ಹೊಸ ಹೋಂಡಾ ಫೋರ್ಜಾ 750 ಸ್ಕೂಟರ್ ಟೀಸರ್ ವೀಡಿಯೋ ಬಿಡುಗಡೆ

ಹೋಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್ ಕಂಪನಿಯು ತನ್ನ ಫೋರ್ಜಾ ಮ್ಯಾಕ್ಸಿ ಸ್ಕೂಟರಿನ ಟೀಸರ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಆದರೆ ಟೀಸರ್ ಚಿತ್ರದಲ್ಲಿ ಸ್ಕೂಟರ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿರಲಿಲ್ಲ.

ಹೊಸ ಹೋಂಡಾ ಫೋರ್ಜಾ 750 ಸ್ಕೂಟರ್ ಟೀಸರ್ ವೀಡಿಯೋ ಬಿಡುಗಡೆ

ಇದರಿಂದ ಹೋಂಡಾ ಕಂಪನಿಯು ಹೊಸ ಫೋರ್ಜಾ 350 ಸಿಸಿ ಮ್ಯಾಕ್ಸಿ ಸ್ಕೂಟರ್ ಟೀಸರ್ ಬಿಡುಗಡೆಗೊಳಿಸಿದೆ ಎಂದು ವರದಿಗಳು ಪ್ರಕಟವಾಗಿತ್ತು. ಆದರೆ ಇದೀಗ ಹೋಂಡಾ ಕಂಪನಿಯು ಹೊಸ ಸ್ಕೂಟರ್ ಟೀಸರ್ ವೀಡಿಯೋವನ್ನು ಬಿಡುಗಡೆಗೊಳಿಸಿದೆ. ಟೀಸರ್ ವೀಡಿಯೋದಲ್ಲಿ ಇದು ಫೋರ್ಜಾ ಸರಣಿಯ ಮ್ಯಾಕ್ಸಿ-ಸ್ಕೂಟರ್‌ಗಳಿಗೆ ಸೇರ್ಪಡೆಗೊಳ್ಳುವ ಇತ್ತೀಚಿನ ಮಾದರಿ ಫೋರ್ಜಾ 750 ಎಂದು ಖಚಿತವಾಗಿದೆ.

ಹೊಸ ಹೋಂಡಾ ಫೋರ್ಜಾ 750 ಸ್ಕೂಟರ್ ಟೀಸರ್ ವೀಡಿಯೋ ಬಿಡುಗಡೆ

ಹೊಸ ಮ್ಯಾಕ್ಸಿ-ಸ್ಕೂಟರ್‌ನಲ್ಲಿ ಎಂಜಿನ್ ಸ್ಟ್ರಾಟ್/ಸ್ಟಾಪ್ ಬಟನ್ ಅನ್ನು ನೀಡಿದ್ದಾರೆ. ಇನ್ನು ಪುಲ್ ಡಿಜಿಟಲ್ ಮತ್ತು ಕಲರ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಜೊತೆಗೆ ಸ್ಪೀಡೋಮೀಟರ್, ರೆವ್ ಕೌಂಟರ್, ಫ್ಯೂಯಲ್ ಗೇಜ್, ಟ್ರಿಪ್ ಮೀಟರ್ ಮುಂತಾದ ಮಾಹಿತಿಯನ್ನು ನೀಡುತ್ತದೆ.

MOST READ: ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಟೀಸರ್ ಚಿತ್ರ ಬಿಡುಗಡೆ

ಹೊಸ ಹೋಂಡಾ ಫೋರ್ಜಾ 750 ಸ್ಕೂಟರ್ ಟೀಸರ್ ವೀಡಿಯೋ ಬಿಡುಗಡೆ

ಹೊಸ ಹೋಂಡಾ ಫೋರ್ಜಾ 750 ಸ್ಕೂಟರ್‌ನಲ್ಲಿನ ಕ್ಲಸ್ಟರ್ ನೊಂದಿಗೆ ಸ್ಮಾರ್ಟ್ ಪೋನ್ ಬ್ಲೂಟೂತ್ ಮೂಲಕ ಕನೆಕ್ಟ್ ಮಾಡಬಹುದಾಗಿದೆ. ಇದರರ್ಥ ಫೋರ್ಜಾ 750 ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕರೆ ಮತ್ತು ಮ್ಯೂಸಿಕ್ ನಂತಹ ಫೀಚರ್ ಅನ್ನು ಹೊಂದಿರುವ ಸಾಧ್ಯತೆಗಳಿದೆ.

