ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕಿನ ಬೆಲೆ ಮಾಹಿತಿ ಬಹಿರಂಗ
ಬಜಾಜ್ ಆಟೋ ಕಂಪನಿಯು ತನ್ನ ಜನಪ್ರಿಯ ಬಿಎಸ್-6 ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕ್ ಬಿಡುಗಡೆಗೂ ಮುನ್ನ ಡೀಲರ್ ಗಳ ಬಳಿ ಕಾಣಿಸಿಕೊಂಡಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕ್ ಬಿಡುಗಡೆಯಾಗುವ ಮುನ್ನವೇ ಪಾಟ್ನಾ ಬೈಕರ್ಸ್ ಯೂಟ್ಯೂಬ್ ಚಾನೆಲ್ ಇದರ ಬೆಲೆಯನ್ನು ಬಹಿರಂಗಪಡಿಸಿದೆ. ವೀಡಿಯೋ ಪ್ರಕಾರ ಬಿಎಸ್-6 ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕಿನ ರೋಡ್ (ಪಾಟ್ನಾ) ಬೆಲೆಯು ರೂ.94,738 ಗಳಾಗಿದೆ. ಪಲ್ಸರ್ 125 ಸ್ಪ್ಲಿಟ್ ಸೀಟ್ ಹಿಂದಿನ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಕೇವಲ ಆಯ್ದ ರಾಜ್ಯಗಳಲ್ಲಿ ಮಾತ್ರ ಮಾರಾಟದಲ್ಲಿತ್ತು.

ಈ ವರ್ಷದ ಆರಂಭದಲ್ಲಿ ಬಜಾಜ್ ಆಟೋ ಬಿಎಸ್-6 ಪಲ್ಸರ್ 125 ನಿಯಾನ್ ಬೈಕನ್ನು ಬಿಡುಗಡೆ ಮಾಡಿದ್ದರು. ಇದೀಗ ಬಜಾಜ್ ಆಟೋ ಕಂಪನಿಯು ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಆದರೆ ಈ ಬೈಕಿನ ಬಿಡುಗಡೆಯ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಹೊಸ ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕುಗಳು ಡೀಲರ್ ಗಳ ಬಳಿ ತಲುಪಿರುವುದರಿಂದ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸಬಹುದು. ಹಿಂದಿನ ಮಾದರಿಯಂತೆ ಹೊಸ ಪಲ್ಸರ್ 125 ಸ್ಪ್ಲಿಟ್ ಸೀಟ್ ಕೂಡ ಆಯ್ದ ರಾಜ್ಯಗಳಲ್ಲಿ ಮಾತ್ರ ಲಭ್ಯವಿರುತ್ತದೆ.

ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್ ಸೀಟ್ ಅನ್ನು ಬಜಾಜ್ ಪಲ್ಸರ್ 125 ನಿಯಾನ್ ಮಾದರಿಗೆ ಹೋಲಿಸಿದರೆ ಕೆಲವು ವಿಭಿನ್ನ ಸ್ಟೈಲಿಂಗ್ ಅನ್ನು ಹೊಂದಿದೆ. ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್ ಸೀಟ್ ಹೆಸರು ಹೇಳುವಂತೆ ಸ್ಪ್ಲಿಟ್-ಸೀಟ್ ಸೆಟಪ್ನೊಂದಿಗೆ ಬರುತ್ತದೆ.
MOST READ: ಜನಪ್ರಿಯ ಬಿಎಸ್-6 ಸ್ಪೋರ್ಟ್ ಬೈಕಿನ ಬೆಲೆ ಹೆಚ್ಚಿಸಿದ ಟಿವಿಎಸ್

ಇದಲ್ಲದೇ ಈ ಹೊಸ ಬೈಕಿನಲ್ಲಿ ಪಿಲಿಯನ್ ಗ್ರ್ಯಾಬ್ ರೈಲ್ ಮತ್ತು ಆಕರ್ಷಕ ಗ್ರಾಫಿಕ್ಸ್ ಹೊಂದಿರುವ ಎಂಜಿನ್ ಕೌಲ್ ಸಹ ಇದೆ. ಈ ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಇನ್ನು ಈ ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕ್ ಫ್ಯೂಯಲ್ ಟ್ಯಾಂಕ್ ವಿಸ್ತರಣೆಗಳು, ಫ್ರಂಟ್ ಫೆಂಡರ್, ಅಲಾಯ್ ವ್ಹೀಲ್ಸ್ ಮತ್ತು ಹಿಂಭಾಗದ ಕೌಲ್‌ನಲ್ಲೂ ಇದೇ ರೀತಿಯ ಬಣ್ಣ ಸಂಯೋಜಿತ ಡೆಕಲ್‌ಗಳನ್ನು ಒದಗಿಸಲಾಗಿದೆ, ಹೊಸ ಬಜಾಜ್ ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕ್ ‘125' ಲೋಗೊ ಸಹ ಹೊಂದಿದೆ. ಒಟ್ಟಾರೆಯಾಗಿ ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕ್ ಬಿಎಸ್-6 ಪಲ್ಸರ್ 150 ಟ್ವಿನ್ ಡಿಸ್ಕ್ ಮಾದರಿಗೆ ಹೋಲುತ್ತದೆ.
MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಇನ್ನು ಈ ಬಜಾಜ್ ಪಲ್ಸರ್ 125 ಸ್ಪ್ಲಿಟ್ ಸೀಟ್ ಬೈಕಿನ ಎಂಜಿನ್ ಬಿಎಸ್-6 ಪಲ್ಸರ್ 125 ನಿಯಾನ್ ಮಾದರಿಗೆ ಹೋಲುತ್ತದೆ. ಇದರಲ್ಲಿ 24 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 11 ಬಿಹೆಚ್‍ಪಿ ಪವರ್ ಮತ್ತು 11 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಜಾಜ್ ಪಲ್ಸರ್ ಸರಣಿಯ ಬೈಕ್‍ಗಳ ಜನಪ್ರಿಯತೆ ಕಳೆದುಕೊಂಡಿಲ್ಲ. ಹೆಚ್ಚಿನ ಯುವಕರಿಗೆ ಇಂದಿಗೂ ಪಲ್ಸರ್ ಬೈಕ್‍ಗಳ ಕ್ರೇಜ್ ಇದೆ. ಹೊಸ ಪಲ್ಸರ್ 125 ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಕೆಟಿಎಂ ಡ್ಯೂಕ್ 125 ಮತ್ತು ಆರ್‍ಸಿ 125 ಬೈಕ್‍ಗಳಿಗೆ ಪೈಪೋಟಿಯನ್ನು ನೀಡುತ್ತದೆ.


Click it and Unblock the Notifications