ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿಯಲಿದೆ ದ್ವಿಚಕ್ರ ವಾಹನಗಳ ಮಾರಾಟ

ಕರೋನಾ ವೈರಸ್ ಹಾವಳಿಯಿಂದಾಗಿ ಭಾರತದಲ್ಲಿ ದ್ವಿಚಕ್ರ ವಾಹನ ಮಾರಾಟವು ಈ ಆರ್ಥಿಕ ವರ್ಷದಲ್ಲಿ ಕುಸಿತಗೊಳ್ಳುವ ಸಾಧ್ಯತೆಗಳಿವೆ. 21 ದಿನಗಳ ಲಾಕ್‌ಡೌನ್ ಘೋಷಿಸಿರುವ ಕಾರಣಕ್ಕೆ ಬಹುತೇಕ ಡೀಲರ್ ಗಳು ನಷ್ಟ ಅನುಭವಿಸುತ್ತಿದ್ದು, ಶೋರೂಂಗಳನ್ನು ಮುಚ್ಚುವ ಹಾದಿಯಲ್ಲಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿಯಲಿದೆ ದ್ವಿಚಕ್ರ ವಾಹನಗಳ ಮಾರಾಟ

ಆದರೆ ಆಟೋಮೊಬೈಲ್ ಕಂಪನಿಗಳು ಶೋರೂಂಗಳನ್ನು ಮುಚ್ಚದಂತೆ ಮಾಡುವಲ್ಲಿ ನಿರತವಾಗಿವೆ. ದಿ ಎಕನಾಮಿಕ್ ಟೈಮ್ಸ್ ವರದಿಗಳ ಪ್ರಕಾರ, 2021ರ ಆರ್ಥಿಕ ವರ್ಷದಲ್ಲಿ ಭಾರತದ ದ್ವಿಚಕ್ರ ವಾಹನಗಳ ಮಾರಾಟವು ದೊಡ್ಡ ಮಟ್ಟದಲ್ಲಿ ಕುಸಿತ ಕಾಣಲಿದೆ.

ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿಯಲಿದೆ ದ್ವಿಚಕ್ರ ವಾಹನಗಳ ಮಾರಾಟ

11%ನಿಂದ 13%ವರೆಗೂ ಕುಸಿತವಾಗಬಹುದು ಎಂದು ಅಂದಾಜಿಸಲಾಗಿದೆ. ಇದನ್ನು ಸಂಖ್ಯೆಯಲ್ಲಿ ಹೇಳುವುದಾದರೆ 20ರಿಂದ 21 ಲಕ್ಷ ಯುನಿಟ್‌ಗಳವರೆಗೆ ಕುಸಿತವಾಗಬಹುದು. ಸದ್ಯಕ್ಕೆ ಬಹುತೇಕ ಕಂಪನಿಗಳು ತಮ್ಮ ಮಾರಾಟವನ್ನು ಸ್ಥಗಿತಗೊಳಿಸಿವೆ.

ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿಯಲಿದೆ ದ್ವಿಚಕ್ರ ವಾಹನಗಳ ಮಾರಾಟ

ಈ ಸನ್ನಿವೇಶದ ಬಗ್ಗೆ ಮಾತನಾಡಿರುವ ಐಸಿಆರ್ ಎ ಉಪಾಧ್ಯಕ್ಷರು, ದ್ವಿಚಕ್ರ ವಾಹನ ಕಂಪನಿಗಳು ಹೆಚ್ಚು ನಷ್ಟವನ್ನು ಅನುಭವಿಸಲಿವೆ. ಇದರ ಜೊತೆಗೆ ಈ ಕಂಪನಿಗಳ ಮೇಲೆ ಮಾರಾಟವಾಗದೇ ಉಳಿದಿರುವ ಬಿಎಸ್ 4 ವಾಹನಗಳನ್ನು ಮಾರಾಟ ಮಾಡುವ ಒತ್ತಡ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಎಂದು ಹೇಳಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿಯಲಿದೆ ದ್ವಿಚಕ್ರ ವಾಹನಗಳ ಮಾರಾಟ

2020ರ ಆರ್ಥಿಕ ವರ್ಷವೂ ಸಹ ದ್ವಿಚಕ್ರ ವಾಹನ ಕಂಪನಿಗಳಿಗೆ ಉತ್ತಮವಾಗಿರಲಿಲ್ಲ. ಈ ಅವಧಿಯಲ್ಲಿ ದ್ವಿಚಕ್ರ ವಾಹನಗಳ ಮಾರಾಟವು 16%ನಷ್ಟು ಕುಸಿತವನ್ನು ದಾಖಲಿಸಿದೆ. ಕರೋನಾ ವೈರಸ್ ನಿಂದಾಗಿ ವಾಹನಗಳ ಉತ್ಪಾದನೆ ಹಾಗೂ ಮಾರಾಟವು ಸ್ಥಗಿತಗೊಂಡಿದೆ.

ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿಯಲಿದೆ ದ್ವಿಚಕ್ರ ವಾಹನಗಳ ಮಾರಾಟ

ದೇಶದಲ್ಲಿ ನಾಲ್ಕು ಚಕ್ರ ವಾಹನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಹೆಚ್ಚಿನ ಬೈಕು ಕಂಪನಿಗಳು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಆಯ್ಕೆಯನ್ನು ಹೊಂದಿಲ್ಲ. ಇದರಿಂದಾಗಿ ಮಾರಾಟ ಪ್ರಮಾಣವು ಇನ್ನೂ ಕಡಿಮೆಯಾಗಿದೆ.

ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿಯಲಿದೆ ದ್ವಿಚಕ್ರ ವಾಹನಗಳ ಮಾರಾಟ

ಕರೋನಾ ವೈರಸ್ ಹಾವಳಿಯಿಂದಾಗಿ ಭಾರತದಲ್ಲಿ ಕೆಳವರ್ಗ ಹಾಗೂ ಮಧ್ಯಮ ವರ್ಗದವರು ಹೆಚ್ಚು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ವರ್ಗದ ಗ್ರಾಹಕರೇ ದ್ವಿಚಕ್ರ ವಾಹನಗಳ ಪ್ರಮುಖ ಗ್ರಾಹಕರು. ಆರ್ಥಿಕ ಸಂಕಷ್ಟದಿಂದಾಗಿ ದ್ವಿಚಕ್ರ ವಾಹನ ಕಂಪನಿಗಳು ಈ ಗ್ರಾಹಕರನ್ನು ಕಳೆದುಕೊಂಡು ಮಾರಾಟವು ಕಡಿಮೆಯಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Indian two wheeler sales will decline in FY21. Read in Kannada.
Story first published: Thursday, April 9, 2020, 13:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X