ಹೊಸ ಹೋಂಡಾ ಫೋರ್ಜಾ 750 ಸ್ಕೂಟರ್ ಟೀಸರ್ ವೀಡಿಯೋ ಬಿಡುಗಡೆ

ಹೊಸ ಹೋಂಡಾ ಫೋರ್ಜಾ 750 ಸ್ಕೂಟರ್ ಎಂಜಿನ್ ಮಾಹಿತಿಯನ್ನು ಇನ್ನು ಕೂಡ ಬಹಿರಂಗಪಡಿಸಲಿಲ್ಲ. ಇನ್ನು ಈ ಹೊಸ ಮ್ಯಾಕ್ಸಿ-ಸ್ಕೂಟರ್ ವಿಭಿನ್ನ ರೈಡಿಂಗ್ ಮೋಡ್ ಗಳನ್ನು ಹೊಂದಿರುತ್ತದೆ ಎಂದು ಟೀಸರ್ ವೀಡಿಯೋದಿಂದ ತಿಳಿಯುತ್ತದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಹೊಸ ಹೋಂಡಾ ಫೋರ್ಜಾ 750 ಸ್ಕೂಟರ್ ಟೀಸರ್ ವೀಡಿಯೋ ಬಿಡುಗಡೆ

ಇನ್ನು ಈ ಹೊಸ ಹೋಂಡಾ ಫೋರ್ಜಾ 750 ಸ್ಕೂಟರ್ ಡಿಸೈನ್ ಬಗ್ಗೆ ನೋಡುವುದಾರೆ, ಎಲ್ಇಡಿ ಡಿಆರ್ಎಲ್ಗಳೊಂದಿಗೆ ಹೊಂದಿಸಲಾದ ಟ್ವಿನ್-ಎಲ್ಇಡಿ ಹೆಡ್ಲ್ಯಾಂಪ್ ಮತ್ತು ಸ್ಟೈಲಿಶ್ ಎಲ್ಇಡಿ ಟೈಲ್ ಲ್ಯಾಂಪ್ ಸೇರಿದಂತೆ ಪೂರ್ಣ-ಎಲ್ಇಡಿ ಲೈಟಿಂಗ್ ಹೊಂದಿರುತ್ತದೆ.

ಹೊಸ ಹೋಂಡಾ ಫೋರ್ಜಾ 750 ಸ್ಕೂಟರ್ ಟೀಸರ್ ವೀಡಿಯೋ ಬಿಡುಗಡೆ

ಹೋಂಡಾ ಫೋರ್ಜಾ 350 ಸಿಸಿ ಸ್ಕೂಟರ್ ಅನ್ನು ಜುಲೈ ತಿಂಗಳಿನಲ್ಲಿ ಥೈಲ್ಯಾಂಡ್ ನಲ್ಲಿ ಬಿಡುಗಡೆಗೊಳಿಸಲಾಗಿತ್ತು. ಫೋರ್ಜಾ 350 ಸ್ಕೂಟರ್ ಉದ್ದವಾದ ವ್ಹೀಲ್ ಬೇಸ್ ಹಾಗೂ ಸ್ಪೋರ್ಟಿ ವಿನ್ಯಾಸವನ್ನು ಹೊಂದಿದೆ. ಈ ಸ್ಕೂಟರ್ ಆಟೋಮ್ಯಾಟಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ವಿಂಡ್‌ಸ್ಕ್ರೀನ್ ಅನ್ನು ಹೊಂದಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಹೊಸ ಹೋಂಡಾ ಫೋರ್ಜಾ 750 ಸ್ಕೂಟರ್ ಟೀಸರ್ ವೀಡಿಯೋ ಬಿಡುಗಡೆ

ಹೋಂಡಾ ಫೋರ್ಜಾ 350 ಸಿಸಿ ಜಾಗತಿಕವಾಗಿ ಬಿಡುಗಡೆಗೊಳಿಸಲಾಗುವುದು. ಈ ಸ್ಕೂಟರ್ ಹಿಂದಿನ ಎರಡು ಫೋರ್ಜಾ ಸ್ಕೂಟರ್‌ಗಳಿಗಿಂತ ಹೆಚ್ಚಿನ ಪವರ್ ಹಾಗೂ ಪರ್ಫಾಮೆನ್ಸ್ ಹೊಂದಿದೆ. ದೊಡ್ಡ ಎಂಜಿನ್ ಹೊಂದಿರುವ ಕಾರಣಕ್ಕೆ ಈ ಸ್ಕೂಟರಿನ ಮೈಲೇಜ್ ಕಡಿಮೆಯಾಗಲಿದೆ.

ಇನ್ನು ಮುಂದಿನ ತಿಂಗಳ 14ರಂದು ಹೊಸ ಹೋಂಡಾ ಫೋರ್ಜಾ 750 ಸ್ಕೂಟರ್ ಅನಾವರಣವಾಗಲಿದೆ, ಈ ಹೊಸ ಮಾಕ್ಸಿ ಸ್ಕೂಟರ್ ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ತಲುಪುವ ಸಾಧ್ಯತೆಯಿದೆ.

ಹೊಸ ಹೋಂಡಾ ಫೋರ್ಜಾ 750 ಸ್ಕೂಟರ್ ಟೀಸರ್ ವೀಡಿಯೋ ಬಿಡುಗಡೆ

ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಕಂಪನಿಯು ಹೊಸ ಫೋರ್ಜಾ 750 ಸ್ಕೂಟರ್ ಅನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳು ತೀರಾ ಕಡಿಮೆಯಾಗಿದೆ. ಆದರೆ ಭಾರತದಲ್ಲಿ ಸಣ್ಣ ಫೋರ್ಜಾ 300 ಸ್ಕೂಟರ್ ಬಿಡುಗಡೆಯಾಗಲಿದೆ.

Article Published On: Monday, September 21, 2020, 12:03 [IST]
English summary
Honda to expand its Forza scooter line-up with a new Forza 750. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+