ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಜಾವಾ ಮೋಟಾರ್‌ಸೈಕಲ್

ಭಾರತೀಯ ಮಾರುಕಟ್ಟೆಯಲ್ಲಿ ಜಾವಾ ಬೈಕುಗಳನ್ನು ತಯಾರಿಸಿ ಮಾರಾಟ ಮಾಡುವ ಕ್ಲಾಸಿಕ್ ಲೆಜೆಂಡ್ಸ್ ಪ್ರೈವೇಟ್ ಲಿಮಿಟೆಡ್ ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. ಕೇವಲ 12 ತಿಂಗಳ ಅವಧಿಯಲ್ಲಿ ಕ್ಲಾಸಿಕ್ ಲೆಜೆಂಡ್ಸ್ 50,000 ಜಾವಾ ಬೈಕುಗಳನ್ನು ಮಾರಾಟ ಮಾಡಲಾಗಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಜಾವಾ ಮೋಟಾರ್‌ಸೈಕಲ್

ಲಾಕ್‌ಡೌನ್ ಸಡಿಲಿಕೆ ಮಾಡಿದ ಬಳಿಕ ಜಾವಾ ಮೋಟಾರ್‌ಸೈಕಲ್ ಕಂಪನಿಯ ಬೈಕುಗಳ ಮಾರಾಟದಲ್ಲಿ ಗಮನಾರ್ಹ ಚೇತರಿಕೆ ಕಂಡಿದೆ. ಇದರಿಂದ ಜಾವಾ ಮೋಟಾರ್‌ಸೈಕಲ್ ಕಂಪನಿಯು ಕೂಡ ಭಾರತೀಯ ಮಾರುಕಟ್ಟೆಯ ದ್ವಿಚಕ್ರ ವಿಭಾಗದಲ್ಲಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ. ಪ್ರಸ್ತುತ ಕಂಪನಿಯು ದೇಶದಲ್ಲಿ 105 ಶೋ ರೂಂಗಳನ್ನು ಹೊಂದಿವೆ. ಲಾಕ್‌ಡೌನ್ ತೆರವಿನ ಬಳಿಕ 58 ಹೊಸ ಡೀಲರ್‌ಶಿಪ್ ಅನ್ನು ಪ್ರಾರಂಭಿಸಿದ್ದಾರೆ. ಜಾವಾ ಬೈಕುಗಳು ಭಾರತೀಯ ಮಾರುಕಟ್ಟೆಯಲ್ಲಿ ನೇರವಾಗಿ ರಾಯಲ್ ಎನ್‍ಫೀಲ್ಡ್ಬ್ ಮಾದರಿಗಳಿಗೆ ಪೈಪೋಟಿ ನೀಡುತ್ತದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಜಾವಾ ಮೋಟಾರ್‌ಸೈಕಲ್

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿರುವುದರ ಕುರಿತು ಕ್ಲಾಸಿಕ್ ಲೆಜೆಂಡ್ಸ್ ಪ್ರೈವೇಟ್ ಲಿಮಿಟೆಡ್ ಸಿಇಒ ಆಶಿಶ್ ಸಿಂಗ್ ಜೋಶಿ ಅವರು ಮಾತನಾಡಿ, ಭಾರತೀಯ ಮಾರುಕಟ್ಟೆಗೆ ಹೊಸ ಹೊಸದಾಗಿ ಪ್ರವೇಶಿಸಿದ ನಾವು ಇಷ್ಟು ಕಡಿಮೆ ಅವಧಿಯಲ್ಲಿ ನಾವು ಸಾಧಿಸಿದ್ದಕ್ಕೆ ಹೆಮ್ಮೆಪಡುತ್ತೇವೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಜಾವಾ ಮೋಟಾರ್‌ಸೈಕಲ್

ಜಾವಾ ಬ್ರ್ಯಾಂಡ್‌ನ ಮೂರು ಮಾದರಿಗಳು, ಸಾಟಿಯಿಲ್ಲದ ಮತ್ತು ವ್ಯಾಪಕವಾದ ಮಾರಾಟ ಕಂಡಿದೆ, ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ನಮ್ಮ ಎಲ್ಲಾ ಕಾರ್ಯಾಚರಣೆಗಳನ್ನು ನಿರಂತರವಾಗಿ ಹೆಚ್ಚಿಸುತ್ತಿದ್ದೇವೆ ಎಂದು ಹೇಳಿದರು.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಜಾವಾ ಮೋಟಾರ್‌ಸೈಕಲ್

ಕೇವಲ 12 ತಿಂಗಳ ಅವಧಿಯಲ್ಲಿ 50,000 ಬೈಕುಗಳ ಮಾರಾಟ ಮೈಲಿಗಲ್ಲನ್ನು ದಾಟುವುದು ನಮಗೆ ಅತ್ಯಂತ ಮಹತ್ವದ್ದಾಗಿದೆ. ಇದು ಕೇವಲ ಒಂದು ಸಂಖ್ಯೆಯಲ್ಲ ಆದರೆ ನಮ್ಮ ಓಡೋಮೀಟರ್‌ನಲ್ಲಿ ಒಂದು ಪ್ರಮುಖ ಹೆಚ್ಚೆ ಗುರುತು ಎಂದು ಹೇಳಿದರು.

MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಜಾವಾ ಮೋಟಾರ್‌ಸೈಕಲ್

2020ರ ಡಿಸೆಂಬರ್ ವೇಳೆಗೆ ತನ್ನ ಡೀಲರ್‌ಶಿಪ್ ಸಂಖ್ಯೆಯನ್ನು 205ಕ್ಕೆ ಏರಿಸುವುದಾಗಿ ಜಾವಾ ಮೋಟಾರ್‌ಸೈಕಲ್ ಹೇಳಿದೆ. ಹಬ್ಬದ ಸೀಸನ್ ಅಕ್ಟೋಬರ್‌ನಲ್ಲಿ ಮಾತ್ರ 2,000ಕ್ಕೂ ಹೆಚ್ಚು ಜಾವಾ ಪೆರಾಕ್ ಬೈಕುಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. ಜಾವಾ ಮೋಟಾರ್‌ಸೈಕಲ್ ಕಂಪನಿಯ ಕಸ್ಟಮ್ ಬಾಬರ್‌ ಎಂಬ ಕರ್ಖಾನೆಯಿಂದ 2,000ಕ್ಕೂ ಹೆಚ್ಚು ಜಾವಾ ಪೆರಾಕ್ ಬೈಕುಗಳನ್ನು ವಿತರಿಸಲಾಗಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಜಾವಾ ಮೋಟಾರ್‌ಸೈಕಲ್

ಜಾವಾ ಮೋಟಾರ್‌ಸೈಕಲ್ ಕಂಪನಿಯು ಹಲವು ವರ್ಷಗಳ ನಂತರ 2018ರಲ್ಲಿ ದೇಶಿಯ ಮಾರುಕಟ್ಟೆಗೆ ಮತ್ತೆ ಕಾಲಿಟ್ಟಿತು. ಜಾವಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಜಾವಾ ಸ್ಟ್ಯಾಂಡರ್ಡ್, ಜಾವಾ 42 ಹಾಗೂ ಜಾವಾ ಪೆರಾಕ್ ಎಂಬ ಮೂರು ಮಾದರಿಗಳನ್ನು ಮಾರಾಟ ಮಾಡುತ್ತಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಜಾವಾ ಮೋಟಾರ್‌ಸೈಕಲ್

ಜಾವಾ ಪೆರಾಕ್ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ. ಇನ್ನು ಜಾವಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಪಿಥಾಂಪುರದಲ್ಲಿ ಉತ್ಪಾದನಾ ಕೇಂದ್ರದಲ್ಲಿ ಜಾವಾ ಪೆರಾಕ್ ಬೈಕಿನ ಉತ್ಪಾದನೆಯನ್ನು ಹೆಚ್ಚಿಸಲಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಜಾವಾ ಮೋಟಾರ್‌ಸೈಕಲ್

ದೇಶಾದ್ಯಂತ ಒಟ್ಟು ಡೀಲರುಗಳ ಸಂಖ್ಯೆಯನ್ನು ಹೆಚ್ಚಿಸಿದಾಗ ಕ್ಲಾಸಿಕ್ ಲೆಜೆಂಡ್ಸ್ ಜಾವಾ ಬೈಕುಗಳು ಗ್ರಾಹಕರಿಗೆ ಸುಲಭವಾಗಿ ಲಭ್ಯವಾಗುವಂತೆ ಆಗುತ್ತದೆ. ರೆಟ್ರೊ ಶೈಲಿಯ ಜಾವಾ ಬೈಕುಗಳು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ದೀಪಾವಳಿ ಹಬ್ಬದ ವೇಳೆಯಲ್ಲಿ ಮಾರಾಟದಲ್ಲಿ ಉತ್ತಮ ಬೆಳವಣಿಗೆಯನ್ನು ಸಾಧಿಸುವ ಸಾಧ್ಯತೆಗಳಿದೆ.

More from DriveSpark

Article Published On: Wednesday, November 11, 2020, 16:38 [IST]
English summary
Jawa Motorcycle Sales Cross 50,000 Units In India. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+