ಭಾರತದಲ್ಲಿ ತನ್ನ ಡೀಲರ್‌ಶಿಪ್‌ಗಳನ್ನು ವಿಸ್ತರಿಸಲು ಮುಂದಾದ ಜಾವಾ ಮೋಟಾರ್‌ಸೈಕಲ್

ಲಾಕ್‌ಡೌನ್ ಸಡಿಲಿಕೆ ಮಾಡಿದ ಬಳಿಕ ಜಾವಾ ಮೋಟಾರ್‌ಸೈಕಲ್ ಕಂಪನಿಯ ಬೈಕುಗಳ ಮಾರಾಟದಲ್ಲಿ ಗಮನಾರ್ಹ ಚೇತರಿಕೆ ಕಂಡಿದೆ. ಇದರಿಂದ ಜಾವಾ ಮೋಟಾರ್‌ಸೈಕಲ್ ಕಂಪನಿಯು ಕೂಡ ಭಾರತೀಯ ಮಾರುಕಟ್ಟೆಯ ದ್ವಿಚಕ್ರ ವಿಭಾಗದಲ್ಲಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ.

ಭಾರತದಲ್ಲಿ ತನ್ನ ಡೀಲರ್‌ಶಿಪ್‌ಗಳನ್ನು ವಿಸ್ತರಿಸಲು ಮುಂದಾದ ಜಾವಾ ಮೋಟಾರ್‌ಸೈಕಲ್

ಇದಕ್ಕಾಗಿ 2020ರ ಡಿಸೆಂಬರ್ ವೇಳೆಗೆ ತನ್ನ ಡೀಲರ್‌ಶಿಪ್ ಸಂಖ್ಯೆಯನ್ನು 205ಕ್ಕೆ ಏರಿಸುವುದಾಗಿ ಜಾವಾ ಮೋಟಾರ್‌ಸೈಕಲ್ಸ್ ಗುರುವಾರ ಪ್ರಕಟಿಸಿದೆ. ಪ್ರಸ್ತುತ ಕಂಪನಿಯು ದೇಶದಲ್ಲಿ 105 ಶೋ ರೂಂಗಳನ್ನು ಹೊಂದಿವೆ. ಲಾಕ್‌ಡೌನ್ ತೆರವಿನ ಬಳಿಕ 58 ಹೊಸ ಡೀಲರ್‌ಶಿಪ್ ಅನ್ನು ಪ್ರಾರಂಭಿಸಿದ್ದಾರೆ. ಜಾವಾ ಬೈಕುಗಳು ಭಾರತೀಯ ಮಾರುಕಟ್ಟೆಯಲ್ಲಿ ನೇರವಾಗಿ ರಾಯಲ್ ಎನ್‍ಫೀಲ್ಡ್ಬ್ ಮಾದರಿಗಳಿಗೆ ಪೈಪೋಟಿ ನೀಡುತ್ತದೆ.

ಭಾರತದಲ್ಲಿ ತನ್ನ ಡೀಲರ್‌ಶಿಪ್‌ಗಳನ್ನು ವಿಸ್ತರಿಸಲು ಮುಂದಾದ ಜಾವಾ ಮೋಟಾರ್‌ಸೈಕಲ್

ಕ್ಲಾಸಿಕ್ ಲೆಜೆಂಡ್ಸ್ ಸಿಇಒ ಆಶಿಶ್ ಸಿಂಗ್ ಜೋಶಿ ಅವರು ಮಾತನಾಡಿ, ನಮ್ಮ ಡೀಲರ್‌ಶಿಪ್‌ಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ನಾವು ವ್ಯಾಪಕವಾಗಿ ಕೆಲಸ ಮಾಡುತ್ತಿದ್ದೇವೆ. ಲಾಕ್‌ಡೌನ್ ಬಳಿಕ ನಮ್ಮ ಅಸ್ತಿತ್ವದಲ್ಲಿರುವ ನೆಟ್‌ವರ್ಕ್‌ಗೆ 58 ಡೀಲರ್‌ಶಿಪ್‌ಗಳನ್ನು ಹೊಸದಾಗಿ ಸೇರಿಸಿದ್ದೇವೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಭಾರತದಲ್ಲಿ ತನ್ನ ಡೀಲರ್‌ಶಿಪ್‌ಗಳನ್ನು ವಿಸ್ತರಿಸಲು ಮುಂದಾದ ಜಾವಾ ಮೋಟಾರ್‌ಸೈಕಲ್

ಅದು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ನಮ್ಮ ಮಾದರಿಗಳನ್ನು ನಮ್ಮ ಗ್ರಾಹಕರಿಗೆ ಪ್ಯಾನ್ ಇಂಡಿಯಾಕ್ಕೆ ಹೆಚ್ಚು ಪ್ರವೇಶಿಸುವಂತೆ ಮಾಡಿದೆ. ಹೊಸ ನಮ್ಮ ಮಾದರಿಗಳನ್ನು ಹೆಚ್ಚಿನ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಲು 2020ರ ಅಂತ್ಯದ ವೇಳೆಗೆ 205ಕ್ಕೆ ಹೆಚ್ಚಿಸಲು ಡೀಲರ್‌ಶಿಪ್‌ಗಳನ್ನು ಕಂಪನಿ ಯೋಜಿಸಿದೆ ಎಂದು ಹೇಳಿದರು.

ಭಾರತದಲ್ಲಿ ತನ್ನ ಡೀಲರ್‌ಶಿಪ್‌ಗಳನ್ನು ವಿಸ್ತರಿಸಲು ಮುಂದಾದ ಜಾವಾ ಮೋಟಾರ್‌ಸೈಕಲ್

ಹಬ್ಬದ ಸೀಸನ್ ಅಕ್ಟೋಬರ್‌ನಲ್ಲಿ ಮಾತ್ರ 2,000ಕ್ಕೂ ಹೆಚ್ಚು ಜಾವಾ ಪೆರಾಕ್ ಬೈಕುಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. ಜಾವಾ ಮೋಟಾರ್‌ಸೈಕಲ್ ಕಂಪನಿಯ ಕಸ್ಟಮ್ ಬಾಬರ್‌ ಎಂಬ ಕರ್ಖಾನೆಯಿಂದ 2,000ಕ್ಕೂ ಹೆಚ್ಚು ಜಾವಾ ಪೆರಾಕ್ ಬೈಕುಗಳನ್ನು ವಿತರಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಭಾರತದಲ್ಲಿ ತನ್ನ ಡೀಲರ್‌ಶಿಪ್‌ಗಳನ್ನು ವಿಸ್ತರಿಸಲು ಮುಂದಾದ ಜಾವಾ ಮೋಟಾರ್‌ಸೈಕಲ್

ಜಾವಾ ಮೋಟಾರ್‌ಸೈಕಲ್ ಕಂಪನಿಯು ಇತರ ಎರಡು ಬೈಕುಗಳ ಮಾರಾಟದ ವರದಿಯನ್ನು ಬಹಿರಂಗಪಡಿಸಲಿಲ್ಲ. ಇನ್ನು ಈ ಜಾವಾ ಪೆರಾಕ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.94 ಲಕ್ಷಗಳಾಗಿದೆ.

ಭಾರತದಲ್ಲಿ ತನ್ನ ಡೀಲರ್‌ಶಿಪ್‌ಗಳನ್ನು ವಿಸ್ತರಿಸಲು ಮುಂದಾದ ಜಾವಾ ಮೋಟಾರ್‌ಸೈಕಲ್

ಜಾವಾ ಮೋಟಾರ್‌ಸೈಕಲ್ ಕಂಪನಿಯು ಹಲವು ವರ್ಷಗಳ ನಂತರ 2018ರಲ್ಲಿ ದೇಶಿಯ ಮಾರುಕಟ್ಟೆಗೆ ಮತ್ತೆ ಕಾಲಿಟ್ಟಿತು. ಜಾವಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಜಾವಾ ಸ್ಟ್ಯಾಂಡರ್ಡ್, ಜಾವಾ 42 ಹಾಗೂ ಜಾವಾ ಪೆರಾಕ್ ಎಂಬ ಮೂರು ಮಾದರಿಗಳನ್ನು ಮಾರಾಟ ಮಾಡುತ್ತಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಭಾರತದಲ್ಲಿ ತನ್ನ ಡೀಲರ್‌ಶಿಪ್‌ಗಳನ್ನು ವಿಸ್ತರಿಸಲು ಮುಂದಾದ ಜಾವಾ ಮೋಟಾರ್‌ಸೈಕಲ್

ಜಾವಾ ಪೆರಾಕ್ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ. ಇನ್ನು ಜಾವಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಪಿಥಾಂಪುರದಲ್ಲಿ ಉತ್ಪಾದನಾ ಕೇಂದ್ರದಲ್ಲಿ ಜಾವಾ ಪೆರಾಕ್ ಬೈಕಿನ ಉತ್ಪಾದನೆಯನ್ನು ಹೆಚ್ಚಿಸಲಿದೆ.

ಭಾರತದಲ್ಲಿ ತನ್ನ ಡೀಲರ್‌ಶಿಪ್‌ಗಳನ್ನು ವಿಸ್ತರಿಸಲು ಮುಂದಾದ ಜಾವಾ ಮೋಟಾರ್‌ಸೈಕಲ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ದೇಶಾದ್ಯಂತ ಒಟ್ಟು ಡೀಲರುಗಳ ಸಂಖ್ಯೆಯನ್ನು ಹೆಚ್ಚಿಸಿದಾಗ ಕ್ಲಾಸಿಕ್ ಲೆಜೆಂಡ್ಸ್ ಜಾವಾ ಬೈಕುಗಳು ಗ್ರಾಹಕರಿಗೆ ಸುಲಭವಾಗಿ ಲಭ್ಯವಾಗುವಂತೆ ಆಗುತ್ತದೆ. ರೆಟ್ರೊ ಶೈಲಿಯ ಜಾವಾ ಬೈಕುಗಳು ಭಾರತದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ದೀಪಾವಳಿ ಹಬ್ಬದ ವೇಳೆಯಲ್ಲಿ ಮಾರಾಟದಲ್ಲಿ ಉತ್ತಮ ಬೆಳವಣಿಗೆಯನ್ನು ಸಾಧಿಸುವ ಸಾಧ್ಯತೆಗಳಿದೆ.

Most Read Articles

Kannada
English summary
Jawa Motorcycles To Ramp Up Dealership Count To 205 In India. Read In kannada.
Story first published: Friday, November 6, 2020, 18:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X