ಬಿಡುಗಡೆಯಾಯ್ತು 53 ಕಿ.ಮೀ ಮೈಲೇಜ್ ನೀಡುವ ಹೋಂಡಾ ಪಿಸಿಎಕ್ಸ್ 160 ಮ್ಯಾಕ್ಸಿ ಸ್ಕೂಟರ್

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಪಿಸಿಎಕ್ಸ್ 160 ಮ್ಯಾಕ್ಸಿ ಸ್ಕೂಟರ್ ಅನ್ನು ತಾಯಿನಾಡು ಜಪಾನ್ ನಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಹೋಂಡಾ ಪಿಸಿಎಕ್ಸ್ 160 ಮ್ಯಾಕ್ಸಿ ಸ್ಕೂಟರ್ ಹಲವಾರು ಹೊಸ ಅಪ್ದೇಟ್ ಗಳನ್ನು ಪಡೆದುಕೊಂಡಿದೆ.

ಬಿಡುಗಡೆಯಾಯ್ತು 53 ಕಿ.ಮೀ ಮೈಲೇಜ್ ನೀಡುವ ಹೋಂಡಾ ಪಿಸಿಎಕ್ಸ್ 160 ಮ್ಯಾಕ್ಸಿ ಸ್ಕೂಟರ್

ಹೊಸ ಹೋಂಡಾ ಪಿಸಿಎಕ್ಸ್ 160 ಮ್ಯಾಕ್ಸಿ ಸ್ಕೂಟರ್ ನಲ್ಲಿ 156 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಫೋರ್-ವಾಲ್ವ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 8500 ಆರ್‌ಪಿಎಂನಲ್ಲಿ 16.31 ಬಿಹೆಚ್‍ಪಿ ಪವರ್ ಮತ್ತು 6500 ಆರ್‌ಪಿಎಂನಲ್ಲಿ 15 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಿಂದಿನ ಮಾದರಿಗೆ ಹೋಲಿಸಿದರೆ ಹೆಚ್ಚು ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಡುಗಡೆಯಾಯ್ತು 53 ಕಿ.ಮೀ ಮೈಲೇಜ್ ನೀಡುವ ಹೋಂಡಾ ಪಿಸಿಎಕ್ಸ್ 160 ಮ್ಯಾಕ್ಸಿ ಸ್ಕೂಟರ್

ಈ ಹೊಸ ಹೋಂಡಾ ಪಿಸಿಎಕ್ಸ್ 160 ಮ್ಯಾಕ್ಸಿ ಸ್ಕೂಟರ್ ನಲ್ಲಿ ಸೈಲೆಂಟ್ ಸ್ಟಾರ್ಟರ್, ಸ್ವಿಚ್ ಮಾಡಬಹುದಾದ ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಂ ಮತ್ತು ಮರುವಿನ್ಯಾಸಗೊಳಿಸಲಾದ ಅಂಡರ್ಬೋನ್ ಫ್ರೇಮ್ ಅನ್ನು ಹೊಂದಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಬಿಡುಗಡೆಯಾಯ್ತು 53 ಕಿ.ಮೀ ಮೈಲೇಜ್ ನೀಡುವ ಹೋಂಡಾ ಪಿಸಿಎಕ್ಸ್ 160 ಮ್ಯಾಕ್ಸಿ ಸ್ಕೂಟರ್

ಈ ಹೊಸ ಹೋಂಡಾ ಪಿಸಿಎಕ್ಸ್ 160 ಮ್ಯಾಕ್ಸಿ ಸ್ಕೂಟರ್ ಪ್ರತಿ ಲೀಟರ್‌ಗೆ 53.5 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಹೋಂಡಾ ಕಂಪನಿಯು ಇನ್ನೊಂದು ಜನಪ್ರಿಯ ಆಕ್ಟಿವಾ 125 ಪ್ರತಿ ಲೀಟರ್‌ಗೆ 52.63 ಕಿ.ಮೀ ಮೈಲೇಜ್ ನೀಡುತ್ತದೆ.

