Just In
- 18 min ago
ಎಲೆಕ್ಟ್ರಿಕ್ ವಾಹನಗಳಿಗೆ ಬ್ಯಾಟರಿ ಸೌಲಭ್ಯ ಒದಗಿಸಲು ವಿನಿಮಯ ಕೇಂದ್ರಗಳನ್ನು ತೆರೆಯಲಿದೆ ಜೈಪ್
- 1 hr ago
ಸೀಟ್ ಬೆಲ್ಟ್ ಧರಿಸುವುದರ ಮಹತ್ವ ವಿವರಿಸಿದ ಪೊಲೀಸ್ ಅಧಿಕಾರಿ
- 2 hrs ago
ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಹೊಸ ಕಬೀರ ಕೆಎಂ 4000 ಎಲೆಕ್ಟ್ರಿಕ್ ಬೈಕ್
- 3 hrs ago
2021ರ ಅವಧಿಯಲ್ಲಿ ಒಟ್ಟು 25 ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ ಬಿಎಂಡಬ್ಲ್ಯು ಇಂಡಿಯಾ
Don't Miss!
- News
ದಕ್ಷಿಣ ಭಾರತದಲ್ಲೇ ವಿಶಿಷ್ಟ ಮೈಲಿಗಲ್ಲು ಸಾಧಿಸಿದ ಕೆಂಪೇಗೌಡ ಏರ್ಪೋರ್ಟ್
- Sports
ಏಕದಿನ ಪದಾರ್ಪಣಾ ಪಂದ್ಯದಲ್ಲಿ ಶತಕ ಸಿಡಿಸಿ ದಾಖಲೆ ಬರೆದ ಅಪ್ಘಾನಿಸ್ತಾನ್ ಕ್ರಿಕೆಟಿಗ
- Lifestyle
ಬೇಬಿಮೂನ್ ಎಂದರೇನು? ಇದು ಏಕೆ ಒಳ್ಳೆಯದು?
- Movies
ಕೊರೊನಾ ನಡುವೆಯೂ 100 ಕೆಜಿ ಕೇಕ್ ಕತ್ತರಿಸಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಸಂಭ್ರಮಿಸಿದ ನಿಖಿಲ್
- Finance
ಗಿರಗಿಟ್ಲೆಯಾದ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್; $ 30 ಸಾವಿರದ ಕೆಳಗೆ ವಹಿವಾಟು
- Education
Karnataka State Police Recruitment 2021: 545 ಸಬ್-ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅನಾವರಣವಾಯ್ತು ಬಹುನಿರೀಕ್ಷಿತ 2021ರ ಡುಕಾಟಿ ಮಾನ್ಸ್ಟರ್ ಬೈಕ್
ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಡುಕಾಟಿ ತನ್ನ 2021ರ ಮಾನ್ಸ್ಟರ್ ಬೈಕನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. 2021ರ ಡುಕಾಟಿ ಮಾನ್ಸ್ಟರ್ ಬೈಕ್ ವಿನ್ಯಾಸದ ವಿಷಯದಲ್ಲಿ ಮಾತ್ರವಲ್ಲದೆ ಹೊಸ ಫೀಚರ್, ರೈಡರ್ ಏಡ್ಸ್ ಮತ್ತು ಹೆಚ್ಚು ಪವರ್ ಫುಲ್ ಎಂಜಿನ್ ಅನ್ನು ಸಹ ಒಳಗೊಂಡಿದೆ.

2021ರ ಡುಕಾಟಿ ಮಾನ್ಸ್ಟರ್ ಬೈಕ್ ದೈತ್ಯಾಕಾರದ ಹಗುರವಾದ ನೇಕೆಡ್ ಸ್ಟ್ರೀಟ್ ಫೈಟರ್ ಆಗಿದೆ. 2021ರ ಡುಕಾಟಿ ಮಾನ್ಸ್ಟರ್ ಬೈಕ್ ಸ್ಪೋರ್ಟಿಯರ್ ಮತ್ತು ಸ್ಕಪಲಡಡ್ ವಿನ್ಯಾಸದೊಂದಿಗೆ ಬರುತ್ತದೆ. 2021ರ ಡುಕಾಟಿ ಮಾನ್ಸ್ಟರ್ ಹೊಚ್ಚ ಹೊಸ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಅದರ ಸುತ್ತಲಿನ ವೃತ್ತಾಕಾರದ ಎಲ್‌ಇಡಿ ಡಿಆರ್‌ಎಲ್‌ಗಳಿಂದ ಎದ್ದು ಕಾಣುತ್ತದೆ.

2021ರ ಮಾನ್ಸ್ಟರ್ ಹೊಸ ಮಾನ್ಸ್ಟರ್ ಸ್ಕಪಲಡಡ್ ಟ್ಯಾಂಕ್ ವಿನ್ಯಾಸ, ಡೈನಾಮಿಕ್ ಟರ್ನ್ ಇಂಡಿಕೇಟರ್ಸ್ ಮತ್ತು ಹಿಂಭಾಗದಲ್ಲಿ ಎಲ್ಇಡಿ ಟೈಲ್‌ಲೈಟ್‌ಗಳನ್ನು ಸಹ ಒಳಗೊಂಡಿದೆ. ಇನ್ನು ಈ ಹೊಸ ಬೈಕಿನಲ್ಲಿ ಹ್ಯಾಂಡಲ್‌ಬಾರ್ ಮತ್ತು ಫುಟ್‌ಪೆಗ್ ಸ್ಥಾನಗಳಿಗೆ ಬದಲಾಯಿಸಲಾಗಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

2021ರ ಡುಕಾಟಿ ಮಾನ್ಸ್ಟರ್ ಸ್ಟೈಲಿಂಗ್ ಅಪ್‌ಡೇಟ್‌ನೊಂದಿಗೆ, ಡುಕಾಟಿ ಹೊಸ ಮಾನ್ಸ್ಟರ್ ಇನ್ನೂ ಹಗುರವಾದ ಆವೃತ್ತಿಯಾಗಿದೆ ಎಂದು ಖಚಿತಪಡಿಸಿದೆ. ಇಟಾಲಿಯನ್ ಸೂಪರ್‌ಬೈಕ್ ತಯಾರಕರು ಈ ಬೈಕಿನ ತೂಕವನ್ನು ಕಡಿಮೆ ಮಾಡಲು ಯಶಸ್ವಿಯಾಗಿದ್ದಾರೆ.

ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಡುಕಾಟಿ ಮಾನ್ಸ್ಟರ್ ಬೈಕಿಗೆ 18 ಕೆಜಿ ಕಡಿಮೆಯಾಗಿದೆ. 2021ರ ಡುಕಾಟಿ ಮಾನ್ಸ್ಟರ್ ಬೈಕ್ ದೊಡ್ಡ ಪ್ಯಾನಿಗಲೆ ಒಡಹುಟ್ಟಿದವರಿಂದ ಕಾನ್ಸೆಪ್ಟ್ ಅನ್ನು ಎರವಲು ಪಡೆಯುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಬೈಕಿನ ಹೃದಯ ಭಾಗ ಎಂದೇ ಹೇಳಬಹುದಾದ ಎಂಜಿನ್ ಬಗ್ಗೆ ಹೇಳುವುದಾದರೆ, 2021ರ ಡುಕಾಟಿ ಮಾನ್ಸ್ಟರ್ ಬೈಕಿನಲ್ಲಿ ಪವರ್ ಫುಲ್ 937 ಸಿಸಿ ಎಲ್-ಟ್ವಿನ್ ಟೆಸ್ಟಾಸ್ಟ್ರೆಟಾ ಎಂಜಿನ್ ಅನ್ನು ಅಳವಡಿಸಲಾಗಿದೆ.

ಈ ಎಂಜಿನ್ 9250 ಆರ್‌ಪಿಎಂನಲ್ಲಿ 111 ಬಿಹೆಚ್‌ಪಿ ಮತ್ತು 6500 ಆರ್‌ಪಿಎಂನಲ್ಲಿ 93 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. 2021ರ ಡುಕಾಟಿ ಮಾನ್ಸ್ಟರ್ ಬೈಕ್ ಟೋ-ವೇ ಕ್ವೀಕ್ ಶಿಫ್ಟರ್ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

2021ರ ಡುಕಾಟಿ ಮಾನ್ಸ್ಟರ್ ಬೈಕಿನಲ್ಲಿನ ಇತರ ಫೀಚರ್ ಗಳಾದ, ಎಲೆಕ್ಟ್ರಾನಿಕ್ ರೈಡರ್ ಅಸಿಸ್ಟ್ ಗಳು ಮತ್ತು 4.3-ಇಂಚಿನ ಪೂರ್ಣ-ಬಣ್ಣದ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇದರೊಂದಿಗೆ ಸ್ಪೋರ್ಟ್, ಅರ್ಬನ್ ಮತ್ತು ಟೂರಿಂಗ್ ಎಂಬ ಮೂರು ರೈಡಿಂಗ್ ಮೋಡ್‌ಗಳನ್ನು ಹೊಂದಿವೆ.

ಇನ್ನು ಈ ಬೈಕಿನಲ್ಲಿ ಐಷಾರಾಮಿ ಮಾದರಿಗಳಲ್ಲಿರುವಂತ ಟ್ಯಾಕ್ಷನ್ ಕಂಟ್ರೀಲ್, ವ್ಹೀಲಿ ಕಂಟ್ರೋಲ್ ಮತ್ತು ಲಾಂಚ್ ಕಂಟ್ರೋಲ್ ಗಳನ್ನು ಹೊಂದಿವೆ. 2021ರ ಡುಕಾಟಿ ಮಾನ್ಸ್ಟರ್ ಬೈಕ್ ಮುಂದಿನ ತಿಂಗಳು ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ. ಇನ್ನು ಈ ಹೊಸ 2021ರ ಡುಕಾಟಿ ಮಾನ್ಸ್ಟರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಲಾಗಿಲ್ಲ.