ದ್ವಿಚಕ್ರ ವಾಹನಗಳ ಮಾರಾಟ ಸುಧಾರಣೆಗಾಗಿ ವಾರಂಟಿ ಅವಧಿ ಹೆಚ್ಚಿಸಿದ ಹೋಂಡಾ

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಕರೋನಾ ವೈರಸ್‌ನಿಂದಾಗಿ ಇಳಿಕೆಯಾಗಿರುವ ವಾಹನ ಮಾರಾಟ ಪ್ರಮಾಣವನ್ನು ಸುಧಾರಣೆಗೊಳಿಸಲು ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿದ್ದು, ಪ್ರಮುಖ ದ್ವಿಚಕ್ರ ವಾಹನ ಮಾದರಿಗಳ ಖರೀದಿ ಮೇಲೆ ಹೆಚ್ಚುವರಿ ವಾರಂಟಿ ಅವಧಿಯ ಆಫರ್ ನೀಡುತ್ತಿದೆ.

ದ್ವಿಚಕ್ರ ವಾಹನ ಮಾರಾಟ ಸುಧಾರಣೆಗಾಗಿ ವಾರಂಟಿ ಅವಧಿ ಹೆಚ್ಚಿಸಿದ ಹೋಂಡಾ

ಮಹಾಮಾರಿ ಕರೋನಾ ವೈರಸ್‌ನಿಂದಾಗಿ ಬಹುತೇಕ ಆಟೋ ಕಂಪನಿಗಳಿಗೆ ಭಾರೀ ನಷ್ಟ ಉಂಟಾಗಿದ್ದು, ಲಾಕ್‌ಡೌನ್ ವಿನಾಯ್ತಿ ನಂತರವೂ ಹೊಸ ವಾಹನಗಳ ಮಾರಾಟ ಪ್ರಮಾಣದಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸಿವೆ. ಸದ್ಯ ವೈರಸ್ ಭೀತಿ ನಡುವೆಯೂ ಸುರಕ್ಷಾ ಮಾರ್ಗಸೂಚಿಯೊಂದಿಗೆ ವ್ಯಾಪಾರ ವಹಿವಾಟು ಕೈಗೊಂಡಿರುವ ಆಟೋ ಕಂಪನಿಗಳು ಕನಿಷ್ಠ ಪ್ರಮಾಣದ ವಾಹನ ಮಾರಾಟವನ್ನು ದಾಖಲಿಸಿದ್ದು, ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಕೂಡಾ ಈ ಬಾರಿ ಕನಿಷ್ಠ ಪ್ರಮಾಣದ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಮೇ 4ರಿಂದ 31ರ ತನಕ ಕೇವಲ 54 ಸಾವಿರ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.

ದ್ವಿಚಕ್ರ ವಾಹನ ಮಾರಾಟ ಸುಧಾರಣೆಗಾಗಿ ವಾರಂಟಿ ಅವಧಿ ಹೆಚ್ಚಿಸಿದ ಹೋಂಡಾ

ದೇಶಿಯ ಮಾರುಕಟ್ಟೆಯಲ್ಲಿ 54 ಸಾವಿರ ಯುನಿಟ್ ಮಾರಾಟ ಮಾಡಿದ್ದಲ್ಲಿ 824 ಯುನಿಟ್ ದ್ವಿಚಕ್ರ ವಾಹನಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತುಗೊಳಿಸಿದ್ದು, ಲಾಕ್‌ಡೌನ್ ಸಡಿಲಿಕೆಯ ನಂತರ ಸಾಗರೋತ್ತರ ವ್ಯವಹಾರಗಳು ಕೂಡಾ ಮರುಚಾಲನೆ ಪಡೆದುಕೊಂಡಿವೆ.

ದ್ವಿಚಕ್ರ ವಾಹನ ಮಾರಾಟ ಸುಧಾರಣೆಗಾಗಿ ವಾರಂಟಿ ಅವಧಿ ಹೆಚ್ಚಿಸಿದ ಹೋಂಡಾ

2019ರ ಮೇ ಅವಧಿಯಲ್ಲಿ 4.82 ಲಕ್ಷ ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದ ಹೋಂಡಾ ಕಂಪನಿಯು ಈ ಬಾರಿ ಮೇ ಅವಧಿಯಲ್ಲಿ 54,820 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾಡುವ ಮೂಲಕ ಶೇ.92ರಷ್ಟು ಹಿನ್ನಡೆ ಅನುಭವಿಸಿದ್ದು, ಮುಂಬರುವ ದಿನಗಳಲ್ಲಿ ವಾಹನ ಮಾರಾಟವು ಚೇತರಿಕೆ ಕಾಣುವ ವಿಶ್ವಾಸದಲ್ಲಿದೆ.

