್ನು ಈ ಹೊಸ ಹೋಂಡಾ ಫೋರ್ಜಾ 750 ಸ್ಕೂಟರ್ ಡಿಸೈನ್ ಬಗ್ಗೆ ನೋಡುವುದಾರೆ, ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಹೊಂದಿಸಲಾದ ಟ್ವಿನ್-ಎಲ್ಇಡಿ ಹೆಡ್ಲ್ಯಾಂಪ್ ಮತ್ತು ಸ್ಟೈಲಿಶ್ ಎಲ್ಇಡಿ ಟೈಲ್ ಲ್ಯಾಂಪ್ ಸೇರಿದಂತೆ ಪೂರ್ಣ-ಎಲ್ಇಡಿ ಲೈಟಿಂಗ್ ಹೊಂದಿರುತ್ತದೆ.
ಹೋಂಡಾ ಫೋರ್ಜಾ 350 ಸಿಸಿ ಸ್ಕೂಟರ್ ಅನ್ನು ಜುಲೈ ತಿಂಗಳಿನಲ್ಲಿ ಥೈಲ್ಯಾಂಡ್ ನಲ್ಲಿ ಬಿಡುಗಡೆಗೊಳಿಸಲಾಗಿತ್ತು. ಫೋರ್ಜಾ 350 ಸ್ಕೂಟರ್ ಉದ್ದವಾದ ವ್ಹೀಲ್ ಬೇಸ್ ಹಾಗೂ ಸ್ಪೋರ್ಟಿ ವಿನ್ಯಾಸವನ್ನು ಹೊಂದಿದೆ. ಈ ಸ್ಕೂಟರ್ ಆಟೋಮ್ಯಾಟಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ವಿಂಡ್ಸ್ಕ್ರೀನ್ ಅನ್ನು ಹೊಂದಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್ಎಕ್ಸ್ ಬೈಕ್
ಹೋಂಡಾ ಫೋರ್ಜಾ 350 ಸಿಸಿ ಜಾಗತಿಕವಾಗಿ ಬಿಡುಗಡೆಗೊಳಿಸಲಾಗುವುದು. ಈ ಸ್ಕೂಟರ್ ಹಿಂದಿನ ಎರಡು ಫೋರ್ಜಾ ಸ್ಕೂಟರ್ಗಳಿಗಿಂತ ಹೆಚ್ಚಿನ ಪವರ್ ಹಾಗೂ ಪರ್ಫಾಮೆನ್ಸ್ ಹೊಂದಿದೆ. ದೊಡ್ಡ ಎಂಜಿನ್ ಹೊಂದಿರುವ ಕಾರಣಕ್ಕೆ ಈ ಸ್ಕೂಟರಿನ ಮೈಲೇಜ್ ಕಡಿಮೆಯಾಗಲಿದೆ.
ಇನ್ನು ಇದೇ ತಿಂಗಳ 14ರಂದು ಹೊಸ ಹೋಂಡಾ ಫೋರ್ಜಾ 750 ಸ್ಕೂಟರ್ ಅನಾವರಣವಾಗಲಿದೆ, ಈ ಹೊಸ ಮಾಕ್ಸಿ ಸ್ಕೂಟರ್ ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸುತ್ತೇವೆ.
ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಕಂಪನಿಯು ಹೊಸ ಫೋರ್ಜಾ 750 ಸ್ಕೂಟರ್ ಅನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳು ಕಡಿಮೆಯಾಗಿದೆ. ಆದರೆ ಭಾರತದಲ್ಲಿ ಸಣ್ಣ ಫೋರ್ಜಾ 300 ಸ್ಕೂಟರ್ ಅನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಬಹುದು.