ಬಿಡುಗಡೆಯಾಯ್ತು ಬಿಎಸ್-6 ಕೆಟಿಎಂ ಡ್ಯೂಕ್ ಮತ್ತು ಆರ್‍‍ಸಿ ಮಾದರಿಗಳು

ಆಸ್ಟ್ರಿಯಾದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕೆ‍ಟಿಎಂ ಇದೀಗ ತನ್ನ ಸರಣಿಯಲ್ಲಿರುವ ಬಿಎಸ್-6 ಡ್ಯೂಕ್ ಮತ್ತು ಆರ್‍‍‍ಸಿ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಕೆಟಿಎಂ ತನ್ನ ಹೊಸ ಡ್ಯೂಕ್ ಮತ್ತು ಆರ್‍‍ಸಿ ಮಾದರಿಗಳ ಮೇಲೆ ರೂ.3,300 ದಿಂದ 10,000ಗಳವರೆಗೆ ಬೆಲೆ ಏರಿಕೆ ಮಾಡಲಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಕೆಟಿಎಂ ಡ್ಯೂಕ್ ಮತ್ತು ಆರ್‍‍ಸಿ ಮಾದರಿಗಳು

ಕೆಟಿಎಂ ತನ್ನ ಸರಣಿಯಲ್ಲಿರುವ ಡ್ಯೂಕ್ 200, ಆರ್‍‍ಸಿ 200, ಡ್ಯೂಕ್ 250, ಡ್ಯೂಕ್ 390, ಆರ್‍‍ಸಿ 390, ಡ್ಯೂಕ್ 125 ಮತ್ತು ಆ‍ರ್‍ಸಿ 125 ಬೈಕ್‍ಗಳನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ 2020ರ ಕೆಟಿಎಂ ಡ್ಯೂಕ್ 200 ಬೈಕ್ ತನ್ನ ಸರಣಿಯ ಡ್ಯೂಕ್ 1290 ಆರ್ ಬೈಕಿನ ವಿನ್ಯಾಸದ ಕೆಲವು ಅಂಶಗಳನ್ನು ಹೊಂದಿದೆ. ಈ ಬೈಕ್ ಹಗುರವಾದ ಸ್ಪ್ಲಿಟ್ ಟ್ರಿಲ್ಲಿಸ್ ಫ್ರೇಮ್, ಹೊಸ ಫ್ಯೂಯಲ್ ಟ್ಯಾಂಕ್ ಮತ್ತು ಒಟ್ಟಾರೆ ಹೊಸ ವಿನ್ಯಾಸವನ್ನು ಹೊಂದಿದೆ. ಡ್ಯೂಕ್ 200 ಬೈಕ್ ಡ್ಯುಯಲ್ ಚಾನೆಲ್ ಎಬಿಎಸ್, ಎಲ್‍ಇಡಿ ಡಿ‍ಆರ್‍ಎಲ್, ಸ್ಟೇಟ್-ಆರ್ಟ್ ಇಂಜೆಕ್ಷನ್ ಎಲೆಕ್ಟ್ರಾನಿಕ್ಸ್ ಮತ್ತು ಡಬ್ಲ್ಯೂಪಿ ಸಸ್ಪೆಂಕ್ಷನ್ ಅನ್ನು ಹೊಂದಿದೆ. ಈ ಬೈಕ್ 13.5 ಲೀಟರ್ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಬಿಎಸ್-6 ಕೆಟಿಎಂ ಡ್ಯೂಕ್ ಮತ್ತು ಆರ್‍‍ಸಿ ಮಾದರಿಗಳು

2020ರ ಕೆಟಿ‍ಎಂ ಡ್ಯೂಕ್ 200 ಮತ್ತು ಆರ್‍‍‍ಸಿ 200 ಬೈಕಿಗಳಲ್ಲಿ ಅಲ್ಟ್ರಾ-ಕಾಂಪ್ಯಾಕ್ಟ್ ಲಿಕ್ವಿಡ್ ಕೂಲ್ಡ್ ಡಿಒ‍ಹೆಚ್‍‍ಸಿ 4 ವಾಲ್ಟ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 24.6 ಬಿ‍ಹೆಚ್‍‍ಪಿ ಪವರ್ ಮತ್ತು 19.3 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಬೈಕಿನ ಬೆಲೆಯು ಕ್ರಮವಾಗಿ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1,72,749 ಮತ್ತು ರೂ.1,96,768 ಗಳಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಕೆಟಿಎಂ ಡ್ಯೂಕ್ ಮತ್ತು ಆರ್‍‍ಸಿ ಮಾದರಿಗಳು

2020ರ ಕೆಟಿಎಂ ಡ್ಯೂಕ್ 390 ಬೈಕಿನಲ್ಲಿ ರೈಡ್-ಬೈ-ವೈರ್, ಸ್ಲಿಪ್ಪರ್ ಕ್ಲಚ್, ಸೂಪರ್‍‍ಮೊಟೊ ಮೋಡ್‍‍ನೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್, ಟಿಎಫ್‍ಟಿ ಡಿಸ್‍‍ಪ್ಲೇ ಮತ್ತು ಹೆಡ್‍‍ಲೈಟ್‍‍ಗಳನ್ನು ಹೊಂದಿದೆ.

ಬಿಡುಗಡೆಯಾಯ್ತು ಬಿಎಸ್-6 ಕೆಟಿಎಂ ಡ್ಯೂಕ್ ಮತ್ತು ಆರ್‍‍ಸಿ ಮಾದರಿಗಳು

ಡ್ಯೂಕ್ 390 ಮತ್ತು ಆರ್‍‍ಸಿ 390 ಬೈಕ್‍‍ಗಳು 373.3 ಸಿಸಿ ಸಿಂಗಲ್ ಸಿಲಿಂಡರ್, ನಾಲ್ಕು ವಾಲ್ಟ್ ಲಿಕ್ವಿಡ್ ಕೂಲ್ಡ್ ಡಿಒ‍ಹೆಚ್‍‍ಸಿ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್‍ 43 ಬಿ‍‍ಹೆಚ್‍ಪಿ ಪವರ್ ಮತ್ತು 37 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಅಲ್ಲದೇ ಕ್ವಿಕ್‍‍‍ಶಿಫ್ಟರ್ ಅನ್ನು ಕೂಡ ಹೊಂದಿದೆ. 2020ರ ಡ್ಯೂಕ್ 390 ಮತ್ತು ಆರ್‍‍ಸಿ 390 ಬೈಕ್‍‍ಗಳ ಬೆಲೆಯು ಕ್ರಮವಾಗಿ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2,52,928 ಮತ್ತು ರೂ.2,48,075 ಗಳಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಕೆಟಿಎಂ ಡ್ಯೂಕ್ ಮತ್ತು ಆರ್‍‍ಸಿ ಮಾದರಿಗಳು

ಇನ್ನೂ ಹೊಸ ಕೆಟಿಎಂ ಡ್ಯೂಕ್ 125 ಬೈಕಿನಲ್ಲಿ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುವುದನ್ನು ಹೊರತುಪಡಿಸಿ ಹೊಸದಾಗಿ ಗ್ರಾಫಿಕ್ಸ್ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಅಳವಡಿಸಲಾಗಿದೆ. ಇದರ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಬಿಡುಗಡೆಯಾಯ್ತು ಬಿಎಸ್-6 ಕೆಟಿಎಂ ಡ್ಯೂಕ್ ಮತ್ತು ಆರ್‍‍ಸಿ ಮಾದರಿಗಳು

ಡ್ಯೂಕ್ 125 ಮತ್ತು ಆರ್‍‍ಸಿ 125 ಬೈಕ್‍‍ಗಳಲ್ಲಿ 124.7 ಸಿಂಗಲ್ ಸಿಲಿಂಡರ್, ನಾಲ್ಕು ವಾಲ್ವ್ ಲಿಕ್ವಿಡ್ ಕೂಲ್ಡ್ ಎಸ್‍‍ಹೆಚ್‍‍ಸಿ ಎಂಜಿನ್ ಅನ್ನು ಹೊಂದಿವೆ. ಈ ಎಂಜಿನ್ 14.3 ಬಿ‍‍ಹೆಚ್‍ಪಿ ಪವರ್ ಮತ್ತು 12 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಕೆಟಿಎಂ ಡ್ಯೂಕ್ ಮತ್ತು ಆರ್‍‍ಸಿ ಮಾದರಿಗಳು

ಕೆಟಿಎಂ ಡ್ಯೂಕ್ 125 ಮತ್ತು ಆ‍ರ್‍‍ಸಿ 125 ಬೈಕಿ‍‍ಗಳ ಬೆಲೆಯು ಕ್ರಮವಾಗಿ ರೂ.1,38,041 ಮತ್ತು ರೂ.1,55,227 ಆಗಿದೆ. ಈ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಕೆಟಿಎಂ ಡ್ಯೂಕ್ ಮತ್ತು ಆರ್‍‍ಸಿ ಮಾದರಿಗಳು

ಹೊಸ 2020 ಕೆಟಿಎಂ ಡ್ಯೂಕ್ 250 ಬೈಕ್ ಓಪನ್-ಕಾರ್ಟ್ರೆಡ್ಜ್ ಅಪ್‍‍ಸೈಡ್ ಡೌನ್ ಡಬ್ಲೂಪಿ ಫೋರ್ಕ್ಸ್, ಸ್ಲಿಪ್ಪರ್ ಕ್ಲಚ್ ಮತ್ತು ಲೋಡ್ ಅಡ್ಜೆಂಸ್ಟ್ ಮಾಡಬಹುದಾದ ಮೊನೊಶಾಕ್‍ಗಳನ್ನು ಹೊಂದಿದೆ.

Models BS6 Price BS4 Price Difference
200 Duke Rs 1,62,253 Rs 1,72,749 Rs 10,496
RC 200 Rs 1,90,630 Rs 1,96,768 Rs 6,138
250 Duke Rs 1,97,248 Rs 2,00,576 Rs 3,328
390 Duke Rs 2,48,212 Rs 2,52,928 Rs 4,716
RC 390 Rs 2,44,014 Rs 2,48,075 Rs 4,061
125 Duke Rs 1,32,500 Rs 1,38,041 Rs 5,541
RC 125 Rs 1,48,750 Rs 1,55,277 Rs 6,527
ಬಿಡುಗಡೆಯಾಯ್ತು ಬಿಎಸ್-6 ಕೆಟಿಎಂ ಡ್ಯೂಕ್ ಮತ್ತು ಆರ್‍‍ಸಿ ಮಾದರಿಗಳು

ಈ ಬೈಕಿನಲ್ಲಿ 248.8 ಸಿಸಿ ಸಿಂಗಲ್ ಸಿಲಿಂಡರ್ ನಾಲ್ಕು ವಾಲ್ವ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 29.5 ಬಿ‍‍ಹೆಚ್‍‍ಪಿ ಪವರ್ ಮತ್ತು 24 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಎಂಜಿನ್‍‍ನೊಂದಿಗೆ ಆರು-ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ 2,00,576 ಗಳಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಕೆಟಿಎಂ ಡ್ಯೂಕ್ ಮತ್ತು ಆರ್‍‍ಸಿ ಮಾದರಿಗಳು

ಕೆಟಿಎಂ ಆರ್‍‍ಸಿ ಸರಣಿಯ ಬೈಕ್‍‍ಗಳು ರೆಡಿ ಟೂ ರೇಸ್ ಟ್ಯಾಗ್‍‍ಲೈನ್‍‍ನಿಂದ ಸ್ಪೂರ್ತಿ ಪಡೆದಿದೆ. ಹೊಸ ಬಿಎಸ್-6 ಆರ್‌ಸಿ 390, ಆರ್‌ಸಿ 200 ಮತ್ತು ಆರ್‌ಸಿ 125 ಬೈಕ್‍‍ಗಳು ಹೊಸ ಬಣ್ಣಗಳು ಮತ್ತು ಗ್ರಾಫಿಕ್ಸ್ ಅನ್ನು ಒಳಗೊಂಡಿದೆ.

ಬಿಡುಗಡೆಯಾಯ್ತು ಬಿಎಸ್-6 ಕೆಟಿಎಂ ಡ್ಯೂಕ್ ಮತ್ತು ಆರ್‍‍ಸಿ ಮಾದರಿಗಳು

ಕೆ‍‍ಟಿಎಂ ಡ್ಯೂಕ್ 200 ಬೈಕ್ ನವೀಕರಣವು ಅಭೂತಪೂರ್ವವಾಗಿದ್ದು, ಈ ಬೈಕಿನ ಹೊಸ ವಿನ್ಯಾಸವು ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಸಹಾಯವಾಗಬಹುದು. ಇದು ದೇಶದಲ್ಲಿ ಪ್ರೀಮಿಯಂ ಬೈ‍‍ಕ್‍‍ಗಳ ವಿಭಾಗವನ್ನು ವಿಸ್ತರಿಸಲು ಸಹಾಯ ಮಾಡುತ್ತದೆ ಎಂದು ಕಂಪನಿ ಹೇಳಿದೆ.

ಬಿಡುಗಡೆಯಾಯ್ತು ಬಿಎಸ್-6 ಕೆಟಿಎಂ ಡ್ಯೂಕ್ ಮತ್ತು ಆರ್‍‍ಸಿ ಮಾದರಿಗಳು

ಕೆಟಿ‍ಎಂ ತನ್ನ ಜನಪ್ರಿಯ ಡ್ಯೂಕ್ ಮತ್ತು ಆರ್‍‍ಸಿ ಸರಣಿಗಳ ಮಾದರಿಗಳನ್ನು ಆಕರ್ಷಕವಾಗಿ ನವೀಕರಿಸಿ ಬಿಡುಗಡೆ ಮಾಡಲಾಗಿದೆ. ಹೊಸ ವಿನ್ಯಾಸ ಮತ್ತು ಕೆಲವು ಬದಲಾವಣೆಗಳೊಂದಿಗೆ ಬಿಡುಗಡೆ ಮಾಡಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

Most Read Articles

Kannada
Read more on ಕೆಟಿಎಂ ktm
English summary
KTM Duke And RC BS6 Models Launched In India Starting At Rs 1.38 Lakh Ex-Showroom. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X