ಬಿಡುಗಡೆಯಾಯ್ತು 53 ಕಿ.ಮೀ ಮೈಲೇಜ್ ನೀಡುವ ಹೋಂಡಾ ಪಿಸಿಎಕ್ಸ್ 160 ಮ್ಯಾಕ್ಸಿ ಸ್ಕೂಟರ್

ಇನ್ನು ಈ ಹೊಸ ಹೋಂಡಾ ಪಿಸಿಎಕ್ಸ್ 160 ಮ್ಯಾಕ್ಸಿ ಸ್ಕೂಟರ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್ ಟ್ರ್ಯಾವೆಲ್ ಅನ್ನು 95 ಎಂಎಂಗೆ ಹೆಚ್ಚಿಸಲಾಗಿದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಬಿಡುಗಡೆಯಾಯ್ತು 53 ಕಿ.ಮೀ ಮೈಲೇಜ್ ನೀಡುವ ಹೋಂಡಾ ಪಿಸಿಎಕ್ಸ್ 160 ಮ್ಯಾಕ್ಸಿ ಸ್ಕೂಟರ್

ಸುರಕ್ಷತಾ ವಿಭಾಗದಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಹೊಸ ಹೋಂಡಾ ಪಿಸಿಎಕ್ಸ್ 160 ಮ್ಯಾಕ್ಸಿ ಸ್ಕೂಟರ್ ನಲ್ಲಿ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಸಿಂಗಲ್ ಚಾನೆಲ್ ಎಬಿಎಸ್ ಅನ್ನು ಜೋಡಿಸಲಾಗಿದೆ.

ಬಿಡುಗಡೆಯಾಯ್ತು 53 ಕಿ.ಮೀ ಮೈಲೇಜ್ ನೀಡುವ ಹೋಂಡಾ ಪಿಸಿಎಕ್ಸ್ 160 ಮ್ಯಾಕ್ಸಿ ಸ್ಕೂಟರ್

ಈ ಹೊಸ ಹೋಂಡಾ ಪಿಸಿಎಕ್ಸ್ 160 ಸ್ಕೂಟರ್ 132 ಕೆಜೆ ತೂಕವನ್ನು ಹೊಂದಿದೆ. ಇನ್ನು ಈ ಹೊಸ ಹೋಂಡಾ ಪಿಸಿಎಕ್ಸ್ 160 ಸ್ಕೂಟರ್ ಆಲ್-ಎಲ್ಇಡಿ ಲೈಟಿಂಗ್ ಸಿಸ್ಟಂ, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಕೀ ಲೆಸ್ ಎಂಟ್ರಿ, ಏಪ್ರನ್-ಮೌಂಟೆಡ್ ಸ್ಟೋರೇಜ್ ಕ್ಯೂಬಿ ಹೋಲ್ಸ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಬಿಡುಗಡೆಯಾಯ್ತು 53 ಕಿ.ಮೀ ಮೈಲೇಜ್ ನೀಡುವ ಹೋಂಡಾ ಪಿಸಿಎಕ್ಸ್ 160 ಮ್ಯಾಕ್ಸಿ ಸ್ಕೂಟರ್

ಇನ್ನು ಈ ಹೋಂಡಾ ಪಿಸಿಎಕ್ಸ್ 160 ಸ್ಕೂಟರ್ ನಲ್ಲಿ ಬೃಹತ್ 30-ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಕಂಪಾರ್ಟ್ಮೆಂಟ್ ಅನ್ನು ಹೊಂದಿದೆ. ಇನ್ನು ಈ ಸ್ಕೂಟರ್ 8.1-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು 53 ಕಿ.ಮೀ ಮೈಲೇಜ್ ನೀಡುವ ಹೋಂಡಾ ಪಿಸಿಎಕ್ಸ್ 160 ಮ್ಯಾಕ್ಸಿ ಸ್ಕೂಟರ್

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಭಾರತದಲ್ಲಿ ಪಿಸಿಎಕ್ಸ್ 160 ಸ್ಕೂಟರ್ ಮ್ಯಾಕ್ಸಿ ಸ್ಕೂಟರ್ ಅನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳು ತೀರಾ ಕಡಿಮೆಯಾಗಿದೆ. ಆದರೆ ಹೋಂಡಾ ಕಂಪನಿಯು ತನ್ನ ಫೋರ್ಜಾ 350 ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

Article Published On: Thursday, December 10, 2020, 12:12 [IST]
English summary
Honda PCX160 Maxi-Scooter Launched. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+