ದ್ವಿಚಕ್ರ ವಾಹನ ಮಾರಾಟ ಸುಧಾರಣೆಗಾಗಿ ವಾರಂಟಿ ಅವಧಿ ಹೆಚ್ಚಿಸಿದ ಹೋಂಡಾ

ಇದಕ್ಕಾಗಿ ಆಯ್ದ ದ್ವಿಚಕ್ರ ವಾಹನ ಖರೀದಿ ಮೇಲೆ ವಿಸ್ತರಿತ ವಾರಂಟಿ ಘೋಷಣೆ ಮಾಡಿದ್ದು, ಸೀಮಿತ ಅವಧಿಯಲ್ಲಿ ದ್ವಿಚಕ್ರ ವಾಹನ ಖರೀದಿಸುವ ಗ್ರಾಹಕರಿಗೆ 2 ವರ್ಷಗಳ ಜೊತೆಗೆ ಹೆಚ್ಚುವರಿ 1 ವರ್ಷದ ವಾರಂಟಿ ಅವಧಿಯ ಆಫರ್ ಲಭ್ಯವಾಗಲಿದೆ.

ದ್ವಿಚಕ್ರ ವಾಹನ ಮಾರಾಟ ಸುಧಾರಣೆಗಾಗಿ ವಾರಂಟಿ ಅವಧಿ ಹೆಚ್ಚಿಸಿದ ಹೋಂಡಾ

ಇನ್ನು ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬಂದಿರುವ ಬಿಎಸ್-6 ಎಮಿಷನ್ ನಿಯಮ ಅನುಗುಣವಾಗಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಪ್ರಸ್ತುತ ಮಾರುಕಟ್ಟೆಯಲ್ಲಿರುವ ತಮ್ಮ ವಾಹನ ಮಾದರಿಗಳನ್ನು ಉನ್ನತೀಕರಿಸಿದ್ದು, ಹೋಂಡಾ ಮೋಟಾರ್‌ಸೈಕಲ್ ಕೂಡಾ ಬಿಎಸ್-6 ಮಾದರಿಯ ಸ್ಕೂಟರ್ ಮತ್ತು ಬೈಕ್‌ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ದ್ವಿಚಕ್ರ ವಾಹನ ಮಾರಾಟ ಸುಧಾರಣೆಗಾಗಿ ವಾರಂಟಿ ಅವಧಿ ಹೆಚ್ಚಿಸಿದ ಹೋಂಡಾ

ಸದ್ಯ ಮಾರುಕಟ್ಟೆಯಲ್ಲಿ ಆಕ್ಟಿವಾ 6ಜಿ, ಆಕ್ಟಿವಾ 125 ಎಫ್ಐ, ಡಿಯೋ, ಎಸ್‌ಪಿ 125 ಮತ್ತು ಶೈನ್ ಬೈಕ್ ಮಾದರಿಗಳು ಬಿಎಸ್-6 ಎಂಜಿನ್‌ನೊಂದಿಗೆ ಖರೀದಿಗೆ ಲಭ್ಯವಿದ್ದು, ಹೊಸ ಎಮಿಷನ್ ಜಾರಿಗೆ ಮುನ್ನ ಬಿಡುಗಡೆಯಾಗಲಿರುವ ಹೊಸ ದ್ವಿಚಕ್ರ ವಾಹನಗಳಿಗೆ ಇದುವರೆಗೆ ದಾಖಲೆಯ ಪ್ರಮಾಣದ ಬೇಡಿಕೆ ಹರಿದು ಬಂದಿದೆ.

ದ್ವಿಚಕ್ರ ವಾಹನ ಮಾರಾಟ ಸುಧಾರಣೆಗಾಗಿ ವಾರಂಟಿ ಅವಧಿ ಹೆಚ್ಚಿಸಿದ ಹೋಂಡಾ

ಹೋಂಡಾ ನಿರ್ಮಾಣದ ಬಹುತೇಕ ದ್ವಿಚಕ್ರ ವಾಹನಗಳು ಹೊಸ ಎಂಜಿನ್ ಜೋಡಣೆಯ ನಂತರ ದುಬಾರಿ ಬೆಲೆ ಪಡೆದುಕೊಂಡಿದ್ದು, ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ.4 ಸಾವಿರದಿಂದ ರೂ. 12 ಸಾವಿರದಷ್ಟು ಹೆಚ್ಚುವರಿ ದರ ಪಡೆದುಕೊಂಡಿವೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ದ್ವಿಚಕ್ರ ವಾಹನ ಮಾರಾಟ ಸುಧಾರಣೆಗಾಗಿ ವಾರಂಟಿ ಅವಧಿ ಹೆಚ್ಚಿಸಿದ ಹೋಂಡಾ

ಜೊತೆಗೆ ಹೊಸ ವಾಹನಗಳ ಎಂಜಿನ್ ಅಭಿವೃದ್ದಿಯಲ್ಲಿ ಸಾಕಷ್ಟು ಸುಧಾರಣೆ ತಂದಿರುವ ಹೋಂಡಾ ಕಂಪನಿಯು ಮಾಲಿನ್ಯ ಹೊರಸೂಸುವಿಕೆ ಪ್ರಮಾಣದಲ್ಲಿ ಸಾಕಷ್ಟು ಸುಧಾರಣೆಗೊಳಿಸಿದ್ದು, ಮೈಲೇಜ್ ಪ್ರಮಾಣದಲ್ಲಿ ಶೇ.10ರಷ್ಟು ಹೆಚ್ಚಳ ಮಾಡಿದೆ.

More from DriveSpark

Article Published On: Friday, June 26, 2020, 8:45 [IST]
English summary
Honda Two Wheelers Get Optional Warranty Extension. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+